ನೀರು, ಗೊಬ್ಬರ ಉಳಿತಾಯದ ಬಾಳೆ ಬೇಸಾಯ ವಿಧಾನ
ಸಾಂಪ್ರದಾಯಿಕ ವಿಧಾನದ ಬಾಳೆ ಬೇಸಾಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಬೆಳೆ ಬೆಳೆದರೆ ನೀರು, ಗೊಬ್ಬರ ಉಳಿಸಿ ಖರ್ಚು ಕಡಿಮೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು. ಅಷ್ಟೇ ಸ್ಥಳಾವಕಾಶದಲ್ಲಿ ಒಳಸುರಿಗಳ ಬಳಕೆಯಲ್ಲಿ, ಮಿತವ್ಯಯ ಮಾಡಿ ಅಧಿಕ ಉತ್ಪಾದನೆ ಪಡೆಯುವುದು ಈ ವಿಧಾನದಲ್ಲಿ ಸಾಧ್ಯ. ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಪರಸ್ಪರ 6 ಅಡಿ ಅಂತರದಲ್ಲಿ ನಾಟಿ ಮಾಡಲಾಗುತ್ತದೆ. ಈ ವಿಧಾನದಲ್ಲಿ ಎಕ್ರೆಗೆ ಸುಮಾರು 750 ರಷ್ಟು ಬಾಳೆ ಸಸಿ ಹಿಡಿಸಬಹುದು. ಅಧಿಕ ಸಾಂದ್ರದಲ್ಲಿ ನಾಟಿ ಮಾಡುವುದಿದ್ದರೆ ಎಕ್ರೆಗೆ 2500-3000…