
ಮೊದಲ ಮಳೆಯ ನೀರಿಗಿದೆ ಅಪರಿಮಿತ ಪೋಷಕ ಶಕ್ತಿ.
ಮೊದಲ ಮಳೆ ಬಂದರೆ ಸಾಕು, ಎಲ್ಲಾ ತರಹದ ಬೀಜಗಳು ಹುಟ್ಟುತ್ತವೆ. ಹುಲ್ಲು ಸಸ್ಯಗಳು ಒಂದೇ ಸಮನೆ ಬೆಳೆಯುತ್ತವೆ. ನೀರಾವರಿಯಲ್ಲಿ ದೊರೆಯದ ಫಲಿತಾಂಶ ಮೊದಲ ಮಳೆ ಸಿಂಚನದಲ್ಲಿ ದೊರೆಯುತ್ತದೆ. ಆದ ಕಾರಣ ಮೊದಲ ಮಳೆಯ ನೀರಿನಲ್ಲಿ ಅಗಾಧ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೊದಲ ಮಳೆ ಬಂದ ತಕ್ಷಣ ಸಸ್ಯಗಳಿಗೆ ಬೇಸಿಗೆಯ ಬೇಗೆಗೆ ಸಹಜವಾಗಿ ಬರುವ ಹೇನು ತರಹದ ಕಿಟಗಳು ತಕ್ಷಣ ಕಣ್ಮರೆಯಾಗುತ್ತದೆ. ಮಣ್ಣಿನಲಿ ಒಂದು ವಾಸನೆ ಉಂಟಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಯಾದ ಆಕ್ಟಿನೋಮೈಸಿಟ್ಸ್ ಗಳು…