ವಿಯೆಟ್ನಾಂ ಸೂಪರ್ ಅರ್ಲಿ ತಳಿಯ ಕಾಯಿ ಹಲಸು ಮತ್ತು ಹಣ್ಣು

1 ವರ್ಷಕ್ಕೆ ಕಾಯಿ ಬಿಡುವ ವಿಶೇಷ ಹಲಸು ಇದು!

ಹಲಸಿನಲ್ಲಿ 1 ವರ್ಷಕ್ಕೆ ಕಾಯಿ ಬರುತ್ತದೆ ಎಂದರೆ ಯಾರಾದರೂ ನಂಬುವುದುಂಟೇ? ಬಹುಷಃ ಹಳೆ ತಲೆಗಳು ಇದನ್ನು ನಂಬಲಿಕ್ಕಿಲ್ಲ. ಈಗ ಹಲಸಿನಲ್ಲಿ ಕಸಿ ಮಾಡಿದ ಸಸಿಗಳನ್ನು ಉತ್ಪಾದಿಸುವ ಕಾರಣದಿಂದ ಸಾಂಪ್ರದಾಯಿಕವಾಗಿ ನಾವು 7-8 ವರ್ಷ ಕಾದು ಇಳುವರಿ ಪಡೆಯುವಂತಹ ಪ್ರಮೇಯ ಇಲ್ಲ. ನೆಟ್ಟು ಗಿಡದ ಬೆಳೆವಣಿಗೆ ಹೊಂದಿ 3-4 ವರ್ಷಕ್ಕೆ ಫಲ ಕೊಡಲು ಪ್ರಾರಂಭವಾಗುತ್ತದೆ. ಆದರೆ ಇದೊಂದು ತಳಿ ಮಾತ್ರ ಕಸಿ ಗಿಡ ನೆಟ್ಟು 1 ವರ್ಷಕ್ಕೆ ಕಾಯಿ ಬಿಡುತ್ತದೆ. ವಿಯೆಟ್ನಾಂ ಸೂಪರ್ ಅರ್ಲಿ (Vietnam super early)…

Read more
ಅಧಿಕ ಮೊಳಕೆಗಳು ಇದರ ವಿಶೇಷ

ಮಂಗ ಮುಟ್ಟದ ಈ ಬಾಳೆ ಬೆಳೆದರೆ ಎಲೆ ಮಾರಾಟದಿಂದ ಲಾಭಗಳಿಸಬಹುದು.

ನಾವು ನೆಟ್ಟು ಬೆಳೆಸುವ ಎಲ್ಲಾ ತರಾವಳಿಯ ಬಾಳೆಗೂ ಒಂದಿಲ್ಲೊಂದು ದಿನ ರೋಗ ಬರಬಹುದು. ಆದರೆ ಇದಕ್ಕೆ ರೋಗ ಎಂಬುದೇ ಇಲ್ಲ. ಹಾಗೆಂದು ಇದು ಹಣ್ಣಿಗೆ ಹೊಂದುವ ಬಾಳೆ ಅಲ್ಲ. ಬಾಳೆ ಗೊನೆ ಬಿಟ್ಟರೂ ಒಳಗೆ ಬೀಜಗಳೇ ಇರುತ್ತವೆ.ಈ ಬಾಳೆ ಹಣ್ಣನ್ನು ಮಂಗ ತಿನ್ನಲಿ. ಎಲೆ ಮಾತ್ರ ನಾವು ಕೊಯ್ದು ಮಾರಾಟ ಮಾಡಬಹುದು. ಇದು ಎಲೆಗಾಗಿಯೇ ಇರುವ ಬಾಳೆ. ಬಾಳೆ ಎಲೆ ಎಂಬುದು ಪರಿಸರ  ಸ್ನೇಹೀ ಅಗತ್ಯ ವಸ್ತು. ಹೋಟೇಲುಗಳು , ಸಭೆ ಸಮಾರಂಭಗಳಲ್ಲಿ ಬಾಳೆ ಹಣ್ಣಿಗಿಂತ ಹೆಚ್ಚಿನ…

Read more
ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಿದಾಗ ಹೀಗೆ ಹೂ ಬಿಡುತ್ತದೆ

ಚಿಗುರು ಉಳಿಸಿದರೆ – ಮಾವು ಉತ್ತಮ ಫಲ ಕೊಡುತ್ತದೆ.

ವಾಣಿಜ್ಯಿಕವಾಗಿ ಮಾವಿನ ಬೇಸಾಯ ಮಾಡುವವರು  ಮಾವಿನ ಹಣ್ಣು ಬೆಳೆಯುವ ತನಕ ಕನಿಷ್ಟ  8-10 ಸಲ  ಕೀಟನಾಶಕ ರೋಗ ನಾಶಕ ಸಿಂಪಡಿಸುತ್ತಾರೆ. ಇದನ್ನು ಮಾಡದೇ ಇದ್ದರೆ  ಮಾವಿನ ಬೇಸಾಯವೇ ವ್ಯರ್ಥ. ಯಾವುದೇ ಒಂದು ಬೆಳೆಯನ್ನು ವಾಣಿಜ್ಯಿಕವಾಗಿ ಮಾಡುವಾಗ ಅದಕ್ಕೆ ಕೀಟಗಳು ರೋಗಗಳು ಹೆಚ್ಚು. ನಿಯಂತ್ರಣ ಕೈಗೊಳ್ಳದೇ ಇದ್ದರೆ ಅದರ ಹಾನಿ ಹೆಚ್ಚಾಗುತ್ತಾ ಇರುತ್ತದೆ. ಇಂತದ್ದರಲ್ಲಿ ಒಂದು ಮಾವಿನ ಚಿಗುರು ಕೊರಕ ಹುಳು. ಚಿಗುರು ಸಸ್ಯ ಬೆಳವಣಿಗೆಯ ಪ್ರಮುಖ ಹಂತ. ಅದಕ್ಕೆ ತೊಂದರೆ ಆದಾಗ ಸಸ್ಯ ಬೆಳವಣಿಗೆ ಕುಂಠಿತವಾಗಿ ,…

Read more
ಬಾಳೆಯ ನಂಜಾಣು ರೋಗ

ಬಾಳೆ- ಈ ರೀತಿ ಆದರೆ ಆ ಬಾಳೆಯನ್ನು ತೆಗೆದು ಬಿಡಿ

ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ. ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ  ಏನು ಪರಿಹಾರ ಎಂದು? ಇದಕ್ಕೆ  ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ. ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ…

Read more
ಡ್ರಾಗನ್ ಪ್ರುಟ್ ಬೆಳೆ

ಕನ್ನಡ ನಾಡಿನಲ್ಲಿ ಹೊಸ ಹಣ್ಣಿನ ಬೆಳೆಯ ಹವಾ- ಡ್ರ್ಯಾಗನ್ ಫ್ರೂಟ್ ಬೆಳೆ.

ಕಡಿಮೆ ನೀರು, ಕಡಿಮೆ ಫಲವತ್ತಾದ ಭೂಮಿಯಲ್ಲೂ  ಬೆಳೆಯಬಹುದಾದ  ಹಣ್ಣಿನ ಬೆಳೆ ಇದು. ಉತ್ತಮ ಲಾಭ ಇದೆ ಎಂಬುದಾಗಿ ಹೇಳುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ರೈತರಿಗೆ ಈ ಬೆಳೆಯ ಬಗ್ಗೆ ಆಸಕ್ತಿ ಬಂದು ಬೆಳೆ ಪ್ರದೇಶ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಿದೆ. ಡ್ರ್ಯಾಗನ್ ಹಣ್ಣು ಇದು  ನಮ್ಮ ಪ್ರಾದೇಶಿಕ ಹಣ್ಣು ಅಲ್ಲ. ಇದೊಂದು ವಿಶೇಷ ಗುಣವುಳ್ಳ ಹಣ್ಣು. ನಮಲ್ಲಿ ಇತ್ತೀಚೆಗೆ ಇದರ ಪರಿಚಯವಾಗಿದೆ.ಅಮೇರಿಕಾದ ಮೆಕ್ಸಿಕೋದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿದೇಶದ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಬೀಜಾಪುರ,ಚಿತ್ರದುರ್ಗ, ಬೆಳಗಾವಿ ಮುಂತಾದ…

Read more
ಮಣಿಪುರದ ಸ್ಥಳೀಯ ಬಣ್ಣದ ಮಾವು

ಲಕ್ಷ ಬೆಲೆಯ ಮಾವು ಇರುವುದು ನಿಜವೇ? ಇಲ್ಲಿದೆ ನೈಜ ಮಾಹಿತಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಬೆಲೆಯ ಮಾವಿನ ಹಣ್ಣಿನ ಬಗ್ಗೆ ಪ್ರಚಾರಗಳು ನಡೆಯುತ್ತಿದೆ. ವಾಸ್ತವವಾಗಿ ಮಾವಿನ ಹೊರತೊಗಟೆಯ ಬಣ್ಣ ಹೇಗಿದ್ದರೂ ಮಾವಿನ ರುಚಿ ಒಂದೇ ಆಗಿರುತ್ತದೆ. ರೈತರಿಗೆ ನೈಜ ವಿಷಯನ್ನು ತಿಳಿಸುವುದು ಅವಶ್ಯಕವಾಗಿದೆ. ಜನ ಯಾವುದಕ್ಕೆ ಬೇಡಿಕೆ ವ್ಯಕ್ತಪಡಿಸುತ್ತಾರೆಯೋ ಅದಕ್ಕೆ ಬೆಲೆ ಬರುತ್ತದೆ. ಕಲ್ಲಿನ ಚೂರು ವಜ್ರವೆನಿಸುವುದು ಅದಕ್ಕೆ ಮೌಲ್ಯ ಕಟ್ಟುವವರು ಇದ್ದಾಗ. ಹಾಗೆಯೇ ಇದು. ಗ್ರಾಹಕರು ಕೆಲವು ಆಕರ್ಷಕ ಬಣ್ಣ, ನೋಟಗಳಿಗೆ ಮಾರು ಹೋಗುತ್ತಾರೆ. ಅದಕ್ಕನುಸಾರವಾಗಿ ಅದಕ್ಕೆ ಬೇಡಿಕೆ, ಬೆಲೆ ಬರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಹಣ್ಣು…

Read more
Poly bag fruit plant

ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.

ಅವರವರ ಬಳಕೆಗೆ ಬೇಕಾಗುವ ಹಣ್ಣು ಹಂಪಲುಗಳನ್ನು ಹೀಗೆ ಬೆಳೆದರೆ ಉತ್ತಮ ಗುಣಮಟ್ಟದ ಸುರಕ್ಷಿತ ಹಣ್ಣುಗಳನ್ನು ತಿನ್ನಬಹುದು. ಒಂದು ಕುಟುಂಬಕ್ಕೆ ಮಾವಿನ ಹಣ್ಣು ಎಷ್ಟು ಬೇಕಾಗಬಹುದು? ವರ್ಷಕ್ಕೆ ಹೆಚ್ಚೆಂದರೆ 10 ಕಿಲೋ. ಇದನ್ನು ಉತ್ಪಾದಿಸಲು ಮಾವಿನ ತೋಟ ಮಾಡಬೇಕಾಗಿಲ್ಲ. ಮನೆಯ ಹಿತ್ತಲಲ್ಲಿ ಎಲ್ಲಿ ಗಾಳಿ ಬೆಳೆಕು ಚೆನ್ನಾಗಿ ಲಭ್ಯವಿರುತ್ತದೆಯೋ ಅಲ್ಲಿ ನೆಟ್ಟು ಫಲವನ್ನು ಪಡೆಯಬಹುದು. ಮಾವು ಮಾತ್ರವಲ್ಲ. ನಾವು ತಿನ್ನಬಯಸುವ ಎಲ್ಲಾ ನಮೂನೆಯ  ಹಣ್ಣು ಹಂಪಲುಗಳನ್ನೂ ಇದೇ ತರಹ ಬೆಳೆಸಿ ನಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ಹಣ್ಣು ಹಂಪಲು…

Read more
Grafted jack plant

ಹಲಸು ಬೆಳೆಸುವವರು ಹೀಗೊಮ್ಮೆ ಯೋಚಿಸಿ- ಸಸಿ ನೆಡಿ.

ಹಲಸಿಗೆ ಭವಿಷ್ಯದಲ್ಲಿ ಭಾರೀ ಬೆಲೆ ಬರಲಿದೆ ಎಂದು ಬಹಳ ಜನ ಹಲಸಿನ ಕೃಷಿಗೆ ಮುಂದಾಗಿದ್ದಾರೆ. ಒಳ್ಳೆಯದು.ಆದರೆ ಎಲ್ಲವೂ ಕಸಿ ಗಿಡ ಬೇಡ. ಹಲಸು ಬೆಳೆಸುವುದೆಂದರೆ ಎಲ್ಲರಿಗೂ ಈಗ ಪ್ರತಿಷ್ಟೆಯ ಪ್ರಶ್ನೆ. ಇದಕ್ಕೆ ಎಲ್ಲೆಡೆಯೂ ಪ್ರೋತ್ಸಾಹ ಇದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ. ಕೇರಳ, ಆಂದ್ರ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರಗಳಲ್ಲಿ ಸಹ ಭಾರೀ ಪ್ರಮಾಣದಲ್ಲಿ ಹಲಸಿನ ಸಸಿ  ನೆಡಲಾಗುತ್ತಿದೆ. ವಾರ್ಷಿಕ ಕರ್ನಾಟಕ, ಕೇರಳದ ಹಲಸಿನ ಸಸಿ ಮಾಡುವ ನರ್ಸರಿಗಳಿಂದ ಕೋಟ್ಯಾಂತರ ಸಂಖ್ಯೆಯ ಹಲಸಿನ ಕಸಿ ಗಿಡಗಳು ಮಾರಾಟವಾಗುತ್ತಿದೆ. ಜನ ಬೀಜ…

Read more
ರತ್ನಗಿರಿ ಅಲ್ಫೊನ್ಸ್ ಹಣ್ಣು

ಮಾವು ಕೊಯ್ಯುವಷ್ಟು ಬೆಳೆದಿದೆಯೇ ? ಹೇಗೆ ತಿಳಿಯುವುದು?

ಮಾವಿನ ಕಾಯಿ ಕೊಯ್ಯುವಾಗ ಅದು ಸರಿಯಾಗಿ ಬೆಳೆದಿದ್ದರೆ ಅದರ ರುಚಿಯೇ ಭಿನ್ನ. ಕಾಯಿ ಕೊಯ್ಯುವಷ್ಟು ಬೆಳೆದಿದೆಯೇ ಇಲ್ಲವೇ ಎಂದು ತಿಳಿಯಲು ಸ್ವಲ್ಪ ಅನುಭವ ಬೇಕು. ಈ ಬಗ್ಗೆ ಮಾಹಿತಿ ಇಲ್ಲಿದೆ. ಈಗ ಮಾವಿನ ಕಾಯಿ ಮಾಗುವ ಸಮಯ. ಮಾವಿನ ಕಾಯಿ ಹೂ  ಬಿಟ್ಟು, ಮಾಗಿ ಹಣ್ಣಾಗಲು 3 ತಿಂಗಳು ಬೇಕು. ಈ ಅವಧಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಹಾಕಲು ಆಗದು. ಅದಕ್ಕಾಗಿ ಕೆಲವು ಕಣ್ಣಂದಾಜಿನ ಪರೀಕ್ಷೆಗಳು ಮತ್ತು ಯಾದೃಚ್ಚಿಕ ಪರೀಕ್ಷೆಗಳನ್ನು ಮಾಡಿ ಬಲಿತಿದೆಯೇ ಇಲ್ಲವೇ ಎಂದು ತಿಳಿಯಬಹುದು. ಎಳೆಯದಾದ…

Read more

ಡ್ರಾಗನ್ ಪ್ರೂಟ್ – ಹೆಚ್ಚು ಆದಾಯದ ಸುಲಭದ ಬೆಳೆ.

ವಿಪರೀತ ಬಿಸಿಲಿನ ವಾತಾವರಣದ ಬಳ್ಳಾರಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ  ಮಾಡಬಹುದು ಎಂಬುದನ್ನು ಹೊಸಪೇಟೆಯ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿನ 57 ವರ್ಷದ ಇಂಜಿನಿಯರ್ ರಾಜಶೇಖರ್ ದ್ರೋಣವಲ್ಲಿ  ಎಂಬವರು, ತಮ್ಮ ಆರು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ಮಾಡಿ ಅದರಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಮೂಲ ಕೃಷಿಕ ಕುಟುಂಬದವರಾಗಿದ್ದರೂ ಹೈದರಾಬಾದಿನಲ್ಲಿ ಇಂಜಿನಿಯರ್ ವೃತ್ತಿಯಲ್ಲಿ ತೊಡಗಿದ್ದರು. ಮೂರು ವರ್ಷದ ನಂತರ ಈ ವೃತ್ತಿಗೆ ವಿದಾಯ ಹೇಳಿ ಆರಿಸಿಕೊಂಡದ್ದು, ಕೃಷಿ ಮತ್ತು ಕೋಳಿ ಸಾಕಾಣಿಕೆ ವೃತ್ತಿಯನ್ನು. ಇವೆರಡರಲ್ಲೂ…

Read more
error: Content is protected !!