ಕೆಲವು ವರದಿಗಳ ಪ್ರಕಾರ ಮುಂದಿನ ಫೆಬ್ರವರಿ ತನಕವೂ ಮಳೆ ಬರಲಿದೆ ಎಂಬ ಸುದ್ದಿಗಳಿವೆ. ಹೀಗೆ ಆದರೆ ಕೃಷಿಕರಿಗೆ ಅಪಾರ ನಷ್ಟವಾಗುತ್ತದೆ. ಹಾಗೆ ಆಗದೆ ಇರಲಿ ಎಂಬುದೇ ಎಲ್ಲರ ಆಶಯ. ಈ ಬಗ್ಗೆ ಕೆಲವು ಕಡೆ ಹುಡುಕಾಡಿದಾಗ ರೈತರು ಅಂತಹ ಆತಂಕ ಪಡಬೇಕಾಗಿಲ್ಲ. ಆಗಾಗ ಕೆಲವು ವಿಶೇಷ ದಿನಗಳ ಸಮಯಕ್ಕೆ ಕಾಕತಾಳೀಯವಾಗಿ ವಾಯುಭಾರ ಕುಸಿತ ಉಂಟಾಗಿ ಮಳೆ ಬರುವ ಸಾಧ್ಯತೆಗಳು ಕಂಡು ಬರುತ್ತವೆ.
ಮಳೆ ಬೇಕು ಆದರೆ ಅದು ಯಾವಾಗ ಬರಬೇಕು ಆಗಲೇ ಬಂದರೆ ಅನುಕೂಲ. ಈ ವರ್ಷ ರಾಜ್ಯದಲ್ಲಿ ಮಳೆಯೇ ಬಾರದ ಕಡೆಯಲ್ಲೂ ಮಳೆ ಬಂದಿದೆ. ಭತ್ತದ ಬೆಳೆಗಾರರಿಗೆ, ಈರುಳ್ಳಿ ಬೆಳೆಗಾರರಿಗೆ, ನೆಲಕಡ್ಲೆ, ಅಡಿಕೆ, ಪ್ರತೀಯೊಂದು ಬೆಳೆಗೂ ಮಳೆಯಿಂದಾಗಿ ತೊಂದರೆ ಉಂಟಾಗಿದೆ. ಇದಕ್ಕೆಲ್ಲಾ ಕಾರಣ ಹವಾಮಾನ ಬದಲಾವಣೆ. ಹವಾಮಾನ ಈಗ ಹಿಂದಿನಂತೆ ಅಲ್ಲ. ಸ್ವಲ್ಪ ಸ್ವಲ್ಪವೇ ಅದರ ಗತಿ ಬದಲಾವಣೆ ಆಗುತ್ತಾ ಬರಲಾರಂಭಿದೆ. ಅಕಾಲದಲ್ಲಿ ಮಳೆಯಾಗುವುದು, ಮಳೆ ಬರಬೇಕಾದ ಸಮಯದಲ್ಲಿ ಮಳೆ ಇಲ್ಲದೆ ಬೆಳೆ ಒಣಗುವುದು ಇನ್ನು ಮಾಮೂಲು ಎನ್ನುತ್ತಾರೆ ತಜ್ಞರು. ಇದಕ್ಕೆ ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ. ನಮಗೆ ಸಮಯಾಧಾರಿತವಾಗಿ ಮಳೆಯ ಮುನ್ಸೂಚನೆ ನೀಡುವ ವ್ಯವಸ್ಥೆಗಳಿರುವುದು ನಮ್ಮ ಭಾಗ್ಯ ಎಂದಷ್ಟೇ ಹೇಳಬೇಕು.
- ಈ ವರ್ಷದ ಮಳೆಯ ಗತಿ ಎಲ್ಲರಿಗೂ ನಡುಕ ಹುಟ್ಟಿಸಿದೆ.
- ಇನ್ನೂ ಮಳೆ ಇದೆ ಎಂಬುದಾಗಿ ಜನ ಆತಂಕದಲ್ಲಿದ್ದಾರೆ.
- ಆದರೆ ಅಂತಹ ಮಳೆ ಇಲ್ಲ.
- ಮಮೂಲಿನಂತೆ ದೀಪಾವಳಿ ತನಕ ಮಳೆ ಇದೆ.
- ನಂತರ ದೀಪೋತ್ಸವ ( ಕಾರ್ತಿಕ ಮಾಸದ ಕೊನೆ) ಸಮಯದಲ್ಲಿ ಮಳೆ ಇದೆ.
- ನಂತರ ಮಳೆ ಕಡಿಮೆಯಾಗುತ್ತದೆ.
ಎಲ್ಲೆಲ್ಲಿ ಯಾವಾಗ ಮಳೆ ಇದೆ:
ಮಂಗಳೂರು; ನವೆಂಬರ್ 2021 ರ ದಿನಾಂಕ 3-5-6-7-10-12-15-21 ದಿನಗಳಲ್ಲಿ ಮಳೆ ಬರುವ ಸೂಚನೆ ಇರುತ್ತದೆ.ಅದೇ ರೀತಿಯಲ್ಲಿ ಡಿಸೆಂಬರ್ 2021 ರಲ್ಲಿ 5-6 ತಾರೀಕೀನಂದು ಮಳೆ ಬರುವ ಸೂಚನೆ ಇರುತ್ತದೆ. ಜನವರಿ 2022 ರಲ್ಲಿ ಯಾವ ದಿನವೂ ಮಳೆಯ ಸೂಚನೆ ಇರುವುದಿಲ್ಲ. ಫೆಬ್ರವರಿ 2022 ರಲ್ಲಿ 2022 ಮಳೆ ಮುನ್ಸೂಚನೆ ಇರುವುದಿಲ್ಲ.
ಉಡುಪಿ: ನವೆಂಬರ್ 2021 ರಲ್ಲಿ 1-9 10-11-12-14-23-24 ದಿನಾಂಕಗಳಂದು ಹೆಚ್ಚು ಕಡಿಮೆ ಪ್ರಮಾಣದಲ್ಲಿ ಮಳೆ ಇದೆ. ಡಿಸೆಂಬರ್ ತಿಂಗಳಲ್ಲಿ 4-20 ನೇ ತಾರೀಖಿನಂದು ಮಳೆ ಮುನ್ಸೂಚನೆ ಇದೆ. ಜನವರಿ 2022 ರಲ್ಲಿ ಹಾಗೂ ಫೆಬ್ರವರಿ 2022 ರಲ್ಲಿ ಮಳೆಯ ಮುನ್ಸೂಚನೆ ಇರುವುದಿಲ್ಲ.
ಶಿವಮೊಗ್ಗ; ದಿನಾಂಕ 1-20-21-22-23 ರಂದು ಮತ್ತು ಡಿಸೆಂಬರ್ 2021, ಜನವರಿ ಮತ್ತು ಫೆಬ್ರವರಿ 2022 ರಲ್ಲಿ ಮಳೆ ಮುನ್ಸೂಚನೆ ಇರುವುದಿಲ್ಲ.
ಹಾಸನ: ನವೆಂಬರ್ 5-10-11 -14-23-24 ಡಿಸೆಂಬರ್2021, 4-9 ರ ದಿನಾಂಕದಂದು 30-45% ಮಳೆ ಮುನ್ಸೂಚನೆ ಇದೆ. ಜನವರಿ ಮತ್ತು ಫೆಬ್ರವರಿ 2022 ರಲ್ಲಿ ಮಳೆ ಮುನ್ಸೂಚನೆ ಇರುವುದಿಲ್ಲ.
ಚಿತ್ರದುರ್ಗ: ನವೆಂಬರ್ 2021 ರಲ್ಲಿ 1-2-6 13-20-21 ದಿನಾಂಕಗಳಂದು, ಡಿಸೆಂಬರ್ 5-20 2022 ರ ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆಯ ಮುನ್ಸೂಚನೆ ಇರುವುದಿಲ್ಲ
ಹುಬ್ಬಳ್ಳಿ ಧಾರವಾಡ: ಈ ಜಿಲ್ಲೆಗಳ ಸುತ್ತಮುತ್ತ ನವೆಂಬರ್ 2021 ರಲ್ಲಿ 2-9-10-13-14 ಡಿಸೆಂಬರ್ ತಿಂಗಳಲ್ಲಿ 5-6 2022 ರ ಜನವರಿ ಮತ್ತು ಫೆಬ್ರವರಿಗಳಲ್ಲಿ ಮಳೆ ಮುನ್ಸೂಚನೆ ಇರುವುದಿಲ್ಲ.
ತುಮಕೂರು; 2021 ರ ನವೆಂಬರ್ 20-21-22-23 ಮತ್ತು 28 ರಂದು ಹಾಗೂ ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಯಾವ ಮಳೆ ಸೂಚನೆ ಇರುವುದಿಲ್ಲ.
ಬೆಂಗಳೂರು; ನವೆಂಬರ್ 2021 ರಲ್ಲಿ 1-2-3-4-5 10-11-17 -26-27-28 ರಂದು ಹಾಗೂ ಡಿಸೆಂಬರ್ ನಲ್ಲಿ 4-13-18-19 ರಂದು ಮಳೆ ಮುನ್ಸೂಚನೆ ಇದೆ. ಜನವರಿ 10-22, ಫೆಬ್ರವರಿ 2022 ರಲ್ಲಿ ಮಳೆ ಸೂಚನೆ ಇರುವುದಿಲ್ಲ.
ಬೆಳಗಾವಿ; ನವೆಂಬರ್ 2021 ರಲ್ಲಿ ದಿನಾಂಕ-2-4-10-11-20 ಈ ದಿನಾಂಕಗಳಂದು ಮಳೆ ಬರುವ ಸಾಧ್ಯತೆ ಇದೆ. ಡಿಸೆಂಬರ್ 10 ಮತ್ತು 21 ರಂದು ಮಳೆ ಬರುವ ಸಾಧ್ಯತೆ ಇದೆ. ಜನವರಿ ಮತ್ತು ಫೆಬ್ರವರಿ 2022 ರಲ್ಲಿ ಒಂದೇ ಒಂದು ಮಳೆ ಬರುವ ಸೂಚನೆ ಇಲ್ಲ.
ಚಿಕ್ಕಮಗಳೂರು ಮತ್ತು ಭದ್ರಾವತಿ; ನವೆಂಬರ್ 2021 ರಲ್ಲಿ ದಿನಾಂಕ 1-20-21-22-23 ರಂದು ಮಳೆ ಮುನ್ಸೂಚನೆ ಇದೆ. ನಂತರ ಫೆಬ್ರವರಿ ತನಕವೂ ಮಳೆ ಸಾಧ್ಯತೆ ಇರುವುದಿಲ್ಲ.
ಕೋಲಾರ: ನವೆಂಬರ್ 2021 ರಲ್ಲಿ ದಿನಾಂಕ:1-5-6-13-19-26 ಸ್ವಲ್ಪ ಮಳೆ ಬರಲಿದೆ. ಡಿಸೆಂಬರ್ ನಲ್ಲಿ 13-21 ರಂದು ಮಳೆ ಮುನ್ಸೂಚನೆ ಇದೆ. 2022 ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಯಾವ ಮಳೆಯ ಸೂಚನೆಯೂ ಇರುವುದಿಲ್ಲ.
ಮಂಡ್ಯ: ನವೆಂಬರ್ 2021 ರ ದಿನಾಂಕ:4-5-12-13-16-20 ರಂದು ಅಲ್ಪ ಸ್ವಲ್ಪ (35- 45% ಸಾಧ್ಯತೆ)-ಮಳೆಯಾಗಬಹುದು. ಡಿಸೆಂಬರ್:4-14 ರಂದು, ಜನವರಿ -2022 ಮತ್ತು ಫೆಬ್ರವರಿಗಳಲ್ಲಿ ಯಾವ ಮಳೆ ಸೂಚನೆಯೂ ಇರುವುದಿಲ್ಲ.
ಗದಗ: ನವೆಂಬರ್ 1, ಮತ್ತು 2-4 ರಂದು 35-45 % ಮಳೆ ಬರುವ ಸಾಧ್ಯತೆ ಇದೆ. ಡಿಸೆಂಬರ್ ನಲ್ಲಿ 19 (20%)-20 (55%) ಜನವರಿ ಮತ್ತು ಫೆಬ್ರವರಿ 2022 ಕ್ಕೆ ಮಳೆ ಮುನ್ಸೂಚನೆ ಇರುವುದಿಲ್ಲ.
ಹೊಸಪೇಟೆ: ನವೆಂಬರ್ 2021 ರಲ್ಲಿ ದಿನಾಂಕ:9-10-13-16 ರಂದು, ಡಿಸೆಂಬರ್ ತಿಂಗಳಲ್ಲಿ 18-20 ರಂದು, 2022 ರ ಜನವರಿ ಮತ್ತು ಫೆಬ್ರವರಿಯಲ್ಲಿ ಯಾವ ಮಳೆ ಸೂಚನೆಯೂ ಇರುವುದಿಲ್ಲ.
ಬೀದರ್: ನವೆಂಬರ್ 2021 ರ ದಿನಾಂಕ 2-18-19 ರಂದು 55% ಮಳೆ ಸಾದ್ಯತೆ ಇದೆ. ಡಿಸೆಂಬರ್ ತಿಂಗಳಲ್ಲಿ ಮಳೆ ಇಲ್ಲ. 2022 ಜನವರಿಯಲ್ಲಿ 28-29 ಮತ್ತು ಫೆಬ್ರವರಿಯಲ್ಲಿ 3-7 ರಂದು 50% ಮಳೆ ಸಾಧ್ಯತೆ ಇದೆ.
ರಾಯಚೂರು; ನವೆಂಬರ್ 2021 ರಲ್ಲಿ ದಿನಾಂಕ: 2-18-19 ರಂದು 46-55% ಮಳೆ ಸಾಧ್ಯತೆ ಇದೆ. ಡಿಸೆಂಬರ್ ನಲ್ಲಿ ಮಳೆ ಮುನ್ಸೂಚನೆ ಇರುವುದಿಲ್ಲ.2022 ರ ಜನವರಿಯಲ್ಲಿ 28-29 ರಂದು 50-55% ಮಳೆ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ 3-7 ರಂದು 45-55% ಮಳೆ ಸಾಧ್ಯತೆ ಇದೆ.
ಬಿಜಾಪುರ: ನವೆಂಬರ್ 2021 ರಲ್ಲಿ 4-5-10 (50-55%) ಡಿಸೆಂಬರ್ ನಲ್ಲಿ 4-20 ರಂದು ಮಳೆ ಇರಬಹುದು. 2022 ರ ಜನವರಿ ಮತ್ತು ಫೆಬ್ರವರಿಗಳಲ್ಲಿ ಮಳೆ ಸಾಧ್ಯತೆ ಇರುವುದಿಲ್ಲ.
ಬಳ್ಳಾರಿ: ನವೆಂಬರ್ 2021 ನವೆಂಬರ್ ತಿಂಗಳಲ್ಲಿ 1-9-10-16-24-25 ರಂದು ಮಳೆ ಸೂಚನೆ ಇದೆ. ಡಿಸೆಂಬರ್ ತಿಂಗಳಲ್ಲಿ 5-6 ರಂದು (48-55%) ಮಳೆ ಸೂಚನೆ ಇದೆ.ಜನವರಿ ಮತ್ತು ಫೆಬ್ರವರಿ 2022 ಕ್ಕೆ ಯಾವುವೇ ಮಳ್ಎ ಮುನ್ಸೂಚನೆ ಇರುವುದಿಲ್ಲ.
ಗುಲ್ಬರ್ಗಾ: 2021 ನವೆಂಬರ್ ನಲ್ಲಿ 1-2-14 ರಂದು ಡಿಸೆಂಬರ್ ತಿಂಗಳಲ್ಲಿ 4-6 ರಂದು ಮಳೆ ಸೂಚನೆ ಇದೆ. 2022 ಜನವರಿ ಮತ್ತು ಫೆಬ್ರವರಿಗಳಲ್ಲಿ ಯಾವ ಮಳೆ ಸೂಚನೆಯೂ ಇಲ್ಲ.
ಸಾಮಾನ್ಯವಾಗಿ ತಿಂಗಳು ಗಟ್ಟಲೆ ಮಳೆ ಮುನ್ಸೂಚನೆ ಸೂಚಿಸುವುದು ಕಷ್ಟ ಸಾಧ್ಯ. ಅದೇ ರೀತಿಯಲ್ಲಿ ಇದು ಬದಲಾವಣೆಯೂ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಬರುತ್ತದೆ. ಈಗಾಗಲೇ ಚಳಿಯೂ ಸ್ವಲ್ಪ ಪ್ರಾರಂಭವಾಗಿರುವ ಕಾರಣ ಅಂತಹ ಮಳೆಯ ಸಾಧ್ಯತೆ ಇಲ್ಲ ಎಂದೇ ಹೇಳಬಹುದು.