ಬೆಳೆಗಳಿಗೆ ಸುಣ್ಣ ಯಾಕೆ ಕೊಡಬೇಕು ಗೊತ್ತೇ?

ಬೆಳೆ ಬೆಳೆಸುವ ಮಣ್ಣಿಗೆ ಸುಣ್ಣ ಹಾಕುವುದು ಹಸಿರು ಕ್ರಾಂತಿಯ ತರುವಾಯ ಬಂದ ಪದ್ಧತಿ. ಮಣ್ಣಿಗೆ ಸುಣ್ಣ ಹಾಕಿದಾಗ ಮಣ್ಣಿನ ಸ್ಥಿತಿಗತಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅಲ್ಲಿ ಬೆಳೆಯುವ ಸಸ್ಯಗಳಿಗೆ ಮಣ್ಣಿನ ಮೂಲಕ  ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಹಕರಿಸುತ್ತದೆ.

liming is essential for this crop
ಕರಾವಳಿ ಮಲೆನಾಡಿನ ಅಡಿಕೆ ಬೆಳೆಗೆ ಸುಣ್ಣ ಅಗತ್ಯ

  • ಸಸ್ಯಗಳಿಗೆ ಬರೇ ಸಾರಜಕನ, ರಂಜಕ ಮತ್ತು ಪೊಟ್ಯಾಶ್ ಎಂಬ ಮೂರು ಮುಖ್ಯ ಪೋಷಕಗಳು ಬೇಕು.
  • ಅದರ ಜೊತೆಗೆ ದ್ವಿತೀಯ ಮಧ್ಯಮ ಪೋಷಕಗಳಾದ ಕ್ಯಾಲ್ಸಿಯಂ ಗಂಧಕ, ಮತ್ತು ಮೆಗ್ನೀಶಿಯಂ ಸಹ ಅಗತ್ಯವಾಗಿ ಬೇಕಾಗುತ್ತದೆ.
  • ಇವು ಮುಖ್ಯ ಪೋಷಕಗಳಷ್ಟು ಪ್ರಮಾಣದಲ್ಲಿ ಬೇಕಾಗುವುದಿಲ್ಲ. ಆದರೆ ಬೇಕೇ ಬೇಕು.

 ದ್ವಿತೀಯ ಪೋಷಕಗಳಲ್ಲಿ  ಒಂದಾದ  ಕ್ಯಾಲ್ಸಿಯಂ ಅಥವಾ ಸುಣ್ಣ ಬರೇ ಪೋಷಕವಲ್ಲದೆ ಮಣ್ಣಿನ ಸ್ಥಿತಿಯನ್ನು ಸುಧಾರಿಸಲೂ ಸಹ ಬೇಕಾಗುವ  ವಸ್ತು. ಸುಣ್ಣದ ಬಳಕೆಯಿಂದ ಎರಡು ಬಗೆಯ ಲಾಭವಿದೆ.

ಸುಣ್ಣ ಯಾಕೆ ಬಳಸಬೇಕು:

  • ಸುಣ್ಣ ವನ್ನು ಯಾಕೆ ಬಳಸಬೇಕು ಎಂಬ ಕುತೂಹಕ್ಕೆ ,ಸರಳವಾಗಿ ಹೇಳಬೇಕೆಂದರೆ ನಾವು ದೇಹ ಪೋಷಣೆಗಾಗಿ ಆಹಾರ ಸೇವಿಸಿದಾಗ ಕೆಲವು ಆಹಾರಗಳು ದೇಹಕ್ಕೆ ಆಮ್ಲೀಯವಾಗಿ ಪರಿಣಮಿಸುತ್ತವೆ.
  • ದೇಹ ಆಮ್ಲಿಯವಾದಾಗ ರೋಗ, ರುಜಿನ, ಅಜೀರ್ಣ, ಮುಂತಾದ ಹಲವು ಸಮಸ್ಯೆ ಉಂಟಾಗುತ್ತದೆ.
  • ಇದನ್ನು ಸರಿಪಡಿಸಲು ಅಮ್ಲೀಯತೆಯನ್ನು ಕಡಿಮೆಮಾಡುವ ಆಹಾರ ಅಥವಾ ಔಷಧಿಯನ್ನು ಬಳಕೆ ಮಾಡಬೇಕು.
  • ಇದೇ ರೀತಿಯಲ್ಲಿ ಮಣ್ಣೂ ಸಹ  ಬೆಳೆ ಬೆಳೆದಾಗ, ವಾತಾವರಣ ಕಾರಣದಿಂದ ಅಮ್ಲೀಯವಾಗುತ್ತದೆ. ಆಗ ಆ ಸ್ಥಿತಿಯನ್ನು ಬದಲಿಸಬೇಕು.
  • ಅದಕ್ಕೆ ಇರುವ ಮಿತ್ವ್ಯಯದ ಉಪಚಾರ ಎಂದರೆ ಸುಣ್ಣವನ್ನು ಹಾಕುವುದು.
  • ಮಣ್ಣಿಗೆ ಸುಣ್ಣವನ್ನು ಹಾಕಿದಾಗ ಅದರ ಆಮ್ಲೀಯ ಸ್ಥಿತಿ ಬದಲಾವಣೆಯಾಗುತ್ತದೆ.
  • ಸುಣ್ಣ ಎಂಬುದು ಕ್ಷಾರೀಯ ವಸ್ತು. ಇದನ್ನು ಆಮ್ಲಕ್ಕೆ ಹಾಕಿದಾಗ ಅದರ ಸ್ಥಿತ್ಯಂತರವಾಗುತ್ತದೆ.
  • ಆಮ್ಲೀಯತೆ ಕಳೆದು ಅದು ತಟಸ್ಥವಾಗುತ್ತದೆ.

[everest_form id=”5665″]

coconut palm in heavy rain fall area
ತೆಂಗಿನಲ್ಲಿ ಉತ್ತಮ ಇಳುವರಿಗೆ ಕ್ಯಾಲ್ಸಿಯಮ್ ಅಗತ್ಯ

ಮಣ್ಣಿನಲ್ಲಿ ಕ್ಯಾಲ್ಸಿಯಂ ಇಲ್ಲವೇ:

  • ಮಣ್ಣು ಎಂಬುದು ಶಿಲೆ ಮುಂತಾದ ಖನಿಜ ಪದಾರ್ಥಗಳು ಕರಗಿ ಉಂಟಾದ ವಸ್ತು.
  • ಇದರಲ್ಲಿ ಸಾರಜನಕ ಹೊರತಾಗಿ ಎಲ್ಲಾ ಪೋಷಕಗಳೂ ಇರುತ್ತವೆ.
  • ಆದರೆ ಅಧಿಕ ಮಳೆ ಬೀಳುವ ಕಡೆ ಅದು ತೊಳೆದು ಕರಗಿ ಹೋಗುತ್ತದೆ.
  • ಕೆಲವು ಕಡೆ ರಾಸಾಯನಿಕ ಗೊಬ್ಬರ ಹಾಕಿದ ಕಾರಣದಿಂದ ಮಣ್ಣು ಆಮ್ಲೀಯವಾಗುತ್ತದೆ.
  • ಮಣ್ಣಿಗೆ ನಿರಂತರ ಬಿಸಿಲು ಬೀಳುತಿದ್ದರೆ, ಸಾಗುವಳಿಗೆ ಒಳಪಡದೆ ( undisturbed soil) ಇರುವ ಮಣ್ಣಿನಲ್ಲಿ  ( ಕಾಡು ಇತ್ಯಾದಿ) ಅಷ್ಟಾಗಿ ಕ್ಯಾಲ್ಸಿಯಂ ಕೊರತೆ ಕಂಡು ಬರುವುದಿಲ್ಲ.
  • ಜೊತೆಗೆ ಅಲ್ಲಿರುವ ಸಸ್ಯಗಳು ಸ್ವಲ್ಪ ಮಟ್ಟಿಗೆ ಮಣ್ಣಿನ ಆಮ್ಲೀಯತೆಯನ್ನು ಸಹಿಸಿಕೊಳ್ಳುವವುಗಳಾಗಿರುತ್ತವೆ.
  • ಆದ ಕಾರಣ ಸುಣ್ಣದ ಅವಶ್ಯಕತೆ ಬರುವುದಿಲ್ಲ. ಆದರೆ ಸಾಗುವಳಿಗೆ ಒಳಪಡುವ ಮಣ್ಣಿಗೆ ಉಪಚಾರ ಬೇಕಾಗುತ್ತದೆ.
  • ಸುಣ್ಣವನ್ನು ಬರೇ ಅಧಿಕ ಮಳೆಯಾಗುವ ಹುಳಿ ಮಣ್ಣಿಗೆ ಮಾತ್ರ ಕೊಡಬೇಕು.
  • ಮಳೆ ಕಡಿಮೆ ಇರುವ ಮಣ್ಣಿನಲ್ಲಿ ಸುಣ್ಣ  ಮತ್ತು ಮೆಗ್ನೀಶಿಯಂ ಗಳು ಕರಗಿ ಹೋಗದ ಕಾರಣ ಅದನ್ನು ಕೊಡಬೇಕಾಗುವುದಿಲ್ಲ.
  • ಹುಳಿ ಮಣ್ಣಿನಲ್ಲಿ ವರ್ಷಂಪ್ರತೀ ಕರಗಿ ಹೋಗುವ ಪೋಷಕಗಳೆಂದರೆ  ಕ್ಯಾಲ್ಸಿಯಂ  ಮತ್ತು ಮೆಗ್ನೀಶಿಯಂ. ಇವೆರಡನ್ನೂ ಕೊಡಲೇ ಬೇಕಾಗುತ್ತದೆ.

[everest_form id=”5665″]

ಮಣ್ಣು ಯಾಕೆ ಹುಳಿಯಾಗುತ್ತದೆ:

 

  • ಜಲಜನಕವನ್ನು ನಿರ್ಮಿಸುವ ಅಲ್ಯೂಮೀನಿಯಂ ಅಯಾನು ಪ್ರಾಭಲ್ಯವಿರುವ ಕಡೆ ಮಣ್ಣು ಹುಳಿಯಾಗಿರುತ್ತದೆ.
  • ರಾಸಾಯನಿಕ ಗೊಬ್ಬರಗಳಾದ ಸಾರಜನಕ ಒದಗಿಸುವ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಿದಾಗ ಮಣ್ಣು ಹುಳಿಯಾಗುತ್ತದೆ.
  • ಸಾರಜನಕ ಅಮೋನಿಯಾ ರೂಪಕ್ಕೆ ಪರಿವರ್ತನೆಯಾಗುವಾಗ ಜಜಜನಕದ ಅಯಾನುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಮಣ್ಣು ಹುಳಿಯಾಗುತ್ತದೆ.
  • ಅಧಿಕ ಮಳೆಯಾಗುವಲ್ಲಿ ಮೇಲು ಮಣ್ಣು ಕೊಚ್ಚಣೆಯಾಗಿ ಮಣ್ಣಿನ ಮೇಲುಸ್ಥರದಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ತೊಳೆದು ಹೊಗುತ್ತದೆ. ಇದರಿಂದ ಮಣ್ಣು  ಅಜೀರ್ಣವಾಗಿ ಹುಳಿಯಾಗಲು ಪ್ರಾರಂಭವಾಗುತ್ತದೆ.
  • ಹೊಲಕ್ಕೆ ಬಿಸಿಲು ಬೀಳದೆ, ನಿರಂತರ ಸಾಗುವಳಿಯಲ್ಲಿರುವ ತೋಟಗಳಲ್ಲಿ ಈ ಪೋಷಕಗಳ ನವೀಕರಣ ಆಗದೆಯೂ ಇಲ್ಲಿನ ಮಣ್ಣು ಹುಳಿಯಾಗುತ್ತದೆ.

ಹುಳಿಯಾದರೆ ಏನು ನಷ್ಟ:

pepper crop require lime
ಕರಿಮೆಣಸಿನ ಬೆಳೆಗೆ ಸುಣ್ಣ ಅಗತ್ಯ
  • ಮಣ್ಣು ಆಮ್ಲೀಯವಾದಾಗ ದೊಡ್ದ ನಷ್ಟ ಎಂಬುದಿಲ್ಲ.ಆದರೆ ಅಪರೋಕ್ಷ ನಷ್ಟ ಅಧಿಕ.
  • ಮಣ್ಣು ಹೆಚ್ಚು ಆಮ್ಲೀಯವಾದಂತೆ ಅಲ್ಯೂಮಿನಿಯಂ ಮತ್ತು ಮ್ಯಾಂಗನೀಸ್, ಕಬ್ಬಿಣ ಸಂಯುಕ್ತಗಳು ಹೆಚ್ಚು ಕರಗಲ್ಪಡುತ್ತವೆ.
  • ಇದು ಸಸ್ಯ ಬೆಳೆವಣಿಗೆಗೆ ತೊಂದರೆ ಮಾಡುತ್ತವೆ. ಬೇರುಗಳ ಪ್ರಮಾಣ ಕಡಿಮೆಯಾಗಿ, ಆಹಾರ ಸರಬರಾಜು ಕಡಿಮೆಯಾಗುತ್ತದೆ.( adverse effect of high acidity is largely due to increased solubility of aluminium and manganese compounds in the soil, this high content in the soil solution inhibits the plant development to an even greater degree than excess of hydrogen ions )
  • ಮಣ್ಣು ಹುಳಿಯಾದಾಗ ಮಣ್ಣಿನ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕಡಿಮೆಯಾಗುತ್ತದೆ.
  • ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು, ಬೇಗ ರೋಗಗಳು ಬರಲು ಮಣ್ಣು ಆಮ್ಲೀಯವಾಗಿರುವುದೇ ಕಾರಣ.
  • ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಗೆ ಇದು ಅನುಕೂಲಕರವಾಗಿರುತ್ತದೆ.

ಸುಣ್ಣವನ್ನು ಮಣ್ಣಿಗೆ ಸೇರಿಸುವುದರಿಂದ ರಂಜಕದ ಲಭ್ಯತೆ ಹೆಚ್ಚಾಗುತ್ತದೆ. ಪೊಟ್ಯಾಶಿಯಂ ಸಹ ಯಾವುದೇ ಬಂಧಕ್ಕೆ ಒಳಗಾಗದೆ ಸಸ್ಯಗಳಿಗೆ(more mobile compound) ಲಭ್ಯವಾಗುತ್ತದೆ. (the positive effect of liming increase in the amount of available phosphorus in the soils slow and continues for many years)

  • ನೈಸರ್ಗಿಕವಾಗಿ ಸಾರಜನಕ ಒದಗಿಸಿಕೊಡುವ ಬ್ಯಾಕ್ಟೀರಿಯಾಗಳು ಸಹ ಹುಳಿ ಮಣ್ಣಿನಲ್ಲಿ  ಕಾರ್ಯವೆಸಗುವುದಿಲ್ಲ. (Nitrogen fixing and nodule bacteria become more inactive)
  • ಮಣ್ಣಿನಲ್ಲಿ  ಬೇರೆ ಬೇರೆ ಖನಿಜ ರೂಪದ ಸೂಕ್ಷ್ಮ ಪೊಷಕಾಂಶಗಳು ಇರುತ್ತವೆ.
  • ಮಣ್ಣು ಹುಳಿಯಾದಾಗ ಅದು ಲಭ್ಯಸ್ಥಿತಿಯಲ್ಲಿ ಇರುವುದಿಲ್ಲ. ಸುಣ್ಣ ಹಾಕಿದಾಗ ಅವು ಸಸ್ಯ ಗಳಿಂದ ಸ್ವೀಕರಿಸಲ್ಪಡುತ್ತವೆ.
  • ಬೋರಾನ್ ಪೋಷಕವನ್ನು ಸುಣ್ಣ ಹೆಚ್ಚಾದ್ರೂ ಅದನ್ನು ಸರಿಪಡಿಸುತ್ತದೆ.
paddy require light dose of calcium
ಭತ್ತದ ಬೆಳೆಗೆ ಸುಣ್ಣ ಹೆಚ್ಚು ಬೇಕಾಗಿಲ್ಲ

ಸಸ್ಯ ಬೆಳವಣಿಗೆಯಲ್ಲಿ ಸುಣ್ಣದ ಪಾತ್ರ:

  • ಬರೇ ಮಣ್ಣು ಆಮ್ಲೀಯವಾಗುವುದನ್ನು ತಡೆಯುವಲ್ಲಿ ಮಾತ್ರ ಸುಣ್ಣದ ಪಾತ್ರವಲ್ಲ.
  • ಸಸ್ಯ ಬೆಳೆವಣಿಗೆಗೆ ಎಲ್ಲಾ ಸಮಯದಲ್ಲೂ ಸುಣ್ಣದ ಅಂಶ ಬೇಕಾಗುತ್ತದೆ.
  • ಕೆಲವು ಹಂತಗಳಲ್ಲಿ ಹೆಚ್ಚು, ಮತ್ತು ಕೆಲವು ಹಂತಗಳಲ್ಲಿ ಕಡಿಮೆ ಬೇಕಾಗುತ್ತದೆ.
  • ಇದರಲ್ಲಿ ಸಸ್ಯದ ಬೆಳವಣಿಗೆಗೆ ಅಗತ್ಯವಾದ ಎಲೆಗಳ ಬೆಳೆವಣಿಗೆಗೆ, ಬೇರಿನ ಬೆಳವಣಿಗೆಗೆ ಸಹಕಾರಿ.
  • ಎಲೆಗಳಲ್ಲಿ ಹರಿತ್ತು ಕಡಿಮೆಯಾದಂತಿದ್ದರೆ,  ಅಲ್ಲಿ ಸುಣ್ಣ ಸಸ್ಯಗಳಿಗೆ ಲಭ್ಯವಾಗಿಲ್ಲ ಎಂದು ತಿಳಿಯಬಹುದು.
  • ಮರಗಳು ಸಪುರವಾಗಿ, ಬೇರುಗಳು, ಕವಲು ಬೇರುಗಳು ಕಡಿಮೆಯಿದ್ದರೆ ಸುಣ್ಣದ ಕೊರತೆ ಕಾರಣ.
  • ಸಸ್ಯದ ಮೇಲ್ಭಾಗದ ಬೆಳೆವಣಿಗೆ ಸುಣ್ಣ ಅಗತ್ಯ.  ಕಾರ್ಬೋ ಹೈಡ್ರೇಟುಗಳ ಸಾಗಾಣಿಕೆಗೆ, ಜೀವ ಕೋಶಗಳ ಅಭಿವೃದ್ದಿಗೆ ಸುಣ್ಣ ಬೇಕು.

ಸುಣ್ಣ  ಎಂಬ ದ್ವಿತೀಯ  ಪೋಷಕವು ಎಲ್ಲಾ  ಮಣ್ಣುಗಳಿಗೂ ಬೇಡ. ಕೆಲವು ಮಣ್ಣು ಕ್ಯಾಲ್ಸಿಯಂ  ಯುಕ್ತ ಮಣ್ಣುಗಳಾಗಿರುತ್ತವೆ. ಅಂತಹ ಮಣ್ಣಿಗೆ ಸುಣ್ಣ ಹಾಕಬೇಕಾಗಿಲ್ಲ. ಮುಖ್ಯವಾಗಿ ಮಳೆ ಹೆಚು ಇರುವ ಪ್ರದೇಶಗಳಿಗೆ ಮಾತ್ರ ಸುಣ್ಣ ಕೊಡಬೇಕು.
 
end of the article ——————————————————
search words: Calcium#  Roots of the plant and calcium # secondary nutrient#  calcium deficiency # calcium uptake #  calcium and photosynthesis # acid soil # root system and calcium #  high yield and calcium # agriculture lime #
 
 
 
 

Leave a Reply

Your email address will not be published. Required fields are marked *

error: Content is protected !!