ಚಿಗುರು ಉಳಿಸಿದರೆ – ಮಾವು ಉತ್ತಮ ಫಲ ಕೊಡುತ್ತದೆ.

ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಿದಾಗ ಹೀಗೆ ಹೂ ಬಿಡುತ್ತದೆ

ವಾಣಿಜ್ಯಿಕವಾಗಿ ಮಾವಿನ ಬೇಸಾಯ ಮಾಡುವವರು  ಮಾವಿನ ಹಣ್ಣು ಬೆಳೆಯುವ ತನಕ ಕನಿಷ್ಟ  8-10 ಸಲ  ಕೀಟನಾಶಕ ರೋಗ ನಾಶಕ ಸಿಂಪಡಿಸುತ್ತಾರೆ. ಇದನ್ನು ಮಾಡದೇ ಇದ್ದರೆ  ಮಾವಿನ ಬೇಸಾಯವೇ ವ್ಯರ್ಥ. ಯಾವುದೇ ಒಂದು ಬೆಳೆಯನ್ನು ವಾಣಿಜ್ಯಿಕವಾಗಿ ಮಾಡುವಾಗ ಅದಕ್ಕೆ ಕೀಟಗಳು ರೋಗಗಳು ಹೆಚ್ಚು. ನಿಯಂತ್ರಣ ಕೈಗೊಳ್ಳದೇ ಇದ್ದರೆ ಅದರ ಹಾನಿ ಹೆಚ್ಚಾಗುತ್ತಾ ಇರುತ್ತದೆ. ಇಂತದ್ದರಲ್ಲಿ ಒಂದು ಮಾವಿನ ಚಿಗುರು ಕೊರಕ ಹುಳು. ಚಿಗುರು ಸಸ್ಯ ಬೆಳವಣಿಗೆಯ ಪ್ರಮುಖ ಹಂತ. ಅದಕ್ಕೆ ತೊಂದರೆ ಆದಾಗ ಸಸ್ಯ ಬೆಳವಣಿಗೆ ಕುಂಠಿತವಾಗಿ , ಮರ ಬೆಳೆಯುವುದಿಲ್ಲ.

  • ಮಾವಿನ ಮರದಲ್ಲಿ ಚಿಗುರು ಬರುವಾಗ ಎಲ್ಲಿದ್ದರೂ ಅಲ್ಲಿಗೆ ಓಡಿ ಬರುವ ಈ ಕೀಟವನ್ನು ಅಗತ್ಯವಾಗಿ ನಿಯಂತ್ರಣ ಮಾಡಲೇ ಬೇಕು.
  • ಒಂದು ವರ್ಷ ಹಾಗೆ ಬಿಟ್ಟರೆ ಅದು ಮುಂದಿನ ವರ್ಷದಿಂದ ಖಾಯಂ ಆಗಿ ಬಿಡುತ್ತದೆ.
  • ಅದಕ್ಕಾಗಿಯೇ ಕೀಟ ರೋಗ ನಿಯಂತ್ರಣ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು.
  • ಸಾಧ್ಯವಾದಷ್ಟು ಪ್ರಾರಂಭಿಕ ಹಂತದಲ್ಲಿ ನಿಯಂತ್ರಣ ಕೈಗೊಳ್ಳಬೇಕು.
ಮಾವಿನ ಮರದಲ್ಲಿ ಇಂತಹ  ಹೂ ಬರಬೇಕಾದರೆ ಚಿಗುರು ಕೊರಕ ನಿಯಂತ್ರಣ ಅಗತ್ಯ.
ಮಾವಿನ ಮರದಲ್ಲಿ ಇಂತಹ ಹೂ ಬರಬೇಕಾದರೆ ಚಿಗುರು ಕೊರಕ ನಿಯಂತ್ರಣ ಅಗತ್ಯ.

ಮಾವಿನ ಚಿಗುರು ಕೊರಕ:

ಚಿಗುರು ಕೊರಕ ಹುಳದ ಬಾಧೆ
ಚಿಗುರು ಕೊರಕ ಹುಳದ ಬಾಧೆ
  • ಮಾವಿನ ಮರದಲ್ಲಿ ಚಿಗುರು ಬರುವಾಗ ಆ ಚಿಗುರಿನ ಒಳಗೆ ಒಂದು ಕೀಟ ಒಳ ಹೊಕ್ಕು ಅದರ ಒಳ ಭಾಗದ ಅಂಗಾಶವನ್ನು ತಿನ್ನುತ್ತದೆ.
  • ಇದನ್ನು ಟೆಂಡರ್ ಶೂಟ್ ಬೊರರ್ Tender shoot borer  ಎನ್ನುತ್ತಾರೆ.
  • Chlumetia transvrsa  ಎಂಬ ಹೆಸರಿನ  ಒಂದು ಪತಂಗ ಮಳೆಗಾಲ ಮುಗಿಯುವ ಈ ಸಮಯದಲ್ಲಿ ಅಥವಾ ಇದಕ್ಕೂ ಸ್ವಲ್ಪ ಮುಂಚೆ ಮಾವಿನ ಎಲೆಯಲ್ಲಿ ಮೊಟ್ಟೆ ಇಡುತ್ತದೆ.
ADVERTISEMENT 38
ADVERTISEMENT
  • ಇದು ಮೊಟ್ಟೆ ಒಡೆದಾಗ  ಹುಟ್ಟುವ ಮರಿಗಳು ಎಳೆಯ ಚಿಗುರಿನಲ್ಲಿ ಕುಳಿತು, ತೂತು ಕೊರೆದು ಒಳಗಿನ  ಭಾಗವನ್ನು ತಿನ್ನುತ್ತಾ ಹೋಗುತ್ತವೆ.
  • ಸೂಕ್ಷ್ಮವಾಗಿ ಗಮನಿಸಿದಾಗ ಎಳೆಯ  ಭಾಧಿತ ಚಿಗುರುಗಳಲ್ಲಿ  ತೂತುಗಳು ಕಂಡು ಬರುತ್ತವೆ.
  • ಈ ಹುಳುಗಳ ಬಾಧೆಯಿಂದ ಎಳೆ ಚಿಗುರುಗಳು ಒಣಗಿ ಆ ಭಾಗದ ಮೊಳಕೆ (Shoot bud) ಹಾಳಾಗಿ ಬೆಳವಣಿಗೆ ಕುಂಠಿತವಾಗುತ್ತದೆ.
  • ಒಂದು ವೇಳೆ ಬೇಗ ಚಿಗುರಿ ನಂತರ ಹೂ ಮೊಗ್ಗು ಬರುವುದಿದ್ದರೂ ಅದಕ್ಕೆ ತೊಂದರೆಯಾಗುತ್ತದೆ.
  • ಇದು ಮಾವು ಬೆಳೆಯಲಾಗುವ ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಕೀಟವಾಗಿದ್ದು, ಮರವನ್ನು ಏಳಿಗೆಯಾಗಲು ಬಿಡುವುದಿಲ್ಲ.
ಚಿಗುರು ಕೊರೆಯುವ ಹುಳ
ಚಿಗುರು ಕೊರೆಯುವ ಹುಳ

ಪರಿಹಾರ :

ಚಿಗುರು ಕೊರಕ ಈ ತೂತಿನಲ್ಲಿ ಪ್ರವೇಶವಾಗುತ್ತದೆ.
ಚಿಗುರು ಕೊರಕ ಈ ತೂತಿನಲ್ಲಿ ಪ್ರವೇಶವಾಗುತ್ತದೆ.
  • ಈ ಕೀಟ ತೊಂದರೆ ಮಾಡದೇ ಇರುವುದು ತುಂಬಾ ಕಡಿಮೆ. ಇದು ಒಂದು ಎರಡು ಮರ ಇದ್ದಲ್ಲಿಯೂ ಉಂಟಾಗುತ್ತದೆ.
  • ಪ್ಲಾಂಟೇಶನ್  ಗಳಲ್ಲಿಯೂ ಇರುತ್ತದೆ. ಪ್ಲಾಂಟೇಶನ್ ಹೊಂದಿದವರು ಕಾಲ ಕಾಲಕ್ಕೆ ತಕ್ಕಂತೆ ಕೀಟ ನಾಶಕ ರೋಗನಾಶಕ ಸಿಂಪಡಿಸುವ ಕಾರಣ ಇದನ್ನು ಹತೋಟಿಯಲ್ಲಿಡುತ್ತಾರೆ.
  • ಆದರೆ ಒಂದೆರಡು ಮರ ಇರುವ ಕಡೆ ಇದನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.
  • ಇದು ಮರದಲ್ಲಿ ಹೂವಾಗಿ ಕಾಯಿಯಾಗಲು ಅತೀ ದೊಡ್ಡ ಆಡ್ಡಿಯಾಗಿರುತ್ತದೆ.
  • ಮಾವಿನ ಮರ ಉಳ್ಳವರೆಲ್ಲಾ ಈ ಸಮಸ್ಯೆಯನ್ನು ಗುರುತಿಸಿರಬಹುದು.
  • ಇದಕ್ಕೆ ರಾಸಾಯನಿಕ ಕೀಟನಾಶಕ ಸಿಂಪರಣೆ ಒಂದೇ ಪರಿಹಾರ.
  • ಆದ ಕಾರಣ ಮಾವು ಬೆಳೆಗಾರರು  ಮಾವಿನ ಸಸಿಗೆ ಮಳೆಗಾಲ ಮುಕ್ತಾಯದ ಹಂತದಲ್ಲಿ ಈ ಕೀಟದ ಹತೋಟಿಗಾಗಿ ಒಮ್ಮೆಇಮಿಡಾಕ್ಲೋಫ್ರಿಡ್ ಅಥವಾ ಲಾಂಡಾಸೈಹೋಥ್ರಿನ್ ಕೀಟನಾಶಕವನ್ನ್ನು ಸಿಂಪಡಿಸಲೇ ಬೇಕಾಗುತ್ತದೆ.
  • ಮಾರುಕಟ್ಟೆಯಲ್ಲಿ  ಬೇರೆ ಕೀಟನಾಶಕವೂ ಇದೆ.
ಕೊರಕ ಹುಳು ಬಾಧಿಸಿದಾಗ ಹೀಗೆ ಚಿಗುರು ಮುರಿಯುತ್ತದೆ
ಕೊರಕ ಹುಳು ಬಾಧಿಸಿದಾಗ ಹೀಗೆ ಚಿಗುರು ಮುರಿಯುತ್ತದೆ
  • ಇದನ್ನು  ಕನಿಷ್ಟ  2 ಸಲ ಸಿಂಪರಣೆ ಮಾಡುವುದರಿಂದ ಇದರ ಹತೋಟಿ ಸಾಧ್ಯ.
  • ಒಮ್ಮೆ ಮಾಡಿದರೆ ಮುಂದಿನ ವರ್ಷ ಕಡಿಮೆಯಾಗುವ ಸಾಧ್ಯತೆಯೂ ಇದೆ.
  • ಒಂದು ಮರದ ಒಂದು ವರ್ಷದ ಚಿಗುರನ್ನು ಉಳಿಸಿದರೆ ಅದರ ಬೆಳೆವಣಿಗೆ ಗಣನೀಯವಾಗಿ ಹೆಚ್ಚಾಗುತ್ತದೆ.
  • ನಿರ್ಲಕ್ಷ್ಯ ಮಾಡಿದರೆ  ಬೆಳವಣಿಗೆ ಕುಂಠಿತವಾಗುತ್ತದೆ.

ಯಾವಾಗ ಸಿಂಪರಣೆ ಮಾಡಬೇಕು:

  • ಕೀಟಗಳ ಹಾವಳಿ ಸಾಮಾನ್ಯವಾಗಿ ಮಳೆಗಾಲ ಮುಗಿಯುವ ಸಪ್ಟೆಂಬರ್ ತಿಂಗಳಲ್ಲಿ ಹೆಚ್ಚು.
  • ಈ ಸಮಯದಲ್ಲಿ ಪತಂಗಗಳ ಸಂಖ್ಯೆ ಹೆಚ್ಚು. ಚಿಗುರು ಮೊಗ್ಗು ಮೂಡುವ ಮೊದಲೇ ಸಿಂಪರಣೆ ಮಾಡಬೇಕು.
  • ಚಿಗುರು ಮೊಗ್ಗು ಹೊರಗೆ ಕಾಣುವಾಗ ಮತ್ತೊಮ್ಮೆ ಸಿಂಪರಣೆ ಮಾಡಬೇಕು.
  • ಆಗ ಮಾತ್ರ ಚಿಗುರು  ಉಳಿಯುತ್ತದೆ.
  • ಒಂದು ವೇಳೆ ಸಿಂಪರಣೆ ಮಾಡದೆ ಇದ್ದರೆ 50% ಕ್ಕೂಹೆಚ್ಚು ಫಸಲು ನಷ್ಟವಾಗುತ್ತದೆ.
  • ಮಾವು ಹೂ ಬಿಟ್ಟು ಕಾಯಿ ಕೊಯ್ಯುವ ತನಕ ಕನಿಷ್ಟ 8ಬಾರಿ ಕೀಟನಾಶಕ ಸಿಂಪರಣೆ ಮಾಡಬೇಕಾಗುತ್ತದೆ.

ಮಾವಿನ ಸಸಿ ನೆಟ್ಟವರು ಬರೇ ನೆಟ್ಟು ಬೆಳೆಸಿದರೆ ಅದರಷ್ಟಕ್ಕೇ ಫಲ ಕೊಡುತ್ತದೆ ಎಂದು ತಿಳಿಯುವಂತಿಲ್ಲ. ಸಾವಯವ ವಿಧಾನದಲ್ಲಿ  ನಿಯಂತ್ರಣ ಆಗುತ್ತದೆ  ಎಂದಿದ್ದರೆ ಅದನ್ನೇ ಅನುಸರಿಸಬಹುದು. ಒಟ್ಟಿನಲ್ಲಿ ಈ ಕೀಟದ ನಿಯಂತ್ರಣ ಆಗತ್ಯವಾಗಿ ಮಾಡಲೇ ಬೇಕು.
end of the article:————————————————————–
search words: mango pest # mango shoot borer # pest management in mango#  seasonal management pests# mango garden management #

Leave a Reply

Your email address will not be published. Required fields are marked *

error: Content is protected !!