ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more
ಬದನೆಯ ಕಾಯಿ ಕೊಳೆತ

ಬದನೆಯ ಕಾಯಿಗಳು ಯಾಕೆ ಕೊಳೆಯುತ್ತವೆ.

ಬದನೆ  ಪ್ರಮುಖ ತರಕಾರಿ ಬೆಳೆಯಾಗಿದ್ದು, ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಕೃಷಿಕರು ಅಧಿಕ ಬೇಡಿಕೆ –ಬೆಲೆ ಕಾರಣಕ್ಕೆ ನಾಟಿ ತಳಿಯನ್ನೇ ಬೆಳೆಸುತ್ತಿದ್ದು, ಇತ್ತೀಚಿಗಿನ ಬೇಸಾಯ ಕ್ರಮ, ಹವಾಮಾನದಿಂದಾಗಿ ಬೆಳೆಗೆ ಸೊರಗು ರೋಗದ ಬಾಧೆ ಅಧಿಕವಾಗಿದೆ. ಇದರಿಂದ ಕಾಯಿ ಕೊಳೆಯುವಿಕೆ ಹಚ್ಚಾಗುತ್ತದೆ. ಹೆಚ್ಚಿನ ಬೆಳೆಗಾರರು ಸಣ್ಣ  ಮತ್ತು ಅತೀ ಸಣ್ಣ ಬೆಳೆಗಾರರಾಗಿದ್ದು ಇದು ರೋಗವೋ – ಕೀಟವೂ ಎಂಬುದರ ಜ್ಞಾನ ಹೊಂದಿರುವುದಿಲ್ಲ.   ಸಮೀಪದ  ಗೊಬ್ಬರ– ಕೀಟನಾಶಕ ಮಾರಾಟ ಅಂಗಡಿಯವರ ಸಲಹೆಯ ಮೇರೆಗೆ  ಅದಕ್ಕೆ ಉಪಚಾರ …

Read more
ಚಾಲಿ ಅಸ್ಥಿರ

ಅಡಿಕೆ ಮಾರುಕಟ್ಟೆಯ ಸ್ಥಿತಿ- ಕೆಂಪಡಿಕೆ ಅಬಾಧಿತ- ಚಾಲಿ ಅಸ್ಥಿರ.

ಕೆಂಪಡಿಕೆ ಮಾರುಕಟ್ಟೆಯಲ್ಲಿ ದೊಡ್ದ ಸಂಚಲನ ಇಲ್ಲ. ಆದರೆ ಚಾಲಿ ಮಾತ್ರ ಬಹಳ ಅಸ್ಥಿರತೆಯಲ್ಲಿ ಮುನ್ನಡೆಯುತ್ತಿದೆ. ಖಾಸಗಿಯವರ ದರ ಸಾಂಸ್ಥಿಕ ಮಾರುಕಟ್ಟೆಗಿಂತ ಕಡಿಮೆಯಾಗಿದೆ. ಸಾಂಸ್ಥಿಕ ಮಾರುಕಟ್ಟೆಯಲ್ಲಿ  ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ  ತುಂಬಾ ವ್ಯತ್ಯಾಸ ಇದೆ. ಗುಣಮಟ್ಟಕ್ಕೆ ಹೆಚ್ಚಿನ ಪ್ರಾತಿನಿಧ್ಯ ಬಂದಿದೆ. ಗುಣಮಟ್ಟದ ಅಡಿಕೆಗೆ ಮಾತ್ರ  ಗರಿಷ್ಟ ದರ ಇದೆ. ಖಾಸಗಿಯವರ ನಿರುತ್ಸಾಹ ಚಾಲಿ ಅಡಿಕೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ವಲ್ಪ ಹಿಂದೆ ಬರುವಂತೆ ಮಾಡುತ್ತದೆಯೋ ಎಂಬ ಅನುಮಾನ ಉಂಟಾಗಿದೆ. ವಿದೇಶಗಳಿಂದ ಸರಕಾರದ ಅನುಮತಿಯ ಮೇರೆಗೆ ಅಡಿಕೆ ಆಮದಾಗುತ್ತಿದೆ ಎಂಬ…

Read more
ತೆಂಗಿನ ಮರಗಳ ಶಿರ ಸ್ವಚ್ಚತೆ

ತೆಂಗಿನ ಮರಗಳ ಶಿರ ಭಾಗ ಸ್ವಚ್ಚತೆ ಮತ್ತು ಇಳುವರಿ

ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ. ತೆಂಗಿನ ಮರದ ಶಿರ ಬಾಗವನ್ನು  ಸ್ವಚ್ಚ ಮಾಡುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಿರ್ವಹಣೆಗಳಲ್ಲಿ ಒಂದು. ನಮ್ಮ ಹಿರಿಯರು ವರ್ಷಕ್ಕೊಮ್ಮೆ ಶಿರಭಾಗವನ್ನು ಪೂರ್ಣ ಸ್ವಚ್ಚ ಮಾಡುತ್ತಿದ್ದರು….

Read more
ಅಡಿಕೆ ಸಸಿ ನೆಡುವ ಕ್ರಮ

ಅಡಿಕೆ ಸಸಿ ನೆಡುವವರು ಗಮನಿಸಿ- ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು?

ಅಡಿಕೆ ಸಸ್ಯ ಏಕದಳ ಸಸ್ಯವಾಗಿದ್ದು, ಇದಕ್ಕೆ ತಾಯಿ ಬೇರು ಇಲ್ಲ. ಕವಲು ಬೇರುಗಳಿರುವ ಏಕದಳ ಸಸ್ಯದ, ಬೇರಿನ ಗುಣ ಮೇಲು ಭಾಗದಲ್ಲಿ ಪಸರಿಸುತ್ತಾ  ಬೆಳೆಯುವುದಾಗಿರುತ್ತದೆ. ಮೊದಲಾಗಿ ಎಲ್ಲಾ ಅಡಿಕೆ ಬೆಳೆಸುವ ರೈತರು ಸಸ್ಯ ಬೆಳವಣಿಗೆಯ ಕ್ರಮವನ್ನು  ತಿಳಿದು, ಅದಕ್ಕನುಗುಣವಾದ ಬೇಸಾಯ ಕ್ರಮವನ್ನು ಅನುಸರಿಸಬೇಕು. ಅಡಿಕೆ ಸಸಿ ನೆಡುವ ಹೊಂಡ ಹೇಗಿರಬೇಕು, ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು? ಎಂಬುದರ ಫೂರ್ತಿ ಮಾಹಿತಿ ಇಲ್ಲಿದೆ. ಎಳವೆಯಲ್ಲಿ ಒಂದು ಗಿಡವನ್ನು  ಸರಿಯಾಗಿ ಪೋಷಣೆ ಮಾಡಿದರೆ ಮಾತ್ರ ಅದರ ಮುಂದಿನ ಬೆಳವಣಿಗೆಗೆ ಅಡಿಪಾಯ…

Read more
ಪ್ರೂನಿಂಗ್ ಮಾಡಿದ ಅಡಿಕೆ ಸಸ್ಯ

ಪ್ರೂನಿಂಗ್ ಮಾಡಿ  ಅಡಿಕೆ ಸಸ್ಯ ಬೆಳವಣಿಗೆ  ಹೆಚ್ಚಿಸಿ.

ಸಸ್ಯಗಳಲ್ಲಿ ಹಿತಮಿತವಾಗಿ ಎಲೆ ಗೆಲ್ಲು ಕಡಿದರೆ ಮತ್ತೆ ಬರುವ ಹೊಸ ಚಿಗುರುಗಳು ಸಧೃಢವಾಗಿ ಬರುತ್ತವೆ. ಏಕದಳ ಸಸ್ಯಗಳ ಗೆಲ್ಲು ಕಡಿದರೆ  ನಿರಾಯಾಸವಾಗಿ ಅದು ಚಿಗುರಿ ಬದುಕಿಕೊಳ್ಳುತ್ತದೆ. ಹಾಗೆಂದು ದ್ವಿದಳ ಸಸ್ಯಗಳಲ್ಲಿ ಎಲ್ಲಾ ಎಲೆ ಕಡಿಯುವ ಕ್ರಮ ಇಲ್ಲ. ಅದನ್ನು ಹಿತ ಮಿತವಾಗಿ ಸ್ವಲ್ಪ ಪ್ರೂನಿಂಗ್ ಮಾಡಿ ಬೆಳವಣಿಗೆಗೆ ಬೂಸ್ಟ್ ಕೊಡಬಹುದು. ಅಡಿಕೆ ಸಸಿಗಳಲ್ಲಿ ಒಂದು ಎರಡು ವರ್ಷ ಪ್ರಾಯದಲ್ಲಿ  ಬೆಳವಣಿಗೆ ಹೆಚ್ಚಿಸಲು ಕೆಳಭಾಗದ ಎರಡು ಎಲೆಯನ್ನು ಅರ್ಧ ದಷ್ಟು ತುಂಡು ಮಾಡಿದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅಡಿಕೆ…

Read more
ಹಳೆ ಆಡಿಕೆ

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ರೂ.100 ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.25 ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ  ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವ ವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ 100 ರೂ. ಹೆಚ್ಚು ಸಿಗುತ್ತದೆ. ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. 30-40 ಇರುತ್ತಿತ್ತು.  ಆದರೆ…

Read more
ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು. ಬಹಳ ಜನ ಈ ವರ್ಷ ಅಡಿಕೆಗೆ…

Read more
ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ.   ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು,…

Read more
error: Content is protected !!