ಕೊಕ್ಕೋ ಗಿಡ – ಪ್ರೂನಿಂಗ್ ಮಾಡುವ ವಿಧಾನ.

by | Aug 26, 2020 | Cocoa- ಕೊಕ್ಕೋ, Garden Management (ತೋಟ ನಿರ್ವಹಣೆ) | 0 comments

ಕೊಕ್ಕೋ ಸಸ್ಯ ಬೆಳೆಯಲು ಬಿಟ್ಟರೆ ಮರವೇ ಆಗಬಹುದು. ಹಾಗೆಂದು ಯಾವ ಬೆಳೆಗೂ ತೊಂದರೆ ಇಲ್ಲವಾದರೆ  ಅದನ್ನು ಅದರಷ್ಟಕ್ಕೇ ಬೆಳೆಯಲು ಬಿಡಿ. ಇಳುವರಿ ಹೆಚ್ಚುತ್ತದೆ. ಮಿಶ್ರ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಸುವಾಗ ನಿಮ್ಮ ಒಡಾಟಕ್ಕೆ,ನೀರಾವರಿ, ಕೊಯಿಲು ಮತ್ತು ಇನ್ನಿತರ ಅನುಕೂಲಕ್ಕೆ ಸಮರ್ಪಕವಾಗಿ ಪ್ರೂನಿಂಗ್ ಮಾಡಬೇಕು.

  • ಕೊಕ್ಕೋ ಬೆಳೆ ಕರಾವಳಿ, ಮಲೆನಾಡು, ಅರೆ ಮಲೆನಾಡು, ಹಾಗೆಯೇ  ಅಡಿಕೆ ತೆಂಗು ಬೆಳೆಯುವ ಬಯಲು ನಾಡಿಗೂ ಇದು  ಉತ್ತಮ ಅದಾಯದ  ಬೆಳೆ.
  • ಕೊಕ್ಕೋವನ್ನು  ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು.
  • ಕೊಕ್ಕೋ ಸಸ್ಯಗಳನ್ನು  ಉತ್ತಮವಾಗಿ ಆರೈಕೆ ಮಾಡಿದಲ್ಲಿ ಹೆಚ್ಚುವರಿ ಕೊಡು ಪಡೆಯಬಹುದು.
  • ನಾವು ಕಂಡುಕೊಂಡಂತೆ  ಅರೆಮಲೆನಾಡು  ಭಾಗದಲ್ಲಿ ಕೊಕ್ಕೋ ಬಹಳ ಉತ್ತಮವಾಗಿ ಬರುತ್ತದೆ. ರೋಗ ತೊಂದರೆ ಇಲ್ಲ.

ಕೊಕ್ಕೋ ಸಸ್ಯವು ವರ್ಷದಲ್ಲಿ ಎರಡು ಬಾರಿ ಹೂ ಬಿಟ್ಟು ಎರಡು  ಬೆಳೆ  ಕೊಡುತ್ತದೆ. ಮೊದಲನೇ ಬೆಳೆ ಬೇಸಿಗೆ ಕಾಲದಲ್ಲೂ ಎರಡನೇ ಬೆಳೆ ಮಳೆಗಾಲದಲ್ಲೂ  ದೊರೆಯುತ್ತದೆ. ಹೂವು ಬಿಟ್ಟು 6 ತಿಂಗಳಿಗೆ  ಬೆಳೆಯುತ್ತದೆ. ಮಾರ್ಚ್ ತಿಂಗಳಿನಿಂದ ಜುಲೈ ತನಕ ಅಧಿಕ ಇಳುವರಿ. ಅನಂತರ ಸ್ವಲ್ಪ ಕಡಿಮೆ. ವರ್ಷ ಪೂರ್ತಿ ಫಸಲು ಇದ್ದೇ ಇರುತ್ತದೆ. ವಾರ ವಾರ ಖರ್ಚಿಗೆ ಹಣ ದೊರೆಯುತ್ತದೆ.

ಪ್ರೂನಿಂಗ್ ಯಾಕೆ ಮಾಡಬೇಕು:

pruned and shaped coco plant

ಸರಿಯಾಗಿ ಪ್ರೂನಿಂಗ್ ಮಾಡಿ ಆಕಾರ ಕೊಡಲಾದ ಕೊಕ್ಕೋ ಸಸ್ಯ.

  • ಕೊಕ್ಕೋ ಒಂದು ಮಿಶ್ರ ಬೆಳೆಯಾದ ಕಾರಣ  ಅದರ ಬೆಳವಣಿಗೆ ಇತರ ಮುಖ್ಯ  ಬೆಳೆಗೆ  ತೊಂದರೆದಾಯಕವೂ ಆಗಬಾರದು.
  • ಅದಕ್ಕೋಸ್ಕರವೂ ಸಸಿಯ ಗೆಲ್ಲನ್ನು ಸವರುತ್ತಿರಬೇಕು. ಸಸ್ಯವನ್ನು ಪ್ರೂನಿಂಗ್ ಮಾಡದಿದ್ದರೆ  ಸಸ್ಯ  4-5 ಮೀ ಎತ್ತರದ ಮರವಾಗಿಯೂ ಬೆಳೆಯಬಲ್ಲುದು.
  • ಪ್ರೂನಿಂಗ್  ಮಾಡಿದರೆ  ಕಾಂಡ ಮತ್ತು ದಪ್ಪ ಗೆಲ್ಲಿನಲ್ಲಿ ಕಾಯಿ ಹೆಚ್ಚು ಬಿಡುತ್ತದೆ.
  • ಮಾಡದಿದ್ದರೆ ಗೆಲ್ಲುಗಳಲ್ಲೆಲ್ಲಾ ಕಾಯಿ ಬಿಡುತ್ತದೆ. ವಾಸ್ತವವಾಗಿ ಪ್ರೂನಿಂಗ್ ಮಾಡದ ಸಸಿಯಲ್ಲಿ ಇಳುವರಿ ಹೆಚ್ಚು.
  • ಸಾಮಾನ್ಯವಾಗಿ ಹೂವು ಬರುವ 2 ತಿಂಗಳ ಮುಂಚೆ ಪ್ರೂನಿಂಗ್  ಮಾಡಬೇಕು. ಆಗಸ್ಟ್-ಸಪ್ಟೆಂಬರ್  ತಿಂಗಳಲ್ಲಿ  ಪ್ರೂನಿಂಗ್ ಮಾಡಿದರೆ ಒಕ್ಟೋಬರ್ ತಿಂಗಳಿಗೆ  ಹೂ ಮೊಗ್ಗು ಬಿಡಲಾರಂಭಿಸುತ್ತದೆ.
  • ತಡ ಮಾಡಿದರೆ ಹೂ ಬಿಡುವಿಕೆಯೂ ಮುಂದೆ ಹೋಗುತ್ತದೆ.
  • ಫ್ರೂನಿಂಗ್ ಮಾಡಿದಾಗ ಹೂ  ಬಿಡಲು ಅನುಕೂಲವಾಗುತ್ತದೆ.

Coco plants in arecanut Garden
ಅಕ್ಟೋಬರ್ ತಿಂಗಳಿಗೆ  ಹೂ  ಬಿಟ್ಟರೆ  ಎಪ್ರೀಲ್  ತಿಂಗಳಿಗೆ  ಹೆಚ್ಚು ಹಣ್ಣುಗಳು ದೊರೆಯುತ್ತದೆ. ಮಳೆಗಾಲ  ಬರುವ ಜೂನ್ ತಿಂಗಳಿಗೆ  ಕಾಯಿಗಳು ಹಣ್ಣಾಗಿ ಮುಗಿಯುತ್ತದೆ. ಈ ಸಮಯದ ಬೆಳೆ ಬೆಳೆಗಾಗರಿಗೆ ಹೆಚ್ಚು ಅನುಕೂಲಕರವಾದುದೂ, ಆದಾಯ ಕೊಡುವಂತದ್ದೂ ಆಗಿದ್ದು , ಯಾವುದೇ ಶಿಲೀಂದ್ರ ನಾಶಕ ಬೇಕಾಗುವುದಿಲ್ಲ. ದಂಶಕಗಳ ಉಪಟಳವೂ  ಹೆಚ್ಚು ಇರುವುದಿಲ್ಲ. ಒಣ ವಾತಾವರಣ ಇರುವ ಕಾರಣ ಬೆಲೆಯೂ ಹೆಚ್ಚು ಇರುತ್ತದೆ.ಈ ಬೆಳೆಯನ್ನು   ಗರಿಷ್ಟ ಪ್ರಮಾಣದಲ್ಲಿ ಪಡೆಯುವುದಕ್ಕೆ ನಮ್ಮ ಗುರಿ ಇರಬೇಕು.

ಯಾವ ವಿಧಾನದಲ್ಲಿ ಪ್ರೂನಿಂಗ್:

Pruning method in seedlings plant

ಬೀಜದ ಗಿಡಗಳಿಗೆ ಹೀಗೆ ಪ್ರೂನಿಂಗ್ ಮಾಡಬೇಕು.

  • ಪ್ರೂನಿಂಗ್ ಎಂಬುದು ನಮಗೆ ಆ ಸಸ್ಯದಿಂದ ಯಾವುದೇ ರೀತಿ ಅನನುಕೂಲವಾಗದಿರಲು ಮಾಡುವ ತರಬೇತಿ.
  • ಕೊಕ್ಕೋ ಬೆಳೆವಣಿಗೆಯ ವಿಷಯದಲ್ಲಿ ರಾಕ್ಷಸ ಎಂದೇ ಹೇಳಬಹುದು.
  • ಬೆಳೆಯಲು ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚು ಬೆಳೆದಷ್ಟೂ ಹೆಚ್ಚು ಪೋಷಕಗಳನ್ನು ಬಳಸಿಕೊಳ್ಳುತ್ತದೆ.
  • ಕೊಕ್ಕೋ ಸಸ್ಯವನ್ನು ಅಡಿಕೆ  ತೋಟದಲ್ಲಿ ಬೆಳೆಸಿದ್ದರೆ  ನೆಲಮಟ್ಟದಿಂದ 1 ರಿಂದ 1.5 ಮೀ. ಎತ್ತರಕ್ಕಿರುವಷ್ಟು ಮಾತ್ರ  ಬೆಳೆಯಲು ಬಿಡಬೇಕು.
  • ನಂತರ ಬರುವ ಚೂಪಾನನ್ನು  ತೆಗೆಯುತ್ತಿರಬೇಕು. ಅಡ್ಡ ಗೆಲ್ಲುಗಳನ್ನೂ ಸಹ  ಮರಕ್ಕೆ 4-5 ಸಂಖ್ಯೆಯಲ್ಲಿ ಮಾತ್ರವೇ ಉಳಿಸಿಕೊಳ್ಳಬೇಕು.
  • ನ್ಗೆಲ್ಲುಗಳಲ್ಲಿ ಎಲೆಗಳು ಇರಬೇಕು. ಆದರೆ ಅದು ಪೂರ್ತಿ ಕವಿದುಕೊಂಡು ಇರಬಾರದು.
pruning method of grafted plants

ಕಸಿ ಗಿಡಕ್ಕೆ ಪ್ರೂನಿಂಗ್ ಮಾಡುವ ವಿಧಾನ

  • ಒಂದು ಕಾಯಿಗೆ  30 ಎಲೆಗಳು ಇರಬೇಕು ಎಂಬುದು  ಲೆಕ್ಕಾಚಾರವಾದರೂ ಆದಕ್ಕಿಂತ ಸ್ವಲ್ಪ ಕಡಿಮೆಯಾದರೂ  ತೊಂದರೆ ಇಲ್ಲ.
  • ಎಲೆ ಹೆಚ್ಚು ಇದ್ದರೆ ಕಾಯಿ ಜಾಸ್ತಿ ಲಭ್ಯ. ಕವಲು ಗೆಲ್ಲುಗಳ ತುದಿ ಭಾಗ 1 ಮೀ ದೂರ ಬೆಳೆದ ನಂತರ ಕತ್ತರಿಸುತ್ತಿರಬೇಕು.
  • ಉದ್ದ ಬೆಳೆದರೆ ಅದು ಬಾಗಿ ಅದರಲ್ಲಿ ಮತ್ತೆ  ಕಂಬ ಚಿಗುರುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ.  ಹೆಚ್ಚಿನ ಕಂಬ ಚಿಗುರುಗಳನ್ನು ತೆಗೆದು  ಗಿಡಕ್ಕೆ  ಗಾಳಿ ಬೆಳಕು ಹೆಚ್ಚು ದೊರೆಯುವಂತೆ ಮಾಡಬೇಕು.
  • ಸ್ಪ್ರಿಂಕ್ಲರ್ ನೀರಾವರಿಗೆ ಕೊಕ್ಕೋ ಸಸ್ಯ ನೀರಿನ ಎಸೆತಕ್ಕೆ ತೊಂದರೆ ಕೊಡದೇ ಇರಲಿ.
  • ತೆಂಗಿನ ತೋಟದಲ್ಲಿ ಬೆಳೆಸುವಾಗ ಎರಡನೇ ಜಾರ್ಕೆಟ್ ಬಿಡಬಹುದು. ಅದರ ಎತ್ತರವೂ  3 ಮೀ ಗಿಂತ ಹೆಚ್ಚಾಗದಿರಲಿ. ಇದರಿಂದ ಕೊಯಿಲಿಗೆ ಅನುಕೂಲವಾಗುತ್ತದೆ.

ಕಸಿ ಮಾಡಿದ ಸಸ್ಯಗಳಾದಲ್ಲಿ  ಸವರುವಿಕೆ ಸ್ವಲ್ಪ ಜಠಿಲ.  ಬುಡದಿಂದ ಒಂದೇ ಕಾಂಡ ಬಿಡಲಿಕ್ಕೂ ಕಷ್ಟವಾಗುತ್ತದೆ. 2-3 ಕಾಂಡಗಳು ಇರುತ್ತವೆ. ಈ ಸಸ್ಯಗಳಲ್ಲಿ  ಎತ್ತರ ಬೆಳೆಯುವುದನ್ನು  ನಿಯಂತ್ರಿಸಬೇಕಾಗಿಲ್ಲ.ಅಗಲ ಮತ್ತು ನಿಬಿಡವಾಗುವುದನ್ನು ನಿಯಂತ್ರಿಸಿ ಥಿನ್ನಿಂಗ್ ಮಾಡಬೇಕು.
ಪ್ರೂನಿಂಗ್ ಮಾಡುವುದರಿಂದ ಕಾಯಿಗಳ ಸಂಖ್ಯೆ  ಸ್ವಲ್ಪ ಕಡಿಮೆಯಾಗುತ್ತದೆಯಾದರೂ  ಬರುವ ಕಾಯಿಗಳು ಪುಷ್ಟಿಯಾಗಿರುತ್ತವೆ. ಕೊಯಿಲಿಗೆ ಅನುಕೂಲವಾಗುತ್ತದೆ. ಚೆನ್ನಾಗಿ ಪಕ್ವಾಗುತ್ತದೆ. ದಂಶಕಗಳ  ಉಪಟಳ ಸಹ  ಕಡಿಮೆಯಾಗುತ್ತದೆ.
end of the article:——————————————————————-
coco cultivation# coco training# coco garden management# coco  pruning# coco plant shaping# coco pruning season# intercrop#  Aracanut intercrop# Cpcri#
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!