ಮಣ್ಣು ಪರೀಕ್ಷೆ ನೀವೇ ಮಾಡುವುದು ಹೀಗೆ.

by | Jul 11, 2020 | Soil Science (ಮಣ್ಣು ವಿಜ್ಞಾನ) | 0 comments

ಮಣ್ಣು ಬೆಳೆ ಉತ್ಪಾದನೆಗೆ ಒಂದು ಶಕ್ತಿ.  ಇದರ ಬೌತಿಕ ಗುಣಧರ್ಮ , ಜೈವಿಕ ಗುಣದರ್ಮ, ರಾಸಾಯನಿಕ ಗುಣ ಸರಿಯಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆ ಉತ್ತಮ ಫಲವನ್ನು ಕೊಡುತ್ತದೆ. ಮಣ್ಣಿನ ಬೌತಿಕ ಗುಣಧರ್ಮಗಳ ಮೇಲೆ ಮಣ್ಣು ಹೇಗಿದೆ, ಇದರಲ್ಲಿ ಫಸಲು ಹೇಗೆ ಪಡೆಯಬಹುದು ಎಂಬುದನ್ನು ನಿರ್ಧರಿಸಬಹುದು.

 • ಬಹಳಷ್ಟು ಜನ ರೈತರ ಹೊಲದಲ್ಲಿ ಬೆಳೆಗಳು ಕೈಕೊಡುವುದಕ್ಕೆ ಮೂಲ ಕಾರಣ ಅವರ ಹೊಲದ ಮಣ್ಣಿನ  ಗುಣಧರ್ಮ.
 • ಮಣ್ಣು ಸಸ್ಯ ಬೆಳವಣಿಗೆಗೆ ಅನುಕೂಲಕರವಾಗಿದ್ದರೆ ಮಾತ್ರ ಎಲ್ಲವೂ ಸುಲಭ.

ಜಮೀನಿನಲ್ಲಿ ಅಗೆಯುವಾಗ ಯಾವ ರೀತಿಯ ಮಣ್ಣು ಇದೆ ಎಂಬುದನ್ನು ಗಮನಿಸಲಿಕ್ಕೆ ಸಾಧ್ಯವಿದ್ದರೆ ಆ ಮಣ್ಣಿನ ಬೌತಿಕ ಗುಣದರ್ಮವನ್ನು ತಿಳಿಯಬಹುದು. ಅಧಿಕ ಮಳೆಯಾಗುವ ಪ್ರದೇಶದಲ್ಲಿ ಬೇಸಿಗೆಯಲ್ಲಿ ಮಣ್ಣನ್ನು ಸುಲಭವಾಗಿ ಅಗೆಯುವಂತಿದ್ದರೆ ಆ ಮಣ್ಣಿನ ಗುಣ ಉತ್ತಮ ಎಂದು ತಿಳಿಯಬಹುದು. ಕಡಿಮೆ ಮಳೆಯಾಗುವ ಕಡೆ ಮಳೆ ಬಂದಾಗ ನೀರು ಎಷ್ಟು ಬೇಗ ಇಳಿದು ಹೋಗುತ್ತದೆ ಎಂಬುದರ ಮೇಲೆ ಅದರ ಉತ್ಪಾದಕತೆ ನಿಂತಿದೆ.

ಸಾವಯವ ವಸ್ತು ಸೇರಿಕೊಂಡ ಮಣ್ಣು

ಸಾವಯವ ವಸ್ತು ಸೇರಿಕೊಂಡ ಮಣ್ಣು

 • ಒಂದು ಹಿಂಡಿ ಮಣ್ಣನ್ನು ಉಂಡೆ ಮಾಡಿ ಮಧ್ಯೆ ಕುಳಿ ಮಾಡಿ ನೀರು ತುಂಬಿ.
 • ಆ ನೀರು ಪೂರ್ತಿ ಮಣ್ಣಿಗೆ ಎಳೆದುಕೊಂಡು ಇಳಿಯದೆ ಹೀರಿಕೊಂಡ ಮಣ್ಣು  ಕೃಷಿಗೆ  ಉತ್ತಮ.
 • ನೀರು ಹಾಗೇ ಉಳಿಯುವ ಮಣ್ಣು ಸಮಸ್ಯಾತ್ಮಕ ಮಣ್ಣು ಎನ್ನಿಸುತ್ತದೆ.

ಬೆಳೆ ಆಯ್ಕೆಯ ಮುಂಚೆ ಜಮೀನಿನ ಮಣ್ಣಿನಲ್ಲಿ ಮರಳು, ಜೇಡಿ, ಸಾವಯವ ವಸ್ತುಗಳು ಸೇರಿರುತ್ತವೆ. ಜಮೀನಿನ ಮಣ್ಣಿನಲ್ಲಿ ಮರಳು ಹೆಚ್ಚಾಗಿದೆಯೇ, ಜೇಡಿ ಹೆಚ್ಚಾಗಿದೆಯೇ ಎಂಬುದನ್ನು ಪ್ರಪ್ರಥಮವಾಗಿ ತಿಳಿಯಬೇಕು.

ಎರೆ ಅಥವಾ ರೇವೆ ಮಣ್ಣು

ಎರೆ ಅಥವಾ ರೇವೆ ಮಣ್ಣು

ಮಣ್ಣು ಹೇಗಿರಬೇಕು:

 • ಮಣ್ಣಿನ ಬೌತಿಕ ರಚನೆ ಎಂದರೆ ಗಾಳಿಯಾಡುವ ಗುಣ, ನೀರು ಹಿಡಿದಿಟ್ಟುಕೊಳ್ಳುವ ಗುಣ ನೀರು ಬಸಿದು ಹೋಗುವ ಗುಣ, ಬೇರು ಪಸರಿಸುವ ಗುಣ.
 • ಮಣ್ಣು ಎಂಬುದು ನಿರ್ದಿಷ್ಟ ಪ್ರಮಾಣದಲ್ಲಿ ಮರಳನ್ನೂ ಹೊಂದಿರಬೇಕು.
 • ಹಾಗೆಯೇ ಜೇಡಿಯನ್ನೂ ಹೊಂದಿರಬೇಕು.
 • ನೀರನ್ನು ಹೀರಿಕೊಳ್ಲಬೇಕು. ಬೇಕಾದಷ್ಟೇ ನೀರನ್ನು ಹಿಡಿದುಕೊಂಡು ಉಳಿದುದನ್ನು ಬಿಟ್ಟು  ಕೊಡಬೇಕು.
 • ಇಂತಹ ಮಣ್ಣು ಇದ್ದಲ್ಲಿ ಬೆಳೆ ಚೆನ್ನಾಗಿರುತ್ತದೆ.

ಮಣ್ಣಿನ ಪರೀಕ್ಷೆ ಹೇಗೆ:

 • ಒಂದು ಕಿಲೋ ಮಣ್ಣನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ  ಮಿಶ್ರಣ ಮಾಡಿ ಅದನ್ನು ಸೋಸಿದಾಗ  ಅದರಲ್ಲಿ ದೊರೆಯುವ ಸಣ್ಣ, ಮಧ್ಯಮ ಮತ್ತು ದೊಡ್ದ ಗಾತ್ರದ ಮರಳು ಅಥವಾ ಹರಳು ಕಲ್ಲುಗಳು ಗರಿಷ್ಟ 50% ಮೀರಿರಬಾರದು.
 • ಮರಳು ಹರಳು ಕಲ್ಲುಗಳು ಮಣ್ಣಿನ ಕಣ ರಚನೆಗೆ ಅಗತ್ಯವಾದರೂ ಹೆಚ್ಚಾದರೆ ಅನನುಕೂಲ.

ಸ್ಪರ್ಶದಿಂದ ಮಣ್ಣನ್ನು ಪರೀಕ್ಷಿಸುವುದು:

ಮಣ್ಣಿನ ಬಣ್ಣ ಇಷ್ಟಾದರೂ ಕಪ್ಪು ಇರಬೇಕು. ಆಗ ಅದರಲ್ಲಿ ಸಾವಯವ ಅಂಶ ಇರುತ್ತದೆ.

ಮಣ್ಣಿನ ಬಣ್ಣ ಇಷ್ಟಾದರೂ ಕಪ್ಪು ಇರಬೇಕು. ಆಗ ಅದರಲ್ಲಿ ಸಾವಯವ ಅಂಶ ಇರುತ್ತದೆ.

 • ಪ್ರಯೋಗಾಲಯದಲ್ಲಿ ಮಣ್ಣನ್ನು ಪರೀಕ್ಷಿಸುವುದು ಯಾವಾಗಲೂ ಆಗಲಿ.
 • ಅದರೆ ಕೃಷಿ ಮಾಡುವವರಿಗೆ ಮಣ್ಣನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಲು ತಿಳಿದಿರಬೇಕು.
 • ಒಣ ಮಣ್ಣಿಗೆ ಸ್ವಲ್ಪ ನೀರನ್ನು ಹಾಕಿ ಎಡಗೈಯಲ್ಲಿ ಹಾಕಿ ಬಲ ಅಂಗೈ  ಮಧ್ಯದಲ್ಲಿ ಹಾಕಿ ಅದನ್ನು ತಿಕ್ಕಬೇಕು.
 • ಆಗ ಆ ಮಣ್ಣು ತಿಕ್ಕಲು ಒರಟು ಎನ್ನಿಸಿದರೆ  ಮರಳು ಹೆಚ್ಚು ಇರುವ ಮಣ್ಣು ಎಂತಲೂ, ಜಿಗುಟು ಎನಿಸಿದರೆ ಎರೆ ಜೇಡಿ ಕಣಗಳು ಇರುವ ಮಣ್ಣು ಎಂತಲೂ, ಅದು ಹುಡಿಯಾಗಿ ಯಾವುದೇ ರಚನೆಗೆ ಬಾರದ ಸ್ಥಿತಿಯಲ್ಲಿದ್ದರೆ ಅದರಲ್ಲಿ ಮರಳು ಕಲ್ಲುಗಳು ಹೆಚ್ಚು ಇದೆ ಎಂದು ತಿಳಿಯಬಹುದು.
 • ಕೆಲವು ತೀರಾ ಅಂಟು ಮಣ್ಣು ದೀಪದ ಬತ್ತಿಯ ತರಹ ಆಕಾರ ಬರುತ್ತಿದ್ದರೆ ಅಂತಹ ಮಣ್ಣಿನಲ್ಲಿ ಗರಿಷ್ಟ ಪ್ರಮಾಣದಲ್ಲಿ ಎರೆ ಮಣ್ಣು ಇದೆ ಎಂದು ತಿಳಿಯಬಹುದು.
 • ಜಿಗುಟಾದ ಮಣ್ಣು ಎರೆ ಮಣ್ಣು,ಮೃದುವಾಗಿದ್ದರೆ ಅದು ರೇವೆ ಮಣ್ಣು  ಹಾಗೂ ಆಕಾರಕ್ಕೆ ಬಾರದ ಮಣ್ಣು ಮರಳು ಮಣ್ಣು ಆಗಿರುತ್ತದೆ.
 • ಅಧಿಕ ಮಳೆ ಇರುವ ಪ್ರದೇಶಗಳಲ್ಲಿ ರೇವೆ ಮಣ್ಣು ಹೆಚ್ಚು ಅನುಕೂಲಕರವಾಗಿರುತ್ತದೆ.
 • ಮಳೆ ಕಡಿಮೆ ಇರುವಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಎರೆ ಮಣ್ಣು ಬೆಳೆಗಳಿಗೆ ಅನುಕೂಲಕರವಾಗಿರುತ್ತದೆ.

ಮಣ್ಣಿನ ವಿಂಗಡಣೆ:

ಇಂತಹ ಮಣ್ಣಿನಲ್ಲಿ ಸಾರ ಕಡಿಮೆಯಾದರು ನೀರು ಹಿಡಿದಿಡುವ ಶಕ್ತಿ ಇದೆ.

ಇಂತಹ ಮಣ್ಣಿನಲ್ಲಿ ಸಾರ ಕಡಿಮೆಯಾದರು ನೀರು ಹಿಡಿದಿಡುವ ಶಕ್ತಿ ಇದೆ.

 • ದಪ್ಪ ಮರಳು ಹರಳು ಕಲ್ಲುಗಳು ಸೇರಿರುವ ಮಣ್ಣು ಗರಸು ಮಣ್ಣು ಎಂದು ಪರಿಗಣಿಸಲ್ಪಡುತ್ತದೆ.
 • ಇದಕ್ಕೆ ತೇವಾಂಶ ಸಂರಕ್ಷಿಸುವ ಶಕ್ತಿ ಕಡಿಮೆ ಇರುತ್ತದೆ.
 • ಇದನ್ನು ಸುಧಾರಿಸಲು ಸಾವಯವ ವಸ್ತುಗಳನ್ನು ಸೇರಿಸಬೇಕು.
 • ಇದರಲ್ಲಿ ದೀರ್ಘಾವಧಿ ಬೆಳೆ ಲಾಭದಾಯಕವಲ್ಲ.
 • ಹಾಗೆಂದು ಇವು ಉಷ್ಣ ವಾಹಕಗಳು.
 • ನೆಲಕ್ಕೆ  ಬೀಳುವ ಮಳೆ ನೀರಿನ ಓಟವನ್ನು ತಡೆಯುತ್ತದೆ. ನೀರು ಇಂಗುವಿಕೆ ಚೆನ್ನಾಗಿರುತ್ತದೆ.

ಸಾಧಾರಣ ಗಾತ್ರದ ಉರುಟು ಕಲ್ಲುಗಳುಳ್ಳ ಮಣ್ಣು  ಉರುಟು ಮರಳು ಮಣ್ಣು ಎಂದು ಕರೆಯಲ್ಪಡುತ್ತದೆ. ಇದರಲ್ಲಿ ನೀರು ಇಂಗುವಿಕೆ ಚೆನ್ನಾಗಿಯೇ ಇರುತ್ತದೆ. ಆದರೆ ಸಾವಯವ ವಸ್ತುಗಳು ಕಡಿಮೆ ಇರುತ್ತವೆ. ಬೇರು ಬರಲು ಉತ್ತಮ. ಧೀರ್ಘಾವಧಿ ಬೆಳೆಗಳನ್ನು ಬೆಳೆಸುವಾಗ ಹೊರ ಮೂಲದ ಪೋಷಕಗಳನ್ನು ಹೆಚ್ಚು ಬಳಸಬೇಕಾಗುತ್ತದೆ.

ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಇದೆಯೇ ಎಂಬ ಶಕ್ತಿ ಪರೀಕ್ಷೆ

ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಇದೆಯೇ ಎಂಬ ಶಕ್ತಿ ಪರೀಕ್ಷೆ

 • ಸಣ್ಣ  ಗಾತ್ರದ ಮರಳು ಇರುವ ಮಣ್ಣು ಜಿನುಗು ಮರಳು ಮಣ್ಣು ಎಂದು ಕರೆಯಲ್ಪಡುತ್ತದೆ.
 • ಇದರಲ್ಲಿ ಸಾವಯವ ಅಂಶ ಕಡಿಮೆ. ಜೀವಾಣುಗಳೂ ಕಡಿಮೆ.
 • ಕೆಲವು ಖನಿಜಾಂಶಗಳು ಇರುತ್ತವೆ. ನೀರು ಬಸಿಯುವಿಕೆ ಇರುತ್ತದೆ.
 • ತೇವಾಂಶ ಆರಿ ಹೋಗದಂತೆ ತಡೆಯುವ ಮಣ್ಣು. ಬೇರು ಬರಲು ಉತ್ತಮ.
 • ಸಾವಯವ ವಸ್ತುಗಳ ಪೂರೈಕೆಯಿಂದ ಗುಣಮಟ್ಟ ಸುಧಾರಿಸಬಹುದು.
 • ಅತೀ ಸಣ್ಣ ಗಾತ್ರದ ಮರಳು ಇರುವ ಮಣ್ಣು ರೇವೆ ಮಣ್ಣು ( ರವೆ) ಎಂದು ಕರೆಯಲಾಗುತ್ತದೆ.
 • ಬರೇ ಎರೆ ಮಣ್ಣು, ಕಣ್ಣಿಗೆ ಕಾಣಿಸದಷ್ಟೂ ಸೂಕ್ಷ್ಮವಾದ ಖನಿಜ, ಮತ್ತು ಸಾವಯವ ವಸ್ತುಗಳು ಸೇರಿರುವ ಮಣ್ಣೂ ಎರೆ ಮಣ್ಣು ಆಗಿರುತ್ತದೆ.

ಕೃಷಿ ಮಾಡಲು ಉತ್ತಮ ಮಣ್ಣು ಎರೆ ಮತ್ತು ರೇವೆ ಸೇರಲ್ಪಟ್ಟ ಮಣ್ಣು. ಇದರಲ್ಲಿ ಎಲ್ಲವೂ ಅನುಕೂಲಕರವಾಗಿರುತ್ತದೆ. ತೀರಾ ಎರೆ ಮಣ್ಣು ಗಾಳಿಯಾಡದ ಸ್ಥಿತಿಯನ್ನು ಉಂಟು ಮಾಡಿ ಸಸ್ಯದ ಬೇರಿನ ಬೆಳವಣಿಗೆಗೆ ತೊಂದರೆಯನ್ನು ಉಂಟು ಮಾಡುತ್ತದೆ. 
ಈ ಪರೀಕ್ಷೆಯಲ್ಲಿ ಮಣ್ಣಿನ ಗುಣ ಧರ್ಮವನ್ನು ತಿಳಿಯಬಹುದು. ಮಣ್ಣಿನಲ್ಲಿ ಪೋಷಕಾಂಶಗಳ ಪ್ರಮಾಣ ಹೇಗಿರುತ್ತದೆ ಎಂಬುದನ್ನು ಪರೀಕ್ಷಿಸುವುದು ಬೇರೆ ವಿಧಾನ.  ಇದನ್ನು ಸಾಮಾನ್ಯವಾಗಿ ರೈತರು ತಮ್ಮ ಬೆಳೆಯ ಎಲೆ ಲಕ್ಷಣಗಳನ್ನು ನೋದಿಡಿ ತಿಳಿಯಬಹುದು. ಪೋಷಕಾಂಶಗಳ ಲಭ್ಯತೆಯು ಮಣ್ಣಿನ ಬೌತಿಕ ಗುಣಧರ್ಮಗಳ ಮೇಲೆ ಅವಲಂಭಿತವಾಗಿರುತ್ತದೆ. 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!