hollavenur

ಸಾಗುವಾನಿ (ತೇಗ)ಮರದ ಗೆಲ್ಲು ಕಡಿದರೆ ಏನಾಗುತ್ತದೆ?

ಮರಮಟ್ಟುಗಳಲ್ಲಿ ಚಿನ್ನದ ಮರವೆಂದೇ ಖ್ಯಾತವಾದ ಸಾಗುವಾನಿ (ತೇಗ) ಮರವನ್ನು ನೇರವಾಗಿ ಬೆಳೆಯಲಿ ಎಂದೋ, ಇತರ ಉದ್ಡೆಶಗಳಿಗಾಗಿಯೋ ಗೆಲ್ಲು ಸವರುತ್ತೇವೆ. ಗೆಲ್ಲು ಸವರುವುದರಿಂದ ಮರದ ಗುಣಮಟ್ಟ ಏನಾಗುತ್ತದೆ ಎಂಬುದರ ಪೂರ್ಣ ಮಾಹಿತಿ. ಬಹಳ ಜನ ನಮ್ಮ ಹಲಸಿನ ಮರ ಸಾಗುವಾನಿ ಮರ ಹೆಬ್ಬಲಸಿನ ಮರದಲ್ಲಿ ಒಡಕು( ಬಿರುಕು) ಬಂದು ಯಾವುದಕ್ಕೂ ಆಗದಂತಾಯಿತು ಎಂದು ಹೇಳುತ್ತಾರೆ.  ಇದಕ್ಕೆ ಕಾರಣ ನಾವೇ ಹೊರತು ಮರ ಅಲ್ಲ. ಸಾಗುವಾನಿ ಇರಲಿ, ಇನ್ಯಾವುದೇ ನಾಟಾ ಉದ್ದೇಶದ ಮರಮಟ್ಟುಗಳು  ಇರಲಿ ನಾವು ತಿಳಿದೋ ತಿಳಿಯದೆಯೋ  ಗೆಲ್ಲುಗಳನ್ನು…

Read more
ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ.

ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೂತನ ಮುಖ್ಯ ಮಂತ್ರಿಗಳ ಕೊಡುಗೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರೇ  ರೈತರಿಗೆ ಕೊಡುವುದರಲ್ಲಿ ಎತ್ತಿದ  ಕೈಯಾದರೆ ಈಗಿನ ಹೊಸ ಮುಖ್ಯಮಂತ್ರಿಗಳಾಗಿ ಅಧಿಕಾರ  ಸ್ವೀಕರಿಸಿದ  ಬಸವರಾಜ ಬೊಮ್ಮಾಯಿಯವರೂ ಅವರಿಗಿಂತ ಏನೂ ಕಡಿಮೆ ಇಲ್ಲ. ಇಂದು (28-07-2021) ರಂದು ಕರ್ನಾಟಕದ ಮುಖ್ಯಮಂತ್ರಿ  ಸ್ಥಾನವನ್ನೇರಿದ  ಶ್ರೀ ಬಸವರಾಜ್ ಬೊಮ್ಮಾಯಿಯವರು  ರೈತರಿಗೆ ಏನು ಕೊಡುವುದು ಎಂದು ಯೋಚಿಸಿ ಹೊಸತಾಗಿ ಯಾರೂ ಕೊಡದೆ ಇರುವ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ರೂ.1000 ಕೋಟಿಯನ್ನು  ಮಿಸಲಿಟ್ಟು ಹೊಸ ದಾಖಲೆ ಮಾಡಿದ್ದಾರೆ. ಶ್ರೀಯುತ  ಎಸ್…

Read more
ಉತ್ತಮ ಚಾಲಿ ಅಡಿಕೆ

ಅಡಿಕೆಗೆ ಮತ್ತೆ ಬೆಲೆ ಏರಿಕೆ ಪ್ರಾರಂಭ- ಇಂದು ದೊಡ್ಡ ಜಂಪ್.

ಕಳೆದ ಮೂರು ನಾಲ್ಕು ದಿನಗಳಿಂದ ಬೆಳಗ್ಗೆ ಗೂಬೆ ಕೂಗಲು ಪ್ರಾರಂಭವಾಗಿದೆ. ಚಾಲಿ 43,000 ದಲ್ಲಿದ್ದ ಬೆಲೆ 45,000.ಕ್ಕೆ ಏರಿದೆ. ಮುನ್ಸೂಚನೆಗಳು ಅಡಿಕೆ ಧಾರಣೆಯನ್ನು ಮೇಲೆ ಒಯ್ಯುವ ಸಂಭವವಿದೆ. ಚಾಲಿ ಅಡಿಕೆಗೆ ಉತ್ತರ ಭಾರತದಿಂದ ಬೇಡಿಕೆ ಪ್ರಾರಂಭವಾಗಿದೆ ಎಂಬ ವದಂತಿ ಇದೆ. ಕೊರೋನಾ ಲಾಕ್ ಡೌನ್ ಸಮಯದಿಂದಲೂ ವ್ಯಾಪಾರಿಗಳಲ್ಲಿ  ದಾಸ್ತಾನು ಉಳಿದಿದೆ. ಆ ಕಾರಣದಿಂದ ಬೆಲೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ. ಚಾಲಿ ಅಡಿಕೆಗೆ ಜೂನ್ ತಿಂಗಳ ಕೊನೆಗೆ ಬೆಲೆ ಏರಿಕೆ ಪ್ರಾರಂಭವಾದುದು, ಜುಲೈ ಮೊದಲ…

Read more
ತಾಜಾ ಸೊಪ್ಪು ತರಕಾರಿ ಮಾರುವವರು

ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳುವುದು ಹೀಗೆ.

ಯಾವುದೇ ಕೆಲಸ ಮಾಡಬೇಕಾರೂ ಅದು ನಮ್ಮ ಮೈಮೇಲೆ ಬರಬಹುದೇ ಎಂದು ಒಂದಲ್ಲ ಹತ್ತಾರು ಸಲ ಯೋಚಿಸಬೇಕು. ನಾವು ಕಾಲಹರಣಕ್ಕಾಗಿ ಮಾಡುವ ಕೆಲವು ಕೆಲಸಗಳು ನಮ್ಮ ವೃತ್ತಿಗೇ ತೊಂದರೆ ಕೊಡುವಂತಾಗಬಾರದು.ಕೃಷಿಕರು ಬೆಳೆಯುವ ಉತ್ಪನ್ನಗಳಿಗೆ ಅಪಪ್ರಚಾರ ಮಾಡಿ ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳಬಾರದು. ಕಳೆದ ಎರಡು ದಿನಗಳಿಂದ ನಾವೆಲ್ಲಾ ಚಾಚೂ ತಪ್ಪದೆ ವೀಕ್ಷಿಸುವ ವಾಟ್ಸ್ ಅಪ್, ಫ಼್ಹೇಸ್ ಬುಕ್ ಮುಂತಾದವುಗಳಲ್ಲಿ ಹರಿದಾಡುವ ಒಂದು ವೀಡಿಯೋ ಬಗ್ಗೆ ಇಲ್ಲಿ ಹೇಳಲಿಚ್ಚಿಸುತ್ತೆವೆ. ಇದು ಸೊಪ್ಪು ತರಕಾರಿಗಳನ್ನು ಬಾಡದಂತೆ ಹಚ್ಚ ಹಸುರಾಗಿ ಉಳಿಸಲು…

Read more
ಬೆಳೆ ವಿಮೆಯ ನಿರೀಕ್ಷೆಯಲ್ಲಿ ರೈತ

ಬೆಳೆ ವಿಮೆ – ಅಗತ್ಯವಾಗಿ ಮಾಡಿಸಿ.

ಭಾರತ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (PMPBY or WBCIS) ರೈತರು ತಪ್ಪದೇ ಮಾಡಿಸಿಕೊಳ್ಳಿ ಮತ್ತು ಪ್ರಯೋಜನವನ್ನು ಪಡೆಯಿರಿ. ಕೃಷಿ ಮತ್ತು ಹವಾಮಾನ ಪರಸ್ಪರ ಹೊಂದಾಣಿಕೆಯಲ್ಲಿ ಮುಂದುವರಿದರೆ ಎಲ್ಲವೂ ಅನುಕೂಲಕರವಾಗಿಯೇ ಇರುತ್ತದೆ. ಆದರೆ ಯಾವ ರೈತನ ಕೈಯಲ್ಲೂ, ಯಾವ ಸರಕಾರದ ಕೈಯಲ್ಲೂ ಅದನ್ನು ಹೊಂದಾಣಿಕೆಗೆ ತರಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲವೂ ಸರಿ ಇರುತ್ತದೆ.ಇದು ನಮಗೆ ಅರಿವಿಗೆ ಬರುವುದಿಲ್ಲ. ಯಾವಾಗಲೂ ಏನೂ ಆಗಬಹುದು. ಆದ ಕಾರಣ ಎಷ್ಟೋ ನಷ್ಟ ಆಗುತ್ತದೆ.ಲಾಭವೂ ಆಗುತ್ತದೆ. ಹಾಗೆ…

Read more
farmer selling pumpkins

ಮುಂದಿನ ಹಂಗಾಮಿಗೆ ಬೆಳೆ ಯೋಜನೆ ಬದಲಾಯಿಸಿಕೊಳ್ಳಿ.

ರೈತರೇ ಮುಂದಿನ ವರ್ಷದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದು, ಕೆಲವು ಆಯ್ದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸಿ ಮುನ್ನಡೆಯಿರಿ. ಒಂದೆಡೆ ಕೊರೋನಾ ಮಹಾಮಾರಿ ಮನುಕುಲವನ್ನು ಅಟ್ಟಾಡಿಸುವಂತೆ ಕಾಣಿಸುತ್ತದೆ. ಇದು ಕಳೆದ ವರ್ಷಕ್ಕೆ ಮುಗಿಯಲಿಲ್ಲ, ಈ ವರ್ಷವೂ ವಕ್ಕರಿಸಿದೆ. ಇದು ಬೇಗ ಮುಗಿಯುವಂತೆ ಕಂಡು ಬರುವುದಿಲ್ಲಅ ಮುಂದೆ ಏನು ಎಂದು ಪ್ರಶ್ಣೆಯಾಗಿಯೇ ಇದೆ. ಹವಾಮಾನ ಸಹ ತನ್ನ ಮಾಮೂಲು ಚಕ್ರವನ್ನು ಬದಲಿಸಿದಂತಿದೆ. ಮುಂಗಾರು ಸಹ ಕೈಕೊಡಬಹುದೇನೋ ಅನ್ನಿಸುತ್ತಿದೆ. ಪೆಟ್ರೋಲ್ –ಡೀಸೆಲ್ ಬೆಲೆ ಗಗನಕ್ಕೇರಿದೆ.ಸರಕಾರವೂ…

Read more
Onion crop

ಈರುಳ್ಳಿ ಬೆಳೆಯುವವರು ಗಮನಿಸಬೇಕಾದ ಅಂಶಗಳು.

ಮುಂಗಾರು ಮಳೆ ಬೇಗ ಪ್ರಾರಂಭವಾಗುವುದರಲ್ಲಿದೆ. ಈರುಳ್ಳಿ ಬೆಳೆಗಾರರು ಈಗಲೇ ಸಿದ್ದತೆ ಮಾಡಿಕೊಳ್ಳುವುದು ಉತ್ತಮ. ಈರುಳ್ಳಿ ಬೆಳೆ ರಾಜ್ಯದ ಚಿತ್ರದುರ್ಗ, ಗದಗ, ಬಿಜಾಪುರ, ಬಾಗಲಕೊಟೆ ಮುಂತಾದ ಕಡೆ ಮುಂಗಾರು ಹಂಗಾಮಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಬೆಳೆಗಾರರು ಮಣ್ಣಿನಲ್ಲಿ ಇರುವ ಪೋಷಕಾಂಶಗಳನ್ನು ತಿಳಿದುಕೊಂಡು, ಅದಕ್ಕನುಗುಣವಾಗಿ ಪೋಷಕಾಂಶಗಳನ್ನು ಕೊಡಬೇಕು. ಹೆಚ್ಚು ಬೇಡಿಕೆ ಇರುವ ತಳಿಗಳನ್ನು ಆಯ್ಕೆ ಮಾಡಿ. ರೋಗ ಕೀಟ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಸುರಕ್ಷಿತ ಬೆಳೆ ವಿಧಾನಗಳನ್ನು ಆಳವಡಿಸಿಕೊಂಡು ಬೆಳೆದರೆ ಲಾಭವಾಗುತ್ತದೆ. ಇತ್ತೀಚೆಗೆ ಮಳೆ ಮತ್ತು ವಾತಾವರಣ ಕೃಷಿಗೆ ಪೂರಕವಾಗಿಲ್ಲ. ಆದ ಕಾರಣ…

Read more
error: Content is protected !!