ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು ವ್ಯಾಪಾರದ ಅನುಭವಿಗಳು.
- ಕೆಲವು ಮೂಲಗಳ ಪ್ರಕಾರ ಈಗ ನಷ್ಟ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
- ಇದರಿಂದ ಅಡಿಕೆ ದಾಸ್ತಾನು ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿ ಮತ್ತೆ ಲಾಭ ಮಾಡಿಕೊಳ್ಳಬಹುದು ಎಂಬ ಯೋಚನೆಯಲ್ಲೂ ವ್ಯಾಪಾರಿಗಳು ಇದ್ದಾರೆ ಎನ್ನಲಾಗುತ್ತಿದೆ.
- ಹೀಗೆ ಮಾಡಿದರೆ ಸಣ್ಣ ಪುಟ್ಟ ವ್ಯಾಪಾರಿಗಳು ತಲೆ ಎತ್ತದಂತೆ ಆಗಿ ದೊಡ್ದ ವ್ಯಾಪಾರಿಗಳ ಕೈಗೆ ಮಾರುಕಟ್ಟೆ ಹಿಡಿತ ಸಿಗುತ್ತದೆ ಎಂಬುದೂ ಒಂದು ಲೆಕ್ಕಾಚಾರ.
- ಒಟ್ಟಾರೆಯಾಗಿ ಅಡಿಕೆ ಮಾರುಕಟ್ಟೆ ಯಾರಿಗೂ ಬಿಡಿಸಲಾಗದ ಕಗ್ಗಂಟಾಗಿದೆ.
- ಕಳೆದ ವಾರ ಹಳೆ ಚಾಲಿ ರೂ. 29,400 ರಿಂದ 29,800 ಕ್ಕೆ ನೆಗೆದಿದೆ. ಹೊಸ ಚಾಲಿ 24,500 ಇದ್ದುದು 25,000 ಕ್ಕೆ ಏರಿದೆ.
- ಕೆಂಪು ರಾಶಿ 37,100 ಇದ್ದುದು 38,700 ತನಕ ಏರಿಕೆಯಾಗಿದೆ.
ಯಾಕೆ ಹೆಚ್ಚಾಯಿತು:
- ಇದಕ್ಕೆ ನಿರ್ದಿಷ್ಟ ಕಾರಣ ಎನು ಎಂಬುದು ಹೇಳುವುದು ಕಷ್ಟವಾದರೂ ಒಟ್ಟಾರೆ ಮೇಲೆ ಉತ್ತರ ಭಾರತದಲ್ಲಿ ಬೇಡಿಕೆ.
- ಕೆಲವು ಮೂಲಗಳ ಪ್ರಕಾರ ಅಡಿಕೆ ದಾಸ್ತಾನು ಕಡಿಮೆ ಇದೆ ಎನ್ನಲಾಗುತ್ತಿದೆ
- ಗುಜರಾತ್ ಮೂಲದ ಕೆಲವು ವ್ಯಾಪಾರಿಗಳು ಇಂಡೋನೇಶಿಯಾ, ಶ್ರೀ ಲಂಕಾ ಮೂಲದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
- ಇದು ಎಲ್ಲಾ ವರ್ಗದ ಅಡಿಕೆಗೆಲೂ ಸೇರಲ್ಪಟ್ಟಿರುವ ಕಾರಣ ಕಿಲೋ ಗೆ 230-250 ತನಕದ ಬೆಲೆಯಲ್ಲಿ ಇದು ಪೂರೈಸುವುದಿಲ್ಲ.
- ಆಮದು ವ್ಯವಹಾರಕ್ಕೂ ಸಹ ಕೆಲವು ಕಷ್ಟಗಳು ಎದುರಾಗಿದ್ದು, ಹಿಂದಿನಂತೆ ಸಲೀಸಾಗಿ ವ್ಯವಹಾರ ಮಾಡಲಾಗುತ್ತಿಲ್ಲ.
- ಚೀನಾದಲ್ಲಿ ಕೊರೋನಾ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು,ಇಡೀ ಜಗತ್ತೇ ಗಾಬರಿಯಲ್ಲಿದೆ.
- ಈ ಗಾಬರಿಯಲ್ಲಿ ಆಮದು- ರಪ್ತು ವ್ಯವಹಾರ ನಡೆಸಲು ಅಡ್ಡಿಯಾಗುತ್ತಿದೆ.
ದೇಶ ದೇಶಗಳೊಳಗೆ ಸುಲತಿತ ವ್ಯವಹಾರ ಕಷ್ಟವಾಗಿದ್ದು, ಯಾವುದೇ ಸಾಮಾನು ಸರಂಜಾಮು ವ್ಯವಹಾರವೂ ಸಹ ಕಟ್ಟು ನಿಟ್ಟಿನ ತಪಾಸಣೆಯಲ್ಲೇ ನಡೆಯುತ್ತಿದೆ.
ಆಂತರಿಕ ಕಾರಣ:
- ದೇಶೀಯ ಅಡಿಕೆ ಉತ್ಪಾದನೆ ಎಲ್ಲಾ ಕಡೆಗಳಲ್ಲೂ 30-40% ಕಡಿಮೆ ಎಂಬ ಲೆಕ್ಕಾಚಾರ ಇದೆ. ಈಗಾಗಲೇ ಕೊಯಿಲು ಮುಗಿದಿದ್ದು, ಹೊಸ ಅಡಿಕೆಯ ಅವಕ ತುಂಬಾ ಕಡಿಮೆ ಇದೆ.
- 2017-18 ನೇ ಸಾಲಿನಲ್ಲಿ ಮತ್ತು 2018-19 ಸಾಲಿನಲ್ಲಿ ಅಡಿಕೆ ಉತ್ಪಾದನೆ ಸರಾಸರಿ 25 % ಕಡಿಮೆ ಇತ್ತು. ಅದರ ಕಾರಣ ಮಾಮೂಲಿನ ಅವಕ ಇಲ್ಲದಾಗಿದೆ.
- ಈ ವರ್ಷ ಇಲ್ಲಿ ತನಕ ಇಷ್ಟು ಹಾನಿ ಮಾಡಿರದಂತ ಹೂ ಗೊಂಚಲು ತಿನ್ನುವ ಹುಳು ಬಾಧಿಸಿ ಅಡಿಕೆಯ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.
- ಇದೆಲ್ಲಾ ಒಟ್ಟಾರೆ ದಾಸ್ತಾನುಗಾರರಲ್ಲಿ- ಉತ್ಪನ್ನ ತಯಾರಕರಲ್ಲಿ ಅಡಿಕೆ ಕೊರತೆ ಉಂಟಾಗುವಂತೆ ಮಾಡಿದೆ.
ಎಷ್ಟು ಏರಬಹುದು:
- ಮಾರ್ಚ್ ತಿಂಗಳ ಮೊದಲ ವಾರದ ತನಕ ದರ ಎರಿಕೆಯಾಗಬಹುದು. ಹಾಗೆಂದು ದೊಡ್ಡ ಮೊತ್ತದ ಏರಿಕೆ ಅಲ್ಲ.
- ಸ್ವಲ್ಪ ಸ್ವಲ್ಪವೇ ಏರಿಕೆಯಾಗಿ ಚಾಲಿಯ ದರ 30500 ತನಕ ಏರಿಕೆ ಅಗಬಹುದು.
- ಕೆಂಪಡಿಕೆ 40,000 ತನಕ ಏರಿಕೆಯಾಗಬಹುದು ಎನ್ನುತ್ತಾರೆ.
- ಯಾರೂ ಬಹಿರಂಗ ಹೇಳಿಕೆಯನ್ನು ಕೊಡಲು ಹಿಂಜರಿಯುತ್ತಿದ್ದಾರೆ.
ಮಾರ್ಚ್ ತಿಂಗಳ ನಂತರ ಬೆಲೆ ಸ್ವಲ್ಪ ಇಳಿಕೆಯಾಗಲೂ ಬಹುದು, ನಂತರ ಮೇ ತರುವಾಯ ಧಾರಣೆ ಸ್ವಲ್ಪ ಚೇತರಿಕೆ ಆಗಬಹುದು ಎನ್ನುತ್ತಾರೆ.
ಏನೇ ಆದರೂ ಈ ವರ್ಷದ ಬೆಳೆ ಲೆಕ್ಕಾಚಾರದ ಅಂದಾಜಿನಲ್ಲಿ ಚಾಲಿ ಬೆಲೆ ರೂ. 30,000 ದಾಟಿ 32,000 ದ ವರೆಗೂ ಕೆಂಪು ರಾಶಿ 40,000 ಸನಿಹಕ್ಕೆ ಬರಬಹುದು ಎನ್ನುತ್ತಾರೆ.
ಬೆಳೆಗಾರರು 30,000 ದಾಟಿದ ತರುವಾಯ ಇನ್ನೂ ಹೆಚ್ಚಿನ ಬೆಲೆಗೆ ಕಾಯುವ ಬದಲು ಸ್ವಲ್ಪ ಸ್ವಲ್ಪ ಮಾರಾಟ ಮಾಡುವುದು ಉತ್ತಮ.