ತುಂಟ ಹಸುಗಳನ್ನು ಸಾಧು ಮಾಡುವ ಕೆಲವು ವಿಧಾನಗಳು.

ಕೆಲವು ನಾಟಿ ಹಸುಗಳು ತುಂಟ ಸ್ವಭಾವದವುಗಳಾಗಿರುತ್ತವೆ. ಹಾಲು ಕರೆಯುವಾಗ ಹಿಂದೆ ಹೋದರೆ ಕಾಲಿನಿಂದ ಒದೆಯುವುದು, ಹಾಯುವುದು ಹಾಗೆಯೇ ಹುಚ್ಚುಕಟ್ಟುವುದು ಮಾಡುವುದು ಸಾಮಾನ್ಯ. ಇದನ್ನು  ಸಾಧು ( ಹದಕ್ಕೆ) ತರಲು ಕೆಲವು ಉಪಾಯಗಳನ್ನು ಅನುಸರಿಸಬೇಕು. ಮನೆ ಬಳಕೆಯ ಹಾಲಿಗೆ ಹಸು ಸಾಕುವವರಿಗೆ ನಾಟಿ ಅಥವಾ ನಾಟಿಯಲ್ಲಿ ಮಿಶ್ರ ತಳಿಯ ಹಸುಗಳು ಉತ್ತಮ. ಇವುಗಳನ್ನು ಸಾಕುವುದು ಸುಲಭ. ರೋಗ ರುಜಿನಗಳಿಲ್ಲ. ಕಳೆ ಗಿಡಗಳಿಂದಾದಿಯಾಗಿ ಬಹುತೇಕ ಮೇವನ್ನು ತಿನ್ನುತ್ತದೆ.  ಅಧಿಕ ಆಹಾರ ಬಯಸದ ಕಾರಣ ಸುಮಾರು 7-8  ಕರು ಹಾಕುತ್ತದೆ. ಕೆಲವೊಂದು…

Read more
cows in open field grazing

ಹಸುಗಳ ಆರೋಗ್ಯ ಮತ್ತು ನಾವು ಕೊಡುವ ಆಹಾರ.

ಈಗಲೇ ಕೆಲವು ವೈದ್ಯರು ಹಾಲು ಬಿಡಿ. ಆರೋಗ್ಯವಾಗಿರುತ್ತೀರಿ ಎನ್ನುತ್ತಿದ್ದಾರೆ. ಮುಂದೆ ಎಲ್ಲರೂ ಹೀಗೇ ಹೇಳುತ್ತಾ ಬಂದರೆ  ಜೀವನೋಪಾಯಕ್ಕಾಗಿ ಹಸು ಸಾಕುವವರಿಗೆ ಭಾರೀ ನಷ್ಟವಾದೀತು. ಹಸುಗಳನ್ನು ಸಾಕುವಾಗ ಅದನ್ನು ಸಾಕಿದ ಖರ್ಚು ನಮಗೆ ಬರಬೇಕು. ಲಾಭ ಆಗಬೇಕು. ಈ ಉದ್ದೇಶದಲ್ಲಿ ನಾವು ಹಸುವೊಂದರ ಜೀವದೊಂದಿಗೆ ಆಟ ಆಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಹಸುಗಳಿಗೆ ಬೇಕೋ ಬೇಡವೋ ನಮಗೂ ಗೊತ್ತಿಲ್ಲ. ಶಿಫಾರಸು ಮಾಡುವವರಿಗೂ ಗೊತ್ತಿಲ್ಲ. ಹೆಚ್ಚು ಹೆಚ್ಚು ಪಶು ಆಹಾರ, ಖನಿಜ ಮಿಶ್ರಣ  ಹಾಗೆಯೇ ವಿಟಮಿನ್ ಮುಂತಾದವುಗಳನ್ನು ಕೊಟ್ಟು ಹಸುವಿನ ಆರೋಗ್ಯವನ್ನು…

Read more
honey comb

ಜೇನಿನಲ್ಲಿ ಕಲಬೆರಕೆ ಯಾಕೆ ಆಗುತ್ತಿದೆ?

ಒಬ್ಬ ಜೇನು  ಸಾಕಾಣಿಕೆ ಮಾಡುವವನು ಅಂಗಡಿಯ ಜೇನನ್ನು ಉಚಿತವಾಗಿ ಕೊಟ್ಟರೂ ಖರೀದಿ ಮಾಡಲಾರ. ಅವನಿಗೆ ಗೊತ್ತಿದೆ ಯಾವುದು ಶುದ್ಧ ಜೇನು ಎಂದು. ಜನರಿಗೆ ಅರೋಗ್ಯ ಕಳಕಳಿ ಹೆಚ್ಚುತ್ತಿದೆ. ಅವರು ಆರೋಗ್ಯಕ್ಕಾಗಿ ಮಾಡುವುದೆಲ್ಲಾ ಅನಾರೋಗ್ಯವನ್ನು ಆಹ್ವಾನಿಸುತ್ತದೆ. ಜನ ಮಂಗ ಆಗುತ್ತಾರೆಯೇ ಹೊರತು ಮಂಗ ಮಾಡುವುದಲ್ಲ. ಜೇನು ಸಂತತಿ ಕಡಿಮೆಯಾಗಿದೆ. ಪರಾಗದಾನಿಗಳು ಇಲ್ಲದೆ ಬೆಳೆ ನಷ್ಟವಾಗುತ್ತಿದೆ ಎಂಬುದಾಗಿ ಬಲ್ಲವರು  ಎಚ್ಚರಿಸುತ್ತಿದ್ದಾರೆ. ಕಾಡು ಕಡಿಮೆಯಾಗಿದೆ. ಪುಷ್ಪಗಳು ಇಲ್ಲದಾಗಿದೆ. ಆಹಾರ ಇಲ್ಲದೆ ಜೇನಿನ ಸಾಕಾಣಿಕೆಗೆ ತೊಂದರೆಯಾಗಿದೆ ಎಂದು ಎಲ್ಲಾ ಕಡೆಯಲ್ಲೂ ಎಚ್ಚರಿಕೆಗಳು ಕೇಳಿ…

Read more
good cow structure

ಇದು ಉತ್ತಮ ಹಸುವಿನ ಲಕ್ಷಣ

ಹೈನುಗಾರಿಕೆಯ ಯಶಸ್ಸು ಹಸುವಿನ ಆಯ್ಕೆಯಿಂದ ಮೊದಲ್ಗೊಳ್ಳುತ್ತದೆ. ಪ್ರತೀಯೊಂದು ಸಸ್ಯ, ಪ್ರಾಣಿ, ಮನುಷ್ಯರಿಗೆ  ವಂಶಗುಣದಲ್ಲೇ ಕೆಲವು ವಿಶೇಷತೆಗಳು ಇರುತ್ತವೆ. ಆದರ ಮೇಲೆ  ಅವುಗಳ ಉತ್ಪಾದಕತೆಯು ನಿಂತಿರುತ್ತದೆ. ಕೃಷಿಕರಲ್ಲಿ ಬಹುತೇಕ ಮಂದಿ ಹೈನುಗಾರಿಕೆ ಅವಲಂಬಿತರು. ಹಸು ಕೊಳ್ಳುವುದು, ಕೊಡುವುದು ಇದ್ದೇ ಇರುತ್ತದೆ. ಹೀಗಿರುತ್ತಾ ಕೊಳ್ಳುವ ಹಸು ಹೇಗಿರಬೇಕು ಎಂಬ ಬಗ್ಗೆ  ಪ್ರತೀಯೊಬ್ಬರಿಗೂ ಗೊತ್ತಿರಲೇ ಬೇಕು. ಹಸು ಕೊಳ್ಳುವುದು ಒಂದು ಪರೀಕ್ಷೆ: ಯಶಸ್ವೀ  ಹೈನುಗಾರಿಕೆಯ ಆಧಾರಸ್ಥಂಬವಾದ ಹಸು- ಕರುವನ್ನು ರೈತರು ತಮ್ಮ ಮನೆಯಲ್ಲೇ ತಳಿ ಸುಧಾರಣೆಯ ಮೂಲಕ ಪಡೆಯುವುದು ಎಲ್ಲದಕ್ಕಿಂತ ಉತ್ತಮ….

Read more
Farmer showing the sheep

ತಿಂಗಳಿಗೆ 30,000 ಸಂಪಾದನೆ ಮಾಡುವ ಸರಳ ವೃತ್ತಿ.

ಜನ ಕೆಲಸ ಇಲ್ಲ. ಸಂಪಾದನೆ ಇಲ್ಲ. ಸರಕಾರ ನಮ್ಮ ನೆರವಿಗೆ ಬರಬೇಕು. ನಮಗೆ ಅದು ಕೊಡಬೇಕು. ಇದು ಕೊಡಬೇಕು ಎಂದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡಬೇಕಾಗಿಲ್ಲ. ಅತೀ ಕಡಿಮೆ ಬಂಡವಾಳದಲ್ಲಿ  ತಿಂಗಳಿಗೆ 30,000 ಸಂಪಾದನೆ ಮಾಡಬಹುದು. ಇದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಜಾನಕಲ್  ಸೇವನಗರ ಗ್ರಾಮದ  ಪ್ರಿಯಾಂಕ್ ಎಂಬ 22 ವರ್ಷದ  ಯುವಕ ಹೇಳುವ ಮಾತು. ಇವರು  ಬಿ ಬಿ ಎಂ ವ್ಯಾಸಂಗ ಮಾಡುತ್ತಲೇ ಟಗರು ಸಾಕಣೆ ಮಾಡಿ ತಿಂಗಳಿಗೆ 30,000 ರೂ ಸಂಪಾದನೆ ಮಾಡುತ್ತಿದ್ದಾರೆ….

Read more
ಪೆಟ್ಟಿಗೆಗೆ ಹಾಕಲು ಜೇನು ನೊಣ

ಜೇನು ಹಿಡಿಯಲು ಇದು ಸೂಕ್ತ ಸಮಯ.

ಬಹಳ ಜನ ನನಗೊಂದು ಜೇನು ಕುಟುಂಬ ಬೇಕು, ಹೇಗಾದರೂ  ಜೇನು ಸಾಕಬೇಕು ಎಂದು ಇಚ್ಚೆ ಪಡುತ್ತಾರೆ. ಜೇನು ಹಿಡಿಯುವುದು ಕಷ್ಟವಲ್ಲ. ಪಾಲನೆಯೂ ಕಷ್ಟದ್ದಲ್ಲ.  ಜೇನು ಹಿಡಿಯುವವರಿಗೆ ಅಗತ್ಯ ಬೇಕಾಗಿರೋದು ಧೈರ್ಯ  ಹಾಗೂ ತಾಳ್ಮೆ. ಹೊಸತಾಗಿ ಜೇನು ಕುಟುಂಬ ತರಲು, ಅಥವಾ ಹೊಸ ಕುಟುಂಬ ಪೆಟ್ಟಿಗೆಗೆ ಸೇರಿಸಲು  ದೀಪಾವಳಿ   ಸಮಯ  ಹೆಚ್ಚು ಸೂಕ್ತ. ಈ ಸಮಯದಲ್ಲಿ ಅವು ಕಷ್ಟ ಇಲ್ಲದೆ ಸೆಟ್ ಆಗುತ್ತವೆ. ಯಾಕೆ ಆ ಸಮಯ ಸೂಕ್ತ: ನಿರ್ದಿಷ್ಟ ಸಮಯದಲ್ಲಿ ಕೂಡಿಸಿದ ಜೇನು ಕುಟುಂಬಗಳು ನಿರ್ದಿಷ್ಟ ಸಮಯಕ್ಕೆ ಪಾಲಾಗುತ್ತವೆ, ಕುಟುಂಬ ಸಧೃಢವಾಗುತ್ತದೆ,…

Read more
ಉತ್ತಮ ಲಕ್ಷಣದ ಹಸು

ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.

ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು. ಹಾಲು ಇಳುವರಿ ಪರೀಕ್ಷೆ : ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು. ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು. ನಾಲ್ಕು ಮೊಲೆಗಳಿಂದ…

Read more
ಗ್ರಾಮೀಣ ಪಶು ಸಂಗೋಪನೆ

ಪಶು ಸಂಗೋಪನೆಯಿಂದ -ಆರೋಗ್ಯ ಮತ್ತು ಗೊಬ್ಬರದ ಲಾಭ.

ಹಿಂದಿನಿಂದಲೂ  ಕೃಷಿ ಮಾಡುವವರು  ಹಸು ಸಾಕಾಣಿಕೆ ಮಾಡುತ್ತಿದ್ದರು. ಈಗಲೂ ಹೆಚ್ಚಿನ ಜನ ಕೃಷಿಗೆ ಗೊಬ್ಬರ ಬೇಕು ಎಂಬ ಉದ್ದೇಶಕ್ಕಾಗಿ ಹಸು ಸಕಾಣೆ ಮಾಡುತ್ತಾರೆ. ಕೆಲವು ಜನ ಹಸು ಸಾಕಣೆ ಇಲ್ಲದೆ ಕೃಷಿ ಮಾಡಬಹುದು ಎನ್ನುವ ವಾದದವರೂ ಇದ್ದಾರೆ. ಮಣ್ಣಿನ ಫಲವತ್ತೆತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಅಗತ್ಯ. ಮಿತವ್ಯಯದಲ್ಲಿ ಸಾವಯವ ಗೊಬ್ಬರ ಆಗುವುದಿದ್ದರೆ ಅದು ಹಸುವಿನ ತ್ಯಾಜ್ಯಗಳಿಂದ ಮಾತ್ರ. ಅಲ್ಲದೆ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರಕ್ಕೂ ಹಸು ಸಾಕಾಣಿಕೆ ಅಗತ್ಯ. ಒಂದೇ ದಿನದಲ್ಲಿ ಗೊಬ್ಬರ ಆಗಬೇಕೇ,…

Read more
Local cow hallikar- ಕರ್ನಾಟಕದ ಸ್ಥಳಿಯ ತಳಿ ಹಳ್ಲಿ ಕಾರ್

ದೇಸೀಹಸು- ಪೌಷ್ಟಿಕ ಹಾಲಿನ ಖನಿ

ನಾವು ಹಾಲು ಕರೆಯುವಾಗ ಅದಕ್ಕೆ ಒಂದು ಸುವಾಸನೆ ಇರಬೇಕು. ಹಾಲು ಹಿಂಡಲು ಹೋಗುವಾಗ ವಾಸನೆ  ಉಂಟೇ  ಆ ಹಾಲೂ ವಾಸನೆಯದ್ದು. ಸ್ಥಳೀಯ ಹಸುವಿನ ಹಾಲು  ಹಿಂಡುವಾಗ ಒಂದು ಪರಿಮಳ ಇದೆ. ಯಾವ ಅಡ್ಡ ವಾಸನೆಯೂ  ಇಲ್ಲ. ಇದರ ರುಚಿ ಬಲ್ಲವನೇ ಬಲ್ಲ. ಮಕ್ಕಳಿಂದ ಹಿಡಿದು ವೃದ್ದಾಪ್ಯದಲ್ಲಿಯು ಅತ್ಯವಶ್ಯಕವಾಗಿ ಬಳಸುವ ಹಾಗು ಬಳಸಲೇಬೇಕಾದ ಆಹಾರ ಎಂದರೆ “ಹಾಲು ಹಾಗು ಹಾಲಿನಿಂದ ತಯಾರಿಸಿದ ಇತರೆ ಪದಾರ್ಥಗಳು”. ಹಾಲು ಒಂದು ಪರಿಪೂರ್ಣ  ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ…

Read more

ರೋಗ ನಿರೋಧಕ ಶಕ್ತಿ ಬೇಕೇ ? ಈ ಮೊಟ್ಟೆ ತಿನ್ನಿ.

ಕೋಳಿ  ಸಾಕುವವರಿಗೆ ಅದರ ಜೊತೆಗೆ ಕೆಲವು ಅಧಿಕ ಬೇಡಿಕೆ ಉಳ್ಳ, ಪಕ್ಷಿಗಳ ಸಾಕಾಣೆ ಮಾಡಬಹುದು. ಇವುಗಳಲ್ಲಿ ಗೌಗುಗನ ಹಕ್ಕಿ ಎಂಬುದು ಒಂದು. ಇದು ಮೊಟ್ಟೆಗೂ ಆಗುತ್ತದೆ. ಮಾಂಸಕ್ಕೂ ಆಗುತ್ತದೆ. ಸಣ್ಣ ಗಾತ್ರದ ಈ ಪಕ್ಷಿ ಅತೀ ಶೀಘ್ರ ಬೆಳವಣಿಗೆಯನ್ನು ಹೊಂದುತ್ತದೆ. ಇದರ ಮೊಟ್ಟೆ- ಮಾಂಸ ಎರಡೂ ಬಹಳ ಔಷದೀಯಗುಣ ಹೊಂದಿದೆ. ಇಂದಿನ  ಸಾಮಾಜಿಕ ಆರೋಗ್ಯ ಸಮಸ್ಯೆಗೆ ಇದು ಪರಿಹಾರವಾಗಬಲ್ಲದು.  ಗೌಜುಗನ ಹಕ್ಕಿ ಕಾಟುರ್ನಿಕ್ಸ್ ಕಾಟುರ್ನಿಕ್ಸ್ ಜಪೋನಿಕಾ (Coturnix Coturnix japonica) ಎಂಬ ಪ್ರಭೇಧಕ್ಕೆ ಸೇರಿದೆ. 11 ನೇ…

Read more
error: Content is protected !!