ಕನ್ನಡ ನಾಡಿನಲ್ಲಿ ಹೊಸ ಹಣ್ಣಿನ ಬೆಳೆಯ ಹವಾ- ಡ್ರ್ಯಾಗನ್ ಫ್ರೂಟ್ ಬೆಳೆ.

ಡ್ರಾಗನ್ ಪ್ರುಟ್ ಬೆಳೆ

ಕಡಿಮೆ ನೀರು, ಕಡಿಮೆ ಫಲವತ್ತಾದ ಭೂಮಿಯಲ್ಲೂ  ಬೆಳೆಯಬಹುದಾದ  ಹಣ್ಣಿನ ಬೆಳೆ ಇದು. ಉತ್ತಮ ಲಾಭ ಇದೆ ಎಂಬುದಾಗಿ ಹೇಳುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ರೈತರಿಗೆ ಈ ಬೆಳೆಯ ಬಗ್ಗೆ ಆಸಕ್ತಿ ಬಂದು ಬೆಳೆ ಪ್ರದೇಶ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಿದೆ.

ಡ್ರ್ಯಾಗನ್ ಹಣ್ಣು ಇದು  ನಮ್ಮ ಪ್ರಾದೇಶಿಕ ಹಣ್ಣು ಅಲ್ಲ. ಇದೊಂದು ವಿಶೇಷ ಗುಣವುಳ್ಳ ಹಣ್ಣು. ನಮಲ್ಲಿ ಇತ್ತೀಚೆಗೆ ಇದರ ಪರಿಚಯವಾಗಿದೆ.ಅಮೇರಿಕಾದ ಮೆಕ್ಸಿಕೋದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿದೇಶದ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಬೀಜಾಪುರ,ಚಿತ್ರದುರ್ಗ, ಬೆಳಗಾವಿ ಮುಂತಾದ ಕೆಲವು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದಾರೆ.  ದಕ್ಷಿಣ ಕನ್ನಡ ಮಲೆನಾಡಿನಲೂ ಇದನ್ನು ಬೆಳೆಸಲು ಪ್ರಾರಂಭಿಸಿದ್ದಾರೆ.

  • ವಿಶೇಷವಾಗಿ ಉತ್ತರಕರ್ನಾಟಕದ ರೈತರು ಆಡು ಭಾಷೆಯಲ್ಲಿ ಈ ಹಣ್ಣನ್ನು“ರಟಗೋಳಿ”ಅಥವಾ“ ಪಾಪಸ್ ಕಳ್ಳಿ ಗಿಡ”ಎಂತಲೂಕರೆಯುತ್ತಾರೆ.
  • ಗಿಡ ನೋಡಲು ಪಪಾಸುಕಳ್ಳಿಯಂತೆ ಇರುತ್ತದೆ.  ಹಣ್ಣುಗಳು ಸ್ವಲ್ಪ ಅಲಂಕಾರಿಕವಾಗಿ ಕಾಣುತ್ತದೆ.
  • ಇದರ ಒಳಗಿನ  ತಿರುಳು ತಿನ್ನುವಂತದದ್ದು. ಒಳ ಭಾಗ ಬಿಳಿಯಾಗಿದ್ದು, ಅಲ್ಲಲ್ಲಿ ಕಪ್ಪು ಬೀಜಗಳಿದ್ದು, ತಿನ್ನುವ ತಿರುಳೂ ಸಹ ಒಂದು ರೀತಿಯಲ್ಲಿ ಅಲಂಕಾರಿಕವಾಗಿಯೇ ಇರುತ್ತದೆ.
  • ಗಿಡದಲ್ಲಿ ಮುಳ್ಳು ಇದೆ. ಎಲೆ ಇಲ್ಲ. ಹಣ್ಣು ನೋಡಿದರೆ ಯಾರೂ ಒಮ್ಮೆ ಕೊಳ್ಳಬೇಕು ಹಾಗೆ ಇರುತ್ತದೆ.
  • ಇದು ಆರೋಗ್ಯಕ್ಕೆ ಬಹಳ ಉತ್ತಮ ಹಣ್ಣು ಎಂದು ಮಾನ್ಯವಾಗಿದೆ.
ಕನ್ನಡ ನಾಡಿನಲ್ಲಿ ಹೊಸ ಹವಾದೊಂದಿಗೆ ಡ್ರಾಗನ್ ಫ್ರೂಟ್ ಬೆಳೆ

ಆರೋಗ್ಯ ಗುಣಗಳು:

  • ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇರುವ ಏಕೈಕ ಹಣ್ಣು.
  • ದೇಹದತೂಕ ಇಳಿಸಲು ಇದು ಹೇಳಿ ಮಾಡಿಸಿದ ಹಣ್ಣು ಎನ್ನಬಹುದು.
  • ಈ ಹಣ್ಣು ತಿಂದರೆ ಡಯಟ್ ಮಾಡಬೇಕಾಗಿಲ್ಲ.ದೇಹದ ಶಕ್ತಿ ಸ್ವಲ್ಪವೂ ಕುಗ್ಗದೆ ಶರೀರ ಸ್ಲಿಂ ಆಗುತ್ತದೆ.
  • ಅಧಿಕ ನಾರಿನ ಅಂಶ ಹೊಂದಿದೆ. ಜೀರ್ಣಕ್ರಿಯೇಗೆ ಸಹಾಯಕಾರಿ.
  • ಮಲಬದ್ಧತೆ ಸಮಸ್ಯೆಇದ್ದವರಿಗೆ ಈ ಹಣ್ಣುರಾಮಬಾಣವೇ ಸರಿ.
  • ಉತ್ತಮ ಪ್ರೋಟೀನ್ ಅಂಶ ಹೊಂದಿದೆ.
  • ದೇಹದಲ್ಲಿರುವ ಕರಗದ ಕೊಬ್ಬು(Bad cholesterol ) ಪ್ರಮಾಣ ತಗ್ಗಿಸಿ ಹೃದಯದ ರಕ್ತ ಸಂಚಲಕ್ಕೆ ಸಹಾಯಕಾರಿ.
  • ಡಯಾಬೇಟಿಕ್ ರೋಗಿಗಳು ತಿನ್ನಬಹುದಾದ ಉತ್ತಮ ಹಣ್ಣು.
  • ಹೆಚ್ಚಿನ ಪ್ರಮಾಣದ ಪೈಬರ್‍ ಇರುವುದರಿಂದ ದೇಹದ ಇನ್ಸುಲಿನ್ ಪ್ರಮಾಣ ನಿಯಂತ್ರಿಸುವಲ್ಲಿಇದು ಸಹಾಯಾಕಾರಿ.
  • ಈ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್‍ಗುಣದಿಂದಾಗಿ ಚರ್ಮದ ತ್ವಚೆ ಕಾಪಾಡಲು ಸಹಾಯಕಾರಿ.
  • ಈ ಹಣ್ಣು ಸನ್ ಬರ್ನ್, ಮುಖದ ಮೊಡವೆಗಳ ನಿವಾರಣೆಗೆ ಸಹಾಯಕಾರಿ.
  • ಈ ಹಣ್ಣಿನ ಸೇವನೆಯಿಂದ ಬಿಳಿ ರಕ್ತದ ಕಣಗಳನ್ನು ಹೆಚ್ಚಿಸಬಹುದಾಗಿದೆ.
  • ಹಣ್ಣಿನ ತೊಗಟೆಯನ್ನು ಸೋಪ್‍ ತರಹ ಉಪಯೋಗಿಸುವುದರಿಂದ ಹಲವು ಚರ್ಮದ ರೋಗಗಳು ನಿವಾರಣೆಯಾಗುತ್ತದೆ.
  • ಬಿಳಿ ಕೂದಲು ಸಮಸ್ಯೆ ನಿವರಣೆಯಾಗುತ್ತದೆ. ಡ್ರ್ಯಾಗನ್ ಹಣ್ಣಿನ ಜ್ಯೂಸ್‍ನ್ನು ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಹೊಳೆಯುತ್ತದೆ.
ಡ್ರಾಗನ್ ಪ್ರುಟ್ ಹಣ್ಣು ಬಿಡುವ ಕ್ರಮ.

ವಿಧಗಳು:

  • ಇದು ಎಲೆ ಇಲ್ಲದ ಪಾಪಾಸುಕಳ್ಳಿ (ಕ್ಯಾಕ್ಟಸ್) ತರಹದ ಸಸ್ಯ. ಇದರ ಮುಳ್ಳುಗಳೇ ಇದರ  ಎಲೆಗಳು.  ಇಲ್ಲಿಯೇ ಹೊಸ ಚಿಗುರುಗಳು ಮೂಡುವುದು.
  • ಕೆಂಪು ಹಣ್ಣು-ಬಿಳಿ ತಿರಳು : ಎಲೆ ದಪ್ಪ, ಕಡಿಮೆ ಮುಳ್ಳು, ಹೆಚ್ಚಿನ ಇಳುವರಿ.
  • ಕೆಂಪು ಹಣ್ಣು- ಕೆಂಪು ತಿರಳು : ಲೋಳೆ ಎಲೆ, ಕಡಿಮೆ ಮುಳ್ಳು, ಕಡಿಮೆ ಇಳುವರಿ . ಹೆಚ್ಚಿನ ಬೇಡಿಕೆ
  • ಹಳದಿ ಹಣ್ಣು -ಬಿಳಿ ತಿರಳು ಕಡಿಮೆ ಬೇಡಿಕೆ.
  • ಕರ್ನಾಟಕದಲ್ಲಿ ಮೊದಲ ಎರಡು ವಿಧ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಸಸಿಗಳನ್ನು ಮಾಡುವುದಕ್ಕೆ ಯಾವುದೇ ಕಷ್ಟ ಇಲ್ಲ. ಕಾಂಡದ ತುಂಡುಗಳನ್ನು ಹೇಗೆ ನೆಟ್ಟರೂ ಬೇರು ಬರುತ್ತದೆ. ಸ್ವಲ್ಪ ಸ್ವಲ್ಪ ಬೆಳೆಸಿ ಹೆಚ್ಚು ಮಾಡುವುದು ಸೂಕ್ತ. ಆಗ ನೆಡು ಸಮಾಗ್ರಿ ಸ್ವಂತವಾಗಿ ಪಡೆಯಬಹುದು.

ಎಲ್ಲೆಲ್ಲಾ ಬೆಳೆಯಬಹುದು:

  • ಉಷ್ಣತೆ 30-40 ಡಿಗ್ರಿ ತನಕ ಇರುವ ಹವಾಮಾನದಲ್ಲೆಲ್ಲಾ ಬೆಳೆಯುತ್ತದೆ. 
  • ಸಾಧಾರಣ ಫಲವತ್ತಾದ ಕೆಂಪು , ಗೊಚ್ಚು ಮಣ್ಣು, ಮರಳು ಮಣ್ಣು, ಇದಕ್ಕೆ ಚೆನ್ನಾಗಿ  ಹೊಂದಿಕೆಯಾಗುತ್ತದೆ.
  • ರಾಜ್ಯದಲ್ಲಿ ಬೆಂಗಳೂರು, ಕೋಲಾರ, ಬಿಜಾಪುರ, ಬಾಗಲಕೋಟೆ, ಅಥಣಿ, ತುಮಕೂರು ಮುಂತಾದ ಭಾಗಗಳಲ್ಲಿ ಬೆಳೆ ಇದೆ.
  • ಅಥಣಿ ಮತ್ತು ಇದಕ್ಕೆ ತಾಗಿದ ಮಹಾರಾಷ್ಟ್ರದ (ಸಾಂಗ್ಲಿ)  ಭಾಗಗಳಲ್ಲಿ ಹಲವಾರು ಜನ  ಇದನ್ನು ಬೆಳೆಸುವವರಿದ್ದಾರೆ.
  • ದಾಳಿಂಬೆ ಬೆಳೆಯಲ್ಪಡುವ ಪ್ರದೇಶಗಳಲ್ಲೆಲ್ಲಾ ಇದನ್ನು ಬೆಳೆಸಬಹುದು.
ನೆಟ್ಟ ನಂತರ ಹೀಗೆ ತರಬೇತಿ ಅಗತ್ಯ
ನೆಟ್ಟ ನಂತರ ಹೀಗೆ ತರಬೇತಿ ಅಗತ್ಯ

ನೆಡುವುದು ಹೇಗೆ:

  • ಸಾಮಾನ್ಯವಾಗಿ ಇದನ್ನು ಇತರ ಹಣ್ಣಿನ ಬೆಳೆಗಳನ್ನು ಬೆಳೆದಂತೆ  ಹನಿ ನೀರಾವರಿ ಮಾಡಿ  ಬೆಳೆಯಲಾಗುತ್ತದೆ.
  • ವಾರಕ್ಕೊಮ್ಮೆ ನೀರು ಕೊಟ್ಟರೂ ಸಾಕಾಗುತ್ತದೆ ಎನ್ನುತ್ತಾರೆ ಬೆಳೆದವರು.
  • ಹನಿ ನೀರಾವರಿಯ ಮೂಲಕ ಪೋಷಕಾಂಶಗಳನ್ನು ಕೊಟ್ಟರೆ ಒಳ್ಳೆಯದು.
  • ಒಂದುಎಕರೆ ಭೂಮಿಯಲ್ಲಿ2X2X2 ಅಡಿ ಹೊಂಡ ತೆಗೆದು ಪ್ರತಿಗುಂಡಿಗೆ 8-10 ಕೆಜಿ ಸಗಣಿಗೊಬ್ಬರ,1 ಕಿಲೋ ದಷ್ಟು ಬೇವಿನ ಹಿಂಡಿ ಹಾಕಿ ನಾಟಿ ಮಾಡಬೇಕು.
  • ಈ ಗಿಡವು ಬಳ್ಳಿಯ ಹಾಗೆ ಬೆಳೆಯುವುದರಿಂದ ಆಧಾರಕ್ಕಾಗಿ ಕಂಬಗಳನ್ನು ನೆಡಬೇಕು.
  • ಚಿತ್ರದಲ್ಲಿ ಕಾಣಿಸಿದಂತೆ ಕಾಂಕ್ರೀಟ್ ಕಂಬಗಳು ಮತ್ತು ಅದರಲ್ಲಿ ಬಳ್ಳಿ ನೇತಾಡಲು ಅವಕಾಶ ಕಲ್ಪಿಸಬೇಕು.
  • ಆದಾರದಲ್ಲಿ ಏರಿ ನಂತರ ಅದು ಕೆಳಕ್ಕೆ ಇಳಿಯಲ್ಪಟ್ಟಾಗ ಕಾಂಡದಲ್ಲಿ ಆಕ್ಸಿನ್ ಗಳು ಉತ್ಪಾದನೆಯಾಗಿ ಹೂ ಮೊಗ್ಗು ಮೂಡುತ್ತದೆ.
  • ಅದೇ ಕಾರಣಕ್ಕೆ ಸಸಿಯನ್ನು ಕೆಳಕ್ಕೆ ಇಳಿಸಲಾಗುತ್ತದೆ.
  • ಮಳೆ ಹೆಚ್ಚು ಬೀಳುವ ಕಡೆ ಏರು ಮಡಿಗಳ ಮೇಲೆ ಕಂಬಗಳನ್ನು ನೆಡಬೇಕು.
  • *10-12 ಅಡಿ ಸಾಲುಗಳ ಅಂತರ 6-7 ಅಡಿ ಗಿಡಗಳ ಅಂತರದಲ್ಲಿ ಬೆಳೆಸಬೇಕು.
ಕೆಂಪು ಡ್ರಾಗನ್ ಫ್ರುಟ್ ಹಣ್ಣು

1ಎಕರೆಗೆ450 -500 ಕಂಬಗಳು ಬೇಕಾಗುತ್ತವೆ. ಗಿಡವು 4-5 ಅಡಿ ಬೆಳೆದ ನಂತರ ಗಿಡವನ್ನು ಬಾಗಿಸಬೇಕು ಅದಕ್ಕಾಗಿ ಕಾಂಕ್ರೀಟಿನ ತೂತು ಇರುವ ಹಲಗೆಗಳಿವೆ.  ಕಬ್ಬಿಣದ ಆಂಗ್ಲರ್ ಮೂಲಕವೂ ಮಾಡಬಹುದು.  ಹಳೆಯ ಟಯರ್ ಗಳ ಮೂಲಕವೂ ಇದನ್ನು ಮಾಡಬಹುದು.

  • ನಾಟಿ ಮಾಡುವುದಕ್ಕೆ ಜೂನ್ ತಿಂಗಳು ಸೂಕ್ತ.
  • ಒಂದು ಕಂಬಕ್ಕೆ3-4 ಗಿಡ ನಾಟಿ ಮಾಡಬೇಕು. ನಾಟಿ ಮಾಡಿದ13-14 ತಿಂಗಳಿಂದ ಇಳುವರಿ ಆರಂಭವಾಗುತ್ತದೆ.
  • ಇದರ ಗಿಡದ ತುಂಡುಗಳು ಚೆನ್ನಾಗಿ ಬೇರು ಬರುವ ಕಾರಣ ಸಸ್ಯಾಭಿವೃದ್ದಿ ತುಂಬಾ ಸುಲಭ.
  • ಗಿಡವನ್ನು ಬಾಗಿಸುವುದು ಬಿಟ್ಟರೆ ಅಂತಹ ನಿರ್ವಹಣೆ ಇಲ್ಲ. 
  • ರೋಗ ಇಲ್ಲ. ಅಲ್ಪ ಸ್ವಲ್ಪ ಗಿಡದ ಎಳೆ ಭಾಗವನ್ನು ತಿನ್ನುವ ಹುಳ ಇರುತ್ತದೆ.   ಇದುವರೆಗೂ ಯಾವುದೇ ರೋಗ ಕಂಡುಬಂದಿಲ್ಲ.
  • ನೀರು ಹೆಚ್ಚಾದರೆ ಮಾತ್ರ ಕೊಳೆ ರೋಗ ಬರುತ್ತದೆ. ನೀರು ಬಸಿಯದ ಮಣ್ಣು ಇದಕ್ಕೆ ಸೂಕ್ತವಲ್ಲ.

ಇಳುವರಿ:

ಡ್ರಾಗನ್ ಫ್ರುಟ್ ಹೂವು ಮೊಗ್ಗು
  • ಒಂದು ಕಾಯಿ ತೂಕ 300-400  ಗ್ರಾಂ  ತನಕ ಬರುತ್ತದೆ.
  • ಕಡಿಮೆ ಮಳೆ ಬೀಳುವಲ್ಲಿಯೂ ಉತ್ತಮ ಇಳುವರಿ ತೆಗೆಯಬಹುದು.
  • ಮೊದಲ ಬೆಳೆ ಸರಾಸರಿ1.5 ಟನ್ ಸಿಗುತ್ತದೆ. ಮೂರನೇ ವರ್ಷ6-7 ಟನ್ ಸಿಗುತ್ತದೆ.
  • ಗಿಡದ ಜೀವಿತಾವಧಿ 25-30 ವರ್ಷ ಆಗಿರುತ್ತದೆ.ವರ್ಷ ಹೆಚ್ಚಾದಂತೆ ಇಳುವರಿ ಹೆಚ್ಚುತ್ತದೆ.
  • ಪ್ರಾರಂಭದ  ವರ್ಷಗಳಲ್ಲಿ ಅಂತರ ಬೆಳೆಗಳನ್ನು ಬೆಳೆಯಬಹುದು. ಉದಾ: ದ್ವಿದಳ ಧಾನ್ಯಗಳು ಸೂಕ್ತ. ಇದು ಮೂರು  ವರ್ಷದ ತನಕವೂ ಬೆಳೆಯಬಹುದು.
ಗಿಡಕ್ಕೆ ಬಿಸಿಲಿನಿಂದ ರಕ್ಷಣೆಗೆ ಸುಣ್ಣ+ ತುತ್ತೆ ದ್ರಾವಣ ಸಿಂಪರಣೆ
ಗಿಡಕ್ಕೆ ಬಿಸಿಲಿನಿಂದ ರಕ್ಷಣೆಗೆ ಸುಣ್ಣ+ ತುತ್ತೆ ದ್ರಾವಣ ಸಿಂಪರಣೆ

ಮಾರುಕಟ್ಟೆ ವ್ಯವಸ್ಧೆ:

  • ಹಣ್ಣು ಹಂಪಲು ಮಾರುವ ಅಂಗಡಿಗಳು, ಮಾಲ್‍ಗಳು, ಮೋರ್ ಅಂಗಡಿಗಳು ಹಾಗೂ ಜ್ಯೂಸ್ ಅಂಗಡಿಗಳಲ್ಲಿ ತುಂಬಾ ಬೇಡಿಕೆ ಇದೆ.
  • ಮೊದಲ ವರ್ಷ ಖರ್ಚು; 2 ಲಕ್ಷದವರೆಗೆ   ಬರುತ್ತದೆ. (ಕಂಬ, ಗುಂಡಿತೆಗೆಯಲು, ಟ್ಯೂಬ್)
  • ಆದಾಯ: 2-2.5 ಲಕ್ಷ (ಒಂದು ಕಂಬಕ್ಕೆ 8 ಕೆಜಿ)
  • ಮೂರನೇ ವರ್ಷ :ಆದಾಯ: 8-10 ಲಕ್ಷ ನಂತರ ಆದಾಯ ಹೆಚ್ಚುತ್ತದೆ.

ಹೊಸ ಬೆಳೆ ಎಚ್ಚರಿಕೆ ಇರಲಿ;

  • ರೈತರು ಸ್ಧಳಿಯ ವ್ಯಾಪಾರಿಗಳ ಖರೀದೀ, ಬೇಡಿಕೆ ಖಚಿತಪಡಿಸಿ ನಂತರವೇ ಬೆಳೆಯಲು ಮುಂದಾಗಬೇಕು.
  • ಹೆಚ್ಚಿನ ಮಾಹಿತಿಗಾಗಿ:ತುಮಕೂರಿನ ಈರುಳ್ಳಿ ಕೇಂದ್ರಿಯ ತೋಟಗಾರಿಕೆ ಸಂಶೋದನೆ ಕೇಂದ್ರದ ಮುಖ್ಯಸ್ಧರು ಡಾ.ಕರುಣಾಕರನ್ ಪೊನ್ ನಂಬರ್: 9483233804 ರನ್ನು ಸಂಪರ್ಕಿಸಿ.
  • ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದನ್ನು ಪ್ರಾತ್ಯಕ್ಷಿಕೆಯಾಗಿ ಬೆಳೆದಿದ್ದಾರೆ.

ಲೇಖಕರು: 1)      ಮಾನಸಎಲ್.ಪಿ. ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ. 2)      ಮುನಿಯಪ್ಪಪಿ.ಎಚ್.ಡಿ. ಕೃ.ವಿ.ವಿ.ರಾಯಚೂರು. 3)      ಪೂಜಾ.ಎಸ್.ಪಿ. ಪಿ.ಎಚ್.ಡಿ.ಕೃ.ವಿ.ವಿ.ಬೆಂಗಳೂರು.

2 thoughts on “ಕನ್ನಡ ನಾಡಿನಲ್ಲಿ ಹೊಸ ಹಣ್ಣಿನ ಬೆಳೆಯ ಹವಾ- ಡ್ರ್ಯಾಗನ್ ಫ್ರೂಟ್ ಬೆಳೆ.

Leave a Reply

Your email address will not be published. Required fields are marked *

error: Content is protected !!