ಉತ್ತಮ ಇಳುವರಿಯ ತೆಂಗು

100 ತೆಂಗಿನ ಮರಕ್ಕೆ 10000 ಕಾಯಿ ಹೇಗೆ ಪಡೆಯಲು ಬೇಕಾದ ಆರೈಕೆ.

ತೆಂಗಿನ ಮರವೊಂದರ ಇಳುವರಿ ಸಾಮರ್ಥ್ಯದಷ್ಟನ್ನು ನಾವು ಪಡೆಯುತ್ತಿಲ್ಲ.  ಯಾರಿಗೆ 100 ತೆಂಗಿನ ಮರಕ್ಕೆ 10,000 ತೆಂಗಿನಕಾಯಿ ಆಗುತ್ತದೆಯೋ ಅವರಿಗೆ ತೆಂಗು ಕೃಷಿ ಲಾಭದಾಯಕ. 10000 ಕಾಯಿಗಿಂತ ಹೆಚ್ಚು ಪಡೆಯಲು ಹಾಕಬೇಕಾದ ಗೊಬ್ಬರ ಮತ್ತು ಮಾಡಬೇಕಾದ ಆರೈಕೆ  ಇವು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. ತೆಂಗಿನ ಉತ್ತಮ ಇಳುವರಿಗೆ …

Read more
coconut tree full of nuts

ತೆಂಗಿನ ತೋಟ – ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಹೀಗೆ ಮಾಡಿ.

ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿಂದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು. ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ. ಅದರ ಜೊತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯೂ ನಡೆಯುತ್ತಿರಬೇಕು. ಹೀಗೆ ಆಗಲು ಬೆಳೆಗಾರರು ಮಾಡಬೇಕಾದ ಕೆಲವು ಅಗತ್ಯ ಕೆಲಸಗಳು ಹೀಗಿವೆ. ತೆಂಗಿನ ಮರ ಎಂದರೆ ನಾವು ಅದಕ್ಕೆ ಎಲ್ಲಾ ಸಾವಯವ ತ್ಯಾಜ್ಯಗಳನ್ನು ಬುಡಕ್ಕೆ ಹಾಕುತ್ತೇವೆ. ಅವು ಮಳೆಗಾಲದಲ್ಲಿ ಕರಗಿ ಬುಡದಲ್ಲಿ ಗೊಬ್ಬರವಾಗುತ್ತದೆ. ಬೇಸಿಗೆಯಲ್ಲಿ ಬಿಸಿಲಿಗೆ ಒಣಗುತ್ತಾ ಇರುತ್ತದೆ. ಬೇಸಿಗೆ…

Read more
ತೆಂಗು-ಉತ್ತಮ ಆರೈಕೆಯಲ್ಲಿ ಬೆಳೆದ 4 ವರ್ಷದ ತೆಂಗು- 4 year yielding plant

ತೆಂಗು- 4 ವರ್ಷಕ್ಕೆ ಇಳುವರಿ ಪ್ರಾರಂಭವಾಗಲು ಹೇಗೆ ಸಾಕಬೇಕು?

ತೆಂಗಿನ ಸಸಿ ನೆಟ್ಟು ನಂತರ ಎಲ್ಲಾ ನಿರ್ವಹಣೆಯನ್ನೂ ಚಾಚೂ ತಪ್ಪದೆ ಮಾಡುತ್ತಾ ಬಂದರೆ ಅದು 4 ನೇ ವರ್ಷಕ್ಕೆ ಹೂ ಬಿಟ್ಟು 5 ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹೈಬ್ರೀಡ್ ತಳಿಗಳು ನಾಲ್ಕನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ.  ನಾವೆಲ್ಲಾ ತೆಂಗಿನ ಸಸಿ ನೆಡುತ್ತೇವೆ. ಫಲ ಬರುವ ತನಕ ಆರೈಕೆ ಮಾಡಲು ಉದಾಸೀನ ಮಾಡುತ್ತೇವೆ. ಫಲ ಬಂದ ನಂತರ ಹೆಚ್ಚು ಇಳುವರಿ ಬೇಕು ಎಂದು ಗೊಬ್ಬರ ಕೊಡುವ ಉತ್ಸಾಹ ತೋರುತ್ತೇವೆ. ಆದರೆ ಇದು ಸೂಕ್ತ ಕ್ರಮ ಅಲ್ಲ. ಸಸಿ ನೆಟ್ಟಾದಾಗಿನಿಂದ…

Read more

ತೆಂಗಿನ ಇಳುವರಿ ಹೆಚ್ಚಲು ಹಿಪ್ಪು ನೇರಳೆ ಬೆಳೆ ಸಹಾಯಕ.

ತೆಂಗಿನ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿದರೆ ತೆಂಗಿನಲ್ಲಿ ಇಳುವರಿ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಬಹುವಾರ್ಷಿಕ ಮಿಶ್ರ ಬೆಳೆಗಳಲ್ಲಿ ಹಿಪ್ಪು ನೇರಳೆ ಒಂದು. ಉಳಿದೆಲ್ಲಾ ಮಿಶ್ರ ಬೆಳೆಗಳು ಕೊಡುವ ಆದಾಯಕ್ಕೆ ಹೋಲಿಕೆ ಮಾಡಿದರೆ ಹಿಪ್ಪು ನೇರಳೆಯೇ ಶ್ರೇಷ್ಟ. ಇದು ನೆಟ್ಟು ಸಸಿ ಆಗುವ ತನಕ ಒಂದು ವರ್ಷ ಕಾಯಬೇಕಾಗಬಹುದು. ನಂತರ ಇದರಿಂದ ನಿರಂತರ ಆದಾಯ ಬರುತ್ತಲೇ ಇರುತ್ತದೆ. ತೆಂಗಿನ ಅಧಿಕ ಇಳುವರಿಗೂ ಇದು ಸಹಾಯಕವಾಗುತ್ತದೆ. ರೇಶ್ಮೆ ವ್ಯವಸಾಯ ಎಂಬುದು ಒಂದು ರೀತಿಯಲ್ಲಿ ಸರಕಾರಿ ನೌಕರಿ ಇದ್ದಂತೆ. ತಿಂಗಳಾಂತ್ಯಕ್ಕೆ ಬರುವ…

Read more
ತೆಂಗಿನ ಮರಗಳು

ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರದಿಂದ ಇಳುವರಿ ಸಿಗುವುದು ಯಾವಾಗ?

ಹೆಚ್ಚಿನ ರೈತರು ಹೇಳುವುದುಂಟು, ಈ ವರ್ಷ ನಾವು  ತೆಂಗಿನ ಮರಕ್ಕೆ ಸಾಕಷ್ಟು ಗೊಬ್ಬರ ಕೊಟ್ಟಿದ್ದೇವೆ. ಮುಂದಿನ ವರ್ಷ  ಫಸಲು ಹೆಚ್ಚಬಹುದು ಎಂದು.  ಆದರೆ ವಾಸ್ತವಿಕತೆ ಬೇರೆಯೇ ಇದೆ. ಈ ವರ್ಷ ಹಾಕಿದ ಗೊಬ್ಬರದ ಫಲದಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ  ದೊರೆಯುವುದಿಲ್ಲ. ಅದು ದೊರೆಯುವುದು ಮುಂದಿನ 32 ತಿಂಗಳ ನಂತರ. ತೆಂಗಿನ ಮರದ ಕಾಂಡದಲ್ಲಿ ಹುಟ್ಟುವ  ಅದರ ಹೂ ಗೊಂಚಲು ಮೊನ್ನೆ ಮೊನ್ನೆಮೂಡಿದ್ದು ಎಂದು ತಿಳಿಯದಿರಿ. ಇದರೆ ಹುಟ್ಟು,(Innitiation)  ಸುಮಾರು ಮೂರು ವರ್ಷಗಳ ಹಿಂದೆಯೇ ಆಗಿರುತ್ತದೆ. ಆಗಲೇ ಅದರಲ್ಲಿ…

Read more
ಉತ್ತಮ ಇಳುವರಿಯ ತೆಂಗಿನ ಮರ

ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

ಇತ್ತೀಚೆಗೆ ಥೈಲಾಂಡ್ ನ ತೆಂಗು ತೋಟದ ಒಂದು ವೀಡಿಯೋ ಎಲ್ಲರ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಒಡಾಡಿದೆ. ಇದು ನಮಗೆ ಹೇಗೆ ತೆಂಗು ಬೆಳೆದರೆ ಉತ್ತಮ ಎಂಬ ಕೆಲವು ಸಂಗತಿಗಳನ್ನು ತಿಳಿಸುತ್ತದೆ.  ತೆಂಗಿನ ಸಸಿ ನಾಟಿ ಮಾಡಿದ 4 -6 ವರ್ಷಕ್ಕೇ ಫಸಲಿಗಾರಂಭಿ ಸುತ್ತದೆ. ಒಂದು ತೆಂಗಿನ ಮರವು  ಸುಮಾರು 30-40 ರಷ್ಟು ಗರಿಗಳು ಹಾಗೂ 100 ಕ್ಕೂ ಹೆಚ್ಚಿನ ಕಾಯಿಗಳನ್ನು  ಧರಿಸಬೇಕಾದರೆ ಅದು ಎಷ್ಟೊಂದು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಊಹಿಸಿ!. ಪ್ರತೀ ವರ್ಷವೂ ಫಸಲಿಗೆ…

Read more
healthy coconut palms

ತೆಂಗಿನ ಮರಕ್ಕೆ ನೀರು ಹೆಚ್ಚು ಕೊಟ್ಟರೆ ಉತ್ತಮ !

ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಿಡುವ ಹೂ ಗೊಂಚಲಿನಲ್ಲಿ ಕಾಯಿಯೇ ಇರುವುದಿಲ್ಲ. ಒಂದೆರಡು ಎಳನೀರು ತೆಗೆಯಲೂ ಸಿಗುವುದಿಲ್ಲ. ಸಿಕ್ಕ ಎಳನೀರಿನಲ್ಲಿ ಬೊಗಸೆಯಷ್ಟೂ ನೀರು ಇರುವುದಿಲ್ಲ. ಇದಕ್ಕೆ ಕಾರಣ ಆ ಸಮಯದಲ್ಲಿ ಮರಕ್ಕೆ ಸಾಕಷ್ಟು ತೇವಾಂಶ ಲಭ್ಯವಾಗದೇ ಇರುವುದು ! ಕೆಲವು ಪ್ರದೇಶಗಳಲ್ಲಿ ಬೇಸಿಗೆ, ಮಳೆಗಾಲ ಎರಡೂ ಕಾಲಾವಧಿಯಲ್ಲೂ ಏಕ ಪ್ರಕಾರ ಕಾಯಿ ಇರುತ್ತದೆ. ಆದುದರಿಂದಲೇ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ಎಳನೀರು ಕುಡಿಯಲು ಸಿಗುತ್ತಿದೆ. ಒಂದು ತೆಂಗಿನ ಮರಕ್ಕೆ ದಿನಕ್ಕೆ 30-40  ಲೀ. ನೀರು ಸಾಕು ಎನ್ನುತ್ತಾರೆ. ಆದರೆ ಅಷ್ಟು ನೀರು…

Read more
error: Content is protected !!