Ginger yield

ಶುಂಠಿ – ಗಡ್ಡೆ ತೂಕ ಬರಲು ಸೂಕ್ತ ಬೇಸಾಯ ವಿಧಾನ.

ಶುಂಠಿಯ ಸಸ್ಯ ಬೆಳೆವಣಿಗೆಯ ಮೇಲೆ ಗಡ್ಡೆ ಬೆಳೆವಣಿಗೆ ಇರುತ್ತದೆ. ಎಳವೆಯಲ್ಲಿ ಸಸ್ಯ ಚೆನ್ನಾಗಿ ಬೆಳೆದರೆ ಗಡ್ಡೆ ದೊಡ್ಡದಾಗುತ್ತದೆ. ಇದು ಸಸ್ಯದ ಮೊಳಕೆಗಳ ಮೇಲೆ ಅವಲಂಭಿತವಾಗಿದೆ. ಹೆಚ್ಚು ಮೊಳಕೆಗಳು ಆರೋಗ್ಯಕರ ಸಸ್ಯಗಳಿದ್ದಾಗ ಗಡ್ಡೆ ದೊಡ್ಡದಾಗಲೇ ಬೇಕು. ಬರೇ ಸಸ್ಯ ಬೆಳೆವಣಿಗೆ ಮಾತ್ರವಲ್ಲ ಸಮತೋಲನದ ಬೆಳೆವಣಿಗೆ ಎಂಬುದು ಎಲ್ಲಕ್ಕಿಂತ ಮುಖ್ಯ. ಕೆಲವು ಮನುಷ್ಯ ಸುಮಾರು 40-45 ವರ್ಷದ ತನಕ ಕಡಿಮೆ ತೂಕದವರಾಗಿರುತ್ತಾರೆ. ನಂತರದ ವರ್ಷಗಳಲ್ಲಿ ಶರೀರದಲ್ಲಿ ಮಾಂಸ ಹೆಚ್ಚಾಗದಿದ್ದರೂ ತೂಕ ಹೆಚ್ಚಾಗುತ್ತಾರೆ. ಕಾರಣ ಅವರ ಎಲುಬುಗಳ ತೂಕ ಹೆಚ್ಚಾಗಿರುತ್ತದೆ. ಹಾಗೆಯೇ…

Read more

ತಜ್ಞರ ಮೌನ – ಭವಿಷ್ಯದಲ್ಲಿ ಅಪಾಯ ತರಬಹುದೇ?

ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ. ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ…

Read more
PM Narendra modi

ರೈತರ ಕಲ್ಯಾಣಕ್ಕೆ ಕೇಂದ್ರ ಸರಕಾರದ “ಕೃಷಿ ಸುಧಾರಣಾ ಬಿಲ್”

ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾರುಕಟ್ಟೆ ವ್ಯವಸ್ಥೆಗೆ ಭಾರೀ ಸರ್ಜರಿ ಬೇಕು ಎಂದು ಮನಗಂಡ ಕೇಂದ್ರ ಸರಕಾರ ಕಿಸಾನ್ ಬಿಲ್ 2020 ನ್ನು  ರಚಿಸಿ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಅಲ್ಲಿ ಅವರ ಅಂಕಿತ ಬಿದ್ದ ನಂತರ ಅದು ಜ್ಯಾರಿಗೆ ಬರಲಿದೆ. ಈ ಬಿಲ್ ಬಗ್ಗೆ ಜನ ಮನಬಂದಂತೆ ಮಾತಾಡುತ್ತಾರೆ. ಆದರೆ ಪ್ರಧಾನಿಗಳು ಅದರ ಬಗ್ಗೆ ಸ್ಪಷ್ಟಣೆಯನ್ನೂ ನೀಡಿದ್ದಾರೆ.  ಕೃಷಿ ಕ್ಷೇತ್ರದ ಸುಧಾರಣೆಗೆ ಕೆಲವು ಕಾನೂನಾತ್ಮಕ ಬದಲಾವಣೆ ಬೇಕೇ…

Read more
ಕಬ್ಬು ಸಸ್ಯ -sugarcane plants

ಕಬ್ಬು ಬೆಳೆಯಲ್ಲಿ ದಂಟು ಕೊರಕ ಕೀಟದ ನಿಯಂತ್ರಣ ಹೇಗೆ?

ಕಬ್ಬಿನ ಬೆಳೆ ಉಳಿದೆಲ್ಲಾ ವಾಣಿಜ್ಯ ಬೆಳೆಗಳಿಗಿಂತ ಸುಲಭದ ಬೆಳೆ.ಆದಾಗ್ಯೂ ಇದಕ್ಕೆ ಕೆಲವು ಕೀಟ ರೋಗ ಸಮಸ್ಯೆಗಳು ಇಲ್ಲದಿಲ್ಲ. ಬೇರು ಹುಳದಂತ ಸಮಸ್ಯೆ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಯಲೇ ಸಾಧ್ಯವಿಲ್ಲ ಎಂಬ ಮಟ್ಟಕ್ಕೆ ಬಂದರೆ, ಗಂಟು ಕೊರೆಯುವ ಹುಳವೂ (Internode borer) ಬಹುತೇಕ ಎಲ್ಲಾ ಕಡೆ ಇದೆ. ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಕರ್ನಾಟಕದ ಬಹುತೇಕ ಕಬ್ಬು ಬೆಳೆಯುವ ಭಾಗಗಳಲ್ಲಿ ಈ ಕೀಟದ ತೊಂದರೆ ಹೆಚ್ಚಾಗಿದ್ದು, ಗಂಟುಗಳು ಹತ್ತಿರವಾಗಿ(ಕಿರಿದಾಗಿ), ಗುಣಮಟ್ಟ ಕುಂಠಿತವಾಗಿ ಕಬ್ಬಿನ ರಿಕವರಿ ನಷ್ಟ…

Read more
ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
vertical farming

ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ ಬೆಳೆಯಬಹುದಾದ ವರ್ಟಿಕಲ್ ಕೃಷಿ.

ಕೃಷಿ ದಿನದಿಂದ ದಿನಕ್ಕೆ ಬದಲಾವಣೆಯ ಮೆಟ್ಟಲೇರುತ್ತಾ ಇರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಅತೀ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಬೆಳೆ ಬೆಳೆಸಿ, ಅಧಿಕ ಇಳುವರಿ ಪಡೆಯುವುದೇ ಆಗಿರುತ್ತದೆ. ಸುಮಾರು 30-40 ವರ್ಷದ ಹಿಂದೆ ನಮ್ಮ ಕೃಷಿ ಹೇಗಿತ್ತು ಎಂಬುದನ್ನು ಆ ವಯೋಮಾನದವರು ಒಮ್ಮೆ ನೆನಪಿಸಿಕೊಳ್ಳಿ. ಅದೇ ರೀತಿ ತುಂಬಾ ಹಿರಿಯರಿದ್ದರೆ ಅವರ ಕಾಲದಲ್ಲಿ ಸುಮಾರು 50-60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಒಮ್ಮೆ ಕೇಳಿ ನೋಡಿ ಈಗಿನದ್ದು   ನಮಗೆಲ್ಲಾ ಗೊತ್ತಿದೆ ತಾನೇ? ಎಲ್ಲವೂ ಭಾರೀ ಬದಲಾವಣೆ ಆಗಿದೆ. ಆಗುತ್ತಲೇ…

Read more
ಗೇರು ಮರಕ್ಕೆ ಗೊಬ್ಬರ ಕೊಡುವ ವಿಧಾನ

ಗೇರು – ಗೊಬ್ಬರ ಕೊಟ್ಟರೆ ಬಂಪರ್ ಇಳುವರಿ ಪಡೆಯಬಹುದು.

ಗೇರು ಬೆಳೆಗೆ ವರ್ಷದಲ್ಲಿ 3 ತಿಂಗಳು ಮಾತ್ರ ಕೆಲಸ, ನೀರಾವರಿ ಬೇಡ. ಉತ್ತಮವಾಗಿ ಗೊಬ್ಬರ ಕೊಟ್ಟು ನಿಗಾ ವಹಿಸಿ ಬೆಳೆದರೆ 5-6  ವರ್ಷದ ಮರದಲ್ಲಿ 10 ಕಿಲೋ ತನಕ ಇಳುವರಿ ಪಡೆಯಬಹುದು. ಕನಿಷ್ಟ 1000 ರೂ ಆದಾಯಕ್ಕೆ ತೊಂದರೆ ಇಲ್ಲ ಎಂಬ ಕಾರಣಕ್ಕೆ ರೈತರು ತಮ್ಮಲ್ಲಿ ಖಾಲಿ ಇರುವ ಸ್ಥಳದಲ್ಲಿ ಗೇರು ಬೆಳೆ ಬೆಳೆಸಿದ್ದಾರೆ. ಬರೇ ನೆಟ್ಟರೆ ಸಾಲದು ಅದಕ್ಕೆ ಅಗತ್ಯ ಪೊಷಕಗಳನ್ನು ಕಾಲ ಕಾಲಕ್ಕೆ ಕೊಟ್ಟರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.     ಗೇರು ಮರ ಚೆನ್ನಾಗಿ…

Read more
ಮಂಗಳ ಆಡಿಕೆ

ಜಲ್ಲಿ ಮಂಗಳ ಎಂಬ ಹೊಸ ತಳಿ ಇದೆಯೇ?

ಮಂಗಳ ಎಂಬ ತಳಿಯನ್ನು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು 1972 ರಲ್ಲಿ ಚೀನಾ ದಿಂದ ಮೂಲ ತಂದು ಇಲ್ಲಿ ಅಭಿವೃದ್ದಿಪಡಿಸಿದ್ದು ಬಿಟ್ಟರೆ, ಈ ತನಕ ಬೇರೆ ಮಂಗಳ ತಳಿಯನ್ನು ಬಿಡುಗಡೆ ಮಾಡಿಲ್ಲ. ಅದರ ಮೂಲ ಗುಣ ಕ್ಷೀಣವಾದುದಕ್ಕೆ ಅದರಲ್ಲೇ ಆಂತರಿಕ ಕ್ರಾಸಿಂಗ್  ಮಾಡಿ ಇಂಟರ್ ಮಂಗಳವನ್ನು 1984 ರಲ್ಲಿ ಪಡೆಯಯಲಾಗಿದೆ.  ಚೀನಾದಲ್ಲಿ ಇದಕ್ಕೆ ಯಾವ ಹೆಸರಿತ್ತೋ ಗೊತ್ತಿಲ್ಲ. ಇಲ್ಲಿ ಅಭಿವೃದ್ದಿಪಡಿಸಿ ಬಿಡುಗಡೆ ಮಾಡುವಾಗ ಮಂಗಳ ಹೆಸರನ್ನು ನೀಡಲಾಗಿದೆ. ಹಾಗೆ ನೋಡಿದರೆ ಕೆಲವು ಚಾಲಿ ಅಡಿಕೆಗೆ ಹೊಂದುವ…

Read more

ಕಾಡು ಪ್ರಾಣಿಗಳಿಗೆ ಇನ್ನು ಹೊಲವೇ ಖಾಯಂ ವಾಸ್ತವ್ಯ!

ಸರಕಾರ ಈಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸುಮಾರು 23 ಲಕ್ಷ ಎಕ್ರೆ ಅರಣ್ಯ ( ಡೀಮ್ದ್ ಫೋರೆಸ್ಟ್ )ನಲ್ಲಿ 15 ಲಕ್ಷ ಎಕರೆ  ಭೂಮಿಯನ್ನು ಸರಕಾರ ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ. ಈಗಲೇ ಅರಣ್ಯ ನಾಶದಿಂದ  ಕೃಷಿಕರ 10- 20 % ದಷ್ಟು ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಒಂದು ವೇಳೆ ಇನ್ನೂ ಕಾಡು ಕಡಿಮೆಯಾದರೆ  ಕೃಷಿಕರ ಹೊಲದಲ್ಲೇ ಕಾಡು ಪ್ರಾಣಿಗಳು ವಾಸಮಾಡಬಹುದು. ಬೆಳೆಗಳು ಕೋತಿ, ಆನೆ ಕಾಡೆಮ್ಮೆಗಳ ಪಾಲಾಗಬಹುದು. ಹಟ್ಟಿಯಲ್ಲಿರುವ ಹಸುಗಳು ಹುಲಿ, ಚಿರತೆಯ ಪಾಲಾದರೂ…

Read more
ಶುದ್ಧ ತೆಂಗಿನ ಎಣ್ಣೆ

ಶುದ್ಧ ತೆಂಗಿನೆಣ್ಣೆಯಲ್ಲಿದೆ – ಅಪರಿಮಿತ ಆರೋಗ್ಯ ಗುಣಗಳು

ಪ್ರಕೃತಿ ಸೃಷ್ಟಿಸಿದ ಹಲವಾರು ಔಷಧೀಯ ಸಸ್ಯ , ಮೂಲಿಕೆಗಳಲ್ಲಿ ತೆಂಗು ಒಂದು. ಇದು ಇಂದು ನಿನ್ನೆಯ ವಿಚಾರ ಅಲ್ಲ. ಅನಾದಿ ಕಾಲದಿಂದಲೂ ಇದ್ದದ್ದು. ಆದರೆ ಗೊತ್ತೀದ್ದೋ ಗೊತ್ತಿಲ್ಲದೆಯೋ ನಾವು ಬಳಸುವುದು ಕಡಿಮೆ ಮಾಡುತ್ತಿದೇವೆ.ತೆಂಗಿನ ಎಣ್ಣೆ ತಿಂದವರಿಗೆ ರೋಗ ಇಲ್ಲ.  ಕೊಬ್ಬರಿ ಎಣ್ಣೆ ಎಂಬುದು ಹಸುವಿನ ತುಪ್ಪಕ್ಕೆ ಸರಿಸಾಟಿಯಾದ ವಸ್ತು ಎನ್ನುತ್ತಾರೆ. ಇದು ಸಸ್ಯಜನ್ಯ ಎಣ್ಣೆಯಾಗಿದ್ದು, ತುಪ್ಪಕ್ಕಿಂತಲೂ ಮಿಗಿಲಾದ ಔಷಧೀಯ ಗುಣವನ್ನು ಪಡೆದಿದೆ. ನಮ್ಮಲ್ಲಿ ಈಗಲೂ ಹಳ್ಳಿಯ ಜನ ಕಣ್ಣು ತುರಿಕೆ, ಮೈ ತುರಿಕೆ ಆದರೆ ಆ ಭಾಗಕ್ಕೆ…

Read more
error: Content is protected !!