ನೀರಾವರಿಯೊಂದಿಗೆ ಗೊಬ್ಬರ ಕೊಟ್ಟರೆ ದುಪ್ಪಟ್ಟುಇಳುವರಿ .

by | Sep 8, 2021 | Irrigation (ನೀರಾವರಿ) | 0 comments

ಒಮ್ಮೆಲೇ ತಿನ್ನುವುದಕ್ಕಿಂತ ಹಸಿವಾದಾಗ ತಿಂದರೆ ಅದು ದೇಹಕ್ಕೆ ಸಮರ್ಪಕವಾಗಿ  ಬಳಕೆಯಾಗುತ್ತದೆ. ಈ ಸಿದ್ದಾಂತ ಸಸ್ಯಗಳಿಗೂ ಅನ್ವಯ. ಈ ಸಿದ್ದಾಂತದ ಮೇರೆಗೆ ಬೆಳೆಗಳಿಗೆ ಬೇರಿನ ಸನಿಹಕ್ಕೆ, ಕ್ರಿಯಾತ್ಮಕ ಬೇರುಗಳು ಇರುವಲ್ಲಿಗೆ,  ಬೇಕಾದಾಗ ಬೇಕಾಗುವುದನ್ನೇ, ಬೇಕಾದಷ್ಟೇ  ಪ್ರಮಾಣದಲ್ಲಿ ಕೊಡುವ ಪದ್ದತಿಯನ್ನು ಪ್ರಚಲಿತಕ್ಕೆ ತರಲಾಗಿದೆ. ಇದಕ್ಕೆ ನೀರಿನ ಜೊತೆಗೆ ಗೊಬ್ಬರ ಕೊಡುವುದು ಅಥವಾ ರಸಾವರಿ ಎಂಬ ಹೆಸರನ್ನು ಕೊಡಲಾಗಿದೆ.

ದುಪ್ಪಟ್ಟು ಇಳುವರಿ:

 • ತರಕಾರಿ ಮುಂತಾದ ಅಲ್ಪಾವಧಿ ಬೆಳೆಗಳಿಗೆ ತಕ್ಷಣ ಪೋಷಕಾಂಶಗಳು ದೊರೆತು, ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಪ್ರಾರಂಭವಾಯಿತು.
 • ಇದರ ಪರಿಣಾಮವಾಗಿಯೇ  ಇಂದು ನಮ್ಮ ಬಳಕೆಗೆ ಬೇಕಾದಷ್ಟು ತರಕಾರಿ ದೊರೆಯುವಂತಾಗಿದೆ.
 • ಅಷ್ಟೇ ಅಲ್ಲದೆ ತರಕಾರಿ ಬೆಳೆಸಿ ರೈತರು ಆದಾಯ ಕಂಡಿದ್ದಾರೆಂದರೆ ಅದು ವ್ಯವಸ್ಥೆಯಿಂದ ಎಂದರೆ ತಪ್ಪಾಗಲಾರದು.
 • ಈಗ ಅದು ಬಹುತೇಕ ಬೆಳೆಗಳಿಗೆ ಹೊಂದಿಕೆಯಾಗುವಂತೆ ಮಾರ್ಪಾಡು ಮಾಡಿಕೊಳ್ಳಲಾಗಿದೆ.

ನಮ್ಮ ದೇಶದಲ್ಲಿ , ಹಾಗೆಯೇ  ಕೃಷಿಯಲ್ಲಿ ಅಸಾಧಾರಣ ಇಳುವರಿ ಪಡೆಯುತ್ತಿರುವ ಎಲ್ಲಾ ದೇಶಗಳಲ್ಲೂ ಈ ರೀತಿ ಪೋಷಕಗಳನ್ನು ಒದಗಿಸಿಯೇ ಬೆಳೆ ಪಡೆಯಲಾಗುತ್ತದೆ. 

 • ಸುಮಾರು 25 ವರ್ಷಕ್ಕೆ ಹಿಂದೆ ಟೊಮಾಟೋ ಬೆಳೆಯಲ್ಲಿ ಹೆಕ್ಟೇರಿಗೆ 10-15 ಟನ್ ಇಳುವರಿ ದೊರೆಯುತ್ತಿತ್ತು.
 • ಆ ನಂತರ ಅಧಿಕ ಇಳುವರಿಯ ತಳಿಗಳ ಜೊತೆಗೆ ರಸಾವರಿಯ ಮೂಲಕ ಪೋಷಕಾಂಶ ಕೊಡುವ ಪದ್ಧತಿ ಬಂದ ನಂತರ ಇದು 80 ಟನ್ ಗೆ ಏರಿಕೆಯಾಯಿತು.
 • ಹಾಗೆಯೇ ದ್ರಾಕ್ಷಿ , ದಾಳಿಂಬೆ, ಕಲ್ಲಂಗಡಿ, ಕರಬೂಜ ಎಲ್ಲದರ ಇಳುವರಿ 2-3 ಪಟ್ಟು ಹೆಚ್ಚಳವಾಗಲು ಈ ವಿಧಾನದ ಪೋಷಕಾಂಶ ನಿರ್ವಹಣೆ ನೆರವಾಗಿದೆ.

ಅಡಿಕೆ, ತೆಂಗು, ಬಾಳೆ ಮುಂತಾದ  ಬೆಳೆಗಳಲ್ಲಿ  ಈ ವಿಧಾನವನ್ನು ಅನುಸರಿಸಿ ದುಪ್ಪಟ್ಟು ಇಳುವರಿ ಪಡೆಯುವ ಹಲವಾರು ರೈತರು ಇದ್ದಾರೆ.

ನೀರಾವರಿಯೊಂದಿಗೆ ಗೊಬ್ಬರ ಕೊಡುವ ವ್ಯವಸ್ಥೆ, ಸೆಂಟ್ರಿಫೂಗಲ್ ಪಂಪ್
ನೀರಾವರಿಯೊಂದಿಗೆ ಗೊಬ್ಬರ ಕೊಡುವ ವ್ಯವಸ್ಥೆ, ಸೆಂಟ್ರಿಫೂಗಲ್ ಪಂಪ್

ರಸಾವರಿಯ ಅನುಕೂಲಗಳು:

 • ಯಾವುದೇ ಪೋಷಕಾಂಶ ಇದ್ದರೂ ಅದು ತೇವಾಂಶ ಇದ್ದಲ್ಲಿ ಮಾತ್ರ ಸಸ್ಯಗಳು ಸ್ವೀಕರಿಸುವ ಸ್ಥಿತಿಯಲ್ಲಿರುತ್ತದೆ.
 • ರಸಾವರಿ ಎಂಬ ವ್ಯವಸ್ಥೆಯಲ್ಲಿ ನೀರಿನ ಜೊತೆಗೆ ಪೋಷಕಗಳನ್ನು ಕೊಡುವ ಕಾರಣ ಅದರ ಲಭ್ಯತೆ ಸರಿ ಸುಮಾರು 99% ಇರುತ್ತದೆ.
 • ರಸಾವರಿಯ ಮೂಲಕ ಪೋಷಕಾಂಶಗಳನ್ನು ಕೊಡುವಾಗ ಅದು ಇನ್ಸ್ಟಂಟ್ ಆಹಾರದ ತರಹ ಕೆಲಸ ಮಾಡುತ್ತದೆ.
 • ಇದು ಪೋಷಕದ ಗುಣದಿಂದ ಮತ್ತು ಬಳಕೆ ವಿಧಾನದಿಂದ ಆಗುವುದು.
 • ಸಸ್ಯಗಳಲ್ಲಿ ಬೇರು ಸಮೂಹ ಇರುವಲ್ಲಿಗೆ ಟಾರ್ಗೆಟ್ ಮೂಲಕ ಗೊಬ್ಬರ ಕೊಟ್ಟಾಗ  ಅದು ಯಾವುದೇ ನಷ್ಟಕ್ಕೊಳಗಾಗದೇ ಲಭ್ಯವಾಗುತ್ತದೆ.
 • ಅಗೆತ ಇತ್ಯಾದಿಗಳಿಂದ ಬೇರುಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ..
 • ನಾವು ಸಾಂಪ್ರದಾಯಿಕ ವಿಧಾನದಲ್ಲಿ ಕೊಡುವ ಪೋಷಕಗಳಲ್ಲಿ ಹೆಚ್ಚಿನ ಪ್ರಮಾಣವು ಇಳಿದು ಹೋಗಿ, ಆವೀಕರಣಕ್ಕೊಳಗಾಗಿ ನಷ್ಟವಾಗುತ್ತದೆ.
 • ಈ ನಷ್ಟವನ್ನು ತಡೆಯಲು ನೀರಿನೊಂದಿಗೆ ಬೇರು ವಲಯಕ್ಕೇ ಗೊಬ್ಬರ ಕೊಡುವುದು ಸೂಕ್ತ.
 • ಸಸ್ಯಗಳಿಗೆ ಬೆಳವಣಿಗೆ ಹಂತದಲ್ಲಿ, ಹೂ ಬಿಡುವ ಹಂತದಲ್ಲಿ , ಕಾಯಿ  ಕಚ್ಚುವ ಹಂತದಲ್ಲಿ, ಫಸಲು ಬೆಳೆಯುವ ಹಂತದಲ್ಲಿ, ಫಲ ಮಾಗುವ ಹಂತದಲ್ಲಿ ಬೇರೆ ಬೇರೆ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ.
 • ಹೀಗೆ ಕೊಟ್ಟಾಗ ಫಲದ ಗುಣಮಟ್ಟ ಉತ್ತಮವಾಗುತ್ತದೆ.
 • ಅದನ್ನು ಅಧ್ಯಯನಗಳ ಪ್ರಕಾರ ಬೇಕಾದಂತೆ ಕೊಡಲು ಈ ಪದ್ದತಿ ಅನುಕೂಲಕರ.
 • ಸಾಂಪ್ರದಾಯಿಕ ಗೊಬ್ಬರ ಕೊಡುವ ವಿಧಾನದಲ್ಲಿ ನಮ್ಮ ನಿರೀಕ್ಷೆಯಂತೆ ಇಳುವರಿ ಬರುವುದಿಲ್ಲ.
 • ಇದರಲ್ಲಿ ನಾವು ಗುರಿ ಇಟ್ಟುಕೊಂಡು ಇಳುವರಿ ಪಡೆಯಬಹುದು.
 • 50% ಕ್ಕೂ ಹೆಚ್ಚು ಕೆಲಸ ಉಳಿತಾಯವಾಗುತ್ತದೆ. ಒಮ್ಮೆಲೆ ಮಾಡುವ ಖರ್ಚುನ್ನು ಸ್ವಲ್ಪ ಸ್ವಲ್ಪವೇ ಮಾಡುವ ಕಾರಣ ಕಷ್ಟವಾಗುವುದಿಲ್ಲ.
 • ರಾಸಾಯನಿಕ ಗೊಬ್ಬರ ಅಲ್ಲದೆ ದ್ರವರೂಪಕ್ಕೆ ಪರಿವರ್ತಿಸಿದ ಎಲ್ಲಾ ಸಾವಯವ ಪೋಷಕಗಳ ಸಾರವನ್ನೂ ಈ ರೀತಿ ನೀರಾವರಿಯೊಂದಿಗೆ  ಕೊಡಬಹುದು.

ಕೃಷಿಯಲ್ಲಿ ಬದಲಾವಣೆಗಳು ನಿರಂತರವಾಗಿ ಆಗುತ್ತಲೇ ಇರುತ್ತದೆ. ಸಂಶೋಧನೆ ಎಂದುದು ಹರಿಯುವ ನೀರಿನಂತೆ. ಯಾವಾಗಲೂ ಬದಲಾವಣೆ ಆಗುತ್ತಲೇ ಇರುತ್ತದೆ. ಸಾಂಪ್ರದಾಯಿಕ ಪೊಷಕ ಕೊಡುವ ವಿಧಾನದಲ್ಲಿ ಇದು ಮಿತವ್ಯಯದ ಬೆಳೆವಣಿಗೆ.

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!