ಅನನಾಸು ತೋಟ

ಅನನಾಸು – ಹಣ್ಣಿನ ಬೆಳೆಗಳಲ್ಲಿ ಇದು ಸುಲಭದ್ದು.

ಪರಂಗಿ ಹಣ್ಣು ಎಂಬ ಹೆಸರಿನ ಅನನಾಸು ಕರಾವಳಿ ಒಳನಾಡು ಪ್ರದೇಶದ ಬೌಗೋಳಿಕತೆಗೆ ಹೊಂದಿಕೆಯಾಗುವ ಹಣ್ಣಿನ ಬೆಳೆ. ಜನ ಪರಂಗಿ ಹಣ್ಣು ಬೆಳೆಯಲು ರೈತರು ಅದುಹಾಕುತ್ತಾರೆ , ಇದು ಹಾಕುತ್ತಾರೆ, ರಾಸಾಯನಿಕ ಎಂಬಿತ್ಯಾದಿ ಹೇಳುತ್ತಾರೆ. ಇದೆಲ್ಲಾ ಸುಳ್ಳು. ಈ ಗಿಡದ ಎಲ್ಲಾ ಶರೀರ ಪ್ರಕೃತಿ ಬರ ಸಹಿಷ್ಣು. ಇದಕ್ಕೆ ಬೇರೆ ಬೆಳೆಗೆ ಗೊಬ್ಬರ ಕೊಟ್ಟಂತೆ ಕೊಡಲಿಕ್ಕೆ ಕಷ್ಟ.ಅಷ್ಟು ಪ್ರಮಾಣದಲ್ಲಿ ಗೊಬ್ಬರವೂ ಬೇಡ. ಅದಕ್ಕಾಗಿ ಬೆಳೆಯುವವರು ಸದಾ ಪೋಶಕಾಂಶಗಳನ್ನು ಕಡಿಮೆ ತೀರಾ ಕಡಿಮೆ ಸಾಂದ್ರತೆಯಲ್ಲಿ ಎಲೆಗಳಿಗೆ ಸಿಂಪಡಿಸುತ್ತಾರೆ. ಇದನ್ನೇ ದೂರದಿಂದ…

Read more
ಗಡ್ದೆ ಕಸಿಯ ಗಿಡ

ಗಡ್ಡೆಯಿಂದ ಅಂಗಾಂಶ ಕಸಿ- ನೀವೇ ಮಾಡಬಹುದು ಹೇಗೆ?

ನಿಮಗೆ ಖುಷಿ ಕಂಡ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು  ಗಡ್ಡೆಯ ಮೂಲದಲ್ಲಿ 4 ತಿಂಗಳೊಳಗೆ 50 ಕ್ಕೂ ಹೆಚ್ಚು ಸಸಿಗಳನ್ನು  ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪ್ರಚಾರಕ್ಕೆ ತಂದಿದ್ದಾರೆ. ಬಾಳೆಯ ಅಧಿಕ ಸಸಿಗಾಗಿ ಅಂಗಾಂಶ ಕಸಿ ಮಾಡಬೇಕು. ಇಲ್ಲವೇ ಅಧಿಕ ತೂಕದ ಗಡ್ಡೆಯನ್ನು ತರಬೇಕು. ಅದರ ಬದಲಿಗೆ ಒಂದು ಗಡ್ಡೆ ಇದ್ದರೆ ನಿಮ್ಮ ಮನೆಯಲ್ಲೇ ಅಧಿಕ ಸಂಖ್ಯೆಯ ಬಾಳೆ ಸಸಿಯನ್ನು ಉತ್ಪಾದಿಸಲು…

Read more
ಅನನಾಸು ಹಣ್ಣು

ಸಾವಯವ ಅನನಾಸು ಬೆಳೆ- ಸುಲಭ. ಹೇಗೆ?

ಸಾವಯವ ಅನನಾಸು ಬೆಳೆ ಏನೂ ಕಷ್ಟದ್ದಲ್ಲ. ಇದು  ಬರಸಹಿಷ್ಣು ಸಸ್ಯ. ಆದುದರಿಂದ ಇದನ್ನು ನೀರು ಗೊಬ್ಬರ ಇಲ್ಲದೆ ಸಾವಯವ ವಿಧಾನದಲ್ಲೇ ಬೆಳೆಯಬಹುದು.  ಆದರೆ ಕೆಲವು ಜನ ಇದಕ್ಕೆ ಒಂದಷ್ಟು ರಾಸಾಯನಿಕ ಬಳಕೆ ಮಾಡುತ್ತಾರೆ, ಕಾರಣ ಇಷ್ಟೇ  ಗ್ರಾಹಕರಿಗೆ ನೋಟ ಚೆನ್ನಾಗಿರುವ, ದೊಡ್ದದಾದ ಹಣ್ಣು ಬೇಕು. ಗ್ರಾಹಕರ ಓಲೈಕೆಗಾಗಿ ಬೆಳೆಗಾರರು ರಾಸಾಯನಿಕ ಬಳಸುತ್ತಾರೆ. ಇದನ್ನು ಬಳಸದೆ ಬೆಳೆಯಲು ಯಾವುದೇ ಕಷ್ಟ ಇಲ್ಲ. ಅನನಾಸು ಬೆಳೆಗೆ ಪ್ರಮುಖವಾಗಿ ಬೇಕಾಗುವುದು, ಉತ್ತಮ ಬೆಳಕು. ನೀರು ಹೆಚ್ಚು ಬೇಡ. ಇಬ್ಬನಿಯ ನೀರಿನಲ್ಲೂ ಬದುಕುತ್ತದೆ. ಇದರ…

Read more
ಬಾಳೆ ಎಲೆ ವೈರಾಣು ರೋಗ ಚಿನ್ಹೆ- Virus diseae symptom

ಬಾಳೆಯ ಎಲೆ ಹೀಗೆ ಆದರೆ ಅದು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ..

ಬಾಳೆ ಹಾಗೆಯೇ ಇನ್ನೂ ಕೆಲವು ಬೆಳೆಗಳಲ್ಲಿ ವೈರಾಣು ರೋಗ ಬಂದಿತೆಂದರೆ ಅದನ್ನು ಉಳಿಸಿದರೆ ಬೇರೆ ಬಾಳೆಗೆ ಹರಡುತ್ತದೆ. ಇದನ್ನು  ಮುಂಚಿತವಾಗಿ ಗುರುತಿಸಿ ಅದನ್ನು ನಾಶ ಮಾಡುವುದರಲ್ಲೇ ಇರುವುದು ಬಾಳೆಯ ರೋಗ ಮುಕ್ತ ಬೇಸಾಯ ಕ್ರಮ. ನೀವು ನೆಟ್ಟ ಬಾಳೆಯ ಎಲೆಗಳು  ಸಹಜವಾಗಿ ಇರದೆ ಎಲೆಗಳ ಮೂಡುವಿಕೆ ಗುಚ್ಚದ ತರಹ ಆಗಿ, ಯಾವುದೂ ಪೂರ್ಣವಾಗಿ ಬಿಡಿಸಿಕೊಳ್ಳದಿದ್ದರೆ ಅದು ನಂಜಾಣು ರೋಗ. ಕೆಲವು ಎಲೆಗಳು ಸಹಜವಾಗಿ ಬಂದು ನಂತರ ಬರುವ ಎಲೆಗಳು ಶಕ್ತಿ ಕಳೆದುಕೊಂಡು ಹಳದಿಯಾಗಿ ಮೂಡಿತೆಂದರೆ ಅದು ಸಹ…

Read more

ಇದು ಅಸಾಮಾನ್ಯ ರೋಗನಿರೋಧಕ ಶಕ್ತಿಯುಳ್ಳ ಹಣ್ಣು.

ನಮ್ಮ ರಾಜ್ಯದ ಬಯಲು ಸೀಮೆ ಪ್ರದೇಶಗಳಲ್ಲಿ ಬೆಳೆಯುವ ಬೇಲದ ಹಣ್ಣಿನಷ್ಟು ಆರೋಗ್ಯಕರ ಹಣ್ಣು ಬೇರೊಂದಿಲ್ಲ.ಇದು ಒಂದು ಅರಣ್ಯ ಹಣ್ಣು. ರೋಮನ್ನರು ಈ ಮರವನ್ನು ಅರಣ್ಯ ದೇವತೆ ಎಂದು ಕರೆದಿದ್ದಾರೆ. ಅರೆ ಶುಷ್ಕ ಭೂಮಿಯಲ್ಲಿ ಬೆಳೆಯಲ್ಪಡುವ  ಹಣ್ಣಿನ ಬೆಳೆ ಇದು. ನಮ್ಮ ದೇಶದ ಫಲ ಸಂಪತ್ತಿನಲ್ಲಿ ಹೆಚ್ಚು ಜನಪ್ರಿಯವಾಗದೇ ಇರುವ ಬಹಳ ಆರೋಗ್ಯಪೂರ್ಣವಾದ  ಹಣ್ಣು ಎಂದರೆ ಇದು. ಬೆಳೆಯುವ ಪ್ರದೇಶಗಳು: ಕರಾವಳಿ ಮಲೆನಾಡಿನಲ್ಲಿ ಈ ಹಣ್ಣಿನ ಮರಗಳು ಇಲ್ಲವೇ ಇಲ್ಲ ಎನ್ನಬಹುದು. ಉಳಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದು…

Read more

ಮನೆಯಲ್ಲೇ ಹಲಸಿನ ಹಣ್ಣಿನ ವೈನ್ ತಯಾರಿಕೆ.

ಹಲವು ಬಗೆಯ ಹಣ್ಣುಗಳಿಂದ ವೈನ್ ತಯಾರಿಸಲಿಕ್ಕೆ ಆಗುತ್ತದೆ. ಹುಳಿ ಅಂಶ ಇರುವ ಹಣ್ಣುಗಳ ವೈನ್ ಮಾಡುವುದು ಸಾಮಾನ್ಯವಾದರೂ , ಬರೇ ಸಿಹಿ ಇರುವ ಹಣ್ಣುಗಳಿಂದಲೂ ವೈನ್ ಮಾಡಬಹುದು. ವೈನ್ ಎಂಬುದು ಆರೋಗ್ಯಕ್ಕೆ ಉತ್ತಮ ಪೇಯವಾಗಿದ್ದು, ಎಲ್ಲರೂ ಇದನ್ನು ಹಿತ ಮಿತವಾಗಿ ಸೇವಿಸಬಹುದು. ಹಲಸಿನ ಹಣ್ಣಿನ ವೈನ್ ವಿಶಿಷ್ಟ ಸುವಾಸನೆಯೊಂದಿಗೆ ಸಿಹಿ ವೈನ್ ಆಗಿರುತ್ತದೆ. ಹಲಸಿನಲ್ಲಿ ಬಕ್ಕೆ ಮತ್ತು ಬೆಳುವ ಎಂಬ ಎರಡು ವಿಧ. ಹಣ್ಣಿಗೆ ಬಕ್ಕೆ ಹಲಸು ಸೂಕ್ತ. ಬೆಳುವೆ ಅಥವಾ ಅಂಬಲಿ ಹಣ್ಣು ರುಚಿಯಲ್ಲಿ, ಎಲ್ಲದರಲ್ಲೂ…

Read more

ಅತೀ ಕಡಿಮೆ ಖರ್ಚಿನ ಹಣ್ಣಿನ ಬೆಳೆ- ಅನನಾಸು

ಅನಾನಾಸು ತೋಟಗಾರಿಕಾ ಬೆಳೆಗಳಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ತಾಜಾ ಹಣ್ಣು ಮತ್ತು ಸಂಸ್ಕರಣೆಗೆ ಬಳಕೆಯಾಗುವಂತದ್ದು. ಪ್ರಸ್ತುತ ಗ್ರಾಹಕರ ಅಭಿರುಚಿಗಾಗಿ ಬೆಳೆಗಾರರು  ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟರೆ ಈ ಬೆಳೆಗೆ ಕೀಟ ನಾಶಕ- ರೋಗ ನಾಶಕ ಬಳಕೆಯೇ ಬೇಕಾಗಿಲ್ಲ. ಇದು ಬೇಸಿಗೆ ಕಾಲದ ಪ್ರಮುಖ ಪೌಷ್ಟಿಕ  ಹಣ್ಣಿನ ಬೆಳೆ ಇದು. ಅನನಾಸಿನ  ವಿಶೇಷ ಎಂದರೆ ಉಳಿದ ಹಣ್ಣು ಹಂಪಲಿನಂತೆ ಇದಕ್ಕೆ ಹಣ್ಣು ನೊಣ ಇಲ್ಲ. ಕೀಟ ರೋಗ ಬಾಧೆಗಳು  ತೀರಾ ಕಡಿಮೆ. ಇದನ್ನು ಒಂದು ರಾಸಾಯನಿಕ ಮುಕ್ತ…

Read more
ರಾಂಬುಟಾನ್ ಹಳದಿ ಹಣ್ಣು

ಅಧಿಕ ಬೆಲೆ ಇರುವ ವಿದೇಶೀ ಹಣ್ಣು – ರಾಂಬುಟಾನ್.

ಕೆಲವು ವಿದೇಶೀ ಹಣ್ಣಿನ ಬೆಳೆಗಳು ಬ್ರಿಟೀಷರ ಕಾಲದಲ್ಲಿ  (ಪೋರ್ಚುಗೀಸರಿಂದ) ಕೇರಳದ ಪಟ್ಟಣಂತಿಟ್ಟ ಪ್ರದೇಶದಲ್ಲಿ  ಪರಿಚಯಿಸಲ್ಪಟ್ಟಿತ್ತಂತೆ. ಅದನ್ನು ಕೆಲವು ಕೇರಳಿಗರು ಅಭಿವೃದ್ದಿಪಡಿಸಿದರು.  ಮತ್ತೆ ಕೆಲವರು ಹೊರ ದೇಶಗಳಿಂದ ಸಸಿ ಮೂಲ ತರಿಸಿ, ಬೇರೆ ಬೇರೆ ತಳಿಗಳಾಗಿ ಹೆಸರು ಕೊಟ್ಟು , ಈಗ ಇದನ್ನು ವಾಣಿಜ್ಯಿಕವಾಗಿ ಬೆಳೆಸುತ್ತಿದ್ದಾರೆ. ಅವುಗಳಲ್ಲಿ ಒಂದು ರಾಂಬುಟಾನ್ ಎಂಬ ಹಣ್ಣು. ಈ ಹಣ್ಣಿಗೆ ಸರಾಸರಿ ಕೊಳ್ಳುವ ಬೆಲೆ ರೂ.100 ಇದೆ. ರಾಂಬುಟಾನ್ ಇದು ದಕ್ಷಿಣ ಏಶಿಯಾ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ, ಥೈಲಾಂಡ್ ಮೂಲದ  ವಿದೇಶೀ ಹಣ್ಣು….

Read more
Dragon fruit

ಕನ್ನಡ ನಾಡಿಗೆ ಹೊಸ ಹಣ್ಣಿನ ಬೆಳೆ- ಡ್ರ್ಯಾಗನ್ ಫ್ರೂಟ್.

ಡ್ರ್ಯಾಗನ್ ಹಣ್ಣು ಇದು  ನಮ್ಮ ಪ್ರಾದೇಶಿಕ ಹಣ್ಣು ಅಲ್ಲ. ಇದು ನಮ್ಮಲ್ಲಿಗೆ ಹೊಸ ಹಣ್ಣಿನ ಬೆಳೆ. ಇದೊಂದು ವಿಶೇಷ ಗುಣವುಳ್ಳ ಹಣ್ಣು. ನಮಲ್ಲಿ ಇತ್ತೀಚೆಗೆ ಇದರ ಪರಿಚಯವಾಗಿದೆ.ಅಮೇರಿಕಾದ ಮೆಕ್ಸಿಕೋದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿದೇಶದ ಈ ಹಣ್ಣುಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಬೀಜಾಪುರ,ಚಿತ್ರದುರ್ಗ, ಬೆಳಗಾವಿ ಮುಂತಾದ ಕೆಲವು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದಾರೆ. ವಿಶೇಷವಾಗಿ ಉತ್ತರಕರ್ನಾಟಕದ ರೈತರು ಆಡು ಭಾಷೆಯಲ್ಲಿ ಈ ಹಣ್ಣನ್ನು“ರಟಗೋಳಿ”ಅಥವಾ“ ಪಾಪಸ್ ಕಳ್ಳಿ ಗಿಡ”ಎಂತಲೂಕರೆಯುತ್ತಾರೆ.  ಗಿಡ ನೋಡಲು ಪಪಾಸುಕಳ್ಳಿಯಂತೆ ಇರುತ್ತದೆ.  ಹಣ್ಣುಗಳು ಸ್ವಲ್ಪ ಅಲಂಕಾರಿಕವಾಗಿ ಕಾಣುತ್ತದೆ. ಇದರ ಒಳಗಿನ…

Read more
ಇಂತಹ ಬೆಳೆ ಬೆಳೆಯುವಾಗ ರಾಸಾಯನಿಕ ಪೊಷಕಗಳು ಬೇಕಾಗುತ್ತದೆ.

ಸಾವಯವ ಬಾಳೆ ಬೇಸಾಯ ಅಸಾಧ್ಯವಲ್ಲ.

ಸಾವಯವ ವಿಧಾನದಲ್ಲಿ ಬಾಳೆ ಬೆಳೆಸುವುದಾದರೆ ಆಗಾಗ ಪೋಷಕಗಳನ್ನು ಕೊಡುತ್ತಾ ತೀವ್ರ ನಿಗಾದಲ್ಲಿ ಬೆಳೆ ಬೆಳೆಸಬೇಕಾಗಿಲ್ಲ. ಬಾಳೆಗೆ ಎಷ್ಟು ಪೋಷಕಾಂಶಗಳು ಬೇಕಾಗುತ್ತದೆಯೋ ಅಷ್ಟನ್ನು ಒಂದು ಇಲ್ಲವೇ ಎರಡು ಕಂತುಗಳಲ್ಲಿ ಕೊಟ್ಟರೆ ಸಾಕು. ಭಾರೀ ಗೊನೆ ಬಾರದಿದ್ದರೂ ಸರಾಸರಿ 25  ಕಿಲೋ ತೂಕದ ಗೊನೆ ಪಡೆಯಬಹುದು. ತಿನ್ನುವ ಹಣ್ಣು ಆದ ಕಾರಣ ಸಾಧ್ಯವಾದಷ್ಟು  ರಾಸಾಯನಿಕ ಬಳಕೆ ಕಡಿಮೆ ಮಾಡಿ  ಬೆಳೆ ಬೆಳೆದರೆ ಆರೋಗ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ಯಾವ ಯಾವ ಸಾವಯವ ಪೋಷಕಗಳನ್ನು ಬಳಸಿ ಉತ್ತಮ ಬಾಳೆ  ಗೊನೆ ಪಡೆಯಬಹುದು…

Read more
error: Content is protected !!