Farmer is always un happy

ರೈತರ ನೆಮ್ಮದಿ ಕೆಡಿಸುತ್ತಿರುವ ಭೂ ವ್ಯಾಜ್ಯಗಳು.

100 ಜನರಲ್ಲಿ 50%  ಜನ ಭೂಮಿಗೆ ಸಂಬಂಧಿಸಿದ ತಕರಾರುಗಳನ್ನು ಹಿಡಿದುಕೊಂಡು ನ್ಯಾಯಪಡೆಯಲು ಜೀವಮಾನವನ್ನೇ ಸವೆಸುತ್ತಾರೆ. 100 ಕ್ಕೆ  99 ಜನ ನೆರೆ ಹೊರೆಯ ಕೃಷಿಕ ಸಹೋದ್ಯೋಗಿಗಳ ಜೊತೆಯಲ್ಲಿ ಮುಸುಕಿನ ಗುದ್ದಾಟದಲ್ಲಿರುತ್ತಾರೆ. ಭಾರತದ ಕೋರ್ಟು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ವಕೀಲರುಗಳು ಬದುಕುವುದೇ ಭೂ ವ್ಯಾಜ್ಯಗಳಲ್ಲಿ. ಇಂಥಹ ಭೂ ಕಾಯಿದೆ ಜನಸ್ನೇಹಿಯೇ ? ಇದರ ಜನಸ್ನೇಹೀ ತಿದ್ದುಪಡಿಗೆ ರೈತರು ಸರಕಾರವನ್ನು  ಒತ್ತಾಯಪಡಿಸಬೇಕಾಗಿದೆ.  ಹೆಣ್ಣು , ಹೊನ್ನು, ಮಣ್ಣು ಈ ಮೂರೂ ಮನುಕುಲವನ್ನು ಹಾಳು ಮಾಡುವುದು ನಿಶ್ಚಯ. ಇದರಲ್ಲಿ ಎರಡಕ್ಕೆ ಸ್ವಲ್ಪ…

Read more

ಡ್ರೋನುಗಳ ಹಾರಾಟಕ್ಕೆ ಅನುಮತಿಯೇ ಇಲ್ಲ – ಗೊತ್ತೇ?

ಬಹಳ ಜನ ಅದರಲ್ಲೂ ಕೃಷಿಗೆ ಪ್ರವೇಶಿಸುವ ಹೊಸ ತಲೆಮಾರು  ಅಡಿಕೆ ಮುಂತಾದ ಬೆಳೆಗಳಿಗೆ ಸಿಂಪರಣೆ ಎಂಬ ಪರಿಶ್ರಮದ ಕೆಲಸಕ್ಕೆ ಆತೀ ಆಧುನಿಕ ವ್ಯವಸ್ಥೆಯಾದ ಡ್ರೋನುಗಳನ್ನು ಬಳಸುವ ಬಗ್ಗೆ ಮಾತಾಡುತ್ತಾರೆ.  ಕೆಲವರು ಅದನ್ನು ತಯಾರಿಸಿ ಶ್ಲಾಘ್ಹನೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರೋನು ಬಳಸಿ ಸಿಂಪರಣೆ ಮಾಡುವಂತಿಲ್ಲ. ಡ್ರೋನು ಹಾರಾಟಕ್ಕೆ ಅನುಮತಿಯೂ ಬೇಕು. The Union Government has clarified that drone-spraying is illegal. “As per the provisions of Insecticides Act 1968, aerial application of pesticides need…

Read more
ಹೈಬ್ರೀಡ್ ಮರದ ಕಾಯಿ ಗೊಂಚಲು

ತೆಂಗಿನ ಹೈಬ್ರೀಡ್ ತಳಿಗಳು – ನಿಮಗೆ ಇದು ತಿಳಿದಿರಲಿ.

ಒಂದು ತಳಿಯ ಅಧಿಕ ಉತ್ಪಾದನೆಗೆ , ಅಥವಾ ತಳಿ ಉನ್ನತೀಕರಣಕ್ಕೆ  ಮತ್ತೊಂದು ತಳಿ ಮೂಲದಿಂದ ಕ್ರಾಸಿಂಗ್ ಮಾಡಿ ಪಡೆಯುವ ಹೊಸ ತಲೆಮಾರಿನ ತಳಿಗೆ ಹೈಬ್ರೀಡ್ ತಳಿ ಎನ್ನುತ್ತಾರೆ. ಇದು ಯಾವುದೋ ಅಧಿಕ ಇಳುವರಿ ಕೊಡುವ ಯಾರದೋ ಹಿತ್ತಲಲ್ಲಿರುವ ಮರದಿಂದ ಆಯ್ಕೆ ಮಾಡಿದ ಬೀಜ ಆಗಿರುವುದಿಲ್ಲ. ಗುರುತು ಪಡಿಸಿದ ಮರದ ಹೆಣ್ಣು ಹೂವಿಗೆ ಆಯ್ಕೆ ಮಾಡಿದ ಮರದ ಗಂಡು ಹೂವಿನ ಪರಾಗವನ್ನು ಕೈಯಿಂದ ( ಕೃತಕ) ಪರಾಗಸ್ಪರ್ಶ ಮಾಡಿ, ಅದರಲ್ಲಿ ಕಾಯಿ ಕಚ್ಚಿದ ಬೀಜವನ್ನು  ಅಭ್ಯಸಿಸಿ ಬಿಡುಗಡೆ ಮಾಡಿದ …

Read more

ರಂಜಕ ಗೊಬ್ಬರವನ್ನು ಹೀಗೆ ಕೊಟ್ಟರೆ ಉತ್ತಮ.

ರಂಜಕ ಎಂಬುದು ಚಲಿಸುವ ಪೋಷಕವಲ್ಲ. ಕೆಲವು ನೀರಿನಲ್ಲಿ ಕರಗುತ್ತದೆ. ಇನ್ನು ಕೆಲವು  ಕರಗುವುದಿಲ್ಲ. ಹೊಲದ ಮಣ್ಣಿನ ಗುಣ ಹೇಗಿದೆ ಎಂಬುದರ ಮೇಲೆ ಅದಕ್ಕೆ ಹೊಂದುವ ರಂಜಕ ಗೊಬ್ಬರವನ್ನು ಕೊಡಬೇಕು. ಹಾಗೆಯೇ ಕೊಟ್ಟ ರಂಜಕವು ಬೆಳೆಗೆ ಲಭ್ಯವಾಗುವ ಸ್ಥಿತಿಯನ್ನು ಉಂಟುಮಾಡಬೇಕು. ಬಹಳಷ್ಟು  ರೈತರು ರಂಜಕ ಪೋಷಕದ ಬಳಕೆಯನ್ನು ಕಡಿಮೆ ಮಾಡುವುದಿಲ್ಲ. ಡಿಎಪಿ ಹಾಕಿದ್ದೇನೆ ಎನ್ನುತ್ತಾರೆ. ಆದರ ಬಹಳಷ್ಟು ರೈತರ ಹೊಲದ ಮಣ್ಣು ಪರೀಕ್ಷೆಯಲ್ಲಿ ರಂಜಕ ಪೋಷಕದ ಕೊರತೆ ಕಂಡು ಬರುತ್ತದೆ. ಇದಕ್ಕೆ ಕಾರಣ ಬಳಕೆ ಕ್ರಮ ಸರಿಯಿಲ್ಲದಿರುವಿಕೆ. ಹೇಗೆ…

Read more
ರಾಸಾಯನಿಕ + ಸಾವಯವ ಎರಡು ಬಳಸಿ ಇಳುವರಿ

ರಾಸಾಯನಿಕ + ಸಾವಯವ = ಇಳುವರಿ ಉತ್ತಮ.

ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ…

Read more

ನಿಮ್ಮ ಹೊಲದಲ್ಲಿ ರಂಜಕ ಎಷ್ಟು ಲಭ್ಯ ಸ್ಥಿತಿಯಲ್ಲಿದೆ- ತಿಳಿಯುವುದು ಹೀಗೆ.

ಎಲ್ಲದಕ್ಕೂ ತಜ್ಞರನ್ನು ಸಂಪರ್ಕಿಸಿ  ಮಾರ್ಗದರ್ಶನ ಪಡೆಯುವ ಬದಲು  ನಾವೇ ಒಂದಷ್ಟು ತಜ್ಞತೆಯನ್ನು ಸಂಪಾದಿಸುವುದು ಉತ್ತಮ. ಈ ನಿಟ್ಟಿನಲ್ಲಿ ನಾವು ಬೆಳೆಗಳಿಗೆ ಬಳಕೆ ಮಾಡುವ ರಂಜಕ ಗೊಬ್ಬರ  ಸಸ್ಯಗಳಿಗೆ ದೊರೆಯುತ್ತದೆಯೇ ಎಂದು ತಿಳಿಯುವ ಸರಳ ವಿಧಾನಗಳು ಇವೆ. ನಿಮ್ಮ ಹೊಲದ ದ್ವಿದಳ ಸಸ್ಯಗಳು, ಅಧಿಕ ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆಯೋ ಅಲ್ಲಿ ರಂಜಕ ಅಂಶ ಇದೆ ಎಂದರ್ಥ. ಇದು ನಿಖರವಾದ ಲಕ್ಷಣ ಅಲ್ಲದಿದ್ದರೂ ಬಹುತೇಕ ಇದು ರಂಜಕದ ಲಭ್ಯತೆಯನ್ನು ಸೂಚಿಸುತ್ತದೆ. ರಂಜಕಾಂಶ ಎಂಬುದು ಫಲಾಪೇಕ್ಷೆ ಇದ್ದು ಬೆಳೆ ಬೆಳೆಯುವಾಗ ನಿರೀಕ್ಷಿತ…

Read more

ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.

 ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ.   ವೃತಿ ಅರಸುವ ಆಸಕ್ತರಿಗೆ  ಮನೆಯ ಕಡಿಮೆ ಸ್ಥಳಾವಕಾಶದಲ್ಲೂ  ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ.     ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು. ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ…

Read more
cotton

ಹತ್ತಿ ಬೆಳೆಯ ಗುಲಾಬಿ ಕಾಯಿ ಕೊರಕ ನಿಯಂತ್ರಣ.

ಹತ್ತಿ ಬೆಳೆಗಾರರಿಗೆ ಗಣನೀಯ ಬೆಳೆ ನಷ್ಟ ಮಾಡುವ ಕೀಟ ಎಂದರೆ  ಗುಲಾಬಿ ಕಾಯಿ ಕೊರಕ. ಹತ್ತಿಯ ಕಾಯಿಗಳು ಬೆಳೆಯುತ್ತಿದ್ದಂತೆ ಇದು ಪ್ರವೇಶವಾಗಿ  ಒಳಗಿನ ಹತ್ತಿಯ ಅರಳನ್ನು ಹಾನಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಈ ಹತ್ತಿಗೆ ಬೆಲೆಯೇ ಇರುವುದಿಲ್ಲ.  ಈ ಕೀಟದ ನಿಯಂತ್ರಣಕ್ಕಾಗಿ ಅತ್ಯಧಿಕ ಕೀಟನಾಶಕ ಬಳಕೆ ಮಾಡಲಾಗುತ್ತದೆ. ಇದರಿಂದಾಗಿಯೇ ಕಳೆದ ವರ್ಷ ಕೆಲವು ರೈತರು ಜೀವ ಕಳೆದುಕೊಂಡದ್ದೂ ಇದೆ.  ಸರಳ ಮತ್ತು ಮಿತವ್ಯಯದ ಬೇಸಾಯ ಕ್ರಮದಲ್ಲಿ ಇದನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಮಾಡಬಹುದು. ಜೀವನ ಚಕ್ರ ಹೀಗಿರುತ್ತದೆ: ಗುಲಾಬಿ…

Read more
ಗಗನ ಚುಂಬಿ ಮದ್ದಾಲೆ ಮರ

ಮದ್ದಾಲೆ ಮರದ ಚೆಕ್ಕೆ ತಿನ್ನಿ- ಆರೋಗ್ಯವಾಗಿರುತ್ತೀರಿ.

ಆಷಾಢ ಅಮವಾಸ್ಯೆಯ ದಿನ ಮದ್ದಾಲೆ ಮರದ ಬುಡಕ್ಕೆ ಬೆಳಗ್ಗಿನ ಜಾವದಲ್ಲಿ ಹೋಗಿ ಕತ್ತಿ ಇತ್ಯಾದಿ ಆಯುಧಗಳ ಸಹಾಯವಿಲ್ಲದೇ ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆದು ಚೂರು ಚೆಕ್ಕೆಯನ್ನು ಜಗಿದು ಸೇವಿಸುವುದು ತುಳು ನಾಡಿನಲ್ಲಿ ಪ್ರತೀತಿ. ಈ ಮರದ ತೊಗಟೆಯ ರಸಕ್ಕೆ ಅನಾರೋಗ್ಯ ನಿವಾರಣೆ ಶಕ್ತಿ ಇದೆ. ಜೊತೆಗೆ ಈ ಮರವನ್ನು ಪೂಜನೀಯವಾಗಿಯೂ ಕಾಣಲಾಗುತ್ತದೆ. ಮದ್ದಾಲೆಗೆ ಇದೆ ದೈವಿಕತೆ:  ಪೆರಿಯಾಕುಳು ಎಂಬ ಯಮಳ ವೀರರು ಬೈಲಬೀಡು ಬಳಿಯ ಮದ್ದಾಲೆ ಅಥವಾ  ಪಾಲೆ ಮರದ ಬುಡದಲ್ಲಿ ಮಾಯವಾದರು ಎಂಬ ಐತಿಹ್ಯವಿದೆ….

Read more

ಕಡಿಮೆ ಬೆಲೆಯ ಉತ್ತಮ ಜೈವಿಕ ಗೊಬ್ಬರಗಳು.

ಕೃಷಿ ಪದ್ಧತಿಯನ್ನು ಸುಸ್ಥಿರಗೊಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಅವುಗಳ ಮೇಲಿನ ಅವಲಂಬನೆಯು ದೀರ್ಘ ಕಾಲದವರೆಗೂ ಮುಂದುವರೆಯಲು ಅಸಾಧ್ಯ.  ಸುಸ್ಥಿರ ಕೃಷಿಗೆ  ಮಣ್ಣಿನ ಆರೋಗ್ಯ ಅತ್ಯಗತ್ಯ. ಇದನ್ನು ಕಾಪಾಡುವಲ್ಲಿ ಹಸಿರು ಎಲೆ ಗೊಬ್ಬರ, ಜೈವಿಕ ಮತ್ತು ಸಾವಯವ ಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಹಲವಾರು ಖಾಸಗಿ ಜೈವಿಕ ಗೊಬ್ಬರ ಪೂರೈಕೆದಾರರು ಇದರ  ಸದುಪಯೋಗ  ಮಾಡಿಕೊಳ್ಳುತ್ತಿದ್ದಾರೆ. ಅದರೆ ಭಾರತೀಯ ತೋಟಗಾರಿಕಾ ಸಂಶೋಧನಾ  ಕೇಂದ್ರದಲ್ಲಿ ಇಂತಹ ಹಲವಾರು  ಸೂಕ್ಷ್ಮಾಣು ಜೀವಿಗಳ  ಉತ್ಪನ್ನಗಳನ್ನು ತಯಾರಿಕೆ ನಡೆಯುತ್ತಿದ್ದು, ಅರ್ಕಾ ಹೆಸರಿನಲ್ಲಿ ಇದು…

Read more
error: Content is protected !!