ಗೇರು – ಹೆಚ್ಚಿನ ಆದಾಯಕ್ಕೆ- ಇದನ್ನು ತಪ್ಪದೆ ಮಾಡಿ.
ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಫೆಬ್ರವರಿ – ಮಾರ್ಚ್ ತನಕ ಸ್ವಲ್ಪ ಆರೈಕೆ ಮಾಡಿದರೆ ಮರವೊಂದರ ಸರಾಸರಿ 1000 ರೂ. ಗಳಷ್ಟು ಆದಾಯ ತಂದು ಕೊಡಬಲ್ಲ ನಿರಾಯಾಸದ ಬೆಳೆ. ಈ ಬೆಳೆ ಈಗ ಕರಾವಳಿಯಲ್ಲಿ ಸ್ಥಳ ಇಲ್ಲದೆ ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯ ತನಕ ವಿಸ್ತಾರವಾಗಿದೆ. ಇದು ಈಗಿನ ಜ್ವಲಂತ ಸಮಸ್ಯೆಯಾದ ನೀರಿನ ಕೊರೆತೆಯನ್ನು ತಡೆದುಕೊಂಡು ಬೆಳೆಯಬಲ್ಲ ಬೆಳೆ. ಮಳೆ ಕಳೆದು ಚಳಿ ಬಂದಾಕ್ಷಣ ಗೇರು ಮರ ಚಿಗುರಿ ಹೂ ಮೊಗ್ಗು…