ದಿನಾಂಕ 22-10-2021 ನೇ ಶುಕ್ರವಾರ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹಾಗೂ ಕೆಂಪಡಿಕೆ ಮಾರುಕಟ್ಟೆ ಧಾರಣೆ ಹೀಗಿತ್ತು. ಕೆಂಪಡಿಕೆ ಜೊತೆಗೆ ಚಾಲಿಯೂ ಸ್ವಲ್ಪ ಏರಿಕೆ ಆಗುವ ಸೂಚನೆ ಕಂಡು ಬರುತ್ತಿದೆ.
ಖಾಸಗಿ ವ್ಯಾಪಾರಿಗಳು ಸ್ವಲ್ಪ ದರ ಏರಿಸಲು ಪ್ರಾರಂಭಿಸಿದರೆ ಮಾರುಕಟ್ಟೆ ಚೇತರಿಕೆಗೆ ಬರುತ್ತದೆ. ಖಾಸಗಿಯವರು ಸಪ್ಪೆಯಾದರೆ ಸಾಂಸ್ಥಿಕ ಖರೀದಿದಾರರು ಗುಣಮಟ್ಟ ಮುಂತಾದ ಕಾರಣದಿಂದ ಕಡಿಮೆ ದರಕ್ಕೆ ಖರೀದಿಸುತ್ತಾರೆ. ಖಾಸಗಿ ವ್ಯಾಪಾರಿಗಳ ಸ್ಪರ್ಧೆಯಿಂದ ಮಾತ್ರ ಅಡಿಕೆ ಧಾರಣೆಯಲ್ಲಿ ಸಂಚಲನ ಉಂಟಾಗುತ್ತದೆ ಎಂಬುದು ಹಿಂದಿನಿಂದಲೂ ನಡೆದು ಬಂದ ಪ್ರತೀತಿ. ನಿನ್ನೆ ತನಕ ಖಾಸಗಿಯವರ ಉತ್ಸಾಹ ಸ್ವಲ್ಪ ಕಡಿಮೆ ಇತ್ತು. ನಿನ್ನೆಮತ್ತೆ ಸ್ವಲ್ಪ ಏರಿಕೆ ದರದಲ್ಲಿ ಖರೀದಿ ಪ್ರಾರಂಭಿಸಿದ್ದಾರೆ.
ಶಿರಸಿಯಲ್ಲಿಯೂ ನಿನ್ನೆ ಚಾಲಿ ಗರಿಷ್ಟ ರೂ. 47599 ಮತ್ತು ಸರಾಸರಿ 46724 ದರಕ್ಕೆ ಖರೀದಿ ಆಗಿದೆ. ಯಲ್ಲಾಪುರದಲ್ಲಿ 47829, 46289 ಇತ್ತು. ಸಿದ್ದಾಪುರದಲ್ಲಿ 47639, 47399 ಇತ್ತು. ಇದು ಕಳೆದ ಸೋಮವಾರಕ್ಕೆ 19-10-2021 ಕ್ಕೆ ಹೋಲಿಸಿದರೆ ರೂ. 1000 ದಷ್ಟು ಹೆಚ್ಚಾಗಿದೆ. ಇದು ಕರಾವಳಿಯ ಅಡಿಕೆಯ ಮೇಲೆ ಇನ್ನೊಂದೆರಡು ದಿನದಲ್ಲಿ ಪರಿಣಾಮ ಬೀರಿ ಇಲ್ಲಿಯೂ ಕ್ವಿಂಟಾಲಿಗೆ 500-1000 ತನಕ ಹೆಚ್ಚಳ ಆಗಬಹುದು.
ಕೆಂಪು ರಾಶಿ ಹೊಸನಗರದಲ್ಲಿ ನಿನ್ನೆ ರೂ. ಗರಿಷ್ಟ 48929 ಸರಾಸರಿ ;47839 ಇತ್ತು. ಭದ್ರಾವತಿ ಗರಿಷ್ಟ 48499 ಸರಾಸರಿ 47673 ಇತ್ತು. ಶಿವಮೊಗ್ಗ ರಾಶಿ ಗರಿಷ್ಟ ರೂ. 47599 ಸರಾಸರಿ 47100 ಯಲ್ಲಿ ಖರೀದಿ ನಡೆದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ರೂ. 2000 ಹೆಚ್ಚಾಗಿದೆ.
ಊರು- ದಿನಾಂಕ- ವಿಧ – ಅವಕ – ಕನಿಷ್ಟ ದರ- ಗರಿಷ್ಟ ದರ – ಸರಾಸರಿ ದರ.
ಬಂಟ್ವಾಳ: 22/10/2021, Coca, 18, 10000, 25000, 22500
BANTWALA, 22/10/2021, New Variety, 47, 25000, 50000, 46000
BANTWALA, 22/10/2021, Old Variety, 6, 46000, 51500, 49000
ಬೆಳ್ತಂಗಡಿ: 22/10/2021, New Variety, 43, 32000, 50000, 48000
BELTHANGADI, 22/10/2021, Old Variety, 176, 42950, 51500, 49500
ಬಧ್ರಾವತಿ: 22/10/2021, Rashi, 621, 46166, 48499, 47673
ಚೆನ್ನಗಿರಿ: 21/10/2021, Rashi, 960, 46599, 47199, 46886
ಚಿತ್ರದುರ್ಗ: 22/10/2021, Api, 2, 46629, 47059, 46879
CHITRADURGA, 22/10/2021, Bette, 95, 39619, 40003, 39849
CHITRADURGA, 22/10/2021, Kempugotu, 170, 30209, 30610, 30400
CHITRADURGA, 22/10/2021, Rashi, 50, 46139, 46569, 46389
ದಾವಣಗೆರೆ: 22/10/2021, Rashi, 313, 37569, 48509, 42980
GUBBI, 18/10/2021, Other, 17, 35000, 38000, 38000
HOLALKERE, 18/10/2021, Rashi, 197, 44631, 51201, 47582
HONNALI, 21/10/2021, Rashi, 15, 45699, 45699, 45699
ಹೊಸನಗರ: 22/10/2021, Chali, 27, 32899, 44899, 42889
HOSANAGAR, 22/10/2021, Kempugotu, 18, 33099, 38499, 37699
HOSANAGAR, 22/10/2021, Rashi, 489, 44399, 48929, 47839
ಕಾರ್ಕಳ: 22/10/2021, Old Variety, 19, 46000, 50000, 48000
KARKALA, 21/10/2021, New Variety, 1, 35000, 42500, 38000
ಕುಮಟಾ: 22/10/2021, Chippu, 30, 35019, 40109, 39569
KUMTA, 22/10/2021, Coca, 20, 20189, 32589, 31869
KUMTA, 22/10/2021, Factory, 200, 11089, 19811, 19389
KUMTA, 22/10/2021, Hosa Chali, 225, 43569, 47610, 47019
ಕುಂದಾಪುರ: 22/10/2021, Hale Chali, 41, 44000, 50000, 49600
KUNDAPUR, 21/10/2021, Hosa Chali, 2, 30000, 42500, 41500
MANGALURU, 18/10/2021, Coca, 18, 26000, 30000, 28000
ಪುತೂರು: 22/10/2021, Coca, 325, 10500, 26000, 18250
PUTTUR, 22/10/2021, New Variety, 78, 35500, 50000, 42750
SAGAR, 21/10/2021, Bilegotu, 31, 23339, 37889, 34899
SAGAR, 21/10/2021, Chali, 205, 43299, 45609, 44509
SAGAR, 21/10/2021, Coca, 9, 15500, 39109, 36499
SAGAR, 21/10/2021, Kempugotu, 3, 30899, 36699, 33099
SAGAR, 21/10/2021, Rashi, 51, 37199, 48109, 46899
SAGAR, 21/10/2021, Sippegotu, 2, 9789, 24299, 23489
ಶಿವಮೊಗ್ಗ: 22/10/2021, Bette, 1, 44009, 50069, 48530
SHIVAMOGGA, 22/10/2021, Gorabalu, 92, 16865, 37389, 36200
SHIVAMOGGA, 22/10/2021, New Variety, 8, 45599, 47599, 47129
SHIVAMOGGA, 22/10/2021, Rashi, 612, 43569, 47599, 47100
SHIVAMOGGA, 22/10/2021, Saraku, 12, 50009, 73896, 65500
ಸಿದ್ದಾಪುರ: 22/10/2021, Bilegotu, 26, 34199, 41699, 39809
SIDDAPURA, 22/10/2021, Chali, 108, 44299, 47639, 47399
SIDDAPURA, 22/10/2021, Coca, 12, 24609, 36208, 33899
SIDDAPURA, 22/10/2021, Kempugotu, 3, 26099, 34089, 33899
SIDDAPURA, 22/10/2021, Rashi, 13, 40099, 47009, 46819
SIDDAPURA, 22/10/2021, Tattibettee, 1, 39219, 41499, 39219
SIRA, 18/10/2021, Other, 230, 9000, 50000, 45789
ಶಿರಸಿ: 22/10/2021, Bette, 6, 34521, 45699, 40485
SIRSI, 22/10/2021, Bilegotu, 26, 20181, 46239, 41669
SIRSI, 22/10/2021, Chali, 154, 39009, 47599, 46724
SIRSI, 22/10/2021, Rashi, 16, 40699, 47999, 46590
TIRTHAHALLI, 17/10/2021, Bette, 28, 40166, 48312, 47199
TIRTHAHALLI, 17/10/2021, EDI, 7, 39000, 46099, 45799
TIRTHAHALLI, 17/10/2021, Gorabalu, 7, 32166, 36072, 35509
TIRTHAHALLI, 17/10/2021, Rashi, 51, 40009, 46399, 45899
TIRTHAHALLI, 17/10/2021, Saraku, 13, 44519, 74530, 68754
TUMAKURU, 21/10/2021, Rashi, 96, 43500, 45600, 44500
ಯಲ್ಲಾಪುರ: 22/10/2021, Api, 1, 51779, 51779, 51779
YELLAPURA, 22/10/2021, Bilegotu, 16, 34299, 40777, 38399
YELLAPURA, 22/10/2021, Chali, 152, 41959, 47829, 46289
YELLAPURA, 22/10/2021, Coca, 23, 22069, 32122, 28601
YELLAPURA, 22/10/2021, Kempugotu, 1, 29619, 35101, 33490
YELLAPURA, 22/10/2021, Rashi, 41, 45000, 50399, 48119
YELLAPURA, 22/10/2021, Tattibettee, 9, 36869, 44000, 41800
ಬೆಳೆಗಾರರು ಮುಂದಿನ ವಾರದ ತನಕ ಸ್ವಲ್ಪ ಕಾದು ಮಾರಾಟ ಮಾಡುವುದು ಸೂಕ್ತ.
ಕರಿಮೆಣಸು ಧಾರಣೆ ಮತ್ತೆ ಏರಿಕೆ:
ನಿನ್ನೆ 22-10-2021 ರಂದು ಕ್ಯಾಂಪ್ಕೋ ಮೆಣಸಿನ ದರವನ್ನು ಕ್ವಿಂಟಾಲಿಗೆ 500 ಏರಿಸಿದೆ. ಇಂದು ಮತ್ತೆ ಪುನಹ ರೂ.500 ಏರಿಕೆ ಮಾಡಿದೆ. ಖಾಸಗಿ ವ್ಯಾಪಾರಿಗಳು 43,00೦ತನಕವೂ ಖರೀದಿ ಮಾಡಿದ್ದಾರೆ. ಮೂಡಿಗೆರೆಯಲ್ಲಿ ಗರಿಷ್ಟ 43500 ಕ್ಕೆ ವ್ಯಾಪಾರ ಆಗಿದೆ.ಶಿರಸಿಯಲ್ಲಿ ಗರಿಷ್ಟ 45499 ಸರಾಸರಿ 44197 ಯಲ್ಲಾಪುರ ಗರಿಷ್ಟ 44000 ಸರಾಸರಿ 42599 ಸಿದ್ದಾಪುರ ಗರಿಷ್ಟ 44909 ಸರಾಸರಿ 44809 ಖರೀದಿ ನಡೆದಿದೆ.
ಕಾಫೀ ಧಾರಣೆ:
ಅರೇಬಿಕಾ ಪಾರ್ಚ್ ಮೆಂಟ್:50kg 12750
ಅರೆಬಿಕಾ ಚೆರಿ:kg 130
ರೋಬಸ್ಟಾ ಪಾರ್ಚ್ ಮೆಂಟ್:50kg 6000
ರೋಬಸ್ಟಾ ಚೆರಿ: kg 135
ಅಡಿಕೆ ಬೆಳೆಗಾರರು ಈ ವಾರ ಕಾದು, ಮುಂದಿನ ವಾರದ ಎರಡು ಮೂರು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿಕೊಂಡು ಸ್ವಲ್ಪ ಸ್ವಲ್ಪ ಮಾರಾಟ ಮಾಡಿ.
ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ.