ರಸಾವರಿಯಿಂದ 50% ಕೆಲಸ ಉಳಿತಾಯವಾಗುತ್ತದೆ.

ರಸಾವರಿ ವ್ಯವಸ್ಥೆಗಳು

ಬೆಳೆಗಳಿಗೆ ನೀರನ್ನು ಹಾಯಿಸುವಾಗ ಅದರ ಜೊತೆಗೆ ಪೋಷಕಗಳನ್ನು ಸೇರಿಸಿ ಕೊಡಲು ಕೆಲವು ವಿಧಾನಗಳಿವೆ. ಅದನ್ನು ಇಂಜೆಕ್ಟಿಂಗ್ ಎನ್ನುತ್ತಾರೆ.ಅದರಲ್ಲಿ ಅನುಕೂಲಕ್ಕಾಗಿ ರೈತರೇ ಮಾಡಿಕೊಂಡ ಕೆಲವು ವಿಧಾನಗಳಿದ್ದರೆ, ಮತ್ತೆ  ಕೆಲವು ನೀರಾವರಿ ವ್ಯವಸ್ಥೆ ತಯಾರಕರ ವಿನ್ಯಾಸವಾಗಿರುತ್ತದೆ.

ವೆಂಚುರಿ ವ್ಯವಸ್ಥೆ:

  • ಇದು ಮುಖ್ಯ ಕೊಳವೆಯಲ್ಲಿ ನೀರಿನ ಹರಿವನ್ನು ವಾಲ್ವ್ ಹಾಕಿ ಮಿತಿಗೊಳಿಸಿ, ಸ್ವಲ್ಪ ನೀರನ್ನು ಪಥ ಬದಲಿಸಿ  ಹರಿಸಿದಾಗ ಗ್ರಾವಿಟಿ ನಿಯಮದಂತೆ  ಪೋಷಕಗಳು ಹೀರಲ್ಪಡುವ ವ್ಯವಸ್ಥೆ.
  • ಯಾವ ದ್ರವ ಇದೆಯೋ ಅದನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಬೇಕಾದುದು ವೆಂಚುರಿ ಇಂಜೆಕ್ಟರ್ ಮತ್ತು ಪೈಪು ಮತ್ತು ವಾಲ್ವ್ ಗಳು.
  • ಇದರಲ್ಲಿ ನೀರಿನ ಹರಿವಿನ ಒತ್ತಡ ಸ್ವಲ್ಪ ಕಡಿಮೆಯಾಗುತ್ತದೆ  ಹಾಗೂ ಹೀರುವಿಕೆಗೆ ಸಮಯ ಹೆಚ್ಚು ಬೇಕಾಗುತ್ತದೆ. ಹಾಗೆಂದು ಇದು ತುಂಬಾ ಮಿತವ್ಯಯದ ವ್ಯವಸ್ಥೆ..

ಫರ್ಟಿಗೇಶನ್ ಟ್ಯಾಂಕು:

  • ಇದರ ಸಿದ್ದಾಂತ ವೆಂಚುರಿಯಂತೆ. ನೀರು ಹರಿಯುವ ಮೈನ್ ಲೈನ್ ಪೈಪಿನಲ್ಲಿ ಹರಿಯುವ ನೀರನ್ನು ಕವಲು ದಾರಿಯಲ್ಲಿ ಹರಿಸಿ ಅದನ್ನು ಒಂದು ಟಾಂಕಿಗೆ ಸಂಪರ್ಕ ಕಲ್ಪಿಸ ಲಾಗುತ್ತದೆ.
  • ಟಾಂಕಿಯ ಒಳ ಸೇರಿದ ನೀರು ಒಳಗಿರುವ ಗೊಬ್ಬರದ ಜೊತೆಗೆ ಮಿಶ್ರಣವಾಗಿ ಮತ್ತೊಂದು ದ್ವಾರದ ಮೂಲಕ  ಹೊರ ಹರಿದು ಮುಖ್ಯ ಕೊಳವೆಗೆ ಸೇರುತ್ತದೆ.
  • ಇದು ಪ್ರಾರಂಭದಲ್ಲಿ ಪರಿಚಯಿಸಲ್ಪಟ್ಟ ರಸಾವರಿ ವ್ಯವಸ್ಥೆ. ಇದರಲ್ಲಿ ಅನನುಕೂಲ ಏನೂ ಇಲ್ಲ. ಒತ್ತಡ (head) ಸ್ವಲ್ಪ ಕಡಿಮೆಯಾಗುತ್ತದೆ.
venture system

ರೈತರು ಮಾಡಿಕೊಂಡ ವ್ಯವಸ್ಥೆಗಳು:

  • ಪವರ್ ಸ್ಪ್ರೇಯರ್  ಪಂಪು ಮೂಲಕ  ನೀರಿಗೆ ಗೊಬ್ಬರ ಉಣಿಸುವುದು.
  • ರಸ ಗೊಬ್ಬರ ಕಲಸಿಟ್ಟ  ಟಾಂಕಿಯಿಂದ  ಪವರ ಸ್ಪ್ರೇಯರ್ ನ  ಪಂಪು ಮುಖಾಂತರ ನೀರು ಹಾಯಿಸುವ  ಪಂಪಿನ ಹೀರು ಭಾಗಕ್ಕೆ  ಅಥವಾ ಡಿಶ್ಚಾರ್ಜ್ ಭಾಗಕ್ಕೆ ಸಂಪರ್ಕ ಕಲ್ಪಿಸುವುದು.
  • ಎರಡೂ ಪಂಪುಗಳನ್ನು ಒಟ್ಟಿಗೆ ಚಾಲೂ ಮಾಡಿದಾಗ ಗೊಬ್ಬರವನ್ನು ಪವರ್ ಸ್ಪ್ರೇಯರ್ ಹರಿಯುವ ನೀರಿಗೆ ಸೇರಿಸುತ್ತದೆ.
  • ಇದರಲ್ಲಿ ಯಾವುದೇ ಒತ್ತಡ ನಷ್ಟ ಆಗುವುದಿಲ್ಲ.
  • ಪವರ್ ಸ್ಪ್ರೇಯರ್ ಪಂಪಿನ  ಡಿಶ್ಚಾರ್ಜ್ ಅವಲಂಭಿಸಿ ಬೇಗ – ನಿಧಾನ ಆಗುತ್ತದೆ.

ಸೆಂಟ್ರಿಫ್ಯೂಗಲ್ ಪಂಪು ಮೂಲಕ: 

  • ಪೋಷಕಾಂಶವನ್ನು ಮಿಶ್ರಣ ಮಾಡಿದ  ಟಾಂಕಿಯಿಂದ ಒಂದು ½  ಅಶ್ವ ಶಕ್ತಿಯ ಪಂಪುನ ಮೂಲಕ (ಅಧಿಕ ಹೆಡ್ ಉಳ್ಳದ್ದು) ನೀರು ಹರಿಯುವ ಮುಖ್ಯ ಪೈಪಿಗೆ ಸಂಪರ್ಕ ಕಲ್ಪಿಸುವುದು.
  • ನೀರು ಹರಿಯುತ್ತಿರುವಾಗ ಈ ಪಂಪನ್ನು ಸ್ಟಾರ್ಟ್ ಮಾಡಿದರೆ ಅದು ಗೊಬ್ಬರವನ್ನು ನೀರಿಗೆ ಸೇರಿಸಿ ಕೊಡುತ್ತದೆ.
  • ಇದರಲ್ಲಿ ಬೇಗ ಗೊಬ್ಬರ ನೀರಿಗೆ ಸೇರುತ್ತದೆ.

ಹಳೆಯ ಜೆಟ್  ಪಂಪಿನ ಫುಟ್ ವಾಲ್ವ್:

  • ಇದನ್ನು ವೆಂಚುರಿ ವ್ಯವಸ್ಥೆ ಮಾಡಿದಂತೆ  ಪೈಪು ವ್ಯವಸ್ಥೆ ಮಾಡಿಕೊಂಡು ವೆಂಚುರಿ ಬದಲು ಎರಡು  ಪೈಪುಗಳನ್ನು ಕೊಟ್ಟು ಅದರ ಫುಟ್ ವಾಲ್ವ್ ಅನ್ನು ಟಾಂಕಿಗೆ ಸಂಪರ್ಕಿಸಿ ಗೊಬ್ಬರ ಕೊಡಲಾಗುತ್ತದೆ.
  • ಪಂಪು ಚಲಾಯಿಸುವಾಗ ಸ್ವಲ್ಪ ವಾಲ್ವ್ ಎಡ್ಜೆಸ್ಟ್ ಮೆಂಟ್ ಮಾಡಿದರೆ ನೀರು ಸ್ವಲ್ಪ ಪಥ ಬದಲಿಸಿ  ಹರಿದು ತನ್ನ ಹರಿವಿನೊಂದಿಗೆ ಪೋಷಕ ದ್ರಾವಣವನ್ನು ಹೀರಿ ಮುಂದೆ ಚಲಿಸುತ್ತದೆ. ಇದಕ್ಕೆ  ಯಾವುದೇ ಇಂಧನ – ಮೋಟರ್ ಬೇಕಾಗಿಲ್ಲ.

ಫುಟ್ ವಾಲ್ವ್ ಗೆ ಸಂಪರ್ಕ:

  •  ಕೆರೆ, ಹೊಳೆ ನೀರಿನಿಂದ  ಮೊನೋ ಬ್ಲಾಕ್ ಪಂಪು ಮೂಲಕ ನೀರು ಹಾಯಿಸುವವರು ಇದನ್ನು ಮಾಡಿಕೊಳ್ಳಬಹುದು.
  • ಪುಟ್ವಾಲ್ ನ ತೂತಿಗೆ 12-16 ಎಂ ಎಂ ಎಲ್ ಎಲ್ ಡಿ ಪಿ ಪೈಪು ಜೋಡಿಸಿ, ಪಂಪಿನ ಎತ್ತರದಲ್ಲಿ ಒಂದು ಟಾಂಕಿ ಇಟ್ಟು ಅದರಲ್ಲಿ ಗೊಬ್ಬರ ತುಂಬಿ ಟಾಂಕಿಗೆ ಕಂಟ್ರೋಲ್ ವಾಲ್ವ್ ಹಾಕಿ
  •  ಪಂಪಿ ಚಾಲೂ ಮಾಡುವ 10-20 ಸೆಕೆಂಡ್ ಮುಂಚೆ ಇದರ ವಾಲ್ವ್  ತೆರೆದು ಪಂಪು ಚಾಲೂ ಮಾಡಿದರೆ ನಿರಾಯಾಸವಾಗಿ ನೀರಿನ ಜೊತೆಗೆ ಗೊಬ್ಬರ ಸೇರಿಕೊಂಡು  ಬೆಳೆಗಳಿಗೆ  ತಲುಪುತ್ತದೆ.

ಈ ವ್ಯವಸ್ಥೆಗಳಲ್ಲಿ  ರಸಗೊಬ್ಬರ ಅಲ್ಲದೆ ಕಸ ಇಲ್ಲದ ಸಾವಯವ ಸಾರವನ್ನೂ ಕೊಡಬಹುದು. ನೀರಿನಲ್ಲಿ ಕರಗುವ ಗೊಬ್ಬರ ಕೊಡುವುದು ಸುಲಭ ಮತ್ತು ಅದರ ಫಲಿತಾಂಶ ಉತ್ತಮ. ಸಾಂಪ್ರದಾಯಿಕ ಗೊಬ್ಬರಗಳಲ್ಲಿ ಬಿಳಿ ಮ್ಯುರೇಟ್ ಅಫ್ ಪೊಟ್ಯಾಶ್ ಮತ್ತು ಯೂರಿಯಾ ಕೊಡಲು ಯಾವುದೇ ಕಷ್ಟ ಇಲ್ಲ.

  • ಈ ವ್ಯವಸ್ಥೆಯಲ್ಲಿ ಈಗ ಬೇಕಾದ ಸ್ಥಳದಲ್ಲಿ  ಗೊಬ್ಬರ ಕೊಡಬಹುದಾದ ಕೆಲವು ವ್ಯವಸ್ಥೆಗಳೂ ಬಂದಿವೆ.
  • ಇದನ್ನು ಪೈಪು ಲೈನಿನ ಯಾವ ಸ್ಥಳದಲ್ಲಾದರೂ ಇಟ್ಟು ಅಲ್ಲಿ ರಸಾವರಿ ಮಾಡಬಹುದು.

ರಸಾವರಿ ಎಂಬ ವ್ಯವಸ್ಥೆಯಲ್ಲಿ ಸಮಯ ಉಳಿತಾಯವಾಗುತ್ತದೆ. ಹಣ ಉಳಿತಾಯವಾಗುತ್ತದೆ. ಬೇಕಾದಾಗ ಬೇಕಾದಷ್ಟು ಮಾತ್ರ ಪೋಷಕಗಳನ್ನು  ನಾವೇ ಕೊಡಬಹುದು. ಯಾವ ಕೆಲಸದ ಆಳುಗಳೂ ಬೇಕಾಗಿಲ್ಲ.

end of the article: Fertigation# labour saving# Yield incresae # Fertiliser application#  manuring# soluble fertiliser application#  new technology in fertliser application#
 

Leave a Reply

Your email address will not be published. Required fields are marked *

error: Content is protected !!