2022 ಹೊಸ ವರ್ಷದ ಮೊದಲ ದಿನ – ಚಾಲಿ- ಕರಿಮೆಣಸು ಇಳಿಕೆ. ಕೆಂಪು ಸ್ಥಿರ, ಕೊಬ್ಬರಿ ಏರಿಕೆ.

ಚಾಲಿ ಮತ್ತು ಕೆಂಪು ಅಡಿಕೆ ಮಾರಾಟ

2021 ಕಳೆದು 2022 ಬಂದಾಯ್ತು. 2021 ನೇ ವರ್ಷದಲ್ಲಿ ಚಾಲಿ ಅಡಿಕೆ ಬೆಳೆಗಾರರು ತಮ್ಮ ಆನುಭವದಲ್ಲಿ ಕಂಡಿರದ ದರ ಏರಿಕೆಯನ್ನು ನೋಡಿದ್ದಾರೆ. ಸಂತೋಷ ಪಡಬೇಕಾದ ಸಂಗತಿ. ಆದರೆ ಕೆಂಪಡಿಕೆಗೆ ಮಾತ್ರ ಅಂಥಃ ಬೆಲೆ ಏರಿಕೆ ಆಗಿಲ್ಲ. ನಿರಾಸೆಯೂ ಆಗಿಲ್ಲ.  ಹೊಸ ವರ್ಷದ ಮೊದಲ ದಿನ ಚಾಲಿ ಸ್ವಲ್ಪ ಇಳಿಕೆಯೂ, ಕೆಂಪು ಸ್ಥಿರವಾಗಿಯೂ, ಕರಿಮೆಣಸಿನ ಬೆಲೆ ಕುಸಿತ ಆಗಿದೆ. ಕೊಬ್ಬರಿ ಏರಿದೆ. 2022 ನೇ ಇಸವಿಯೂ ರೈತರ ಪಾಲಿಗೆ ಅದೃಷ್ಟದ ವರ್ಷವಾಗಿಯೇ ಉಳಿಯಲಿದೆ.  

ಕಳೆದ ಮೂರು ನಾಲ್ಕು ವರ್ಷದಿಂದ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಮತ್ತೆ ಏರಿಕೆಯಾಗುತ್ತದೆ ಎಂಬುದಾಗಿ ಸುದ್ದಿಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ಹಸಿ ಅಡಿಕೆ ಖರೀದಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಚಾಲಿ ಮಾರುಕಟ್ಟೆಯಲ್ಲಿ ಸ್ವಲ್ಪ ಅಂಜಿಕೆ ಉಂಟಾಗಿದೆ. ಖಾಸಗಿಯವರು ಖರೀದಿಗೆ  ಹಿಂದೇಟು ಹಾಕುತ್ತಿದ್ದು, ಸಹಕಾರಿಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ. 2022 ರಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪಡಿಕೆಗೆ ಭಾರೀ ಬೆಲೆ ಬರಲಿದೆ ಎಂಬ ದಟ್ಟ ವದಂತಿಗಳು ಚಿತ್ರದುರ್ಗ, ಭೀಮಸಮುದ್ರಗಳಲ್ಲಿ ಹರಿದಾಡುತ್ತಿದೆ.

ಚಾಲಿ ಬೆಲೆ ಇಳಿಕೆ ಈ ಸಮಯದಲ್ಲಿ ಸಹಜ. ಈಗ ಅಡಿಕೆ ಮಾರುಕಟ್ಟೆಗೆ ಬರುವ ಸಮಯ. ಸಾಮಾನ್ಯವಾಗಿ ಚಾಲಿ ಮಾಡುದ ಕರಾವಳಿ ಕರ್ನಾಟಕಗಳಲ್ಲಿ ಚೇಣಿಗೆ ಕೊಡುವ ಸಂಪ್ರದಾಯ ಕಡಿಮೆ. ಬಹುತೇಕ ಎಲ್ಲರೂ ಅವರವರ ತೋಟದ ಅಡಿಕೆಯನ್ನು ಅವರವರೇ ಸಂಸ್ಕರಣೆ ಮಾಡುತ್ತಾರೆ. ಹಾಗಾಗಿ ಅದೇ ಆದಾಯದ ಮೂಲವಾಗಿರುವವರು ಈ ಸಮಯದಲ್ಲಿ ಅಡಿಕೆ ಮಾರಾಟ ಮಾಡುತ್ತಾರೆ. ಹಾಗಾಗಿ ಬೆಲೆ ಸ್ವಲ್ಪ ಇಳಿಕೆಯಾಗಿಯೇ ಇರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದರ ಹೆಚ್ಚು ಇದೆ. ಕೆಲವೇ ಸಮಯದಲ್ಲಿ ಮತ್ತೆ ಚಾಲಿಗೆ ಬೇಡಿಕೆ ಹೆಚ್ಚಲಿದ್ದು, 2022 ರಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ ಬೆಲೆ ಬರಲಿದೆ ಎನ್ನುತ್ತಾರೆ.

ಕೆಂಪಡಿಕೆ ಮಾಡುವ ಕಡೆ 50% ಕ್ಕೂ ಹೆಚ್ಚಿನ ಬೆಳೆಗಾರರು ಚೇಣಿಗೆ ಅಡಿಕೆ ಮಾರಾಟ ಮಾಡುತ್ತಾರೆ. ಅವರೆಲ್ಲಾ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಂಡು ಮಾರುಕಟ್ಟೆಯಲ್ಲಿ ತೇಜಿ ಸೃಷ್ಟಿಸುತ್ತಾರೆ. ಹಾಗೆಯೇ ಬೆಳೆಗಾರರೂ ಸಹ ಸೊಸೈಟಿಗಳಲ್ಲಿ ಅಡಮಾನ ಇಟ್ಟು ಮುಂಗಡ ಪಡೆದು ತೇಜಿ ಸೃಷ್ಟಿಸುತ್ತರೆ. ಹಾಗಾಗಿ ಕೊಯಿಲಿನ ಸಮಯದಲ್ಲಿ ಕೆಂಪಡಿಕೆ ದರ ಏರಿಕೆಯಾಗಿ ಅಥವಾ ಸ್ಥಿರವಾಗಿಯೇ ಇರುತ್ತದೆ. ಈ ವರ್ಷ ಅಂತೂ ಕೆಂಪಡಿಕೆ ಪ್ರಮಾಣ ಕಡಿಮೆ ಎಂಬ ಸುದ್ದಿ ಹರಿದಾಡುತ್ತಿರುವ ಕಾರಣ ತೇಜಿ ಆಗುವ ಸಾಧ್ಯತೆ ಹೆಚ್ಚು.

ಚಾಲಿ ಅಡಿಕೆ

ಇಂದು ಅಡಿಕೆ ಧಾರಣೆ:

  •  ಅರಕಲಗೂಡು-30/12/2021, Other, 2, 24500, 24500, 24500
  • ಬಂಟ್ವಾಳ- 01/01/2022, Coca, 15, 12500, 25000, 22500
  • ಬಂಟ್ವಾಳ- 01/01/2022, New Variety, 39, 27500, 45000, 42000
  • ಬಂಟ್ವಾಳ- 01/01/2022, Old Variety, 100, 46000, 53000, 50000
  • ಬೆಳ್ತಂಗಡಿ- 01/12/2022, New Variety, 142, 31000, 45000, 39000
  • ಬೆಳ್ತಂಗಡಿ- 01/12/2022, Old Variety, 268, 47200, 53000, 50000
  • ಬೆಳ್ತಂಗಡಿ – 01/12/2022, Fator, – 35500, 45000,
  • ಭದ್ರಾವತಿ- 31/12/2021, Rashi, 657, 45669, 47299, 46764
  • ಚೆನ್ನಗಿರಿ- 01/01/2022, Rashi, 2450, 43829, 47569, 46342
  • ಚಿತ್ರದುರ್ಗ- 31/12/2021, Api, 2, 46629, 47079, 46849
  • ಚಿತ್ರದುರ್ಗ- 31/12/2021, Bette, 100, 39419, 39889, 39699
  • ಚಿತ್ರದುರ್ಗ- 31/12/2021, Kempugotu, 160, 32900, 33300, 33100
  • ಚಿತ್ರದುರ್ಗ- 31/12/2021, Rashi, 45, 46139, 46569, 46359
  • ದಾವಣಗೆರೆ- 31/12/2021, Rashi, 136, 43509, 46499, 45790
  • ಹೊಳಲ್ಕೆರೆ- 31/12/2021, Rashi, 576, 42299, 47500, 47085
  • ಹೊಳೆನರಸೀಪುರ-, 28/12/2021, ARECANUT-HUSK, 3, 6600, 6600, 6600
  • ಹೊನ್ನಾಳಿ- 31/12/2021, Rashi, 44, 47599, 47599, 47599
  • ಹೊಸನಗರ- 31/12/2021, Bilegotu, 1, 20009, 20009, 20009
  • ಹೊಸನಗರ- 31/12/2021, Chali, 8, 31699, 36099, 35099
  • ಹೊಸನಗರ- 31/12/2021, Kempugotu, 203, 33199, 37299, 36599
  • ಹೊಸನಗರ- 31/12/2021, Rashi, 1479, 44499, 47599, 47399
  • ಕಾರ್ಕಳ- 01/01/2022, New Variety, 15, 40000, 45000, 43000
  • ಕಾರ್ಕಳ- 01/01/2022, Old Variety, 21, 46000, 53000, 50000
  • ಕುಮ್ಟಾ- 31/12/2021, Chippu, 25, 25089, 38019, 37269
  • ಕುಮಟಾ- 31/12/2021, Coca, 20, 21019, 29999, 29249
  • ಕುಮಟಾ- 31/12/2021, Factory, 70, 13509, 18969, 18829
  • ಕುಮಟಾ- 31/12/2021, Hale Chali, 50, 46899, 49899, 49219
  • ಕುಮಟಾ- 31/12/2021, Hosa Chali, 100, 36509, 41589, 40989
  • ಕುಂದಾಪುರ- 01/01/2022, Hale Chali, 7, 51500, 52500, 52000
  • ಕುಂದಾಪುರ-  01/01/2022, Hosa Chali, 38, 43500, 44500, 44000
  • ಮಡಿಕೇರಿ- 31/12/2021, Raw, 43, 49556, 49556, 49556
  • ಮಂಗಳೂರು- 31/12/2021, Coca, 451, 24000, 48000, 31000
  • ಪುತ್ತೂರು-, 01/01/2022, Coca, 859, 11000, 26000, 18500
  • ಪುತ್ತೂರು- 01/01/2022, Old Variety, 450, 11000, 26000, 18500
  • ಪುತ್ತೂರು- 01/01/2022, New Variety, 7, 27500, 45000, 36250
  • ಪುತ್ತೂರು- 01/01/2022, Fator – 38000, 45000.
  • ಪುತ್ತೂರು- 01/01/2022, Ulli – 25000, 31500.
  • ಪುತ್ತೂರು- 01/01/2022, Kari –  25000, 29500.
  • ಸಾಗರ- 31/12/2021, Bilegotu, 4, 19699, 34671, 32101
  • ಸಾಗರ- 31/12/2021, Chali, 42, 28519, 47170, 46970
  • ಸಾಗರ- 31/12/2021, Coca, 1, 19699, 37699, 24199
  • ಸಾಗರ- 31/12/2021, Kempugotu, 130, 22369, 38869, 35269
  • ಸಾಗರ-, 31/12/2021, Rashi, 190, 44199, 48009, 47309
  • ಸಾಗರ- 31/12/2021, Sippegotu, 16, 7419, 26160, 18479
  • ಶಿಕಾರಿಪುರ- 31/12/2021, Api, 230, 43600, 46400, 44900
  • ಶಿವಮೊಗ್ಗ- 31/12/2021, Bette, 173, 49710, 53999, 51600
  • ಶಿವಮೊಗ್ಗ-31/12/2021, Gorabalu, 327, 17400, 36720, 36390
  • ಶಿವಮೊಗ್ಗ- 31/12/2021, Rashi, 2245, 44199, 47359, 46760
  • ಶಿವಮೊಗ್ಗ- 31/12/2021, Saraku, 64, 49000, 74269, 58655
  • ಸಿದ್ದಾಪುರ- 31/12/2021, Bilegotu, 31, 28799, 38812, 37689
  • ಸಿದ್ದಾಪುರ-  31/12/2021, Chali, 34, 46509, 48509, 47899
  • ಸಿದ್ದಾಪುರ-  31/12/2021, Coca, 16, 25199, 34999, 32499
  • ಸಿದ್ದಾಪುರ-  31/12/2021, Hosa Chali, 33, 33099, 40599, 37099
  • ಸಿದ್ದಾಪುರ-  31/12/2021, Kempugotu, 7, 23899, 34689, 33689
  • ಸಿದ್ದಾಪುರ-  31/12/2021, Rashi, 130, 43599, 48639, 47889
  • ಸಿದ್ದಾಪುರ-  31/12/2021, Tattibettee, 6, 31689, 43099, 39399
  • ಸಿರಾ- 29/12/2021, Other, 30, 9000, 45000, 27500
  • ಸಿರ್ಸಿ- 01/01/2022, Bette, 7, 36199, 45599, 42009
  • ಸಿರ್ಸಿ- 01/01/2022, Bilegotu, 5, 24699, 37589, 28951
  • ಸಿರ್ಸಿ- 01/01/2022, Chali, 50, 48699, 49299, 48946
  • ಸಿರ್ಸಿ- 01/01/2022, Rashi, 54, 46308, 48108, 47137
  • ಸುಳ್ಯ- 01/01/2022, Old Variety, 18, 45000, 53000, 51100
  • ತೀರ್ಥಹಳ್ಳಿ- 31/12/2021, Bette, – 49710, 53999,
  • ತೀರ್ಥಹಳ್ಳಿ- 31/12/2021, EDI, – 44866, 48599,
  • ತೀರ್ಥಹಳ್ಳಿ- 31/12/2021, Gorabalu, – 17400, 36720.
  • ತೀರ್ಥಹಳ್ಳಿ- 31/12/2021, Rashi, —44199, 47359.
  • ತೀರ್ಥಹಳ್ಳಿ- 31/12/2021, Saraku, – 49000, 74269
  • ತುಮಕೂರು- 01/01/2022, Rashi, 26, 45800, 46800, 46200
  • ಯಲ್ಲಾಪುರ-31/12/2021, Bilegotu, 15, 28826, 39069, 33111
  • ಯಲ್ಲಾಪುರ- 31/12/2021, Chali, 76, 40000, 49501, 48189
  • ಯಲ್ಲಾಪುರ- 31/12/2021, Coca, 26, 22619, 32199, 28899
  • ಯಲ್ಲಾಪುರ- 31/12/2021, Kempugotu, 5, 28642, 36016, 34399
  • ಯಲ್ಲಾಪುರ- 31/12/2021, Rashi, 269, 44589, 53219, 49799
  • ಯಲ್ಲಾಪುರ- 31/12/2021, Tattibettee, 30, 38509, 44100, 42499

ಕರಿಮೆಣಸು ಧಾರಣೆ:

ಡಿಸೆಂಬರ್ ಮೊದಲ ವಾರದಲ್ಲಿ  56000 ರೂ. ಗಳಿಗೆ ಏರಿದ್ದ ಮೆಣಸಿನ ಧಾರಣೆ ಡಿಸೆಂಬರ್ ಕೊನೆಗೆ 50,000 ಕ್ಕೆ ಇಳಿಕೆಯಾಯಿತು. ಹೊಸ ವರ್ಷದ ಮೊದಲ ದಿನ ಬಹುತೇಕ ಎಲ್ಲಾ ಖರೀದಿದಾರರೂ ಕಿಲೋ ಮೇಲೆ ರೂ.25 ಕಡಿಮೆ ಮಾಡಿದ್ದಾರೆ. ಕ್ಯಾಂಪ್ಕೋ ಲೀಟರ್ ತೂಕ ಸರಿಯಾಗಿರುವ ಮೆಣಸಿಗೆ 49,000 ದರ ಗೊತ್ತು ಮಾಡಿದೆ.  ಕೊಯಿಲಿನ ಸಮಯ ಆದ ಕಾರಣ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ. ಹಾಗೆಂದು ಈಗ ಅಲ್ಪ ಸ್ವಲ್ಪ ಕೊಯಿಲು ಆಗಿದೆ ಅಷ್ಟೇ. ಕೊಚ್ಚಿ ಮಾರುಕಟ್ಟೆಯಲ್ಲಿ ಸ್ವಲ್ಪ ದರ ಇಳಿಕೆಯಾಗಿದೆ. ಹಾಗಾಗಿ ಇನ್ನೂ ಒಂದೆರಡು ವಾರದಲ್ಲಿ ಕಿಲೋ ದಲ್ಲಿ  ಇನ್ನೂ ರೂ. 25 ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ವದಂತಿಗಳಿವೆ.

ಇಂದು ವಿವಿಧ ಕಡೆ ಧಾರಣೆ: ಕಿಲೋ.

ಕರಿಮೆಣಸು
  • ಮಂಗಳೂರು:470.00-495.00
  • ತೀರ್ಥ ಹಳ್ಳಿ: 475.00-480.00
  • ಶಿರಸಿ: 465.00-475.00
  • ಯಲ್ಲಾಪುರ:470.00-482.00
  • ಸಿದ್ದಾಪುರ:478.00-480.00
  • ಹಾಸನ:465.00-490.00
  • ಮೂಡಿಗೆರೆ:470.00-485.00
  • ಸಕಲೇಶ ಪುರ:470.00-485.00
  • ಕಾರ್ಕಳ:470.00-495.00
  • ಕಳಸ:475.00-490.00

ಕೊಬ್ಬರಿ ಧಾರಣೆ:

ನಿರೀಕ್ಷೆಯಂತೆ ಕೊಬ್ಬರಿ ಧಾರಣೆ ಸಾರ್ವಕಾಲಿಕ ದಾಖಲೆಯಾದ 18,000 ದಾಟಿದೆ. ಈ ದಿನ ಅರಸೀಕೆರೆಯಲ್ಲಿ ಬಾಲ್ ಕೊಬ್ಬರಿ ಧಾರೆಣೆ ಕ್ವಿಂಟಾಲಿಗೆ 18,206 ದಾಖಲಾಗಿದೆ. ಉಳಿದ ಕಡೆಗಳಲ್ಲೂ 18,000 ಆಸು ಪಾಸಿನಲ್ಲೇ ದರ ಮುಂದುವರಿದಿದೆ.

  • ಅರಸೀಕೆರೆ: 16,850-18,206
  • ಚೆನ್ನರಾಯಪಟ್ನ:16,800-18,200
  • ತುರುವೇಕೆರೆ:18,000-18,200
  • ಮಂಗಳೂರು:7,500-15,0೦೦ (ಎಣ್ಣೆ)
  • ಪುತ್ತೂರು:7,000-11,500 (ಎಣ್ಣೆ)
  • ತುಮಕೂರು 10,200-12,000:(ಎಣ್ಣೆ)
  • ತುರುವೇಕೆರೆ: 18,100-18,200
ಕೊಬ್ಬರಿ ಎಣ್ನೆ

ಶುಂಠಿ ಧಾರಣೆ:

ಬಿಸಿಲು ಚೆನ್ನಾಗಿರುವ ಕಾರಣ ಒಣ ಶುಂಠಿ ಮಾಡುವ ಕೆಲಸ ಭರದಿಂದ ಸಾಗಿದೆ. ಆದರೆ ವ್ಯಾಪಾರಿಗಳು ಬೆಳೆಗಾರರಿಗೆ ಕೀಳುವುದು ಅನಿವಾರ್ಯವಾದ  ಕಾರಣ ಬೆಲೆ ಹೆಚ್ಚಳ ಮಾಡುತ್ತಿಲ್ಲ.  ಒಣ ಶುಂಠಿ ಸ್ಟಾಕ್ ಇದೆ. ಉತ್ತರ ಭಾರತಕ್ಕೆ ಹಸಿ ಶುಂಠಿ ಮಾರಾಟವಾಗುತ್ತಿತ್ತು. ಕೊರೋನಾ ಕಾರಣದಿಂದ ಇದು ಹಿಂದಿನಂತೆ ಇಲ್ಲ. ಹಾಗಾಗಿ ಬೇಡಿಕೆ ಕಡಿಮೆಯಾಗಿದೆ.

  • ಬೇಲೂರು: 01/01/2022, Green Ginger, – 1000 ಕ, 1000 ಗ. 1000 ಸರಾ.
  • ಬೆಂಗಳೂರು: 01/01/2022, Green Ginger, – 1400, 1600, 1500
  • ಚಿಕ್ಕಬಳ್ಳಾಪುರ: 01/01/2022, Green Ginger, – 1600, 1800, 1700
  • ಹಾಸನ: 29/12/2021, Green Ginger, – 600, 1200, 1000
  • ಮೈಸೂರು: 31/12/2021, Green Ginger- 4800, 5000, 4950
  • ಶಿವಮೊಗ್ಗ: 31/12/2021, Green Ginger, – 1800, 2000, 1900
  • ಶಿರಸಿ: 31/12/2021, Green Ginger, – 1500, 1800, 1600

ರಬ್ಬರ್ ಧಾರಣೆ:

ರಬ್ಬರ್ ಧಾರಣೆ ಭಾರೀ ಇಳಿಕೆ ಕಂಡಿದೆ. ಡಿಸೆಂಬರ್ 2021 ರ ಮೊದಲ ವಾರದಲ್ಲಿ ಇದ್ದ ದರಕ್ಕಿಂತ ಕೊನೆ ವಾರಕ್ಕೆ ರೂ. 30 ರಷ್ಟು ಇಳಿಕೆಯಾಗಿದ್ದು, ರಬ್ಬರ್ ಟ್ಯಾಪಿಂಗ್ ಕಡಿಮೆಯಾಗಿದ್ದರೂ ಬೆಲೆ ಇಲ್ಲದ ಸ್ಥಿತಿ ಉಂಟಾಗಿದೆ. ಬಹಳಷ್ಟು ರಬ್ಬರ್ ತೋಟಗಳು ಕಡಿಯಲ್ಪಟ್ಟಿವೆ. ಹೆಚ್ಚಿನವರು ಕೆಲಸದವರ ಸಮಸ್ಯೆಗೆ ಟ್ಯಾಪಿಂಗ್ ನಿಲ್ಲಿಸಿದ್ದಾರೆ. ದೇಶೀಯ ಉತ್ಪಾದನೆ ಕಡಿಮೆ ಇದ್ದರೂ ಬೆಲೆ ಏರುತ್ತಿಲ್ಲ. ರಬ್ಬರ್ ಆಮದು ಆಗುತ್ತಿರುವುದೇ ಈ ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ.

ಇಂದು ದರ:

  • 1X Grade:168.00
  • RSS 4:   160.00
  • RSS 5: 154.00
  • RSS 3 :160.00
  • Lot :149.00
  • Scrap:96.00-104.00

ಕಾಫೀ ದರ: 50 kg.

ಈ ವರ್ಷವೇ ಕಾಫಿಗೆ ದಾಖಲೆಯ ಬೆಲೆ ಬಂದಿರುವುದು. ಕಿಲೋ ಪಾರ್ಚ್ ಮೆಂಟ್ ಗೆ ರೂ. 300 ದಾಟಿದೆ. ಚೆರಿ 120 ದಾಟಿದೆ. ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬುದಾಗಿ ಹೇಳುತ್ತಿದ್ದಾರೆ.

  • ಆರೆಬಿಕಾ ಪಾರ್ಚ್ ಮೆಂಟ್:15400
  • ಆರೆಬಿಕಾ ಚೆರಿ:6500
  • ರೋಬಸ್ಟಾ ಪಾರ್ಚ್ ಮೆಂಟ್:6500
  • ರೋಬಸ್ಟಾ ಚೆರಿ:3950

ಅಡಿಕೆ ಬೆಳೆಗಾರರು ಈ ವರ್ಷ ತಮ್ಮ ಕೆಲವು ಶಾಶ್ವತ ಕೆಲಸಗಳನ್ನು ಯಾವುದೇ ಮುಂದೂಡಿಕೆ ಮಾಡದೆ ಪೂರ್ತಿಗೊಳಿಸಿ. ಮುಂದಿನ ವರ್ಷಗಳಲ್ಲಿ  ಇದೇ ದರ ಉಳಿಯುತ್ತದೆ ಎಂಬ ಖಾತ್ರಿ ಇಲ್ಲ. ಮನೆ ಕಟ್ಟುವಿಕೆ, ಬಾವಿ ತೋಡುವಿಕೆ ಹಾಗೆಯೇ ಇನ್ನಿತರ ಕೆಲಸಗಳನ್ನು ಮಾಡಿಸಿ. ಈಗಾಗಲೇ ಎಲ್ಲಾ ಸಾಮಾಗ್ರಿ( ಸಿಮೆಂಟ್, ಕಬ್ಬಿಣ, ಮಜೂರಿ ಪೈಂಟ್ ) ಗಳ ದರ ಏರಿಕೆಯಾಗಿದೆ. ಇದು ಇನ್ನೂ ಏರಿಕೆಯಾಗುತ್ತಲೇ ಇರುತ್ತದೆ. ಆದ ಕಾರಣ ದರ ಚೆನ್ನಾಗಿರುವಾಗ ಸಾಧ್ಯವಾದಷ್ಟು ಎಲ್ಲವನ್ನೂ ಮಾಡಿಸಿಕೊಳ್ಳಿ. ಮುಂದೆ ಎಲ್ಲವೂ ದುಬಾರಿಯಾಗಲಿದ್ದು, ಅಡಿಕೆಗೆ 600 ದಾಟಿದರೆ ಅದಕ್ಕನುಗುಣವಾಗಿ ಎಲ್ಲವೂ ಏರಿಕೆಯಾಗುತ್ತದೆ.

ಇಲ್ಲಿ ತಿಳಿಸಲಾದ ಮಾಹಿತಿಗಳು ಕ್ಎಲವು ಬೆಳೆಗಾರರು ಹಾಗೂ ವ್ಯಾಪಾರಿಗಳಿಂದ ಕಲೆ ಹಾಕಿದ ಮಾಹಿತಿಯಾಗಿರುತ್ತದೆ.  ಯಾರಾದರೂ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಹೊಂದಿದ್ದರೆ ಯಾವುದೇ ಸಂಕೋಚವಿಲ್ಲದೆ ಹಂಚಿಕೊಳ್ಳಬಹುದು. ನಂಬಲರ್ಹ ಮೂಲಗಳಿಂದ ಸಾಧ್ಯವಾದಷ್ಟು ನಿಖರತೆಯಿಮ್ದ ಕುಡಿದ ಮಾಹಿತಿಯನ್ನು ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!