ಭವಿಷ್ಯದಲ್ಲಿ ಕೃಷಿಗೆ ಇದು ಅತೀ ದೊಡ್ದ ಕಂಟಕ.

ಕೇರಳದಲ್ಲಿ ಆನೆಯೊಂದು ರೈತನ ಬೆಳೆ ಹಾಳು ಮಾಡಿದ್ದಕ್ಕೆ  ಕೊಲ್ಲಲ್ಪಟ್ಟರೆ, ದೇಶದಾದ್ಯಂತ ಸದ್ದು ಗದ್ದಲವಿಲ್ಲದೆ ಅದೆಷ್ಟೋ  ಕಾಡು ಪ್ರಾಣಿಗಳು ಕೊಲ್ಲಲ್ಪಡುತ್ತಿವೆ.  ಅರಿತ್ರಾ ಕ್ಷೇತ್ರಿ  Aritra Kshettri ಎಂಬ ಅಧ್ಯಯನಕಾರ Ministry of Science and Technology’s Innovation in Science Pursuit for Inspired Research programme. ಹೇಳುವಂತೆ 80% ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದಿವೆಯಂತೆ. ಇಲ್ಲಿ ರೈತನ ಬೆಳೆ ಮುಖ್ಯವೋ ಕಾಡು ಪ್ರಾಣಿಗಳು ಮುಖ್ಯವೋ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ ಎನ್ನುತ್ತಾರೆ.

ಬೆಳೆ ರಕ್ಷಣೆ ಕಷ್ಟವಾಗುತ್ತಿದೆ:

  • ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ರೈತರು ಬೆಳೆಯುವ ಕಬ್ಬು ಬೆಳೆಗೆ ಕಾಡೆಮ್ಮೆಗಳ  ಹಾವಳಿಯಂತೆ.
  • ಕೆಲವು ರೈತರು ಇದರ ಹಾವಳಿ ತಡೆಯಲು ವಿದ್ಯುತ್ ಬೇಲಿ ಮಾಡಿದರೂ ಸಹ ಅವು ಬೇಲಿಯನ್ನು ಲೆಕ್ಕಿಸದೆ  ಬೆಳೆ ಹಾನಿ ಮಾಡುತ್ತವೆಯಂತೆ.
  • ಪುಣೆ, ಅಹಮದ್ ನಗರ, ಮುಂತಾದ ಕಡೆ  ಕಬ್ಬಿನ ಹೊಲಕ್ಕೆ ಯಾವಗಲೂ ಚಿರತೆಗಳ ಹಾವಳಿಯಂತೆ.
  • ಎಲ್ಲಿಂದ ಬರುತ್ತವೋ ಗೊತ್ತಿಲ್ಲ. ಕಬ್ಬಿನ ಹೊಲದ ಪಕ್ಕ ಹೋಗಬೇಕಾದರೆ ಚಿರತೆಯ ಭಯವಂತೆ.
  • ಇನ್ನು ಕೇರಳದಲ್ಲಿ, ತಮಿಳುನಾಡಿನ ಕೆಲವು ಭಾಗಗಳಲ್ಲಿ ಆನೆಗಳ ಹಾವಳಿ ಹೇಳತೀರದು.
  • ಪಶ್ಚಿಮ ಬಂಗಾಲದಲ್ಲೂ ಆನೆಗಳ ಹಾವಳಿ ಅತಿಯಾಗಿದ್ದು, ರೈತರು ಮತ್ತು ಕಾಡು ಪ್ರಾಣಿಗಳ ಮಧ್ಯೆ ಹೋರಾಟ ಆರಂಭವಾಗಿದೆ.

ದೊಡ್ಡ ಕಾಡು ಪ್ರಾಣಿಗಳೂ ಸೇರಿದಂತೆ ಬಹುತೇಕ ಕಾಡು ಪ್ರಾಣಿಗಳು ಈಗ ಕಾಡು ತೊರೆದಿವೆ. ಅವುಗಳಿಗೆ ಆಹಾರ ನಾಡಿನಲ್ಲಿ ದೊರೆಯಲಾರಂಭಿಸಿದೆ. ಇದು ನಮ್ಮ ದೇಶದ ಕೃಷಿ ಉತ್ಪಾದನೆಯನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುವಂತೆ ಮಾಡಿದೆ.

  • ಕಾಡು ಹಂದಿ, ಮಂಗಗಳ ಉಪಟಳವಂತೂ ಹೇಳತೀರದು. ಇದಕ್ಕೆ  ಯಾವ ಪ್ರದೇಶವೂ ಹೊರತಾಗಿಲ್ಲ.

ಏನೂ ಮಾಡುವಂತಿಲ್ಲ:

  • ನಮ್ಮ ದೇಶದ ಕಾನೂನಿನಲ್ಲಿ ಯಾವ ಕಾಡು ಪ್ರಾಣಿಯನ್ನೂ ರೈತರು ಬೆಳೆ ರಕ್ಷಣೆಗಾಗಿ ಕೊಲ್ಲುವಂತಿಲ್ಲ.
  • ಹಾಗೆಂದು ಅವುಗಳು ಮಾಡಿದ ನಷ್ಟಕ್ಕೆ ಯಾವ ಪರಿಹಾರವೂ ಇಲ್ಲ.
  • ವನ್ಯ ಮೃಗಗಳ ರಕ್ಷಣೆಗೆ ಕಾನೂನು ಇದೆ. ಆದರೆ ರೈತನ ಬೆಳೆ ರಕ್ಷಣೆಗೆ ಯವ ಕಾನೂನಿನ ರಕ್ಷೆಯೂ ಇಲ್ಲ.
  • ದೊಡ್ಡ ರೈತರು ಖರ್ಚು ಮಾಡಿ ಕೆಲವು ಬೇಲಿಗಳ ಮೂಲಕ ಇವುಗಳ ಹಾನಿಯಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಳ್ಳುತ್ತಾರೆ.
  • ಆದಾಗ್ಯೂ ಇವರ ದೊಡ್ಡ ಹಿಡುವಳಿಯಲ್ಲಿ ಸ್ವಲ್ಪ ಹಾನಿಯಾದರೂ ಅಂತಹ  ನಷ್ಟ ಉಂಟಾಗುವುದಿಲ್ಲ.
  • ಸಣ್ಣ ಸಣ್ಣ  ರೈತರು ಇವುಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಎನೂ ಮಾಡದ ಸ್ಥಿತಿಯಲ್ಲಿದ್ದಾರೆ.

ಭವಿಷ್ಯದಲ್ಲಿ ಕೃಷಿ ಎಂಬುದು ಪಾಲುದಾರರ ಹೆಚ್ಚಳದಿಂದ ನಷ್ಟದ ವೃತ್ತಿಯಾಗುವ ಸಾಧ್ಯತೆ ಇದೆ. ಅರಣ್ಯಗಳ ಪುನಃಶ್ಚೇತನ ಆಗದೆ ವಿನಹ ಕೃಷಿ ಕ್ಷೇಮವಾಗಿರದು.

  • ಚಿರತೆಗಳು, ಆನೆಗಳು ಸಾಮಾನ್ಯವಾಗಿ ಕಾಡಿನಲ್ಲೇ  ವಾಸವಾಗಿರಬೇಕಾದ ಪ್ರಾಣಿಗಳು.
  • ಆದರೆ ಅಧ್ಯಯನಗಳ ಪ್ರಕಾರ ಈಗ ಇವು 80% ಕಾಡಿನ ಹೊರಗೆ ಇವೆ.
ಕಾಡೆಮ್ಮೆಗಳು ಈಗ ರಸ್ತೆಯಲ್ಲಿ ಸುತ್ತುತ್ತಿವೆ

ಮುಂದಿನ ದಿನಗಳಲ್ಲಿ ಇದೇ ಸವಾಲು:

  • ರೈತರು ಬೆಳೆ ಬೆಳೆಯುವುದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ.ಅತಿವೃಷ್ಟಿ, ಅನಾವೃಷ್ಟಿ, ಮಾರುಕಟ್ಟೆ ಅಸ್ಥಿರತೆ, ದುಬಾರಿ ಬೆಳೆ ಒಳಸುರಿಗಳನ್ನೆಲ್ಲಾ ಹಾದು ಬೆಳೆ ಉಳಿಸಿಕೊಳ್ಳುವಲ್ಲಿ ಈ ಸಮಸ್ಯೆ  ಅವನ ಜೀವ ಹಿಂಡುತ್ತದೆ.
  • ಮನುಷ್ಯ ತನ್ನ ಜೀವನ ಹೊರೆಯುವ ವೃತ್ತಿ ಮುಖ್ಯವೋ ಅಥವಾ ಕಾಡು ಪ್ರಾಣಿಗಳ ಸಂರಕ್ಷಣೆ ಮುಖ್ಯವೋ ಎಂಬ ದ್ವಂದ್ವದಲ್ಲಿ ಕೊನೆಗೆ ತನ್ನ ದಾರಿಯನ್ನು ತಾನು ಕಂಡುಕೊಳ್ಳುತ್ತಿದ್ದಾನೆ.

ಪ್ರಾಣಿಗಳ ಹಾವಳಿಗೆ ಪರಿಹಾರ ಬೇಕಿದೆ:

  • ಕೃಷಿಯೂ ಬೇಕು ಜೊತೆಗೆ ಕಾಡು ಪ್ರಾಣಿಗಳೂ ಬೇಕು. ಇಲ್ಲಿ ಆದ ಸಮಸ್ಯ್ಯೆ ಎಂದರೆ ಕಾಡುಗಳ ಸಂರಕ್ಷಣೆ ಮಾಡಬೇಕಾದವರು ಅದನ್ನು ಮಾಡದ ಕಾರಣ ಇಂದು ಕಾಡು ಟೊಳ್ಳಾಗಿದೆ.

ಪ್ರಾಣಿಗಳು ಆಹಾರ ಆರಸುತ್ತಾ ಬೆಳೆಗಳನ್ನು ಹಾನಿ ಮಾಡಲಾರಂಭಿಸಿದೆ. ಇದಕ್ಕೆ ಸೂಕ್ತ ಪರಿಹಾರ ದೊರೆಯದಿದ್ದರೆ ಇನ್ನೂ ಇನ್ನೂ ಕಾಡು ಪ್ರಾಣಿಗಳ ಹಿಂಸೆ ಹೆಚ್ಚಾಗುವ ಸಾಧ್ಯತೆ ಇದೆ. ಜನ ಕೃಷಿಯಿಂದ ದೂರ ಉಳಿಯುವ ಪ್ರಮೇಯ ಬಂದರೂ ಅಚ್ಚರಿ ಇಲ್ಲ.

 
 

Leave a Reply

Your email address will not be published. Required fields are marked *

error: Content is protected !!