ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ

ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ- ನಮಗೆಷ್ಟು ಲಾಭ?

ಕೃಷಿ ಸಹಕಾರಿ ಬ್ಯಾಂಕುಗಳು ಪೆಟ್ರೋಲ್ ಉತ್ಪನ್ನ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಂಡರೆ ನಮಗೆ ಈಗ ಸಿಗುತ್ತಿರುವ ಪಾಲು ಬಂಡವಾಳದ ಮೊತ್ತ ಇನ್ನೂ ಹೆಚ್ಚಾಗಲಿದೆ. ನಾವು ಯಾವುದೇ ಕಡೆ ಹೂಡಿಕೆ ಮಾಡಿದರೂ ಸಿಗದಷ್ಟು ಲಾಭ ನಮ್ಮದೇ ಬ್ಯಾಂಕಿನ ಶೇರು ಬಂಡವಾಳದ ಮೂಲಕ ಸಿಗಲಿದೆ. ನಮ್ಮೂರಿನ ಸೊಸೈಟಿಯಲ್ಲಿ ಲಾಭ ಹೆಚ್ಚಾದರೆ ಅದರಿಂದ ನಮಗೇ ಭಾರೀ ಲಾಭ. ಭಾರತ ಸರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರೀ ಸಂಘಗಳು (PACS Primary agriculture co operative society) ತಮ್ಮ ವ್ಯವಹಾರ ಕ್ಷೇತ್ರ…

Read more
ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ

ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ ಎಂಬ ಸುದ್ದಿ !

ಸಾಮಾನ್ಯವಾಗಿ ಮಳೆಗಾಲ ಪ್ರಾರಂಭದ ಒಂದೆರಡು ತಿಂಗಳು ಮಾರುಕಟ್ಟೆ ಸ್ವಲ್ಪ ಮಬ್ಬಾಗಿರುತ್ತದೆ. ಕೃಷಿಕರು ಅವರ ಹೊಲದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.  ಜೊತೆಗೆ ಹವಾಮಾನವೂ ವ್ಯವಹಾರಕ್ಕೆ ಸ್ವಲ್ಪ ಅನುಕೂಲಕರವಾಗಿ ಇರುವುದಿಲ್ಲ. ಹಾಗಾಗಿ ಬಹುತೇಕ ಕೃಷಿ ಉತ್ಪನ್ನಗಳ ಬೆಲೆ ಸ್ವಲ್ಪ ಇಳಿಕೆಯೇ ಆಗುವುದು.  ಮಳೆಗಾಲ ಒಮ್ಮೆ ಸೆಟ್ ಆದ ಮೇಲೆ ಮತ್ತೆ ವ್ಯವಹಾರ ಚುರುಕಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತದ್ದು. ಈಗ ಮತ್ತೆ ಮಾರುಕಟ್ಟೆ ಚೇತರಿಕೆಯನ್ನು ಕಾಣುತ್ತಿದೆ. ಅಡಿಕೆ ದರ ಏರಿದೆ. ಇನ್ನೂ ಸ್ವಲ್ಪ ಸ್ವಲ್ಪವೇ ಏರಿಕೆ ಆಗಬಹುದು ಎನ್ನುವ ಸುದ್ದಿ…

Read more
ನಾಟಿ ಹಸು,ಕರು

ಒಂದು ನಾಟಿ ಹಸು ಖರೀದಿಗೆ 25000 ಸಹಾಯಧನ !

ನಾಟಿ ಹಸುಗಳ ಸಂತತಿ ಕಡಿಮೆಯಾಗುತ್ತಿದೆ. ಸಾವಯವ ವಸ್ತುಗಳಿಲ್ಲದೆ ಕೃಷಿ ಕೃತಕವಾಗುತ್ತಿದೆ. ಹಾಗಾಗಿ ನಮ್ಮ ಕೃಷಿ ಪದ್ದತಿ ಇನ್ನು ಸ್ವಲ್ಪ ಹಿಂದಿನ ಕಾಲದತ್ತ ಹೋಗಬೇಕಾಗಬಹುದು. ನಮ್ಮ ಹಿರಿಯರು ಸೊಪ್ಪು ಸದೆ, ಸಗಣಿ ಗೊಬ್ಬರ  ಮುಂತಾದವುಗಳ  ಮೂಲಕ ಕೃಷಿ ಮಾಡುತ್ತಿದ್ದರೋ ಅದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅದಕ್ಕೆ ನಮ್ಮಲ್ಲಿ ಈಗ ಕೊರತೆ ಎಂದರೆ ಹಸುಗಳು. ಸಿಹಿ ಇದ್ದಲ್ಲಿ ಇರುವೆ ಬರುತ್ತದೆ ಎಂಬಂತೆ ಹಸು ಸಾಕಬೇಕಿದ್ದರೆ ಅದರಲ್ಲಿ ಸಾಕುವವರಿಗೆ ಲಾಭ ಬೇಕು. ಈ ಅಂಶವನ್ನು ಮನಗಂಡು ಹರ್ಯಾಣ ಸರಕಾರ ದೇಶದಲ್ಲೇ ಮೊದಲಬಾರಿಗೆ ಕೃಷಿಕರು…

Read more
ತೋಟಕ್ಕೆ ಮಣ್ಣು ಹಾಕಲು ಸಿದ್ದತೆ

ತೋಟಕ್ಕೆ ಮಣ್ಣು ಹಾಕುವುದರಿಂದ ಪ್ರಯೋಜನಗಳು

ಹೆಚ್ಚಿನವರು ತೋಟಕ್ಕೆ ಬಹಳ ಖರ್ಚು ಮಾಡಿ ಹೊರಗಡೆಯಿಂದ ಮಣ್ಣು  ತರಿಸಿ ಹಾಕುತ್ತಾರೆ.  ಹೊಸ ಮಣ್ಣು ಫಲವತ್ತಾಗಿದ್ದು, ಹೊಲದ ಸ್ಥಿತಿ ಸರಿಯಾಗಿದ್ದರೆ ಇದು ಬಹಳ ಒಳ್ಳೆಯದು. ಅಂಟು , ಜಿಗುಟು ಮಣ್ಣು ದಪ್ಪಕ್ಕೆ ಹಾಸಿದರೆ   ಬೇರಿಗೆ ಉಸಿರು ಕಟ್ಟಿದಂತಾಗಬಹುದು. ಬಹಳಷ್ಟು ಕಡೆ ಮಳೆಗಾಲದ ಮಳೆ ಹನಿಗಳ ಹೊಡೆತಕ್ಕೆ ಮಣ್ಣು ಸವಕಳಿಯಾಗಿ ಫಲವತ್ತತೆ ಕಡಿಮೆಯಾಗುತ್ತದೆ. ತೋಟದಲ್ಲಿ ಕಲ್ಲುಗಳೇ ಹೆಚ್ಚು ಇರುತ್ತವೆ. ಅದಕ್ಕಾಗಿ ಹೊಸ ಮಣ್ಣು ಹಾಕಿ ಅದನ್ನು ಮತ್ತೆ ಪುನಃಶ್ಚೇತನ ಮಾಡುವುದು  ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿ. ಇದರಲ್ಲಿ…

Read more
ಸುಣ್ಣ ಮತ್ತು ಮೈಲುತುತ್ತೆ ಸೇರಿಸಿ ತಯಾರಿಸಿದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣದ ಸುಣ್ಣ – ರೈತರ ಸಂದೇಹಗಳಿಗೆ ಉತ್ತರ.

ಕೆಲವು ದಿನಗಳಿಂದ ಅಡಿಕೆ , ಕಾಫಿ, ಕರಿಮೆಣಸು ಮುಂತಾದ ಬೆಳೆಗಾರರು ಬೋರ್ಡೋ ದ್ರಾವಣ ಸಿಂಪರಣೆಗಾಗಿ ಬಳಕೆ ಮಾಡುವ ಹುಡಿ ಸುಣ್ಣದ ಬಗ್ಗೆ ಕೆಲವು ಸಂದೇಹಗಳು ಉಧ್ಬವವಾಗಿದೆ. ಕೆಲವು ಬ್ರಾಂಡ್ ನ ಸುಣ್ಣ ಬಳಕೆ ಮಾಡದಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವಿನಲ್ಲಿ ಎಲ್ಲಾ ಸುಣ್ಣದ ಮೇಲೂ ರೈತರು ಸಂದೇಹ ಪಡುವಂತಾಗಿದೆ. ಈ ಕುರಿತಂತೆ ರೈತರ ಸಂದೇಹಗಳಿಗೆ ಉತ್ತರ ಇಲ್ಲಿದೆ. ಸುಣ್ಣವನ್ನು ಸಿಂಪರಣೆಗೆ ಕ್ಯಾಲ್ಸಿಯಂ ಮೂಲಕ್ಕಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಲವಸ್ತುಗಳನ್ನು…

Read more
ಆಮದು ಆಡಿಕೆಯಿಂದ ಮಾರುಕಟ್ಟೆ ಕುಸಿಯುದು.

ಅಡಿಕೆ ಆಮದು – ಮಾರುಕಟ್ಟೆ ಕುಸಿಯುವ ಸಾಧ್ಯತೆ ಇಲ್ಲ.  

ಅಡಿಕೆ ಮಾರುಕಟ್ಟೆಯಲ್ಲಿ ಆತಂಕ ಉಂಟುಮಾಡಿದ್ದ ಆಮದು ಹವಾ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತದೆ. ಆಮದು ಆಗಿ ಒಮ್ಮೆಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಗಲಿಬಿಲಿ ಉಂಟಾದರೂ ಅದು ಕೆಲವೇ ದಿನದಲ್ಲಿ ಸ್ವಲ್ಪ ಚೇತರಿಕೆ ಅಗಿದೆ. ಆಮದು ಆದರೆ ಸ್ಥಳೀಯ ಮಾರುಕಟ್ಟೆ ಕುಸಿಯುವುದು ಸಾಧ್ಯವಿಲ್ಲ.ಎನ್ನುತ್ತದೆ ಲೆಕ್ಕಾಚಾರಗಳು. ಬಹುಶಃ ಇದು ಮಾರುಕಟ್ಟೆ  ತಲ್ಲಣಕ್ಕಾಗಿ ಮಾಡಿದ ಸುದ್ದಿಯೋ ಎಂಬ ಅನುಮಾನ ಉಂಟಾಗುತ್ತದೆ. ಏನೇ ಆಗಲಿ ಅಡಿಕೆಗೆ ದರ ಹೆಚ್ಚಳವಾಗುವುದಕ್ಕಿಂತ ಪ್ರಾಮುಖ್ಯ ದರ ಸ್ಥಿರವಾಗಿ ಉಳಿಯಬೇಕು ಎನ್ನುವುದು ಬೆಳೆಗಾರರ ಆಶಯ.ಈ ಮಧ್ಯೆ ಉತ್ತರ ಭಾರತದಲ್ಲಿ ಅಡಿಕೆಯ ಕೊರತೆ…

Read more
ಅಡಿಕೆ

ಅಡಿಕೆ ಬೆಳೆಗಾರರಿಗೆ ಅಭಯ – ಕರಿಮೆಣಸು ಬೆಳೆಗಾರರಿಗೆ ಭಯ

ಅಡಿಕೆ ಆಮದು ಆದ ತಕ್ಷಣ ಮಾರುಕಟ್ಟೆಯಲ್ಲಿ ಒಂದು ಸಂಚಲನ ಉಂಟಾಯಿತು. ದರ ಕುಸಿಯಲಾರಂಭಿಸಿತು. ಅಡಿಕೆ ಬೆಳೆಗಾರರು ಇನ್ನೇನು ಮಾರುಕಟ್ಟೆ ಭಾರೀ ಕುಸಿಯಲಿದೆ ಎಂಬ ಆತಂಕಕ್ಕೆ ಒಳಗಾದರು. ಖಾಸಗಿ ಮಾರುಕಟ್ಟೆಯಲ್ಲಿ ದರ ಭಾರೀ ಕುಸಿತ ಉಂಟಾಗಿತ್ತು. ಆ ಸಮಯದಲ್ಲಿ ಬೆಳೆಗಾರರು ಕಟ್ಟಿದ ಅಡಿಕೆ ಮಾರುಕಟ್ಟೆ ಸಹಕಾರಿ ಸಂಸ್ಥೆ ಕ್ಯಾಂಪ್ಕೋ  ಸಂಸ್ಥೆಯ ಪರವಾಗಿ ಅಧ್ಯಕ್ಷರು ಬೆಳೆಗಾರರು ಅಂಜಬೇಕಾಗಿಲ್ಲ ಇದು ತಾತ್ಕಾಲಿಕ ಕುಸಿತ, ಎಲ್ಲಾ ಹಿಂದಿನಂತೆ ಆಗುತ್ತದೆ ಎಂಬ ಅಭಯ ನೀಡಿದ್ದಾರೆ. ಅದೇ ಸಂಸ್ಥೆ ವ್ಯವಹರಿಸುವ ಕರಿಮೆಣಸು ಆಮದು ಬಗ್ಗೆ ಯಾವ…

Read more
ಚಾಲಿ ಅಸ್ಥಿರ

ಅಡಿಕೆ ಮಾರುಕಟ್ಟೆಯ ಸ್ಥಿತಿ- ಕೆಂಪಡಿಕೆ ಅಬಾಧಿತ- ಚಾಲಿ ಅಸ್ಥಿರ.

ಕೆಂಪಡಿಕೆ ಮಾರುಕಟ್ಟೆಯಲ್ಲಿ ದೊಡ್ದ ಸಂಚಲನ ಇಲ್ಲ. ಆದರೆ ಚಾಲಿ ಮಾತ್ರ ಬಹಳ ಅಸ್ಥಿರತೆಯಲ್ಲಿ ಮುನ್ನಡೆಯುತ್ತಿದೆ. ಖಾಸಗಿಯವರ ದರ ಸಾಂಸ್ಥಿಕ ಮಾರುಕಟ್ಟೆಗಿಂತ ಕಡಿಮೆಯಾಗಿದೆ. ಸಾಂಸ್ಥಿಕ ಮಾರುಕಟ್ಟೆಯಲ್ಲಿ  ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ  ತುಂಬಾ ವ್ಯತ್ಯಾಸ ಇದೆ. ಗುಣಮಟ್ಟಕ್ಕೆ ಹೆಚ್ಚಿನ ಪ್ರಾತಿನಿಧ್ಯ ಬಂದಿದೆ. ಗುಣಮಟ್ಟದ ಅಡಿಕೆಗೆ ಮಾತ್ರ  ಗರಿಷ್ಟ ದರ ಇದೆ. ಖಾಸಗಿಯವರ ನಿರುತ್ಸಾಹ ಚಾಲಿ ಅಡಿಕೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ವಲ್ಪ ಹಿಂದೆ ಬರುವಂತೆ ಮಾಡುತ್ತದೆಯೋ ಎಂಬ ಅನುಮಾನ ಉಂಟಾಗಿದೆ. ವಿದೇಶಗಳಿಂದ ಸರಕಾರದ ಅನುಮತಿಯ ಮೇರೆಗೆ ಅಡಿಕೆ ಆಮದಾಗುತ್ತಿದೆ ಎಂಬ…

Read more
'ಪೂರ್ವ ಶಿಷ್ಟ ಪದ್ದತಿ'ಗಳನ್ನು ಪಾಲಿಸಿದ ಕೃಷಿ

ಮರೆಯಾಗುತ್ತಿದೆ ಕೃಷಿ ಕ್ಷೇತ್ರದ ‘ಪೂರ್ವ ಶಿಷ್ಟ ಪದ್ದತಿ’ಗಳು.

ಪೂರ್ವ ಶಿಷ್ಟ ಪದ್ದತಿ (Customs and Usages) ಎಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆ. ಇದು  ಕಾನೂನಾತ್ಮಕವಾಗಿಲ್ಲದಿದ್ದರೂ ಇದನ್ನು ಕಾನೂನು ರಕ್ಷಕರು ಅಥವಾ ನ್ಯಾಯಾಲಯ ತಳ್ಳಿ ಹಾಕುವಂತಿಲ್ಲ. ಪೂರ್ವ ಪದ್ದತಿಗಳನ್ನು ಮೀರಿ ಕಾನೂನು ಅಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಯಲವೂ ಒಪ್ಪಿಕೊಳ್ಳುತ್ತದೆ. ಇವು ಬ್ರಿಟೀಷ್ ಸರಕಾರ ವ್ಯವಸ್ಥೆಯಲ್ಲಿ ಗವರ್ನರ್ ಜನರಲ್ ಗಳು ಕೊಡುತ್ತಿದ್ದ ತೀರ್ಮಾನ. ಇದು ಎಲ್ಲರೂ ಒಪ್ಪಿರುವ ನ್ಯಾಯಸಮ್ಮತವಾದ ಪದ್ದತಿ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಇದನ್ನು ಪ್ರತೀಯೊಬ್ಬ ಕೃಷಿಕನೂ ಅನುಸರಿಸಿದ್ದೇ ಆದರೆ ಪರಸ್ಪರ ಜಗಳ, ತಕರಾರು…

Read more
ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು. ಬಹಳ ಜನ ಈ ವರ್ಷ ಅಡಿಕೆಗೆ…

Read more
error: Content is protected !!