ಬೋರ್ಡೋ ದ್ರಾವಣದ ಸುಣ್ಣ – ರೈತರ ಸಂದೇಹಗಳಿಗೆ ಉತ್ತರ.
ಕೆಲವು ದಿನಗಳಿಂದ ಅಡಿಕೆ , ಕಾಫಿ, ಕರಿಮೆಣಸು ಮುಂತಾದ ಬೆಳೆಗಾರರು ಬೋರ್ಡೋ ದ್ರಾವಣ ಸಿಂಪರಣೆಗಾಗಿ ಬಳಕೆ ಮಾಡುವ ಹುಡಿ ಸುಣ್ಣದ ಬಗ್ಗೆ ಕೆಲವು ಸಂದೇಹಗಳು ಉಧ್ಬವವಾಗಿದೆ. ಕೆಲವು ಬ್ರಾಂಡ್ ನ ಸುಣ್ಣ ಬಳಕೆ ಮಾಡದಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವಿನಲ್ಲಿ ಎಲ್ಲಾ ಸುಣ್ಣದ ಮೇಲೂ ರೈತರು ಸಂದೇಹ ಪಡುವಂತಾಗಿದೆ. ಈ ಕುರಿತಂತೆ ರೈತರ ಸಂದೇಹಗಳಿಗೆ ಉತ್ತರ ಇಲ್ಲಿದೆ. ಸುಣ್ಣವನ್ನು ಸಿಂಪರಣೆಗೆ ಕ್ಯಾಲ್ಸಿಯಂ ಮೂಲಕ್ಕಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಲವಸ್ತುಗಳನ್ನು…