ಅಧಿಕಇಳುವರಿಗೆ ನೆರವಾಗುವ ರಾಸಾಯನಿಕ ಇಲ್ಲದ NPK ಪೋಷಕ.
ಕೆಲವು ರೈತರು ಬೆಳೆಗಳಿಗೆ ಎಲ್ಲಾ ರೀತಿಯ ಗೊಬ್ಬರಗಳನ್ನು ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಗೊಬ್ಬರ ಕೊಡುವ ಪ್ರಮಾಣವನ್ನೂ ಹೆಚ್ಚಿಸುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಸಸ್ಯ ದ ಆರೋಗ್ಯವೂ ಹಾಳಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಜೈವಿಕತೆ ಕ್ಷೀಣಿಸುವುದು. ಪರಿಸ್ಥಿತಿಗೆ ಸಹಜವಾಗಿ ಮಣ್ಣಿಗೆ ಸಾವಯವ ವಸ್ತುಗಳನ್ನು ಹೇರಳವಾಗಿ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಮಣ್ಣಿನ ಜೈವಿಕ ಗುಣ ಕ್ಷೀಣವಾಗುತ್ತಾ ಬರುತ್ತದೆ. ಹಾಕಿದ ಗೊಬ್ಬರವನ್ನು ಲಭ್ಯಸ್ಥಿತಿಗೆ ತಂದು ಅಧಿಕಇಳುವರಿ ಪಡೆಯಲು ಈ ಜೈವಿಕ ಸಮ್ಮಿಶ್ರಣ ನೆರವಾಗುತ್ತದೆ. ನಾವು ತಿನ್ನುವ ಆಹಾರ ದೇಹದಲ್ಲಿ…