ಚಾಲಿಗೆ ಈಗ ಇರುವ ಬೇಡಿಕೆಯನ್ನು ನೊಡಿದರೆ ಇದು 55,000 ಮುಟ್ಟಿದರೂ ಅಚ್ಚರಿ ಇಲ್ಲ. ದರ 50,000 ಆಯಿತು ಇನ್ನು ಬೀಳಲೂ ಬಹುದು ಎಂದು ಹೆದರಿ ಮಾರಾಟ ಮಾಡಬೇಡಿ. ಚಾಲಿಗೆ ಬೇಡಿಕೆ ಇದೆ. ಆಮದು ನಡೆಯುವುದಿಲ್ಲ. ಕಳೆದ ವರ್ಷದ ದಾಖಲೆಯನ್ನು ಈ ವರ್ಷ ಮೀರಿ ದರ ಮೇಲೆ ಹೋಗಬಹುದು ಎನ್ನುತ್ತಾರೆ. ಅಡಿಕೆ ಮಾರುಕಟ್ಟೆಯ ಲಕ್ಷಣ ನೋಡುವಾಗ ಇನ್ನೊಮ್ಮೆ ದೊಡ್ಡ ಆಟ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
- ಈ ದಿನದ (16-09-2021)ಮಾಹಿತಿಯಂತೆ ಕರಾವಳಿಯ ಪಟೋರಾ ಅಡಿಕೆಗೂ ಕೆಳಮಟ್ಟದ ಅಡಿಕೆಗೂ ಕ್ವಿಂಟಾಲು 45,000 -46,000 ತನಕ ಖರೀದಿ ನಡೆಯುತ್ತಿದೆ.
- ಶಿರಸಿ, ಸಿದ್ದಾಪುರಗಳಲ್ಲಿ ಖಾಸಗಿ ವ್ಯಾಪಾರಿಗಳು ನಿನ್ನೆಯಿಂದಲೇ ಉತ್ತಮ ಗುಣಮಟ್ಟದ ಚಾಲಿಯನ್ನು ಕ್ವಿಂಟಾಲಿಗೆ 50,000 ಕ್ಕೆ ಖರೀದಿ ಮಾಡಲಾರಂಭಿಸಿದ್ದಾರೆ.
- ಇಂದು ಸಾಗರದಲ್ಲಿ ಕ್ಯಾಂಪ್ಕೋ ಕ್ವಿಂಟಾಲು ಚಾಲಿಯನ್ನು 46,000-46,500 ದರದಲ್ಲಿ ಖರೀದಿ ನಡೆಸಿದೆ.
- ಹಾಗೆಯೇ ಗಾತ್ರ ಮತ್ತು ಗುಣಮಟ್ಟ ಕಡಿಮೆ ಇರುವ ಪ್ರದೇಶಗಳಲ್ಲಿ ಖಾಸಗಿಯವರು ಚಾಲಿಯನ್ನು ಇಂದು 47,000 ಕ್ಕೆ ಖರೀದಿ ಮಾಡಿದ್ದಾರೆ.
- ಚಾಲಿಗೆ ಹೆಸರುವಾಸಿಯಾದ ಪ್ರದೇಶಗಳಾದ ವಿಟ್ಲ, ಬದಿಯಡ್ಕ, ಬೆಳ್ಳಾರೆಯಲ್ಲಿ ಕೆಲವರು ಈಗಾಗಲೇ 50,000 ಕ್ಕೆ ಖರೀದಿ ಮಾಡಲಾರಂಭಿಸಿದ್ದಾರೆ.
- ಖಾಸಗಿಯವರ ಖರೀದಿ ಭರಾಟೆ ಬಲವಾಗುತ್ತಿದ್ದು, ಚಾಲಿಯ ದರ ಈ ನವರಾತ್ರೆ ಮುಗಿಯುವುದರೊಳಗೆ 52,250 ದಿಂದ 55,000 ತನಕವೂ ತಲುಪುವ ಬಹಳಷ್ಟು ಸಾಧ್ಯತೆಗಳು ಕಂಡು ಬರುತ್ತಿವೆ.
ಬೇಡಿಕೆ ಹೆಚ್ಚಾಗುತ್ತಿದೆ:
- ಕರಾವಳಿಯ ಚಾಲಿ ಅಡಿಕೆ ಬಹಳ ಉತ್ತಮ ಗುಣಮಟ್ಟದಾಗಿದ್ದು, ಇದಕ್ಕೆ ಯಾವಾಗಲೂ ಉತ್ತರ ಭಾರತದಲ್ಲಿ ಬೇಡಿಕೆ ಇದ್ದೇ ಇರುತ್ತದೆ.
- ಈ ತನಕ ಅಮದು ಮಾಡುತ್ತಾ ಸ್ಥಳೀಯ ಅಡಿಕೆಯ ಬೆಲೆಯನ್ನು ಏರದಂತೆ ತಡೆಯಲಾಗುತ್ತಿತ್ತು.
- ಈಗ ಕೊರೋನಾ ಕಾರಣ ಹಾಗೆಯೇ ಕೇಂದ್ರ ಸರಕಾರದ ಬಿಗಿ ಕ್ರಮದಿಂದ ಯಾರಿಗೂ ಆಮದು ಮಾಡಲು ಸಾಧ್ಯವಾಗುತ್ತಿಲ್ಲ.
- ಕೆಲವರು ಆಮದು ಮಾಡಲು ಮುಂದಾದರೂ ಅದು ಸಿಕ್ಕಿಬಿದ್ದು, ಈಗ ಯಾರೂ ಆ ಕೆಲಸಕ್ಕೆ ಮುಂದಾಗುತ್ತಿಲ್ಲವಂತೆ.
- ಪಾನ್ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಚಾಲಿ ಅಡಿಕೆಯನ್ನು ಬಳಸಲಾಗುತ್ತಿದ್ದು, ಬೇಡಿಕೆ ಚೆನ್ನಾಗಿದೆ.
- ಈ ಹಿಂದೆಯೂ ಇದೇ ರೀತಿ ಬೇಡಿಕೆ ಇತ್ತಾದರೂ ರೈತರಿಗೆ ಅದು ಗೊತ್ತಾಗಿರಲಿಲ್ಲ.
- ಕಳೆದ ವರ್ಷದ ದರ ಏರಿಕೆ ಬೆಳೆಗಾರರಿಗೆ ಮಾರುಕಟ್ಟೆ ಬೇಡಿಕೆಯ ಪೂರ್ಣ ಚಿತ್ರಣವನ್ನು ನೀಡಿದೆ.
- ಬೆಳೆಗಾರರು ಯಾರೂ ಅಡಿಕೆ ಬಿಡುತ್ತಿಲ್ಲ. ಇದು ಕಾರಾವಳಿ ಮಾತ್ರವಲ್ಲ.
- ಎಲ್ಲಾ ಕಡೆಗಳಲ್ಲೂ ಚಾಲಿಯನ್ನು ಬಿಡುವವರಿಲ್ಲ. ಹಾಗಾಗಿ ದರ ಇಳಿಕೆ ಸಾಧ್ಯತೆ ಕಡಿಮೆ.
- ಅಡಿಕೆಯ ಭಾರೀ ಬೇಡಿಕೆಯಿಂದಾಗಿ ಮಿಕ್ಸಿಂಗ್ ಗಾಗಿ ಕೆಂಪು ಮಾಡುವ ಕಡೆಗಳ ಚಾಲಿಯನ್ನೂ ಉತ್ತಮ ದರದಲ್ಲಿ ಖರೀದಿ ಮಾಡಲಾಗುತ್ತಿದೆ.
ಕೆಂಪು ಸಹ ಏರಬಹುದು ಎಂಬ ವದಂತಿಗಳಿವೆ:
- ಕೆಂಪಡಿಕೆ ಮಾಡುವ ಕಡೆ ಮೊನ್ನೆ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಖರೀದಿ ಮಾಡುತ್ತಿದ್ದರು.
- ದರ ಸ್ವಲ್ಪ ಕಡಿಮೆ ಬಂದ ತಕ್ಷಣ ಅದನ್ನು 6900 ಕ್ಕೆ ಇಳಿಸಲಾಯಿತು.
- ಈ ದರಕ್ಕೆ ಖರೀದಿ ಮಾಡಿದರೆ ಒಂದು ಕ್ವಿಂಟಾಲು ಅಡಿಕೆ ತಯಾರಾಗುವಾಗ ಅದಕ್ಕೆ 44,000 ಖರ್ಚು ಬೀಳುತ್ತದೆ.( 1 ಕ್ವಿಂಟಾಲು ಹಸಿ ಅಡಿಕೆ ಸುಲಿದು, ಬೇಯಿಸಿ ಒಣಗಿದಾಗ 15-16 ಕಿಲೊ ಕೆಂಪಡಿಕೆ ಸಿಗುತ್ತದೆ).
- ಲಾಭ ಇತ್ಯಾದಿ ಸೇರುವಾಗ ಕನಿಷ್ಟ 50,000 ಕೆಂಪಡಿಕೆಗೆ ಬೆಲೆ ಸಿಗಬೇಕಾಗುತ್ತದೆ.
- ಇವೆಲ್ಲಾ ವಿದ್ಯಮಾನಗಳು ಪೆಂಪಡಿಕೆ ದರವನ್ನು ಮೇಲೆ ಒಯ್ಯುವಂತೆ ಕಾಣುತ್ತದೆ.
- ಮಂಡಿಗಳಲ್ಲಿ ಖರೀದಿಗೆ ಯಾರೂ ಹಿಂದೇಟು ಹಾಕುತ್ತಿಲ್ಲ.
- ಇಂದು X ಅತ್ಯಧಿಕ ದರದಲ್ಲಿ ಖರೀದಿ ಮಾಡಿದರೆ ನಾಳೆ Y ಖರೀದಿಸುತ್ತಾರೆ.
- ಆಗ X ಸುಮ್ಮನೆ ಇರುತ್ತಾನೆ. ಮರುದಿನ Y ತೆಪ್ಪಗೆ ಇದ್ದು, X ಖರೀದಿ ಮಾಡುತ್ತಾನೆ.
- ಖರೀದಿದಾರರಲ್ಲಿ ಒಗ್ಗಟ್ಟು ಕಾಣಿಸುತ್ತದೆ.
- ಎಷ್ಟೇ ಅಡಿಕೆ ಬಂದರೂ ಖರೀದಿಸುವಷ್ಟು ಫಂಡಿಂಗ್ ನಡೆಯುವಂತೆ ಕಾಣಿಸುತ್ತಿದೆ.
- ಇದೆಲ್ಲಾ ಕಾರಣಗಳಿಂದ ರೈತರ ಕೈಯಿಂದ ಅಡಿಕೆಯನ್ನು ಬಾಚಿಕೊಳ್ಳಲು ವ್ಯಾಪಾರಿಗಳು ಮುಂದಾಗಿರುವಂತೆ ಕಾಣಿಸುತ್ತಿದೆ.
- ಎಲ್ಲಾ ಬೆಳವಣಿಗೆ ಕಾಣುವಾಗ ಈಗ ಕೆಂಪಡಿಕೆಯ ದರವನ್ನು ಸ್ವಲ್ಪ ಇಳಿಕೆ ಮಾಡಿದ್ದು, ರೈತರು ದಾಸ್ತಾನು ಇಟ್ಟ ಅಡಿಕೆಯನ್ನು ಹೊರತೆಗೆಯುವಂತೆ ಮಾಡುವುದಕ್ಕಾಗಿಯೋ ಎನೋ ಅನ್ನಿಸುತ್ತದೆ.
- ಕೆಂಪಡಿಕೆ ಬೆಳೆಗಾರರು ಒಮ್ಮೆಲೇ ಎಲ್ಲಾ ಅಡಿಕೆಯನ್ನು ಹತಾಶೆಯಲ್ಲಿ ಮಾರಾಟ ಮಾಡಲು ಮುಂದಾಗಬೇಡಿ.
- ದರ ಭಾರೀ ಕುಸಿತ ಆಗದು. ಸ್ವಲ್ಪ ಸಮಯ ಹೀಗೆ ಮುಂದುವರಿದು ಮತ್ತೆ 60,000 ಬಂದರೂ ಅಚ್ಚರಿ ಇಲ್ಲ.
- ಯಾಕೆಂದರೆ ಈಗಾಗಲೇ ದರ ಬೀಳಲು ಪ್ರಾರಂಭವಾದಾಗಿನಿಂದ ಖರೀದಿ ಮಾಡಿದ ಸ್ಟಾಕನ್ನು ಕ್ಲೀಯರ್ ಮಾಡಬೇಕಲ್ಲವೇ?
ಇನ್ನು ಎರಡು ವರ್ಷ ತನಕವೂ ದರ ಕುಸಿಯದು:
- ಹೊಸತಾಗಿ ಭಾರೀ ಪ್ರಮಾಣದಲ್ಲಿ ತೋಟ ವಿಸ್ತರಣೆ ಆದದ್ದು, ಕಳೆದ ಎರಡು ವರ್ಷಗಳಿಂದ.
- ಅದು ಫಸಲಿಗೆ ಆರಂಭವಾಗಲು ಇನ್ನು 2 ವರ್ಷ ಬೇಕು.
- ಅಷ್ಟರ ತನಕ ಚಾಲಿಗೆ ಅಗಲೀ, ಕೆಂಪಡಿಕೆಗೆ ಆಗಲಿ ದರ ಭರೀ ಕುಸಿಯದು.
- ಬೆಳೆಗಾರರಿಗೆ ತಮ್ಮ ಅಡಿಕೆಯ ಮೌಲ್ಯ ಗೊತ್ತಾಗಿದೆ.
- ಬಹುತೇಕ ಬೆಳೆಗಾರರು ವರ್ಷ – ಎರಡು ವರ್ಷ ತನಕವಾದರೂ ತಾಳಿಕೊಂಡು ದಾಸ್ತಾನು ಇಡುವ ಮಟ್ಟದಲ್ಲಿದ್ದಾರೆ.
- ಬಹಳ ಜಾಗರೂಕತೆಯಲ್ಲಿ ಮಾರುಕಟ್ಟೆಯ ಗತಿಯನ್ನು ನೋಡಿಕೊಂಡು ಮಾರಾಟ ಮಾಡುವ ಸ್ಥಿತಿಯಲ್ಲಿ ಇರುವ ಕಾರಣ ಖರೀದಿದಾರರಲ್ಲಿ ಓವರ್ ಸ್ಟಾಕ್ ಆಗುವ ಸಾಧ್ಯತೆ ಇಲ್ಲ.
- ಕೆಲವು ಪ್ರದೇಶಗಳ ಅಡಿಕೆ ತೋಟ ಈಗಾಗಲೇ ಅನುತ್ಪಾದಕವಾಗುತ್ತಿದೆ.
- ಇಲ್ಲೆಲ್ಲಾ ಹೊಸತಾಗಿ ತೋಟ ಏಳುತ್ತಿದೆಯಶ್ಟೇ. ಇವೆಲ್ಲಾ ಇಳುವರಿ ಬರಲಾರಂಭಿಸಿದರೆ, ಹಾಗೆಯೇ ತಮಿಳುನಾಡು, ಆಂದ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ನೆಟ್ಟ ಅಡಿಕೆ ಸಸಿಗಳು ಫಸಲಿಗೆ ಪ್ರರಂಭವಾದಾಗ ದರ ಕುಸಿತ ಸಾಧ್ಯತೆ ಇಲ್ಲದಿಲ್ಲ.
ರೈತರಿಗೆ ಅಡಿಕೆಗೆ ಬೆಲೆ ಬಂದುದು ಒಂದೆಡೆ ಖುಷಿ. ಅದರ ಪರಿಣಾಮ ಎಲ್ಲಾ ಇನ್ಪುಟ್ ಕ್ಷೇತ್ರಗಳ ಮೇಲೆ ಆಗಿದೆ.ಕೆಲಸಗಾರರ ಮಜೂರಿ ಹೆಚ್ಚಾಗಿದೆ. ಕೃಷಿ ಒಳಸುರಿಗಳ ಬೆಲೆಯೂ ಹೆಚ್ಚಾಗಿವೆ.ಅಡಿಕೆ ದರ ಕುಸಿತ ಆದಾಗ ಅದು ಇಳಿಕೆ ಆಗುವುದಿಲ್ಲ. ಬೆಳೆಗಾರರು ಈಗ ಬಂದ ಹೆಚ್ಚುವರಿ ಆದಾಯವನ್ನು ಐಷಾರಾಮಿ ಖರ್ಚುಗಳ ಮೂಲಕ ಮುಗಿಸಿಕೊಳ್ಳಬೇಡಿ. ಮುಂದೆ ಕೆಲವೇ ವರ್ಷಗಳಲ್ಲಿ ಕಷ್ಟ ಕಾಲವೂ ಬರಬಹುದು. ಈ ಯೋಚನೆಯೂ ಒಂದು ಬದಿಯಲ್ಲಿ ಇರಲಿ.
One thought on “ಅಡಿಕೆ ಮಾರಾಟ ಮುಂದೂಡಿ- ದರ ಭಾರೀ ಏರುವ ಲಕ್ಷಣ ಇದೆ.”