
Pest Control (ಕೀಟ ನಿಯಂತ್ರಣ)


ತೆಂಗಿನ ಸಸಿ ಬೆಳವಣಿಗೆಗೆ ಇದು ದೊಡ್ದ ತಡೆ.
ಮುಸ್ಸಂಜೆ ಮತ್ತು ಕತ್ತಲೆಗೆ ದೀಪದ ಬೆಳಕಿಗೆ ಬಂದು ಬಿಳುವ ದುಂಬಿಗಳಲ್ಲಿ ಕುರುವಾಯಿ ಕೀಟ ಒಂದು.ಈ ದುಂಬಿ ತೆಂಗಿನ ಬೆಳೆಗಾರರ ಅತೀ ದೊಡ್ದ ಶತ್ರು. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು. ಯಾಕೆಂದರೆ ಕುರುವಾಯಿ ಅಷ್ಟು ಹಾನಿ ಮಾಡುತ್ತದೆ.. ಆದ ಕಾರಣ ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು. ಬಾಧೆಯ ಲಕ್ಷಣ: ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ…

ತಿನ್ನಲು ಸಿಗದ ಈ ಹಣ್ಣುಗಳು- ಏನು ಪರಿಹಾರ?
ಒಂದು ವರ್ಷ ಈ ಹಣ್ಣುಗಳು ತಿನ್ನಲು ಸಿಕ್ಕರೆ ಮತ್ತೆ ಇಲ್ಲವೇ ಇಲ್ಲ. ರಾಶಿ ರಾಶಿ ಹಣ್ಣುಗಳಾಗುತ್ತವೆ. ಆದರೆ ಎಲ್ಲವೂ ಬುಡದಲ್ಲಿ ಬಿದ್ದು, ಹಾಳೇ ಆಗುವುದು. ಇದು ನಮ್ಮ ಬಹುತೇಕ ರೈತರಲ್ಲಿ ಇರುವ ರೋಸ್ ಆಪಲ್ ಹಾಗೂ ವುಡ್ ಆಪಲ್ ಎಂಬ ಬಹು ಬಗೆಯ ಬೇಸಿಗೆ ಹಣ್ಣುಹಂಪಲುಗಳ ಗತಿ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಧಾನ ಇಲ್ಲಿದೆ. ಇದು ಹಣ್ಣು ನೊಣದಿಂದ ಆಗುವ ತೊಂದರೆ , ಇದನ್ನು ಪ್ರಾರಂಭಿಕ ಹಂತದಲ್ಲಿ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು ಉಳಿಸಬಹುದು….

ಹಾಗಲಕಾಯಿ ಯಾಕೆ ಕೊಳೆಯುತ್ತದೆ?
ಹಾಗಲಕಾಯಿ ಹಾಳಾಗುವುದಕ್ಕೆ ಕಣ್ಣು ದೃಷ್ಟಿ ಕಾರಣ ಎಂದು ಕೆಲವರು ಚಪ್ಪಲಿ, ಕಸಬರಿಕೆ ಕಟ್ಟುತ್ತಾರೆ. ಆದರೂ ಕಾಯಿ ಹಾಳಾಗುವುದು ನಿಲ್ಲುವುದಿಲ್ಲ. ಕೊನೆಗೆ ನಮ್ಮಲ್ಲಿ ಹಾಗಲಕಾಯಿ ಆಗುವುದಿಲ್ಲ ಎಂದು ತೀರ್ಮಾನಕ್ಕೆ ಬರುತ್ತಾರೆ. ಇದು ಯಾವ ಕಣ್ಣು ದೃಷ್ಟಿಯೂ ಅಲ್ಲ. ಕಾರಣ ಒಂದು ಕೀಟ ಅಷ್ಟೇ.. ಹಾಗಲಕಾಯಿಯ ಕಹಿಗೂ ಕೀಟ ಬರುತ್ತದೆಯೇ ? ಇದು ಎಲ್ಲರ ಪ್ರಶ್ಣೆ. ನಿಜವಾಗಿಯೂ ಕಹಿ ಇದ್ದರೂ ಬರುತ್ತದೆ. ಸಿಹಿ ಇದ್ದರೂ ಬರುತ್ತದೆ. ಅದು ಹಣ್ಣು ತರಕಾರಿಗಳಿಗೆ ತೊಂದರೆ ಮಾಡುವ ಒಂದು ಕೀಟ. ಯಾವ ಕೀಟ: ಜೇನು…

ತೆಂಗಿನ ಸಸಿ ಕಳೆಗುಂದಿ ಸಾಯುವುದಕ್ಕೆ ಇದು ಕಾರಣ.
ಬಹಳಷ್ಟು ಕೃಷಿಕರ ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು? ನಮ್ಮ ಹಿರಿಯರು ತೆಂಗಿನ ಮರದ ಯಾವುದೇ ಹಸಿ ಭಾಗ ಕಡಿಯಬಾರದು ಎಂದಿದ್ದಾರೆ. ಹಾಗೆಯೇ ತೆಂಗಿನ ಮರ ಕಡಿಯಬಾರದು ಎಂದು ತಾಕೀತು ಮಾಡಿದ್ದಾರೆ. ಇದು ಯಾಕೆ ಗೊತ್ತೇ? ಒಂದು ಮರ ಕಡಿದರೆ ಅದರ ಫಲವಾಗಿ ನಾಲು ಮರ ಹೋಗುತ್ತದೆ. ಕಾರಣ ಮರದ ರಸದ ಆ ವಾಸನೆಯನ್ನು ಹುಡುಕಿಕೊಂಡು ಕೆಂಪು ಮೂತಿ ಹುಳ ಬರುತ್ತದೆ.ಅದು ಯಾವುದಾದರೂ ಮರದಲ್ಲಿ ತನ್ನ ಸಂತಾನಾಭಿವೃದ್ದಿ ಮಾಡುತ್ತದೆ. ತೆಂಗಿನ ಮರಗಳಿಗೆ ಕುರುವಾಯಿ…

ಆಡಿಕೆ ಗರಿ ಹಳದಿಯಾಗಲು ಇದು ಕಾರಣ.
ಸಸ್ಯಗಳಿಗೆ ಉತ್ತಮ ಬಿಸಿಲು ದೊರೆತಾಗ ಅವುಗಳ ಎಲೆಗಳು ಹೆಚ್ಚು ಹೆಚ್ಚು ಉಸಿರಾಟ ಕ್ರಿಯೆ ನಡೆಸಿ ಚೆನ್ನಾಗಿ ಬೆಳೆಯುತ್ತವೆ. ಆದರೆ ಕೆಲವೊಮ್ಮೆ ಈ ಅತಿಯಾದ ತಾಪಮಾನ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ. ಇಂತದ್ದರಲ್ಲಿ ಒಂದು ಅಡಿಕೆಯ ಗರಿಯಲ್ಲಿ ವಾಸ ಮಾಡುವ ಕೆಂಪು ಮತ್ತು ಬಿಳಿ ತಿಗಣೆ. ಅಡಿಕೆ ಬೆಳೆಗೆ ಸಹ್ಯ ತಾಪಮಾನ 35 ಡಿಗ್ರಿ ತನಕ. ಅದಕ್ಕಿಂತ ಹೆಚ್ಚಾದರೆ ಅದು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಅಡಿಕೆ ತೋಟವನ್ನು ಅದಕ್ಕೆ ಸೂಕ್ತವಾದ ಜಾಗದಲ್ಲಿ ಮಾತ್ರ ಮಾಡಬೇಕು ಎನ್ನುತ್ತಿದ್ದರು. ಅಡಿಕೆ ಬೆಳೆಯಲು…

ಸಸ್ಯಗಳು ಎಷ್ಟೇ ಆರೈಕೆ ಮಾಡಿದರೂ ಏಳಿಗೆ ಆಗದಿರಲು ಕಾರಣ.
ಮನುಷ್ಯರಿಗೆ ಹೊಟ್ಟೆ ಹುಳ ಬಾಧಿಸಿದರೆ ಏನಾಗುತ್ತದೆಯೋ ಅದೇ ರೀತಿ ಇದು ಬೇರುಗಳಿಗೆ ಬಾಧಿಸಿ, ಸಸ್ಯ ಬೆಳವಣಿಗೆಯನ್ನು ಹಿಂಡುತ್ತವೆ. ಬೆಳೆ ಬೆಳೆಸುವ ಸಂಧರ್ಭದಲ್ಲಿ ಒಮ್ಮೊಮ್ಮೆ ಒಂದೊಂದು ಹೊಸ ಸಮಸ್ಯೆಗಳು ಉಧ್ಭವವಾಗುತ್ತದೆ. ಅದರಲ್ಲಿ ಒಂದು ನಮಟೋಡು. ಕೆಲವೇ ಬೆಳೆಗಳಿಗೆ ತೊಂದರೆ ಮಾಡುತ್ತಿದ್ದ ಇದು, ಈಗ ಎಲ್ಲಾ ಬೆಳೆಗಳನ್ನು ಮುಟ್ಟಿದೆ. ಇದು ಸಸ್ಯದ ಬೇರುಗಳಲ್ಲಿ ಸೇರಿಕೊಂಡು ಭಾರೀ ತೊಂದರೆ ಮಾಡುತ್ತದೆ. ಮೈನರ್ ಪೆಸ್ಟ್ ಇದ್ದುದು ಮೇಜರ್ ಪೆಸ್ಟ್ ಎಂಬ ಸ್ಥಾನ ಪಡೆಯಲಾರಂಭಿಸಿದೆ. ಬಾಳೆ, ದಾಳಿಂದೆ, ದ್ರಾಕ್ಷಿ, ಪೇರಳೆ, ಹಿಪ್ಪು ನೇರಳೆ, ಬದನೆ, ಬೆಂಡೆ, ಸೌತೆ…

ತೆಂಗಿಗೂ ತೊಂದರೆ ಮಾಡುತ್ತಿದೆ- ಬೇರು ಹುಳ
ಎಷ್ಟೇ ಪೊಷಕಾಂಶ ಒದಗಿಸಿದರೂ ಸ್ಪಂದಿಸದೆ, ಮರದ ಗರಿಗಳು ಸದಾ ತಿಳಿ ಹಸುರು ಬಣ್ಣದಲ್ಲಿದ್ದರೆ, ಇಳುವರಿ ತೀರಾ ಕಡಿಮೆ ಇರುವುದೇ ಆಗಿದ್ದರೆ ಅಂತಹ ಮರಕ್ಕೆ ಬೇರು ಹುಳದ ತೊಂದರೆ ಇದೆ ಎಂದು ಸಂಶಯ ಪಡಬಹುದು. ತೆಂಗಿನ ಮರಕ್ಕೆ ಸಾಕಷ್ಟು ನೀರು ಒದಗಿಸಿ- ಗೊಬ್ಬರ ಕೊಡಿ ಒಂದು ವರ್ಷ ತನಕ ಕಾಯಿರಿ. ಎಲೆಗಳು ಹಸುರಾಗದೇ, ಗರಿಗಳು ಹೆಚ್ಚದೇ ಇದ್ದರೆ ಅಂತಹ ಮರಗಳಿಗೆ ಬೇರು ಹುಳ ಬಾಧಿಸಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಬಹುತೇಕ ಹೆಚ್ಚು ಕಡಿಮೆ …

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.
ನಮ್ಮ ಸುತ್ತಮುತ್ತ ಇರುವ ಕೆಲವು ಗಿಡಗಳು ಬೇರೆ ಬೇರೆ ಸತ್ವಗಳನ್ನು ಒಳಗೊಂಡಿವೆ. ಕೆಲವು ಪೋಷಕವಾಗಿಯೂ ಮತ್ತೆ ಕೆಲವು ಕೀಟ – ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕಳೆ ನಾಶಕಗಳು ಬಲಿ ತೆಗೆದುಕೊಳ್ಳುತ್ತಿವೆ. ರೈತರೇ ಇವುಗಳನ್ನು ಅನವಶ್ಯಕ ಕೊಲ್ಲಬೇಡಿ. ಅದರ ಸದುಪಯೋಗ ಮಾಡಿಕೊಳ್ಳಿ. ಏನಿದೆ ಸತ್ವ: ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ…