ಕಲ್ಪರಸ – ನೀವು ಇನ್ನೂ ಕುಡಿದಿಲ್ಲವೇ – ಇಲ್ಲಿಗೆ ಹೋಗಿ.

by | Mar 12, 2020 | Coconut (ತೆಂಗು) | 0 comments

ತೆಂಗಿನ ಮರದ ಹೂ ಗೊಂಚಲಿನಲ್ಲಿ ಒಂದು ರಸ (SAP) ಇದೆ. ಈ ರಸದಿಂದಲೇ, ಎಳನೀರು, ತೆಂಗಿನ ಕಾಯಿ ಆಗುತ್ತದೆ.  ಎಳನೀರು, ಕಾಯಿ ಆಗುವುದಕ್ಕೂ ಮುನ್ನ ನಾವು  ಇದನ್ನು ಸವಿಯಬಹುದು. ಅದೂ ಪರಿಶುದ್ಧವಾಗಿ. ಅದುವೇ ಕಲ್ಪರಸ..

 • ನಮ್ಮ ಪೂರ್ವಜರ ಕಾಲದಿಂದಲೂ ತೆಂಗಿನ ಮರ, ತಾಳೆ ಮರ, ಈಚಲು ಮರದ ಹೂ ಗೊಂಚಲಿನ ಅಮೃತ ಸಮಾನವಾದ ರಸದ ಮಹತ್ವವನ್ನು  ತಿಳಿಯಲಾಗಿತ್ತು.
 • ಆದನ್ನು ತೆಗೆಯುವ ಕ್ರಮ ಮತ್ತು ದಾಸ್ತಾನು  ವಿಧಾನಗಳಿಂದ ಅದು ಕಲ್ಪರಸವಾಗದೆ  ಅಮಲು ಬರಿಸುವ ಸೇಂದಿ ಎಂಬ ಹೆಸರನ್ನು ಪಡೆದಿತ್ತು.
 • ಪರಿಶುದ್ಧವಾದ ಈ ರಸಕ್ಕೂ ಎಳನೀರಿಗೂ ಯಾವುದೇ ವೆತ್ಯಾಸ ಇಲ್ಲ.
 • ಹಾಗೆ ನೋಡಿದರೆ ನಾವು ಕುಡಿಯುವ ಎಳನೀರೂ ಸಹ ಓಪನ್ ಮಾಡಿ ಒಂದೆರಡು ತಾಸು ತೆರೆದ ವಾತಾವರಣದಲ್ಲಿ ಇರಿಸಿದರೆ ಅದೂ ಸಹ ಸ್ವಲ್ಪ  ಹುಳಿಬರುತ್ತದೆ.
 • ಅಮಲು ಉಂಟಾಗದ  ರೀತಿಯಲ್ಲಿ ಹುಳಿ ಯಾಗದಂತೆ ಸಂಗ್ರಹಿಸಿದ , ತೆಂಗಿನ ಮರದ ಹೂ ಗೊಂಚಲಿನ ರಸವನ್ನು  ಕಲ್ಪರಸ ಎನ್ನುತ್ತಾರೆ.

ಇವರು ಇದರಲ್ಲಿ ಪಳಗಿದವರು:

 • ನಾನೂ ಫಾರಂ ಮರ್ಗೋವಾ, ಗೋವಾ ಇಲ್ಲಿ ಸುಮಾರು 5 ವರ್ಷಕ್ಕೂ ಹಿಂದೆಯೇ ಈ ರೀತಿ ಕಲ್ಪ ರಸ ತೆಗೆಯುವ ಕೆಲಸ ನಡೆಯುತ್ತಿತ್ತು.
 • ಇದು ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯವರು ಅಭಿವೃದ್ದಿಪಡಿಸಿದ  ವಾಣಿಜ್ಯ ತಂತ್ರಜ್ಞಾನವನ್ನು ಪಡೆದು ಮಾಡುವಂತದ್ದು.
 • ಇಲ್ಲಿ ದಿನಕ್ಕೆ  ಏನಿಲ್ಲವೆಂದರೂ 100 ಲೀ. ಗಳಷ್ಟು ಕಲ್ಪ ರಸವನ್ನು ತೆಗೆಯಲಾಗುತ್ತದೆ.
 • ಮರದಲ್ಲೇ ಶೀತಲ ವ್ಯವಸ್ಥೆಯಲ್ಲಿ ಸಂಗ್ರಹಿಸುವ ರಸ ಇದು.
 • ರಸಸಾರ ಪರೀಕ್ಷೆ ಮಾಡಿ ಶೀತಲ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುತ್ತದೆ.
 • ಇದನ್ನು ಎಷ್ಟು ಸಮಯ ಇಟ್ಟರೂ ಸಹ ಅದು  ತಾಜಾತನ ಕಳೆದುಕೊಳ್ಳುವುದಿಲ್ಲ.

ಫ್ರೀಝರ್ ನಲ್ಲಿ ದಾಸ್ತಾನು ಇಡುವುದು

ಬಾಟಲಿಗಳಲ್ಲಿ ಸಂಗ್ರಹಿಸಿದ ಈ ಕಲ್ಪರಸವನ್ನು ಅದೇ ರೀತಿಯಲ್ಲಿ ಶೀತಲತೆಯನ್ನು ಕಾಪಾಡುವ ಬಾಕ್ಸ್ ಒಳಗೆ ಇಟ್ಟು ಬೇಕಾದಲ್ಲಿಗೆ ( ಎಷ್ಟು ದೂರಕ್ಕೂ ) ಕಳುಹಿಸಬಹುದು. ಇಲ್ಲಿ ಕಳುಹಿಸುವ ವ್ಯವಸ್ಥೆಯೂ ಇದೆ.

ದೂರದ ಊರುಗಳಿಗೆ ಕಳುಹಿಸುವ ವ್ಯವಸ್ಥೆ

 • ಇದನ್ನು ಬೆಲ್ಲ ಮಾಡಬಹುದು, ಸಕ್ಕರೆ ಮಾಡಬಹುದು.
 • ಎಷ್ಟು ಕುಡಿದರೂ ಮತ್ತೆ ಮತ್ತೆ ಕುಡಿಯುವ ಎಂದೆಣಿಸುತ್ತದೆ.
 • ಸಿಹಿ ರುಚಿಯ ಇದರಲ್ಲಿ ಯಾವುದೇ ಪಾನೀಯದಲ್ಲೂ ಕಂಡಿರದ ವಿಶಿಷ್ಟ ರುಚಿಯನ್ನು ಆಸ್ವಾದಿಸಬಹುದು.

ಕಲ್ಪರಸ ತೆಗೆಯುವ ವಿಧಾನ:

 • ಕಲ್ಪರಸವನ್ನು ಹೂ ಗೊಂಚಲಿನ ಒಳಗೆ ಇರುವ ಸ್ಥಿತಿಯಲ್ಲೇ ಹೊರ ತೆಗೆಯಲಾಗುತ್ತದೆ.
 • ಹೂ ಗೊಂಚಲಿನ  ರಸ (SAP) ಹೊರ ವಾತಾವರಣಕ್ಕೆ  ತೆರೆಯಲ್ಪಟ್ಟಾಗ ಅದು ನೈಸರ್ಗಿಕ ಈಸ್ಟ್ ಜೊತೆಗೆ ಸೇರಿ ಹುಳಿಯಾಗುತ್ತದೆ.
 • ನೈಸರ್ಗಿಕ ಈಸ್ಟ್ ಶೀತಲ ವಾತಾವರಣದಲ್ಲಿ ಸುಪ್ತಾವಸ್ಥೆಯಲ್ಲೇ ಉಳಿದಿರುತ್ತದೆ.
 • ಇದನ್ನು ತೆಗೆಯುವಾಗ  ಮರದಲ್ಲೇ ರಸವು ಹೊರ ವಾತಾವರಣ ಅಥವಾ ಹೊರಗಿನ ತಾಪಮಾನದ ಸಂಪರ್ಕ ಇಲ್ಲದಂತೆ ಶೀತಲೀಕರಣ ಮಾಡಿಯೇ ತಾಗೆಯುತ್ತಾರೆ.
 • ಅದಕ್ಕೆ ವಿಶೇಷವಾದ ಬಾಕ್ಸ್ ಇದ್ದು, ಆ ಬಾಕ್ಸ್ ಒಳಗೆ ಇಂತಿಷ್ಟು ಸಮಯದ ತನಕ ತಾಪಮಾನ 0 ಡಿಗ್ರಿ  ಗಿಂತ ಹೆಚ್ಚಾಗದಂತೆ  ಮಂಜುಗಡ್ಡೆಯನ್ನು ಇರಿಸಲಾಗುತ್ತದೆ.
 • ಅದು ಕರಗುವ ಮುನ್ನ ರಸವನ್ನು ತೆಗೆದು ಮತ್ತೆ ಶೀತಲ ವ್ಯವಸ್ಥೆಯಲ್ಲಿ  ಇರಿಸಲಾಗುತ್ತದೆ.

ಕಲ್ಪ ರಸ ಇಲ್ಲಿ ಅನುದಿನವೂ ಲಭ್ಯ:

 • ನಾನೂ ಪ್ರಾರಂ ಅಥವಾ ಕೃಷ್ಣಾ ಪ್ಲಾಂಟೇಶನ್ ಇಲ್ಲಿ ವರ್ಷದ ಬಹುತೇಕ ತಿಂಗಳುಗಳಲ್ಲಿ ಕಲ್ಪ ರಸ ತೆಗೆಯುತ್ತಾರೆ.
 • ಇದನ್ನು ಬೇಕಾದವರಿಗೆ ಕಳುಹಿಸಿ ಕೊಡುವ ವ್ಯವಸ್ಥೆಯೂ ( ವಿನಂತಿ ಮೇರೆಗೆ) ಇದೆ.
 • ಇವರ ನಾನೂ ಗ್ರೂಪ್ ಅಪ್ ಹೊಟೇಲ್ ಹಾಗು ನಾನೂ ಫಾರಂ ಎದುರಿನ  ಪ್ಲಾಂಟೇಶನ್ ಕೌಂಟರಿನಲ್ಲಿ ಇದು ಯಾವಾಗಲೂ ಲಭ್ಯವಿದೆ.
 • ಒಂದು ಬಾಟಲಿ (1 ಲೀ) ಗೆ 100 ರೂ. ದರ ಇರುತ್ತದೆ.

ಕಲ್ಪರಸ ಆರೋಗ್ಯಕ್ಕೆ  ಉತ್ತಮ:

ಸಮಾರಂಭಗಳಲ್ಲೂ ಇದನ್ನು ಆರೋಗ್ಯ ಪೇಯವಾಗಿ ಕೊಡಬಹುದು.

 • ಕಲ್ಪ ರಸ ಕುಡಿಯುವುದೂ ಎಳನೀರು ಕುಡಿಯುವುದೂ ಸಮ ಎಂದರೂ ತಪ್ಪಾಗಲಾರದು.
 • ಕಲ್ಪ ರಸವನ್ನು ಉಡಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.  ಹೊಟ್ಟೆಯ ಏನಾದರೂ ತೊಂದರೆಗಳಿದ್ದರೆ ( ಅಜೀರ್ಣ , ಮಲಬದ್ಧತೆ ) ಮುಂತಾದವುಗಳು ಸರಿಯಾಗುತ್ತದೆ.
 • ಕಲ್ಪ ರಸದಲ್ಲಿ ಸುಕ್ರೋಸ್, ಲವಣ, ಪ್ರೊಟೀನು ಮತ್ತು ಅಕ್ಸಾರ್ಬಿಕ್ ಆಮ್ಲ, ಕ್ಯಾಲ್ಸಿಯಂ, ಫೋಸ್ಪರಸ್ ಗಳು ಇರುತ್ತವೆ. ಇದು ಆರೋಗ್ಯಕ್ಕೆ  ಬಹಳ ಒಳ್ಳೆಯದು.

 ಕರ್ನಾಟಕದಲ್ಲಿ ಕಲ್ಪ ರಸ ತೆಗೆಯುವರೇ ಕೆಲ ಶರತ್ತುಗಳ ಮೇಲೆ ಒಂದೆರಡು ಸಂಘಟನೆಗಳಿಗೆ ಮಾತ್ರ ಅನುಮತಿ ನೀಡಿರುತ್ತಾರೆ. ಇಲ್ಲಿ ಕಲ್ಪರಸ ತೆಗೆಯುವವರ ಸಂಖ್ಯೆಯೂ, ಪ್ರಮಾಣವೂ ತುಂಬಾ ಕಡಿಮೆ.

ಪರಿಶುದ್ಧ ಮತ್ತು ತಾಜಾ ಕಲ್ಪರಸ ಸವಿಯುವ ಮತ್ತು ಕಲ್ಪ ರಸ ತೆಗೆಯುವ ತಂತ್ರಜ್ಞಾನ ತಿಳಿಯಬೇಕೆಂಬ ಆಸಕ್ತರಿಗೆ ನಾನೂ ಫಾರಂ ಒಂದು ಕೇಂದ್ರ.

 • Varde-Valaulikar road Margoa Goa,  85509 98346

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!