ಬಹುತೇಕ ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
- ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಶ್ ಮುಂತಾದ ಸತ್ವಾಂಶವನ್ನು ಮಣ್ಣಿನಿಂದ ಎತ್ತಿ ಕೊಡುವ ವಾಹಕ ಜೀವಿಗಳು ಎಂದು ಹೇಳಬಹುದು.
- ವಾತಾವರಣದಲ್ಲಿ ಸಾರಜನಕ ಇರುತ್ತದೆ. ನಾವು ಪೂರೈಕೆ ಮಾಡುವ ಇತರ ಪೋಷಕಗಳಲ್ಲೂ ಸಾರಜನಕ ಇರುತ್ತದೆ.
- ಅದೆಲ್ಲವೂ ಸಸ್ಯಗಳಿಗೆ ಲಭ್ಯವಾಗುವುದಿಲ್ಲ. ಅದನ್ನು ಲಭ್ಯಸ್ಥಿತಿಗೆ ತರಲು ಇರುವ ಜೀವಾಣುಗಳೇ ಬಯೋ NPK ಗಳು.
- ಇವು ಪೋಷಕಗಳಲ್ಲ.(ಗೊಬ್ಬರಗಳಲ್ಲ) ಪೋಷಕಗಳನ್ನು ಸಸ್ಯಗಳು ಬಳಸಿಕೊಳ್ಳುವಂತೆ ಮಾಡುವ ಮಧ್ಯವರ್ತಿಗಳು.
ಜೈವಿಕ ಸಾರಜನಕ ಅಂದರೆ ಸಾರಜನಕವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳು. ಇವು ಮಣ್ಣಿನಲ್ಲೇ ಇರುವ ಜೀವಿಗಳಾಗಿವೆ. ಕೆಲವು ಮಣ್ಣಿನಲ್ಲಿ ಹೆಚ್ಚು ಇರುತ್ತವೆ. ಮತ್ತೆ ಕೆಲವು ಮಣ್ಣಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಇರುತ್ತದೆ. ತೀರಾ ಕಡಿಮೆ ಸಂಖ್ಯೆಯಲ್ಲಿರುವ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣ ಸಸೂತ್ರವಾಗಿ ಆಗುವುದಿಲ್ಲ. ಅದನ್ನು ಸಸೂತ್ರವಾಗಿ ಆಗುವಂತೆ ಮಾಡಲು ಈ ಬ್ಯಾಕ್ಟೀರಿಯಾಗಳು ಸಹಕರಿಸುತ್ತವೆ.
ಯಾವ ಜೀವಾಣುಗಳು ಇದರಲ್ಲಿ ಇವೆ:
- ಸಾರಜನಕವನ್ನು ಮಣ್ಣಿಗೆ ಲಭ್ಯವಾಗುವಂತೆ ಮಾಡುವಲ್ಲಿ ಸಹಕರಿಸುವ ಬ್ಯಾಕ್ಟೀರಿಯಾ ಜೀವಿಗಳಲ್ಲಿ ರೈಜೋಬಿಯಂ, ಅಜೊಸ್ಪರಿಲ್ಲಂ ಮತ್ತು ಅಝಟೋಬ್ಯಾಕ್ಟರ್ ಎಂಬ ಮೂರು ಜೀವಿಗಳು.
- ರೈಜೋಬಿಯಂ ಎಂಬುದು ಹವೆಯೊಳಗಿನ ಸಾರಜನಕವನ್ನು ಸ್ಥಿರೀಕರಿಸುವ ಕೆಲಸವನ್ನು ಮಾಡುತ್ತದೆ.
- This bacteria associated with the formation of root nodules on plants
- ಇವು ದ್ವಿದಳ ಸಸ್ಯಗಳ ಬೇರುಗಳ ಜೊತೆಯಲ್ಲಿ ಸಹಜೀವನ ನಡೆಸಿ, ಸಾರಜನಕವನ್ನು ಸ್ಥಿರೀಕರಿಸುವ ಗುಣದವು.
- ಇದನ್ನು ಹೆಚ್ಚಾಗಿ ಬೀಜೋಪಚಾರಕ್ಕೆ ಬಳಕೆ ಮಾಡುತ್ತಾರೆ.
- ಇದರಲ್ಲಿ ಸುಮಾರು 7 ಪ್ರವರದ ಬ್ಯಾಕ್ಟೀರಿಯಾಗಳಿದ್ದು, ಒಂದೊಂದು ಕೆಲವು ಬೆಳೆಗಳಿಗೆ ಮಾತ್ರ ಕೆಲಸ ಮಾಡುತ್ತದೆ.
ಈ ಜೀವಾಣುವನ್ನು ಕೆಲವು ಮಾಧ್ಯಮಗಳಲ್ಲಿ(ವಾಹಕ)ಮಾತ್ರವೇ ಸಂಗ್ರಹಿಸಲು ಆಗುತ್ತದೆ.ಇದು ದ್ರವ ಮತ್ತು ಪುಡಿ ವಾಹಕಗಳಾಗಿರುತ್ತವೆ.
- ಅಝಟೋ ಬ್ಯಾಕ್ಟರ್ ತಾನು ಸಾರಜನಕವನ್ನು ಸ್ಥಿರೀಕರಿಸಲು ಬೆಳೆಗಳ ಜೊತೆ ಸಹಜೀವನ ನಡೆಸುವುದಿಲ್ಲ.
- ಯಾವುದೇ ಬೆಳೆಯ ಮೇಲ್ಭಾಗದಲ್ಲಿ ಅಥವಾ ಒಳ ಭಾಗದಲ್ಲಿ ವಾಸಿಸುವುದಿಲ್ಲ.
- ಮಣ್ಣಿನಲ್ಲಿ ಸ್ವತಂತ್ರವಾಗಿ ವಾಸಿಸಿ, ಹವೆಯೊಳಗಿನ ಸಾರಜನಕವನ್ನು ಸ್ಥಿರೀಕರಿಸುವ ಶಕ್ತಿ ಹೊಂದಿದೆ.
- ಇವು ಮಣ್ಣಿನಲ್ಲಿ ಇರುವ ಸೇಂದ್ರೀಯ( ಸಾವಯವ) ವಸ್ತುಗಳು ಕಳಿಯುವಾಗ ಉತ್ಪಾದನೆಯಾಗುವ ಶಕ್ತಿಯನ್ನು ಬಳಸಿಕೊಂಡು ಇವು ಬದುಕುತ್ತವೆ.
- ಆಮ್ಲಜನಕ ಪ್ರಸಾರ ಇರುವ ಸಡಿಲ ಮಣ್ಣಿನಲ್ಲಿ ಮಾತ್ರ ವಾಸಿಸುತ್ತದೆ.
- It is found in neutral to alkaline soils, on some plants. It has several metabolic activities like atmospheric nitrogen fixation by conversion to ammonia.
- ಮಣ್ಣಿನಲ್ಲಿ ಆರ್ಧ್ರತೆ ಇದ್ದಾಗ ಚಟುವಟಿಕೆ ಹೆಚ್ಚಿ, ತಮ್ಮ ಜೀವ ಕೋಶದಲ್ಲಿರುವ ನೈಟ್ರೋಜಿನೇಸ್ ಎಂಬ ಕಿಣ್ವದ ಸಹಾಯದಿಂದ ಹವೆಯೊಳಗಿನ ಸಾರಜನಕವನ್ನು ಸ್ಥಿರೀಕರಿಸುತ್ತದೆ.
- ಸಸ್ಯ ಬೇರುಗಳ ಸನಿಹದಲ್ಲಿ ಇದು ಇರುತ್ತದೆ. ಬೇರುಗಳು ಒಂದು ಬಗೆಯ ದ್ರವ ಸ್ರವಿಸುತ್ತಿರುತ್ತದೆ.
- ಅದರಲ್ಲಿ ಶರ್ಕರ ಪಿಷ್ಟಗಳು, ವಿಟಮಿನ್ ಗಳು, ಅಮೈನೋ ಆಮ್ಲಗಳು, ಮತ್ತು ಸಾವಯವ ಆಮ್ಲಗಳು ಇರುತ್ತವೆ.
- ಈ ಆಹಾರದಲ್ಲಿ ಇವು ಕೆಲಸ ಮಾಡುತ್ತವೆ. ಹೊಸ ಬೇರು ಬರುವಾಗ ಹಳೆ ಬೇರು ಸಾಯುವಾಗ ಅದರ ಕಳಿಯುವಿಕೆಯಲ್ಲಿ ಉತ್ಪಾದನೆಯಾಗುವ ಆಮ್ಲದ ಸಹಾಯದಲ್ಲೂ ಇದು ಬದುಕುತ್ತದೆ.
ಅಝೋಸ್ಪರಿಲ್ಲಂ ಎಂಬ ಬ್ಯಾಕ್ಟೀರಿಯವು ಹುಲ್ಲು ಸಸ್ಯಗಳಲ್ಲಿ , ಜೋಳ, ಮುಸುಕಿನ ಜೋಳ, ರಾಗಿ, ಮುಂತಾದ ಬೆಳೆಗಳ ಬೇರಿನ ಸನಿಹದಲ್ಲಿ ವಾಸಿಸುತ್ತದೆ. Azospirillum is a Gram-negative, microaerophilic, non-fermentative and nitrogen-fixing bacterial genus from the family of Rhodospirillaceae. Azospirillum bacteria can promote plant growth.ಅಲ್ಲಿ ಇವು ಸಾರಜನಕವನ್ನು ಸ್ಥಿರೀಕರಿಸುತ್ತದೆ. ಇವು ಬೇರಿನ ಹೊರ ಮೈಯಲ್ಲಿ ವಾಸಿಸುತ್ತವೆ ಮತ್ತು ಒಳ ಭಾಗಕ್ಕೂ ಪ್ರವೇಶಿಸುತ್ತವೆ.
ವಾಸ್ತವಿಕತೆ:
- ಈ ಜೀವಾಣುಗಳು ಸ್ವತಂತ್ರವಾಗಿ ಗೊಬ್ಬರ ಕೊಡುವ ಜೀವಿಗಳಲ್ಲ. ಇವು ಬದುಕಲು ಬೇಕಾಗುವ ಶಕ್ತಿ ಮಣ್ಣಿನಿಂದ ದೊರೆಯಬೇಕು.
- ಮಣ್ಣಿನಲ್ಲಿ ಸಾವಯವ ಅಂಶಗಳು ತೇವಾಂಶ ಹಾಗೂ ಅವು ಬದುಕಲು ಬೇಕಾಗುವ ಸೂಕ್ತ ರಸ ಸಾರ ಇದ್ದಾಗ ಮಾತ್ರ ಇವು ಕಾರ್ಯ ನಿರ್ವಹಿಸುತ್ತವೆ.
- ಇದು ಬದುಕಲು ತಂಪು ವಾತಾವರಣ( 20-30 ಡಿಗ್ರಿ ಗಿಂತ ಹೆಚ್ಚಾಗದಂತಹ ವಾತಾವರಣ) ಮರಳು ಹೆಚ್ಚು ಇರುವ ಮಣ್ಣಿನಲ್ಲಿ ಇದು ಹೆಚ್ಚು ಕೆಲಸ ಮಾಡಲಾರದು.
- ಬರೇ ಇದನ್ನೊಂದೇ ಕೊಟ್ಟರೆ ಮಣ್ಣಿನಲ್ಲಿ ದಾಸ್ತಾನು ಇರುವ ಪೋಷಕಗಳು ಇರುವ ತನಕ ಮಾತ್ರ ಅವು ಕೆಲಸ ಮಾಡಬಲ್ಲವು.
- ನಂತರ ಅವುಗಳಿಗೆ ಶಕ್ತಿ ಕಡಿಮೆಯಾಗಿ ಕೆಲಸ ಮಾಡುವುದಿಲ್ಲ.
ಒಟ್ಟಿನಲ್ಲಿ ಹೇಳುವುದೇ ಆದರೆ ಬಯೋ NPK ಗಳು ಪ್ರಚಾರಕರು ಹೇಳುವಷ್ಟು ಕೆಲಸವನ್ನು ಮಾಡಲಾರವು. ಒಂದು ಎರಡು ವರ್ಷ ಸಂಗ್ರಹಿತ ಪೋಷಕ ಇದ್ದಾಗ ಫಲಿತಾಂಶ ಕೊಡಬಹುದು. ಇದು ತೀರಾ ಕಡಿಮೆ ಬೆಲೆಯಲ್ಲಿ ಲಭ್ಯವಾದರೆ (ಲೀ.200-250 ರೂ.) ಸಾಕಷ್ಟು ಸಾವಯವ ಗೊಬ್ಬರ ಕೊಡುತ್ತಿರುವ ಮಣ್ಣಿಗೆ ಬಳಸಿದರೆ ಫಸಲಿಗೆ ಅನುಕೂಲವಾಗುತ್ತದೆ. ಮಣ್ಣಿನಲ್ಲಿ ಪೋಷಕ ಇರುವಷ್ಟು ಸಮಯ ಇದು ಫಲಿತಾಂಶ ಕೊಡುತ್ತದೆ.
ಮುಂದಿನ ಸಂಚಿಕೆಯಲ್ಲಿ ರಂಜಕ ಮತ್ತು ಪೊಟ್ಯಾಶ್ ದೊರಕಿಸಿಕೊಡುವ ಜೀವಾಣುಗಳ ಬಗ್ಗೆ ತಿಳಿಸುತ್ತೇವೆ.
end of the article:—————————
Search words: Bio NPK# bio products# bio N# nitrogen fixing bacterium# Bio nutrients# biological nutrient mobilizers# Azotobacter# Azospirillum# Rhizobium #