ಅಡಿಕೆ ಧಾರಣೆ ಸ್ಥಿತಿಗತಿ-ದಿನಾಂಕ 10-01-2022, ಚಾಲಿ ಚುರುಕು. ಕೆಂಪು ಸ್ಥಿರ.

ಕೆಂಪು ರಾಸಿ ಅಯದೆ ಇದ್ದದ್ದು

ಹೊಸ ವರ್ಷದ ಎರಡನೇ ವಾರ 10-01-2022 ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ದರ ಕುಸಿಯದಂತೆ ಮಾಡಿದೆ. ಈ ವರ್ಷದಾದ್ಯಂತ ಅಡಿಕೆ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ದಾಖಲೆಯ ಬೆಲೆಯನ್ನು ಹಿಂದಿಕ್ಕಿ ಇನ್ನೂ ಏರುವ ಸಾಧ್ಯತೆ ಇದೆ ಎಂಬುದಾಗಿಯೂ  ಹೇಳುತ್ತಿದ್ದಾರೆ. ಈ ಸಮಯದ ದರ ಸ್ಥಿತಿಯನ್ನು ನೋಡಿದಾಗ ಹೊಸ ಚಾಲಿ ಧಾರಣೆ ಈ ವರ್ಷ 500 ದಾಟಬಹುದು, ಕೆಂಪು 50,000 ಮೀರಿ ಏರಿಕೆಯಾಗಬಹುದು ಎಂಬ ವದಂತಿಗಳಿವೆ.

ಅಡಿಕೆ ಆಮದು ತಡೆಯಲ್ಪಟ್ಟಿದೆ. ಆ ಕಾರಣದಿಂದ ಅಡಿಕೆ ಧಾರಣೆ ಏರಿಕೆಯಾಗಿದೆ. ಚಾಲಿ ಕಳೆದ ವಾರ ಸ್ವಲ್ಪ ಹಿಂದೆ ಬರುವ ಸೂಚನೆ ಇತ್ತಾದರೂ ಮತ್ತೆ ಅಲ್ಲಿಗೆ ಸರಿಯಾಗಿದೆ. ಖಾಸಗಿ ವ್ಯಾಪಾರಿಗಳು ಮತ್ತೆ ಸ್ಪರ್ಧೆಗೆ ಇಳ್ದಿದ್ದಾರೆ. ಕಳೆದ ವಾರದ ತನಕ ಹೊಸ ಚಾಲಿಗೆ ಸರಾಸರಿ 44,000 ಇತ್ತು. ಈಗ  ಕೆಲವು ವ್ಯಾಪಾರಿಗಳು ಮತ್ತೆ 45,000 ಕ್ಕೆ ಖರೀದಿ ಮಾಡುತ್ತಿದ್ದಾರೆ. ಹಳೆ ಚಾಲಿಯ ಅವಕ ಕಡಿಮೆಯಾಗುತ್ತಿದೆ. ಹೆಚ್ಚಿನವರು ಆಗಲೇ ಉತ್ತಮ ದರ ಎಂದು 54,000 ಕ್ಕೆ ಮಾರಾಟ ಮಾಡಿದ್ದಾರೆ. ಹಾಗಾಗಿ ಹೊಸ ಚಾಲಿಗೆ ಬೇಡಿಕೆ ಹೆಚ್ಚಳವಾಗುತ್ತಿದೆ. ಹೊಸ ಚಾಲಿ ಈ ವಾರದಲ್ಲಿ ಮತ್ತೆ 500-1000 ರೂ . ಏರಿಕೆ ಆದರೂ ಆಗಬಹುದು ಎಂಬುದಾಗಿ ಖಾಸಗಿ ವರ್ತಕರು ಹೇಳುತ್ತಾರೆ. ಜೊತೆಗೆ ಕೆಲವು ವರ್ತಕರ ಪ್ರಕಾರ ಈ ವರ್ಷ ಮಳೆಗಾಲದ ಸುಮಾರಿಗೆ ಹೊಸ ಚಾಲಿಗೆ  55,000 ತಲುಪಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ.ಆದನ್ನು ಎಷ್ಟು ನಂಬುವುದೋ ತಿಳಿಯದು. ಈ ವರ್ಷ ಅಡಿಕೆ ಉತ್ಪಾದನೆ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಇದೆ.ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ಚಾಲಿ ಸ್ವಲ್ಪ ಏರಿಕೆಯಾಗಲಾರಂಭಿಸಿದೆ.

ಕೆಂಪಡಿಕೆ ಮಾರಾಟ ಮಾಡುವಾವರು ತುಂಬಾ ಕಡಿಮೆಯಾಗಿದ್ದಾರೆ. ಈ ವರ್ಷ ಕೆಂಪು ಮೇಲೆ ಹೋಗುತ್ತದೆ ಎನ್ನುವ ವದಂತಿಗಳು  ಹೆಚ್ಚಾಗಿರುವ ಕಾರಣ ಹೆಚ್ಚಿನ ಬೆಳೆಗಾರರು ಚಾಲಿ ಕೊಡುವುದು, ಕೆಂಪು ಇಟ್ಟುಕೊಳ್ಳುವುದು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಇಂದು ಅತ್ಯಧಿಕ 4354, ಚೀಲ ರಾಶಿ ಮಾರಾಟವಾಗಿದೆ.ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ಕಡಿಮೆ ಇದೆ. ಯಲ್ಲಾಪುರದಲ್ಲಿ ರಾಶಿಗೆ ಅತ್ಯಧಿಕ ದರ 52,900 ಸರಾಸರಿ 49799 ಇತ್ತು. ಮೊನ್ನೆ ಶುಕ್ರವಾರ ಹೊಸನಗರ ಮಾರುಕಟ್ಟೆ 47270 ಗರಿಷ್ಟ ದರದಲ್ಲಿ ಮಾರಾಟವಾಗಿದೆ. ಕೆಂಪು ಸ್ವಲ್ಪ ಸಮಯ ಇದೇ ದರದಲ್ಲಿ ಮುಂದುವರಿಯಲಿದೆ, ಬೆಳೆಗಾರರು ದರ ಏರಿಕೆಯ ಆಸೆ ಬಿಟ್ಟು ಮಾರಾಟ ಪ್ರಾರಂಭಿಸಿದ ತರುವಾಯ ದರ ಏರಿಕೆ ಆಗಬಹುದು ಎಂಬುದಾಗಿ ಹೇಳುತ್ತಿದ್ದಾರೆ.ಅಡಿಕೆ ವ್ಯವಹಾರವೇ ಹಾಗೆ. ಇಲ್ಲಿ ಸಟ್ಟಾ ವ್ಯಾಪಾರವೇ ಜಾಸ್ತಿ.

ಚಾಲಿ ಹೊಸತು

ಇಂದು ಅಡಿಕೆ ಧಾರಣೆ:

 • ಬಂಟ್ವಾಳ: 10/01/2022  ಕೊಕಾ, 12500, 25000, 22500
 • ಬಂಟ್ವಾಳ: 10/01/2022, ಹೊಸಚಾಲಿ, 40, 27500, 45000, 42000
 • ಬಂಟ್ವಾಳ:, 10/01/2022, ಹಳೆ ಚಾಲಿ, 21, 46000, 53000, 50000
 • ಬೆಳ್ತಂಗಡಿ: 10/01/2022, ಹೊಸಚಾಲಿ, 801, 28700, 45000, 38000
 • ಬೆಳ್ತಂಗಡಿ: 10/01/2022, ಹಳೆ ಚಾಲಿ, 45500, 53500, 50000
 • ಬೆಳ್ತಂಗಡಿ: 10 /01/2022, ಇತರ, 18000, 37000, 27000
 • ಬೆಳ್ತಂಗಡಿ: 06/01/2022, ಕೋಕಾ, 26000, 28000, 27000
 • ಭದ್ರಾವತಿ: 07/01/2022, ರಾಶಿ, 44299, 46699, 46075
 • ಚೆನ್ನಗಿರಿ: 10/01/2022, ರಾಶಿ, 45099, 46919, 46014
 • ಚಿತ್ರದುರ್ಗ: 10/01/2022, ಅಪಿ, 45600, 46000, 45800
 • ಚಿತ್ರದುರ್ಗ:, 10/01/2022, ಬೆಟ್ಟೆ, 37639, 38069, 37889
 • ಚಿತ್ರದುರ್ಗ:  10/01/2022, ಕೆಂಪುಗೋಟು, 29829, 30279, 30059
 • ಚಿತ್ರದುರ್ಗ:  10/01/2022,ರಾಶಿ, 45100, 45500, 45300
 • ದಾವಣಗೆರೆ: 07/01/2022, ರಾಶಿ, 22666, 47621, 44550
 • ಹೊನ್ನಾಳಿ: 10/01/2022, ರಾಶಿ, 46299, 46399, 46355
 • ಹೊಸನಗರ: 07/01/2022, ಚಾಲಿ, 32169, 38629, 35789
 • ಹೊಸನಗರ: 07/01/2022, ಕೆಂಪುಗೋಟು, 32219, 39999, 37219
 • ಹೊಸನಗರ: 07/01/2022, ರಾಶಿ, 44799, 47270, 46689
 • ಹೊಸನಗರ: 07/01/2022, ಸಿಪ್ಪೆಗೋಟು, 16599, 16909, 16599
 • ಕಾರ್ಕಳ: 10/01/2022, ಹೊಸಚಾಲಿ, , 40000, 46000, 43000
 • ಕಾರ್ಕಳ: 10/01/2022, ಹಳೆ ಚಾಲಿ, 46000, 53000, 50000
 • ಕುಮಟಾ: 10/01/2022, ಚಿಪ್ಪು, 24509, 35019, 33989
 • ಕುಮಟಾ:10/01/2022, ಕೋಕಾ, 18019, 27589, 26729
 • ಕುಮಟಾ: 10/01/2022, ಫ್ಯಾಕ್ಟರಿ, 13019, 18589, 18049
 • ಕುಮಟಾ:10/01/2022, ಹಳೇ ಚಾಲಿ, 50, 45589, 49599, 47689
 • ಕುಮಟಾ:10/01/2022, ಹೊಸಚಾಲಿ, 36509, 40609, 39899
 • ಕುಂದಾಪುರ: 06/01/2022, ಹಳೆ ಚಾಲಿ, 51500, 52500, 52000
 • ಕುಂದಾಪುರ: 06/01/2022, ಹೊಸಚಾಲಿ, 43500, 44500, 44000
 • ಮಂಗಳೂರು: 07/01/2022, ಕೋಕಾ, 24500, 31000, 30200
 • ಪುತ್ತೂರು: 10/01/2022, ಕೋಕಾ, 11000, 26000, 18500
 • ಪುತ್ತೂರು: 10/01/2022, ಹೊಸಚಾಲಿ, 27500, 45000, 36250
 • ಪುತ್ತೂರು: 10/01/2022, ಪಟೋರಾ ಹಳತು, 37500, 45000,
 • ಪುತ್ತೂರು: 10/01/2022, ಪಟೋರಾ ಹೊಸತು, 32000, 39000
 • ಪುತ್ತೂರು: 10/01/2022, ಕರಿಕೋಕಾ, 25500, 29000
 • ಪುತ್ತೂರು: 10/01/2022 ಉಳ್ಳಿಗಡ್ಡೆ, 25000, 31000- 27500
 • ಸಾಗರ: 10/01/2022, ಬಿಲೇಗೋಟು, 16129, 27889, 24399
 • ಸಾಗರ: 10/01/2022, ಚಾಲಿ, 30099, 46299, 35299
 • ಸಾಗರ: 10/01/2022, ಕೋಕಾ, 24299, 30199, 29299
 • ಸಾಗರ: 10/01/2022, ಕೆಂಪುಗೋಟು, 30199, 39899, 36899
 • ಸಾಗರ: 10/01/2022, ರಾಶಿ, 41299, 46901, 45899
 • ಸಾಗರ: 10/01/2022, ಸಿಪ್ಪೆಗೋಟು, 10469, 24279, 17589
 • ಶಿವಮೊಗ್ಗ: 10/01/2022, ಬೆಟ್ಟೆ, 47000, 53610, 51800
 • ಶಿವಮೊಗ್ಗ:  10/01/2022, ಗೊರಬಲು, 17126, 34199, 33600
 • ಶಿವಮೊಗ್ಗ: 10/01/2022, ರಾಶಿ, 43499, 46599, 45600
 • ಶಿವಮೊಗ್ಗ:  10/01/2022, ಸರಕು, 127, 50899, 71000, 67000
 • ಸಿದ್ದಾಪುರ: 10/01/2022, ಬಿಳೇಗೋಟು, 22199, 33218, 26599
 • ಸಿದ್ದಾಪುರ: 10/01/2022, ಹಳೆ ಚಾಲಿ, 44689, 48099, 45089
 • ಸಿದ್ದಾಪುರ: 10/01/2022, ಕೋಕಾ, 21899, 34112, 31612
 • ಸಿದ್ದಾಪುರ: 10/01/2022, ಹೊಸಚಾಲಿ, 32699, 39569, 35819
 • ಸಿದ್ದಾಪುರ: 10/01/2022, ಕೆಂಪುಗೋಟು, 26689, 33799, 32812
 • ಸಿದ್ದಾಪುರ: 10/01/2022, ರಾಶಿ, 42599, 47499, 46799
 • ಸಿದ್ದಾಪುರ: 10/01/2022, ತಟ್ಟೆಬೆಟ್ಟೆ, 30699, 46399, 43899
 • ಸಿರ್ಸಿ: 10/01/2022, ಬೆಟ್ಟೆ, 35109, 45400, 42535
 • ಸಿರ್ಸಿ:  10/01/2022, ಬಿಳೇ ಗೋಟು, 20899, 41299, 27348
 • ಸಿರ್ಸಿ: 10/01/2022, ಚಾಲಿ, 32099, 49093, 48502
 • ಸಿರ್ಸಿ:  10/01/2022, ರಾಶಿ, 41909, 48299, 47303
 • ತುಮಕೂರು: 05/01/2022, ರಾಶಿ, 45600, 46800, 46100
 • ಯಲ್ಲಾಪುರ: 10/01/2022, ಬಿಳೇಗೋಟು, 26899, 32051, 28899
 • ಯಲ್ಲಾಪುರ:, 10/01/2022, ಚಾಲಿ, 37601, 48851, 46329
 • ಯಲ್ಲಾಪುರ:  10/01/2022, ಕೋಕಾ, 23051, 28989, 26899
 • ಯಲ್ಲಾಪುರ:  10/01/2022, ಕೆಂಪುಗೋಟು, 32242, 37842, 35499
 • ಯಲ್ಲಾಪುರ:  10/01/2022, ರಾಶಿ , 45560, 52900, 49799
 • ಯಲ್ಲಾಪುರ:  10/01/2022, ತಟ್ಟೆಬೆಟ್ಟೆ, 37899, 44865, 42809
 • ಯಲ್ಲಾಪುರ: 06/01/2022, ಅಪಿ, 55499, 55499, 55499
ಕೆಂಫು ಬೆಟ್ಟೇ

ಬೆಳೆಗಾರರು ಚೋಲ್ ಹಾಗೂ ಡಬ್ಬಲ್ ಚೋಲ್ ಅಡಿಕೆಯನ್ನು ಮಾರಾಟ ಮಾಡಿ.  ಹೊಸ ಉತ್ತಮ ಗುಣಮಟ್ಟದ ಅಡಿಕೆಯನ್ನು ದಾಸ್ತಾನು ಇಡಿ. ಹಾಳಾಗುತ್ತದೆ ಎಂದು ಪಟೋರಾ, ಉಳ್ಳಿ, ಕರಿಯನ್ನು ಈಗಲೇ ಮಾರಾಟ ಮಾಡಬೇಡಿ. ಆರಿಸಿ ಬಿಸಿಲಿಗೆ ಹಾಕಿ, ಸ್ವಲ್ಪ ಕಾದು ಮಾರಾಟ ಮಾಡಿ. ಅಡಿಕೆಗೆ ದರ ಏರಿಕೆಯಾಗುವಾಗ ಇದಕ್ಕೂ ಏರಿಕೆಯಾಗುತ್ತದೆ. ಕೆಂಪಡಿಕೆ ದರ ಏರುವ ಎಲ್ಲಾ ಸಾದ್ಯತೆಗಳಿಗೆ ಎಂಬ ವದಂತಿ ಇರುವ  ಕಾರಣ  ಕರಿ ಕೋಕಾ ಬೆಲೆ ಹಾಗೂ ಉಳಿದ ಅಡಿಕೆಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. 4-5 ತಿಂಗಳು ದಾಸ್ತಾನು ಇಟ್ಟರೂ ಏನೂ ತೊಂದರೆ ಆಗಲಾರದು.

ಕರಿಮೆಣಸು ಧಾರಣೆ:

ಕೊಯಿಲಿನ ಸಮಯ ಸಹಜವಾಗಿ ಬೆಲೆ ಕೆಳಕ್ಕೆ ಬರುತ್ತದೆ. ಆದರೂ ಇಂದು ಮತ್ತೆ ಸ್ವಲ್ಪ ಏರಿಕೆ ಆಗಿದೆ. ಹಾಗೆಂದು ಇದು ತೀರಾ ದೊಡ್ಡ ಇಳಿಕೆ ಅಲ್ಲ. ಕ್ಯಾಂಪ್ಕೋ ಉತ್ತಮ ಗುಣಮಟ್ಟದ  ಮೆಣಸಿಗೆ 50000  ದರ ನಮೂದಿಸಿರುತ್ತದೆ. ಖಾಸಗಿಯವರು ಗುಣಮಟ್ಟ ಹೆಚ್ಚಾಗಿ ಗಮನಿಸದೆ ಸರಾಸರಿ ಕ್ವಿಂಟಾಲು. 48500-49000 ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ಕೊಯಿಲು ಎಲ್ಲಾ ಮುಗಿದ ನಂತರ ಜೂಲೈ ಆಗಸ್ಟ್ ತಿಂಗಳಲ್ಲಿ ಮತ್ತೆ ದರ ಏರಿಕೆ ಆಗಬಹುದು.ಈ ವರ್ಷ ಇಡೀ ಕರ್ನಾಟಕದಲ್ಲಿ 25% ದಷ್ಟು ಬೆಳೆ ಕಡಿಮೆ ಇದೆ ಎಂಬ ವರ್ತಮಾನ ಇದೆ. ಹಾಗಾಗಿ ಬೆಲೆ ಏರಬಹುದು. ಗುಣಮಟ್ಟದ ಮೆಣಸಿನ ಉತ್ಪಾದನೆಗೆ ಗಮನ ಕೊಡಿ.

 • ಕಾರ್ಕಳ:300.00-500.00
 • ಮೂಡಿಗೆರೆ:300.00-505.00
 • ಸಕಲೇಶಪುರ:360.00-505.00
 • ಚಿಕ್ಕಮಗಳೂರು:490.00-500.00
 • ಮಂಗಳೂರು:300.00-495.00
 • ಹಾಸನ:390.00-490.00
 • ಕಳಸ:320.00-500.00
 • ಬಂಟ್ವಾಳ:300.00, 495.00,
 • ಬೆಳ್ತಂಗಡಿ: 483.60, 500.00,
 • ಸಾಗರ: 458.99, 472.00
 • ಸಿದ್ದಾಪುರ: 422.99, 471.10
 • ಸಿರ್ಸಿ: 491.39, 495.39,
 • ಯಲ್ಲಾಪುರ: 465.00, 481.00, 480.09
 • ತೀರ್ಥಹಳ್ಳಿ :505.00-510.00 sahyaadri.
 • ಕೊಪ್ಪ:450.00-500.00

ಕೊಬ್ಬರಿ ಧಾರಣೆ:ಕ್ವಿಂ.

ಕೊಬ್ಬರಿ ಎಣ್ಣೆ

ಕೊಬ್ಬರಿ ದರ ಸ್ವಲ್ಪ ಹಿಂದೆ ಬಂದಿದೆ. ಕೊರೋನಾ ಮೂರನೇ ಅಲೆ ದೇಶದಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಭಾರತಕ್ಕೆ ಸಾಗಾಣಿಕೆ ಕಷ್ಟಗಳಿಂದಾಗಿ ದರ ಹಿಂದೆ ಬಂದಿದೆ ಎನ್ನಲಾಗುತ್ತಿದೆ. ಸ್ವಲ್ಪ ಸಮಯದಲ್ಲಿ 18,000 ದಾಟಬಹುದು.

 • ಚೆನ್ನರಾಯಪಟ್ನ:ಎಣ್ಣೆ 4000-9500
 • ಮಂಗಳೂರು: ಎಣ್ಣೆ 6500-10500
 • ಪುತ್ತೂರು: ಎಣ್ಣೆ.7500-11000
 • ಅರಸೀಕೆರೆ:16000-16400
 • ತುಮಕೂರು:15200-16100
 • ತುರುವೇಕೆರೆ: 16700-16900
 • ತಿಪಟೂರು: 16711
 • ಹಸಿ ಕಾಯಿ ಕಿಲೊ.31-32

ಕಾಫೀ ಧಾರಣೆ:50 kg

ಕಾಫೀ ದರ ಕಳೆದ 20 ವರ್ಷಗಳಿಂದ ನೆಲಕಚ್ಚಿದ್ದು, ಈ ವರ್ಷ ಸ್ವಲ್ಪ ಮೇಲೆ ಬಂದಿದೆ. ಕಾಫಿಗೆ ಬೆಲೆ ಬಂದಿದೆ ಎನ್ನುತ್ತಾರೆ ಬೆಳೆಗಾರರು. ಆದರೆ ಅರೇಬಿಕಾ ಕಾಫೀ ಬಹಳಷ್ಟು ಮಳೆಗೆ ಹಾನಿಯಾಗಿದೆ. ಬೆಲೆ  ಹೆಚ್ಚಾದರೂ ಉತ್ಪತ್ತಿ ಕಡಿಮೆಯಾಗಿ ಅಲ್ಲಿಂದಲ್ಲಿಗೆ ಆಗಿದೆ. ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಬೆಲೆ ಚೆನ್ನಾಗಿದೆ.

 • ಅರೇಬಿಕಾ ಚೆರಿ:6800-7000
 • ಅರೇಬಿಕಾ ಪಾರ್ಚ್ ಮೆಂಟ್ 15400-15500
 • ರೋಬಸ್ಟಾ ಚೆರಿ:4200-4000
 • ರೋಬಸ್ಟಾ ಪಾರ್ಚ್ ಮೆಂಟ್:6900 -7000

ಶುಂಠಿ ದರ: ಕ್ವಿಂಟಾಲು

ಒಣ ಶುಂಠಿ ಕಣ ಮಾಡುವವರು ಕಡಿಮೆಯಾಗಿದ್ದಾರೆ . ಕಳೆದ ವರ್ಷದ ಒಣ ಶುಂಠಿ ದಾಸ್ತಾನು ಇದೆ.ಉತ್ತರ ಭಾರತದ ಬೇಡಿಕೆ ಕಡಿಮೆಯಾದ ಕಾರಣ ಹಸಿ ಶುಂಠಿ ದರ ಏರಿಕೆ ಆಗಿಲ್ಲ. ಇನ್ನು ದರ ಎರಿಕೆ ಸಾಧ್ಯತೆ ತುಂಬಾ ಕಡಿಮೆ.

 • ಬೇಲೂರು: ಹಸಿ ಶುಂಠಿ. 1000, 1000, 1000
 • ಚಿಕ್ಕಮಗಳೂರು: ಹಸಿ ಶುಂಠಿ. 900, 1000, 950
 • ಹಾಸನ ಹಸಿ ಶುಂಠಿ  800, 900, 900
 • ಶಿವಮೊಗ್ಗ: 1800, 2000, 1900
 • ಸಿರ್ಸಿ: 1500, 2000, 1600
 • ಎನ್ ಆರ್ ಪುರ:1200-1800-1600

ರಬ್ಬರ್ ದಾರಣೆ: ಕಿಲೊ.

ರಬ್ಬರ್ ಧಾರಣೆ ಸ್ಥಿರವಾಗಿದೆ. ಬೇಡಿಕೆ ಕಡಿಮೆಯಾಗಿದೆ. ದರ ಇನ್ನು ಬೇಸಿಗೆ ವರೆಗೆ ಹೀಗೆ ಮುಂದುವರಿಯಬಹುದು.

 • 1X Grade:169.00
 • RSS  4 151.00
 • RSS  5 158.00
 • RSS  3 158.50
 • LOT: 148.00
 • SCRAP:96.00-104.00

ಜಾಯೀ ಸಾಂಬಾರ:ಕಿಲೊ.

 • ಜಾಯೀ ಕಾಯಿ (with Shell)190-200
 • ಜಾಯೀ ಕಾಯಿ (without Shell) 275-300
 • ಜಾಯೀ ಪತ್ರೆ: 900-1000

ಅಡಿಕೆ, ಕೊಬ್ಬರಿ, ಮೆಣಸು, ಹಾಗೆಯೇ ಇನ್ನೂ ಕೆಲವು ಕೃಷಿ ಉತ್ಪನ್ನಗಳಿಗೆ ಈಗ ಇರುವ ಧಾರಣೆ ತಕ್ಕಮಟ್ಟಿಗೆ ಲಾಭದಾಯಕವೇ ಆಗಿದೆ. ದುರದೃಷ್ಟವಶಾತ್ ಉಳಿದಾ ಆಹಾರ ವಸ್ತುಗಳಾದ ಧವಸ ಧಾನ್ಯಗಳು, ಬೇಳೆ ಕಾಳುಗಳ ಬೆಲೆ ಮಾತ್ರ ಇನ್ನೂ ಲಾಭದಾಯಕವಾಗಿಲ್ಲ. ಈ ಕಾರಣದಿಂದ ಆಹಾರ ಬೆಳೆ ಕಡಿಮೆಯಾಗುತ್ತಿದೆ. ವಾಣಿಜ್ಯ ಬೆಳೆಗಳು ವ್ಯಾಪಿಸುತ್ತಿದೆ. ಇದು ಮುಂದೆ ಆತಂಕಕ್ಕೆ ಕಾರಣವಾಗಬಹುದು.

Leave a Reply

Your email address will not be published. Required fields are marked *

error: Content is protected !!