ಕನ್ನಡ ನಾಡಿಗೆ ಹೊಸ ಹಣ್ಣಿನ ಬೆಳೆ- ಡ್ರ್ಯಾಗನ್ ಫ್ರೂಟ್.

Dragon fruit

ಡ್ರ್ಯಾಗನ್ ಹಣ್ಣು ಇದು  ನಮ್ಮ ಪ್ರಾದೇಶಿಕ ಹಣ್ಣು ಅಲ್ಲ. ಇದು ನಮ್ಮಲ್ಲಿಗೆ ಹೊಸ ಹಣ್ಣಿನ ಬೆಳೆ. ಇದೊಂದು ವಿಶೇಷ ಗುಣವುಳ್ಳ ಹಣ್ಣು. ನಮಲ್ಲಿ ಇತ್ತೀಚೆಗೆ ಇದರ ಪರಿಚಯವಾಗಿದೆ.ಅಮೇರಿಕಾದ ಮೆಕ್ಸಿಕೋದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿದೇಶದ ಈ ಹಣ್ಣುಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಬೀಜಾಪುರ,ಚಿತ್ರದುರ್ಗ, ಬೆಳಗಾವಿ ಮುಂತಾದ ಕೆಲವು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದಾರೆ.

Dragon fruit crop

 • ವಿಶೇಷವಾಗಿ ಉತ್ತರಕರ್ನಾಟಕದ ರೈತರು ಆಡು ಭಾಷೆಯಲ್ಲಿ ಈ ಹಣ್ಣನ್ನು“ರಟಗೋಳಿ”ಅಥವಾ“ ಪಾಪಸ್ ಕಳ್ಳಿ ಗಿಡ”ಎಂತಲೂಕರೆಯುತ್ತಾರೆ.
 •  ಗಿಡ ನೋಡಲು ಪಪಾಸುಕಳ್ಳಿಯಂತೆ ಇರುತ್ತದೆ.
 •  ಹಣ್ಣುಗಳು ಸ್ವಲ್ಪ ಅಲಂಕಾರಿಕವಾಗಿ ಕಾಣುತ್ತದೆ.
 • ಇದರ ಒಳಗಿನ  ತಿರುಳು ತಿನ್ನುವಂತದದ್ದು.
 • ಒಳ ಭಾಗ ಬಿಳಿಯಾಗಿದ್ದು, ಅಲ್ಲಲ್ಲಿ ಕಪ್ಪು ಬೀಜಗಳಿದ್ದು, ತಿನ್ನುವ ತಿರುಳೂ ಸಹ ಒಂದು ರೀತಿಯಲ್ಲಿ ಅಲಂಕಾರಿಕವಾಗಿಯೇ ಇರುತ್ತದೆ.
 • ಗಿಡದಲ್ಲಿ ಮುಳ್ಳು ಇದೆ. ಎಲೆ ಇಲ್ಲ.
 • ಹಣ್ಣು ನೋಡಿದರೆ ಯಾರೂ ಒಮ್ಮೆ ಕೊಳ್ಳಬೇಕು ಹಾಗೆ ಇರುತ್ತದೆ.
 • ಇದು ಆರೋಗ್ಯಕ್ಕೆ ಬಹಳ ಉತ್ತಮ ಹಣ್ಣು ಎಂದು ಮಾನ್ಯವಾಗಿದೆ.

ಆರೋಗ್ಯ ಗುಣಗಳು:

Fruit

 • ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇರುವ ಏಕೈಕ ಹಣ್ಣು.
 • ದೇಹದತೂಕ ಇಳಿಸಲು ಇದು ಹೇಳಿ ಮಾಡಿಸಿದ ಹಣ್ಣು ಎನ್ನಬಹುದು.
 • ಈ ಹಣ್ಣು ತಿಂದರೆ ಡಯಟ್ ಮಾಡಬೇಕಾಗಿಲ್ಲ.
 • ದೇಹದ ಶಕ್ತಿ ಸ್ವಲ್ಪವೂ ಕುಗ್ಗದೆ ಶರೀರ ಸ್ಲಿಂ ಆಗುತ್ತದೆ.
 • ಅಧಿಕ ನಾರಿನ ಅಂಶ ಹೊಂದಿದೆ. ಜೀರ್ಣಕ್ರಿಯೇಗೆ ಸಹಾಯಕಾರಿ.
 • ಮಲಬದ್ಧತೆ ಸಮಸ್ಯೆಇದ್ದವರಿಗೆ ಈ ಹಣ್ಣುರಾಮಬಾಣವೇ ಸರಿ.
 • ಉತ್ತಮ ಪ್ರೋಟೀನ್ ಅಂಶ ಹೊಂದಿದೆ.
 • ದೇಹದಲ್ಲಿರುವ ಕರಗದ ಕೊಬ್ಬು(Bad cholesterol ) ಪ್ರಮಾಣ ತಗ್ಗಿಸಿ ಹೃದಯದ ರಕ್ತ ಸಂಚಲಕ್ಕೆ ಸಹಾಯಕಾರಿ.
 • ಡಯಾಬೇಟಿಕ್ ರೋಗಿಗಳು ತಿನ್ನಬಹುದಾದ ಉತ್ತಮ ಹಣ್ಣು.
 • ಹೆಚ್ಚಿನ ಪ್ರಮಾಣದ ಪೈಬರ್‍ ಇರುವುದರಿಂದ ದೇಹದ ಇನ್ಸುಲಿನ್ ಪ್ರಮಾಣ ನಿಯಂತ್ರಿಸುವಲ್ಲಿಇದು ಸಹಾಯಾಕಾರಿ.
 • ಈ ಹಣ್ಣಿನಲ್ಲಿಆ್ಯಂಟಿ ಆಕ್ಸಿಡೆಂಟ್‍ಗುಣದಿಂದಾಗಿ ಚರ್ಮದ ತ್ವಚೆ ಕಾಪಾಡಲು ಸಹಾಯಕಾರಿ.
 •  ಸನ್ ಬರ್ನ್, ಮುಖದ ಮೊಡವೆಗಳ ನಿವಾರಣೆಗೆ ಸಹಾಯಕಾರಿ.
 • ಹಣ್ಣು ಸೇವನೆಯಿಂದ ಬಿಳಿ ರಕ್ತದ ಕಣಗಳನ್ನು ಹೆಚ್ಚಿಸಬಹುದಾಗಿದೆ.
 • ಹಣ್ಣಿನ ತೊಗಟೆಯನ್ನು ಸೋಪ್‍ ತರಹ ಉಪಯೋಗಿಸುವುದರಿಂದ ಹಲವು ಚರ್ಮದ ರೋಗಗಳು ನಿವಾರಣೆಯಾಗುತ್ತದೆ.
 • ಬಿಳಿ ಕೂದಲು ಸಮಸ್ಯೆ ನಿವರಣೆಯಾಗುತ್ತದೆ. ಡ್ರ್ಯಾಗನ್ ಹಣ್ಣಿನ ಜ್ಯೂಸ್‍ನ್ನು ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಹೊಳೆಯುತ್ತದೆ.

ವಿಧಗಳು:

Growing stand

 • ಇದು ಎಲೆ ಇಲ್ಲದ ಪಾಪಾಸುಕಳ್ಳಿ (ಕ್ಯಾಕ್ಟಸ್) ತರಹದ ಸಸ್ಯ.
 • ಇದರ ಮುಳ್ಳುಗಳೇ ಇದರ  ಎಲೆಗಳು.
 • ಇಲ್ಲಿಯೇ ಹೊಸ ಚಿಗುರುಗಳು ಮೂಡುವುದು.
 • ಕೆಂಪು ಹಣ್ಣು-ಬಿಳಿ ತಿರಳು : ಎಲೆ ದಪ್ಪ, ಕಡಿಮೆ ಮುಳ್ಳು, ಹೆಚ್ಚಿನ ಇಳುವರಿ.
 • ಕೆಂಪು ಹಣ್ಣು- ಕೆಂಪು ತಿರಳು : ಲೋಳೆ ಎಲೆ, ಕಡಿಮೆ ಮುಳ್ಳು, ಕಡಿಮೆ ಇಳುವರಿ . ಹೆಚ್ಚಿನ ಬೇಡಿಕೆ
 • ಹಳದಿ ಹಣ್ಣು -ಬಿಳಿ ತಿರಳು ಕಡಿಮೆ ಬೇಡಿಕೆ.

ಕರ್ನಾಟಕದಲ್ಲಿ ಮೊದಲ ಎರಡು ವಿಧ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಎಲ್ಲೆಲ್ಲಾ ಬೆಳೆಯಬಹುದು:

 • ಉಷ್ಣತೆ 30-40 ಡಿಗ್ರಿ ತನಕ ಇರುವ ಹವಾಮಾನದಲ್ಲೆಲ್ಲಾ ಬೆಳೆಯುತ್ತದೆ.
 • ಸಾಧಾರಣ ಫಲವತ್ತಾದ ಕೆಂಪು , ಗೊಚ್ಚು ಮಣ್ಣು, ಮರಳು ಮಣ್ಣು, ಇದಕ್ಕೆ ಚೆನ್ನಾಗಿ  ಹೊಂದಿಕೆಯಾಗುತ್ತದೆ.

ರಾಜ್ಯದಲ್ಲಿ ಬೆಂಗಳೂರು, ಕೋಲಾರ, ಬಿಜಾಪುರ, ಬಾಗಲಕೋಟೆ, ಅಥಣಿ, ತುಮಕೂರು ಮುಂತಾದ ಭಾಗಗಳಲ್ಲಿ ಬೆಳೆ ಇದೆ. ಅಥಣಿ ಮತ್ತು ಇದಕ್ಕೆ ತಾಗಿದ ಮಹಾರಾಷ್ಟ್ರದ (ಸಾಂಗ್ಲಿ)  ಭಾಗಗಳಲ್ಲಿ ಹಲವಾರು ಜನ  ಇದನ್ನು ಬೆಳೆಸುವವರಿದ್ದಾರೆ.

 • ದಾಳಿಂಬೆ ಬೆಳೆಯಲ್ಪಡುವ ಪ್ರದೇಶಗಳಲ್ಲೆಲ್ಲಾ ಇದನ್ನು ಬೆಳೆಸಬಹುದು.

ನೆಡುವುದು ಹೇಗೆ:

 • ಸಾಮಾನ್ಯವಾಗಿ ಇದನ್ನು ಇತರ ಹಣ್ಣಿನ ಬೆಳೆಗಳನ್ನು ಬೆಳೆದಂತೆ  ಹನಿ ನೀರಾವರಿ ಮಾಡಿ  ಬೆಳೆಯಲಾಗುತ್ತದೆ.
 • ವಾರಕ್ಕೊಮ್ಮೆ ನೀರು ಕೊಟ್ಟರೂ ಸಾಕಾಗುತ್ತದೆ ಎನ್ನುತ್ತಾರೆ ಬೆಳೆದವರು.
 • ಹನಿ ನೀರಾವರಿಯ ಮೂಲಕ ಪೋಷಕಾಂಶಗಳನ್ನು ಕೊಟ್ಟರೆ ಒಳ್ಳೆಯದು.
 • ಒಂದುಎಕರೆ ಭೂಮಿಯಲ್ಲಿ2X2X2 ಅಡಿ ಹೊಂಡ ತೆಗೆದು ಪ್ರತಿಗುಂಡಿಗೆ 8-10 ಕೆಜಿ ಸಗಣಿಗೊಬ್ಬರ,1 ಕಿಲೋ ದಷ್ಟು ಬೇವಿನ ಹಿಂಡಿ ಹಾಕಿ ನಾಟಿ ಮಾಡಬೇಕು.
 • ಈ ಗಿಡವು ಬಳ್ಳಿಯ ಹಾಗೆ ಬೆಳೆಯುವುದರಿಂದ ಆಧಾರಕ್ಕಾಗಿ ಕಂಬಗಳನ್ನು ನೆಡಬೇಕು.

ಚಿತ್ರದಲ್ಲಿ ಕಾಣಿಸಿದಂತೆ ಕಾಂಕ್ರೀಟ್ ಕಂಬಗಳು ಮತ್ತು ಅದರಲ್ಲಿ ಬಳ್ಳಿ ನೇತಾಡಲು ಅವಕಾಶ ಕಲ್ಪಿಸಬೇಕು.

 • ಮಳೆ ಹೆಚ್ಚು ಬೀಳುವ ಕಡೆ ಏರು ಮಡಿಗಳ ಮೇಲೆ ಕಂಬಗಳನ್ನು ನೆಡಬೇಕು.
 • 10-12 ಅಡಿ ಸಾಲುಗಳ ಅಂತರ 6-7 ಅಡಿ ಗಿಡಗಳ ಅಂತರದಲ್ಲಿ ಬೆಳೆಸಬೇಕು.

1ಎಕರೆಗೆ450 -500 ಕಂಬಗಳು ಬೇಕಾಗುತ್ತವೆ. ಗಿಡವು 4-5 ಅಡಿ ಬೆಳೆದ ನಂತರ ಗಿಡವನ್ನು ಬಾಗಿಸಬೇಕು ಅದಕ್ಕಾಗಿ ಕಾಂಕ್ರೀಟಿನ ತೂತು ಇರುವ ಹಲಗೆಗಳಿವೆ.  ಕಬ್ಬಿಣದ ಆಂಗ್ಲರ್ ಮೂಲಕವೂ ಮಾಡಬಹುದು.

 • ನಾಟಿ ಮಾಡುವುದಕ್ಕೆ ಜೂನ್ ತಿಂಗಳು ಸೂಕ್ತ.
 • ಒಂದು ಕಂಬಕ್ಕೆ3-4 ಗಿಡ ನಾಟಿ ಮಾಡಬೇಕು.
 • ನಾಟಿ ಮಾಡಿದ13-14 ತಿಂಗಳಿಂದ ಇಳುವರಿ ಆರಂಭವಾಗುತ್ತದೆ.
 • ಇದರ ಗಿಡದ ತುಂಡುಗಳು ಚೆನ್ನಾಗಿ ಬೇರು ಬರುವ ಕಾರಣ ಸಸ್ಯಾಭಿವೃದ್ದಿ ತುಂಬಾ ಸುಲಭ.

ಗಿಡವನ್ನು ಬಾಗಿಸುವುದು ಬಿಟ್ಟರೆ ಅಂತಹ ನಿರ್ವಹಣೆ ಇಲ್ಲ.  ರೋಗ ಇಲ್ಲ. ಅಲ್ಪ ಸ್ವಲ್ಪ ಗಿಡದ ಎಳೆ ಭಾಗವನ್ನು ತಿನ್ನುವ ಹುಳ ಇರುತ್ತದೆ.   ಇದುವರೆಗೂ ಯಾವುದೇ ರೋಗ ಕಂಡುಬಂದಿಲ್ಲ. ನೀರು ಹೆಚ್ಚಾದರೆ ಮಾತ್ರ ಕೊಳೆ ರೋಗ ಬರುತ್ತದೆ. ನೀರು ಬಸಿಯದ ಮಣ್ಣು ಇದಕ್ಕೆ ಸೂಕ್ತವಲ್ಲ.

 • ಕಡಿಮೆ ಮಳೆ ಬೀಳುವಲ್ಲಿಯೂ ಉತ್ತಮ ಇಳುವರಿ ತೆಗೆಯಬಹುದು.
 • ಮೊದಲ ಬೆಳೆ ಸರಾಸರಿ1.5 ಟನ್ ಸಿಗುತ್ತದೆ. ಮೂರನೇ ವರ್ಷ6-7 ಟನ್ ಸಿಗುತ್ತದೆ.
 • ಗಿಡದ ಜೀವಿತಾವಧಿ 25-30 ವರ್ಷ ಆಗಿರುತ್ತದೆ.ವರ್ಷ ಹೆಚ್ಚಾದಂತೆ ಇಳುವರಿ ಹೆಚ್ಚುತ್ತದೆ.
 • ಪ್ರಾರಂಭದ  ವರ್ಷಗಳಲ್ಲಿ ಅಂತರ ಬೆಳೆಗಳನ್ನು ಬೆಳೆಯಬಹುದು. ಉದಾ: ದ್ವಿದಳ ಧಾನ್ಯಗಳು ಸೂಕ್ತ. ಇದು ಮೂರು  ವರ್ಷದ ತನಕವೂ ಬೆಳೆಯಬಹುದು.

ಇಳುವರಿ:

 • ಒಂದು ಕಾಯಿ ತೂಕ 300-400  ಗ್ರಾಂ  ತನಕ ಬರುತ್ತದೆ.

ಮಾರುಕಟ್ಟೆ ವ್ಯವಸ್ಧೆ:

 • ಹಣ್ಣು ಹಂಪಲು ಮಾರುವ ಅಂಗಡಿಗಳು, ಮಾಲ್‍ಗಳು, ಮೋರ್ ಅಂಗಡಿಗಳು ಹಾಗೂ ಜ್ಯೂಸ್ ಅಂಗಡಿಗಳಲ್ಲಿ ತುಂಬಾ ಬೇಡಿಕೆ ಇದೆ.

ಆದಾಯ:

 • ಮೊದಲ ವರ್ಷ ಖರ್ಚು; 2 ಲಕ್ಷದವರೆಗೆ   ಬರುತ್ತದೆ. (ಕಂಬ, ಗುಂಡಿತೆಗೆಯಲು, ಟ್ಯೂಬ್)
 • ಆದಾಯ: 2-2.5 ಲಕ್ಷ (ಒಂದು ಕಂಬಕ್ಕೆ 8 ಕೆಜಿ)
 • ಮೂರನೇ ವರ್ಷ :ಆದಾಯ: 8-10 ಲಕ್ಷ ನಂತರ ಆದಾಯ ಹೆಚ್ಚುತ್ತದೆ.

ಹೊಸ ಬೆಳೆ ಇರಲಿ ಎಚ್ಚರಿಕೆ;

 • ರೈತರು ಸ್ಧಳಿಯ ವ್ಯಾಪರಿಗಳ ಖರೀದೀ, ಬೇಡಿಕೆ ಖಚಿತಪಡಿಸಿ ನಂತರವೇ ಬೆಳೆಯಲು ಮುಂದಾಗಬೇಕು.

ಹೆಚ್ಚಿನ ಮಾಹಿತಿಗಾಗಿ:ತುಮಕೂರಿನ ಈರುಳ್ಳಿ ಕೇಂದ್ರಿಯ ತೋಟಗಾರಿಕೆ ಸಂಶೋದನೆ ಕೇಂದ್ರದ ಮುಖ್ಯಸ್ಧರು ಡಾ.ಕರುಣಾಕರನ್ ಪೊನ್ ನಂಬರ್: 9483233804 ರನ್ನು ಸಂಪರ್ಕಿಸಿ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದನ್ನು ಪ್ರಾತ್ಯಕ್ಷಿಕೆಯಾಗಿ ಬೆಳೆದಿದ್ದಾರೆ.

ಲೇಖಕರು: 1)      ಮಾನಸಎಲ್.ಪಿ. ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ.  2)      ಮುನಿಯಪ್ಪಪಿ.ಎಚ್.ಡಿ. ಕೃ.ವಿ.ವಿ.ರಾಯಚೂರು.  3)      ಪೂಜಾ.ಎಸ್.ಪಿ. ಪಿ.ಎಚ್.ಡಿ.ಕೃ.ವಿ.ವಿ.ಬೆಂಗಳೂರು

Leave a Reply

Your email address will not be published. Required fields are marked *

error: Content is protected !!