ಟೆಂಡರ್ ಗೆ ಬಂದ ಅಡಿಕೆ

ಅಡಿಕೆ ಧಾರಣೆ ದಿನಾಂಕ: 11-10-2021.

ದಿನಾಂಕ 10-10-2021 ನೇ ಸೋಮವಾರ ಅಡಿಕೆ ಬೆಳೆಗಾರರಿಗೆ ಶುಭ ದಿನವಾಗಲಿಲ್ಲ. ದರ ಇಳಿಕೆಯ ಹಾದಿಯಲ್ಲೇ ಸಾಗಿದೆ. ಕರಿಮೆಣಸು ಮಾತ್ರ ಸ್ಥಿರವಾಗಿದೆ. ಕೊಬ್ಬರಿಯೂ ಇಳಿಕೆಯಾಗದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ರಾಜ್ಯದ ಎಲ್ಲಾ ಮಾರುಕಟ್ಟೆಗಳಲ್ಲಿ ಚಾಲಿ ಹಾಗೂ ಕೆಂಪಡಿಕೆ ಮಾರುಕಟ್ಟೆ ಕೆಳಮುಖ ಗತಿಯಲ್ಲಿ ಸಾಗಿದೆ. ಕಳೆದ ವಾರ ತೀರ್ಥಹಳ್ಳಿಯ ಮಾರುಕಟ್ಟೆಯಲ್ಲಿ  ವ್ಯವಹಾರ ಇಲ್ಲದ ಕಾರಣ ಅಲ್ಲಿನ ಬೆಲೆ ಹೇಗಿರುತ್ತದೆ ಎಂಬ ಕುತೂಹಲ ಇತ್ತು. ಅಲ್ಲಿಯೂ ದರ ಹಿಂದಿಗಿಂತ ಇಳಿಕೆಯೇ ಆಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಖರೀದಿಗೆ ಉತ್ಸಾಹ ಇದ್ದಿದ್ದರೆ, ತೀರ್ಥಹಳ್ಳಿ, ಕೊಪ್ಪ, ಶ್ರಿಂಗೇರಿ…

Read more
ಅಮಾನುಲ್ಲಾ ಅವರ ತೋಟ

1 ಎಕ್ರೆಗೆ 2600 ಫಲ ಕೊಡುವ ಬೆಳೆಗಳು – ನಂಬುತ್ತೀರಾ?

ಹೌದು, ನಂಬಿಕೆ ಬಾರದಿದ್ದರೆ ಒಮ್ಮೆ ಶಿವಮೊಗ್ಗ ಜಿಲ್ಲೆ , ಸಾಗರ ತಾಲೂಕು, ಮಂಕಳಲೆ ಗ್ರಾಮದ ಓರ್ವ ಕೃಷಿಕ, ಶ್ರೀ ಅಮಾನುಲ್ಲಾ ಖಾನ್ ಇವರ   ಹೊಲಕ್ಕೊಮ್ಮೆ ಭೇಟಿ ಕೊಡಿ. ಸುಮಾರು  20 ಎಕ್ರೆಯ ಇವರ ಹೊಲದಲ್ಲಿ 50,000 ಕ್ಕೂ ಹೆಚ್ಚಿನ ಫಲ ಕೊಡುವ ಬೆಳೆಗಳಿವೆ. ಅಂದರೆ ಎಕ್ರೆಗೆ 2600 ಗಿಡಗಳು. ಇದು ಬಹುಶಃ ನಾವು ಯಾರೂ ಕಲ್ಪನೆ ಸಹ ಮಾಡಲಾಗದ ಕೃಷಿ ಕ್ಷೇತ್ರ ಎಂದರೆ ಅತಿಶಯೋಕಿಯಲ್ಲ. ಅದಕ್ಕಾಗಿಯೇ ಈ ಹೊಲವನ್ನು ನೋಡಿದರೆ ನಾವು ವಿಯೆಟ್ನಾಂ ದೇಶದ ಕರಿಮೆಣಸು ಕೃಷಿ…

Read more
ಕಾಲಬದ್ಧ ನಿರ್ವಹಣೆಯ ಉತ್ತಮ ಇಳುವರಿಯ ಅಡಿಕೆ

ಉತ್ತಮ ಇಳುವರಿ ಪಡೆಯಲು ಈ ವಿಧಾನ ಅನುಸರಿಸಿರಿ.

ಯಾವುದೇ ವೃತ್ತಿಯಲ್ಲಿ ನಾವು ಮಾಡಿದ  ಕೆಲಸವನ್ನು ಒಮ್ಮೆ ತಿರುಗಿ ನೋಡಿದರೆ  ನಮಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುತ್ತದೆ. ಕೃಷಿಯಲ್ಲಿ ನಾವು ಮಾಡಿದ ನಾಲ್ಕು ಐದು ವರ್ಷಗಳ ಬೆಳೆ  ಕ್ರಮವನ್ನು ಅಭ್ಯಸಿದರೆ ನಮಗೆ ಹೇಗೆ ಮಾಡಿದರೆ ಉತ್ತಮ ಎಂಬುದು ತಿಳಿಯುತ್ತದೆ. ನಾವು ಮಾಡುವ ವೃತ್ತಿಯಲ್ಲಿ ಯಾವಾಗ ಏನು ಮಾಡಿದ್ದೇವೆ ಅದರ ಫಲಿತಾಂಶ ಏನಾಗಿದೆ ಎಂಬುದನ್ನು ಪರಾಂಬರಿಸಿ ಗಮನಿಸುತ್ತಿದ್ದರೆ, ತಪ್ಪು ಎಲ್ಲಿ ಅಗಿದೆ, ಸರಿ ಮಾಡುವುದು ಹೇಗೆ ಎಂದು ನಮಗೇ ತಿಳಿಯುತ್ತದೆ.  ಕೃಷಿಯೂ ಹಾಗೆಯೇ? ನಮ್ಮ ಕೃಷಿ…

Read more
ಜೇನು ನೊಣಗಳು

ಜೇನು ನೊಣ ಯಾವ ಸಮಯದಲ್ಲಿ ಹಿಡಿದರೆ ಒಳ್ಳೆಯದು.

ಕಾರ್ತಿಕ ಮಾಸದ ನಂತರ ಜೇನು ಕುಟುಂಬ ಸಂಖ್ಯಾಭಿವೃದ್ದಿಯಾಗುತ್ತದೆ. ಸಂಖ್ಯೆ  ಹೆಚ್ಚಾದಾಗ ಪಾಲಾಗುತ್ತದೆ. ಪಾಲಾದಾಗ ಅರ್ಧ ಪಾಲು ನೊಣಗಳು ವಾಸಸ್ಥಳದಿಂದ ವಿಭಾಗಗೊಂಡು ಹೊರ ಬಂದು ಎಲ್ಲಾದರೂ ವಿಶ್ರಮಿಸಿ ಹೊಸ ವಾಸ ಸ್ಥಳವನ್ನು ಹುಡುಕುತ್ತವೆ. ಆಗ ನಿಮ್ಮ ತೋಟದಲ್ಲಿ ಖಾಲಿ ಜೇನು ಪಟ್ಟಿಗೆ ಇದ್ದರೆ ಅಲ್ಲಿ ಅವು ವಾಸ ಅಯ್ಕೆ ಮಾಡಬಹುದು. ಈ ಸಮಯದಲ್ಲಿ ಜೇನು ಕುಟುಂಬಗಳು ಹೊರಗೆ ಹಾರಾಡುವುದು ಹೆಚ್ಚು. ಈಗ ಅವುಗಳಿಗೆ ಪುಷ್ಪಗಳೂ ಲಭ್ಯ. ಸಾಮಾನ್ಯವಾಗಿ ಅವು ತಂಪು ಇರುವಲ್ಲಿ ವಾಸಸ್ಥಾನ ಹುಡುಕುತ್ತವೆ. ವಿಭಾಗ ಆಗಿ  ಹೊರಟು…

Read more
ಅಡಿಕೆ- ಟೆಂಡರ್ ಪ್ರಾಂಗಣದಲ್ಲಿ

ಅಡಿಕೆ ಖರೀದಿಗೆ ದುಡ್ಡಿಲ್ಲ- ಕರಿಮೆಣಸಿಗೆ ಬೇಡಿಕೆ -07-10-2021 ರ ಧಾರಣೆ.

ಅಡಿಕೆಗೆ ದರ ಏರಿಸಿದ್ದು ಯಾಕೋ?ಇಳಿಸಿದ್ದು ಯಾಕೋ? ಈ ಆಟದಲ್ಲಿ ಅದೆಷ್ಟು ಬೆಳೆಗಾರರ ಆಸೆ ನಿರಾಸೆಯಾಗಿದೆ ! ವರ್ತಕರು ನಷ್ಟ ಅನುಭವಿಸಿದ್ದಾರೆ! ದೊಡ್ಡ ಕುಳಗಳ ಮಧ್ಯೆ ಸಣ್ಣ ಕುಳಗಳು ರಚ್ಚಾಪಚ್ಚವಾಗಿಬಿಟ್ಟವೋ ಎಂಬ ಸ್ಥಿತಿ ಉಂಟಾಗಿದೆ.  ಅಡಿಕೆ ಮಾರುಕಟ್ಟೆ ಎಂಬುದು ಬಹುಷಃ ಯಾವ ಅಂಜನ ಜ್ಯೋತಿಷ್ಯಕ್ಕೂ ಸಿಕ್ಕದ ಒಂದು ಗುಟ್ಟಾಗಿ ಉಳಿದಿದೆ. ಕೆಂಪಡಿಕೆ ಮತ್ತೆ ಇಳಿಕೆಯಾಗಿದ್ದು ಗರಿಷ್ಟ ದರ 45,000 ದ ಅಸು ಪಾಸಿಗೆ ಇಳಿಕೆಯಾಗಿದೆ. ಶಿರಸಿ ಯಲ್ಲಾಪುರದಲ್ಲಿ ಹೊಸ ರಾಶಿ ಬಾರದ ಕಾರಣ ಸ್ವಲ್ಪ ಹೆಚ್ಚು ದರ ಇದೆ….

Read more
ಅಡಿಕೆ ಹರಾಜು ಪ್ರಾಂಗಣ

ಅಡಿಕೆ, ರಬ್ಬರ್, ಕಾಫೀ, ಕರಿಮೆಣಸು, ಧಾರಣೆ – ದಿನಾಂಕ – 05-10-2021

ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲಿ ಇಂದು ದಿನಾಂಕ- 05-10-2021 ಅಡಿಕೆ ಟೆಂಡರ್ ವಿವರ. ಹಾಗೂ ಕರಿಮೆಣಸು, ಕೊಬ್ಬರಿ, ಕಾಫೀ, ರಬ್ಬರು ದರಗಳು. ಕೆಂಪಡಿಕೆ ಧಾರಣೆ ಇಳಿಕೆಯಾಗುತ್ತಿದೆ. ಚಾಲಿ ಸ್ಟಡೀ ಯಾಗಿ ಮುಂದುವರಿದಿದೆ. ಚಾಲಿ ಅಡಿಕೆಯ ದರ ಇಳಿಕೆಗೆ ಸಜ್ಜಾಗಿರುವ ಖಾಸಗಿ ವರ್ತಕರಿಗೆ ಸಹಕಾರಿ ದೈತ್ಯ ಕ್ಯಾಂಪ್ಕೋ  ಒಂದು ರೀತಿಯಲ್ಲಿ ಅಡ್ಡಿಯಾಗಿದೆ. ಕ್ಯಾಂಪ್ಕೋ ನಡೆಯ ಮೇಲೆ ಎಲ್ಲರ ಕಣ್ಣು ಎಂಬಂತಾಗಿದೆ. ಕ್ಯಾಂಪ್ಕೋ ಬೆಳೆಗಾರರ ಬೆಂಬಲಕ್ಕೆ ನಿಂತಂತಿದೆ. ಕೆಂಪಡಿಕೆ ದಾರಣೆ ಇಳಿಕೆಯಾಗುತ್ತಿದ್ದಂತೆ ಹಸಿ ಅಡಿಕೆಯ ದರವೂ ಇಳಿಕೆಯಾಗಿದೆ. ಸಪ್ಟೆಂಬರ್…

Read more
ಕೆಂಪು ಅಡಿಕೆ

ಅಡಿಕೆ ಧಾರಣೆ – ದಿನಾಂಕ- 04-10-2021

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು ದಿನಾಂಕ 04-10-2021  ರಂದು ಅಡಿಕೆ ಧಾರಣೆ ಹೀಗಿದೆ. ಒಟ್ಟಾರೆಯಾಗಿ ಇಂದು ಅಡಿಕೆ ಮಾರುಕಟ್ಟೆ ಸ್ವಲ್ಪ ನಿಸ್ತೇಜ. ಕರಾವಳಿ ಸೇರಿದಂತೆ ಎಲ್ಲಾ ಕಡೆಯಲ್ಲಿ ಕ್ಯಾಂಪ್ಕೋ ದ ಬಿಡ್ದಿಂಗ್ ಹೆಚ್ಚಿನ ಪ್ರಮಾಣದಲ್ಲಿತ್ತು. ಖಾಸಗಿಯವರು ಹಣ ಇಲ್ಲ ಎಂಬ ಕಾರಣದಿಂದ ಬಿಡ್ಡಿಂಗ್ ನಿಂದ ಹಿಂದೆ ಸರಿದ ಸುದ್ದಿಗಳಿವೆ. ಈ ತನಕ ಅಧಿಕ ದರದಲ್ಲಿ ಖರೀದಿ ಮಾಡಿದ ಮಾಲು ವ್ಯವಹಾರ ಆಗದೆ ಹಣದ ತಾಪತ್ರಯ ಉಂಟಾಗಿದೆ. ಹಾಗಾಗಿ ಖರೀದಿಗೆ…

Read more

ಕೊಳೆ ರೋಗ ಬಂದಿದೆಯೇ?ಹಾಗಿದ್ದರೆ ನೀವು ಮಾಡಬೇಕಾದ ಅಗತ್ಯ ಕೆಲಸ ಏನು?

ಈ ವರ್ಷ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕೊಳೆ ರೋಗ ಬಂದ ಪ್ರಮಾಣ ತುಂಬಾ ಕಡಿಮೆ. ಒಂದು ವೇಳೆ ಕೊಳೆ ರೋಗ ಬಂದಿದ್ದರೆ ನೀವು ತೋಟದಲ್ಲಿ ಏನು ಮಾಡಬೇಕು. ಇದರ ಪ್ರತಿಫಲ ಏನು ಇಲ್ಲಿದೆ ಮಾಹಿತಿ. ಅಡಿಕೆ ಮರಗಳಲ್ಲಿ ಕಾಯಿಗಳು ಬಲಿಯುತ್ತಿರುವಾಗ ಒಂದು ಶಿಲೀಂದ್ರ ಕಾಯಿಯ ಒಳಗೆ ಹೋಗಿ ಅದನ್ನು ಹಾನಿ ಮಾಡಿ ಕೊಳೆಯುವಂತೆ ಮಾಡುತ್ತದೆ. ಈ ಶಿಲೀಂದ್ರವು ಒಂದು ಪರಾವಲಂಭಿ ಜೀವಿಯಾಗಿದ್ದು, ಅಡಿಕೆಯ ಕಾಯಿಯ ಒಳಗೆ ಅದು ಸಂಖ್ಯಾಭಿವೃದ್ದಿಯಾಗಿ  ಅಲ್ಲಿಂದ ಹೊರ ಬರುವ ಸಮಯಕ್ಕೆ…

Read more
ಅಡಿಕೆ ಬೆಳೆಗಾರರನ್ನು ನಿದ್ದೆಗೆಡಿಸುತ್ತಿರುವ ಹಳದಿ ಎಲೆ ರೋಗದ ಅಡಿಕೆ ಮರ

ಕೃಷಿಕರ ಮನೋಸ್ಥಿತಿ ಕುರಿತು ರಮೇಶ್ ದೇಲಂಪಾಡಿಯವರ ಅರ್ಥಗರ್ಭಿತ ಮಾತು

ಒಂದು ಕಾಲದಲ್ಲಿ ಜನರಿಗೆ ಅದರಲ್ಲೂ ಕೃಷಿಕರಿಗೆ ತಿಳಿದವರು ಹೇಳಿದ ವಿಚಾರದಲ್ಲಿ ನಂಬಿಕೆ ಇತ್ತು. ನಂಬಿಕಾರ್ಹವಾದ ಸಲಹೆಗಳನ್ನೇ ನೀಡುವವರೂ ಇದ್ದರು. ಇಂದು ಜನತೆಗೆ ನಂಬಿಕೆ ಕಡಿಮೆಯಾಗಿದೆ. ಜನರ ಮನೋಸ್ಥಿತಿಗನುಗುಣವಾಗಿ ಉಳಿದೆಲ್ಲವೂ. ಈ ಬಗ್ಗೆ ಸುಳ್ಯದ ರಮೇಶ್ ದೇಲಂಪಾಡಿ ಎಂಬ ಕೃಷಿಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ. ಶ್ರೀಯುತರು ತಮ್ಮ ಬರಹದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸೂಚ್ಯವಾಗಿವಾಗಿ ಹೇಳಿದ್ದಾರೆ. ನಾವು  ಬದಲಾವಣೆಯಾದರೆ  ಮಾತ್ರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂಬುದನ್ನು ತಮ್ಮ ಈ ಬರಹದಲ್ಲಿ ದ್ವನಿ ಅರ್ಥದಲ್ಲಿ ವಿವರಿಸಿದ್ದಾರೆ….

Read more
error: Content is protected !!