ಉತ್ತಮ ಇಳುವರಿಯ ತೆಂಗು

100 ತೆಂಗಿನ ಮರಕ್ಕೆ 10000 ಕಾಯಿ ಹೇಗೆ ಪಡೆಯಲು ಬೇಕಾದ ಆರೈಕೆ.

ತೆಂಗಿನ ಮರವೊಂದರ ಇಳುವರಿ ಸಾಮರ್ಥ್ಯದಷ್ಟನ್ನು ನಾವು ಪಡೆಯುತ್ತಿಲ್ಲ.  ಯಾರಿಗೆ 100 ತೆಂಗಿನ ಮರಕ್ಕೆ 10,000 ತೆಂಗಿನಕಾಯಿ ಆಗುತ್ತದೆಯೋ ಅವರಿಗೆ ತೆಂಗು ಕೃಷಿ ಲಾಭದಾಯಕ. 10000 ಕಾಯಿಗಿಂತ ಹೆಚ್ಚು ಪಡೆಯಲು ಹಾಕಬೇಕಾದ ಗೊಬ್ಬರ ಮತ್ತು ಮಾಡಬೇಕಾದ ಆರೈಕೆ  ಇವು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. ತೆಂಗಿನ ಉತ್ತಮ ಇಳುವರಿಗೆ …

Read more
ಕೆಂಪಡಿಕೆ ರಾಸೀ

ಕೆಂಪಡಿಕೆ ಉಮೇದು – ಚಾಲಿ ನಡುಕ- ಕರಿಮೆಣಸು ಕುಸಿತ.22-02-2022 ಮಾರುಕಟ್ಟೆ.

ಈ ವರ್ಷದ ನಿರೀಕ್ಷೆಯಂತೆ ಕೆಂಪಡಿಕೆ ದರಕ್ಕೆ ಅಂಜಿಕೆ ಇಲ್ಲ. ಇದು ಏರಿಕೆಯಾಗುವುದು ತಡವಾದರೂ ಇಳಿಕೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಚಾಲಿ ಮಾತ್ರ ಈ ವರ್ಷ ಭಾರೀ ಏರಿಕೆಯ ನಿರೀಕ್ಷೆ ಇಲ್ಲ. ಹಾಗೆಂದು ಬಾರೀ ಇಳಿಕೆಯೂ ಆಗದು. ಇಂದು ದಿನಾಂಕ 22-02-2022 ಮಂಗಳವಾರ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್, ಕಾಫೀ ದರ ಹೇಗಿತ್ತು ಗಮನಿಸಿ. ಚಾಲಿ ದರ ಖಾಸಗಿಯವರ ಸ್ಪರ್ಧೆ ಇಲ್ಲದೆ ಅಲ್ಲಾಡುತ್ತಿಲ್ಲ. ಹಾಗೆಂದು ಕರಾವಳಿಯಲ್ಲಿ ಅಡಿಕೆ ಬೆಳೆಗಾರರು…

Read more
ಈ ರೋಗ ಬಂದರೆ ಉಪಚಾರಕ್ಕೆ ಅದರ ಫಸಲು ಸಾಲದು

ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಿ-ಇದುವೇ ಶಾಶ್ವತ.

ಸ್ಥಳೀಯ ತಳಿಗಳು ಅನಾದಿ ಕಾಲದಿಂದಲೂ ನಮ್ಮ ಸ್ಥಳಕ್ಕೆ ಹೊಂದಿಕೊಂಡ ತಳಿಗಳಾದ ಕಾರಣ ಇವು ಎಲ್ಲಾ ದೃಷ್ಟಿಯಲ್ಲೂ ಸುರಕ್ಷಿತ ಮತ್ತು ಶಾಶ್ವತ. ಅಧಿಕ ಇಳುವರಿ ಇಲ್ಲ ಎಂಬ ಕಾರಣಕ್ಕೆ ನಾವು ಸ್ಥಳೀಯ ತಳಿಗಳನ್ನು ದೂರ ಇಡುವುದು ಸೂಕ್ತವಲ್ಲ. ಅದನ್ನು ಉಳಿಸಿಕೊಳ್ಳಲೇ ಬೇಕು. ಬೇರೆ ತಳಿಗಳು ಇರಲಿ, ಆದರೆ ಸ್ಥಳೀಯ ತಳಿಗಳನ್ನು ಮಾತ್ರ ಬಿಡಬೇಡಿ. ಯಾಕೆ ಇಲ್ಲಿ ಈ ಪ್ರಸ್ತಾಪ ಎನ್ನುತ್ತೀರಾ? ಬಹುತೇಕ ರೋಗ ರುಜಿನಗಳು, ಕೀಟ ಕಸಾಲೆಗಳು ಮೊದಲಾಗಿ ಧಾಳಿ ಮಾಡುವುದು ಇದೇ ಅಧಿಕ ಇಳುವರಿಯ ಅಥವಾ ವಿಶಿಷ್ಟ…

Read more
ಅಡಿಕೆ ಸಿಂಗಾರ

ಅಡಿಕೆ – ಸಿಂಗಾರಕ್ಕೆ ಸಿಂಪರಣೆ ಯಾವಾಗ ಯಾವುದನ್ನು ಮಾಡಬೇಕು?

ಅಡಿಕೆಯ ಮಿಡಿ ಉಳಿಸುವುದಕ್ಕೆ ಕೀಟನಾಶಕ, ಶಿಲೀಂದ್ರನಾಶಕದ ಬಳಕೆ ಯಾವಾಗ ಯಾವುದನ್ನು ಮಾಡಬೇಕು, ಅನವಶ್ಯಕವಾಗಿ ಸಿಂಪಡಿಸಿದರೆ ನಷ್ಟ ಏನು ಎಂಬ ಬಗ್ಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರ ಜೊತೆ ಚರ್ಚಿಸಿ ಆ ಪ್ರಕಾರ ರೈತರಿಗೆ ತಿಳಿಸುವ ಮಾಹಿತಿ ಇದು. ಅಡಿಕೆಗೆ ಬೆಲೆ ಚೆನ್ನಾಗಿದೆ. ಹಾಗಾಗಿ  ಹೇಗಾದರೂ ಮಾಡಿ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಕಾಯಿಗಳನ್ನೂ ಉಳಿಸಿಕೊಳ್ಳಬೇಕು, ಗರಿಷ್ಟ ಇಳುವರಿ ಪಡೆಯಬೇಕು ಎಂಬ  ಆಸೆಯಲ್ಲಿ ಇತ್ತೀಚೆಗೆ ನಾವು ಹೂಗೊಂಚಲಿಗೆ ಕೀಟನಾಶಕ,…

Read more
ಕರಿಮೆಣಸು ಜಂಪ್

ಕರಿಮೆಣಸಿನ ಬೆಲೆ ಸಡನ್ ಜಂಪ್- ಕ್ವಿಂಟಾಲಿಗೆ ರೂ. 3000 ಏರಿಕೆ: ಅಡಿಕೆ ಕುಂಟು ನಡೆ.

ಕರಿಮೆಣಸಿನ ಧಾರಣೆ ಅನಿಶ್ಚಿತತೆ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು. ಕೊಚ್ಚಿನ್ ಮಾರುಕಟ್ಟೆಯಲ್ಲಿ  ಸ್ವಲ್ಪ ದರ ಇಳಿದಾಗ ಇಲ್ಲಿ ಭಾರೀ ದರ ಇಳಿಸಲಾಗಿತ್ತು. ಆದರೆ ರಾಜ್ಯದ ಪ್ರಮುಖ ಬೆಳೆ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಸಕಲೇಶಪುರಗಳಲ್ಲಿ ಅಂತಹ ದರ ಕುಸಿತ ಆಗಿರಲಿಲ್ಲ. ಇಂದು ಎಲ್ಲಾ ಕಡೆ ಕರಿಮೆಣಸಿನ ಧಾರಣೆ ಕ್ವಿಂಟಾಲಿಗೆ 2500 -3000 ತನಕ ಸಡನ್ ಜಂಪ್ ಆಗಿದೆ. ಕೊಚ್ಚಿನ್ ಮರುಕಟ್ಟೆಯ ಏರಿಕೆ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ.ಚಾಲಿ ಅಡಿಕೆ ಯಾಕೋ ಕುಂಟು ನಡೆಯಲ್ಲಿದೆ. ಕರಿಮೆಣಸಿಗೆ ಇನ್ನು ಎರಡು ಮೂರು ವರ್ಷ…

Read more
ರೋಗ ಸೋಂಕಿತ ಮರ

ತೆಂಗು- ಅಡಿಕೆ ಮರಗಳಿಗೆ ಬಂದಿದೆ ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗ.

ತೆಂಗು ಅಡಿಕೆ ಬೆಳೆ ಬೆಳೆಯುವುದು ಈಗ ಹಿಂದಿನಷ್ಟು ಸುಲಭವಾಗಿಲ್ಲ. ಹಿಂದೆ ಸಸಿ ನೆಟ್ಟರೆ ಅದು ನೀರಾವರಿ ಗೊಬ್ಬರ ಕೊಟ್ಟರೆ ಚೆನ್ನಾಗಿಯೇ ಬೆಳೆಯುತ್ತಿತ್ತು. ಈಗ ಹಾಗಿಲ್ಲ. ನೀರು, ಗೊಬ್ಬರ ಎರಡನ್ನು ಕೊಡಲು ನಾವು ಜಿಪುಣತನ ಮಾಡುವುದಿಲ್ಲ. ಆದರೆ ವಾತಾವರಣ ನಮಗೆ ಸಹಕಾರ ಕೊಡುತ್ತಿಲ್ಲ. ಹಿಂದೆ ಮೈನರ್ ರೋಗ ಕಾರಕಗಳಾಗಿದ್ದವು, ಈಗ ಪ್ರಭಲರೋಗಗಳಾಗುತ್ತಿವೆ. ಅದೇ ರೀತಿಯಲ್ಲಿ ಕೀಟಗಳೂ. ಕೀಟ – ರೋಗ ನಾಶಕಕ್ಕೆ ಬಗ್ಗದ ಸ್ಥಿತಿ  ಉಂಟಾಗಿದೆ. ಬಹುಷಃ ಇನ್ನು ಮುಂದಿನ ದಿನಗಳು ಅಡಿಕೆ ತೆಂಗು ಬೆಳೆಗಾರರಿಗೆ ರೋಗ –…

Read more
ಆಡಿಕೆ

ಅಡಿಕೆ ಮಾರುಕಟ್ಟೆ ಡಲ್ ಯಾಕೆ?. ದಿನಾಂಕ:09-02-2022 ರಂದು ರಾಜ್ಯದಲ್ಲಿ ಎಲ್ಲೆಲ್ಲಿ ಏನು ದರ.

ಅಡಿಕೆ ದರ ಎರಿಕೆಯಾಗುವ ಸೂಚನೆ ಇಲ್ಲ. ಪುಣ್ಯಕ್ಕೆ ಇಳಿಕೆಯೂ ಇಲ್ಲವಲ್ಲ. ಅದಕ್ಕೆ ಸಂತೋಷ ಪಡಬೇಕು. ಚಾಲಿ ಅಡಿಕೆ ಮಾರುಕಟ್ಟೆ ಮೇಲ್ನೋಟಕ್ಕೆ ಸ್ಥಿರವಾಗಿದೆ ಎಂದು ಕಂಡುಬಂದರೂ ದರ ಇಳಿಕೆಯಾಗಿದೆ. ಸೂಚಿಸಿದ ದರಕ್ಕೆ ಖರೀದಿ ಮಾಡುವವರು ಇಲ್ಲ.  ಹಾಗಾಗಿ ಅಡಿಕೆ ಮಾರುಕಟ್ಟೆ ಡಲ್. ಬಹುಷಃ ಇದು ಇನ್ನೂ 2-3 ತಿಂಗಳು ಹೀಗೇ ಮುಂದುವರಿಯುವ ಸಾಧ್ಯತೆ.ದಿನಾಂಕ 09-02-2022  ಬುಧವಾರ ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ. ಚಾಲಿ ಅಡಿಕೆ ಹಾಗೂ ಕೆಂಪಡಿಕೆಯ ಆಮದು ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈಗಾಗಲೇ  ಮಿಜೋರಾಂ…

Read more
ನೇರಳೆ ಹಣ್ಣು

ನೇರಳೆ ಹಣ್ಣು – ಡಯಾಬಿಟಿಸ್ ಉಳ್ಳವರಿಗೆ ರಾಮಬಾಣ

ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ  50% ಜನರಿಗೆ ಸಕ್ಕರೆ ಖಾಯಿಲೆ (ಡಯಾಬಿಟಿಸ್) ಇದೆ ಎಂಬ ವರದಿ ಇದೆ. ಯಾಕೆ  ಹೀಗಾಯಿತೋ  ಗೊತ್ತಿಲ್ಲ. ಸಕ್ಕರೆ  ಖಾಯಿಲೆ ಎಂಬುದು ಬೇರೆ ರೋಗಗಳ ಪ್ರವೇಶಕ್ಕೆ ತೆರೆದ ಹೆಬ್ಬಾಗಿಲು. ಇದರ  ಉಪಶಮನಕ್ಕೆ ತಾತ್ಕಾಲಿಕವಾಗಿ ರಾಸಾಯನಿಕ ಔಷಧೋಪಚಾರಗಳಿವೆ. ಎಡೆ ತೊಂದರೆ  ಇಲ್ಲದ ಔಷಧಿ ಎಂದರೆ ನೇರಳೆ ಹಣ್ಣು ಜಾವಾ ಪ್ಲಮ್  ಮತ್ತು ಮರದ ಭಾಗ. ಆಧುನಿಕ ಔಷಧೋಪಚಾರಗಳು ಈ ಸಮಸ್ಯೆಯನ್ನು  ಸ್ವಲ್ಪ ಮಟ್ಟಿಗೆ ಹದ್ದುಬಸ್ತಿನಲ್ಲಿಡುತ್ತದೆ. ನಮ್ಮ ಗುಡ್ದ ಬೆಟ್ಟಗಳ ಹಣ್ಣು  ಹಂಪಲುಗಳು ಹಲವು ರೋಗ…

Read more
ಫುಷ್ಟಿಕರ ಬಾಳೆ ಗೊನೆ

ಬಾಳೆ ಗೊನೆ ಪುಷ್ಟಿಯಾಗಬೇಕೇ? ಹೀಗೆ ಗೊಬ್ಬರ ಕೊಡಿ.

ಬಾಳೆ ಎಂಬ ಅಲ್ಪ ಕಾಲದಲ್ಲೇ (9-10 ತಿಂಗಳು) ಭಾರೀ ಬೆಳೆದು ಫಲಕೊಡುವ ಸಸ್ಯ. ಅದು ಚೆನ್ನಾಗಿರಬೇಕಾದರೆ ದಿನ ದಿನಕ್ಕ್ಕೆ ಅಥವಾ ವಾರಕ್ಕೊಂದಾವರ್ತಿಯಾದರೂ ತಪ್ಪದೆ ಪೋಷಕಾಂಶಗಲನ್ನು ಕೊಡಲೇ ಬೇಕು. ಇಲ್ಲವಾದರೆ ಬಾಳೆ ಗೊನೆ ಕೃಶವಾಗಿ ಬೆಳೆಯಲ್ಲಿ ಲಾಭವಾಗುವುದಿಲ್ಲ. ನೆಟ್ಟು ಗೊನೆ ಕಠಾವಿನ ವರೆಗೆ ಯಾವ ಗೊಬ್ಬರ ಕೊಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಬೆಳೆಯಲ್ಲಿ ನಾಟಿ ಮಾಡುವ ಹಂತದಿಂದ ಕಠಾವಿನ  ಹಂತದವರೆಗೆ ಪೋಷಕಾಂಶ ನಿರ್ವಹಣೆ ಎಂಬುದು ಅತೀ ಪ್ರಾಮುಖ್ಯ.  ಗೊನೆಯ ನೋಟದ ಮೇಲೆ ಅದಕ್ಕೆ ಬೇಡಿಕೆ ಮತ್ತು…

Read more
ಆಡು ಮೇವು

ಆಡು-ಕುರಿಗಳು ತೂಕ ಬಂದು ಬೇಗ ಬೆಳವಣಿಗೆ ಹೊಂದಲು ಹೀಗೆ ಆಹಾರ ಕೊಡಿ.

ನಾವು ಸಂಪಾದನೆಗಾಗಿ ಸಾಕುವ ಆಡು – ಕುರಿ ಕೋಳಿ ಇತ್ಯಾದಿಗಳು ಬೇಗ ಬೆಳವಣಿಗೆ ಹೊಂದಿ, ತೂಕ ಬಂದರೆ ಅವುಗಳ ಪಾಲನೆ ಲಾಭದಾಯಕ. ಬಹಳಷ್ಟು ರೈತರು ಇವುಗಳನ್ನು ಸಾಕುತ್ತಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ತೂಕ ಬರುವುದಿಲ್ಲ. ಇದಕ್ಕೆ ಕಾರಣ ಅವುಗಳ ದೇಹ ಪೋಷಣೆಗೆ ಆಗತ್ಯವಿರುವ ಆಹಾರ ಪೂರೈಕೆ ಆಗದೇ ಇರುವುದು. ದೇಹ ದಾಢ್ಯತನ ಬರಲು ಕೆಲವು ಪೌಷ್ಟಿಕಾಂಶ ಭರಿತ ತಿಂಡಿ ತಿನಿಸು ಕೊಡಬೇಕು. ಆಡು, ಕುರಿ  ಸಾಕುವುದು ಬ್ಯಾಂಕಿನಲ್ಲಿ ದುಡ್ಡು ಇಟ್ಟಂತೆ. ಇದನ್ನು ಯಾವಾಗ ಬೇಕಾದರೂ ನಗದೀಕರಣ ಮಾಡಿಕೊಳ್ಳಬಹುದು….

Read more
error: Content is protected !!