ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.
ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ…