ಬೆಲ್ಲ – ಯಾವುದರಲ್ಲಿ ರಾಸಾಯನಿಕ ಇದೆ – ಇಲ್ಲ.

by | Sep 3, 2021 | Health (ಆರೋಗ್ಯ) | 0 comments

ನಾವೆಲ್ಲಾ ಅಂಗಡಿಯಿಂದ ಕೊಳ್ಳುವ ಆಕರ್ಷಕ ಹಳದಿ ಮಡಿ ಬಣ್ಣದ ಬೆಲ್ಲಕ್ಕೂ, ನೈಜ ಬೆಲ್ಲದ ಬಣ್ಣಕ್ಕೂ ಅಜಗಜಾಂತರ ವೆತ್ಯಾಸ ಇದ್ದು, ಅಂಗಡಿಯ ಈ ಬೆಲ್ಲದಲ್ಲಿ ಏನಿದೆ ಎಂಬುದನ್ನು ಆಹಾರ ಇಲಾಖೆ  ಪರಿಶೀಲಿಸುವುದು ಅಗತ್ಯ. ಆದರೂ ಕಡಿಮೆ ರಾಸಾಯನಿಕ ಬಳಸಿ ತಯಾರದ ಬೆಲ್ಲವನ್ನು ಗುರುತಿಸುವುದು ಕಷ್ಟವಲ್ಲ.

  • ಬೆಲ್ಲ ಎಂಬುದು ಕಬ್ಬಿನ ರಸವನ್ನು ಕುದಿಸಿ ಅದರ ನೀರಿನ ಅಂಶವನ್ನು ತೆಗೆದು ಸಿಹಿ ಅಂಶವನ್ನು ಉಳಿಸಿ ಪಡೆಯುವ ವಸ್ತು.
  • ಇದರ ನೈಜ ಸ್ಥಿತಿ ದ್ರವ ರೂಪ. ಇದನ್ನು ಗ್ರಾಹಕರ ಇಷ್ಟಕ್ಕೆ ಮತ್ತು ದಾಸ್ತಾನು, ಸಾಗಾಣಿಕೆಗೆ ಅನುಕೂಲವಾಗುವಂತೆ ಕೆಲವು ವಸ್ತುಗಳನ್ನು ಬಳಸಿ ಗಟ್ಟಿ ಮಾಡಲಾಗುತ್ತದೆ.
  • ಬೆಲ್ಲದ ನೈಜ ಬಣ್ಣ ಕಪ್ಪು.
  • ಕಪ್ಪು ಬಣ್ಣ ಆಕರ್ಷಣೀಯ ಅಲ್ಲ ಎಂಬ ಕಾರಣಕ್ಕೆ ಬೆಲ್ಲ ತಯಾರಿಸುವಾಗ ಅಪಾಯಕಾರೀ ರಾಸಾಯನಿಕ  ಬಳಸಿ ಅದನ್ನು ಬಿಳಿ ಮಾಡಲಾಗುತ್ತದೆ.
ಅಪಾಯಕಾರಿ ಬೆಲ್ಲದ ಬಣ್ಣ
ಅಪಾಯಕಾರಿ ಬೆಲ್ಲದ ಬಣ್ಣ

ಬೆಲ್ಲ ತಯಾರಿಕೆ :


ಭಾರತೀಯರು ವೇದ ಕಾಲದಿಂದಲೂ ಕಬ್ಬಿನ ರಸದಿಂದ ಬೆಲ್ಲ ತಯಾರಿಸುತ್ತಿದ್ದ ಉಲ್ಲೇಖ ಇದೆ.ಇದು ಒಂದು ಗುಡಿ ಕೈಗಾರಿಕೆ.ಸಕ್ಕರೆ ಬಂದ ತರುವಾಯ ಬೆಲ್ಲದ ಬಳಕೆ ಕಡಿಮೆಯಾಯಿತಾದರೂ ಇಂದಿಗೂ ಪ್ರತೀ ಮನೆಯಲ್ಲೂ ಸಕ್ಕರೆಯಷ್ಟೇ  ಬೆಲ್ಲದ ಬಳಕೆಯೂ ಇದೆ. ಕಬ್ಬು ಬೆಳೆಯಲಾಗುವ ಪ್ರದೇಶಗಳಲ್ಲೆಲ್ಲಾ ಬೆಲ್ಲದ ಗಾಣಗಳಿದ್ದು, ಸಕ್ಕೆರೆಯಷ್ಟು ಅಲ್ಲದಿದ್ದರೂ ಗರಿಷ್ಟ ಪ್ರಮಾಣದಲ್ಲಿ  ಬೆಲ್ಲ ಉತ್ಪಾದನೆಯಾಗುತ್ತದೆ.

  • ಮಲೆನಾಡಿನ ಭಾಗಗಳಾದ ಶಿರಸಿ, ಸಾಗರ, ಯಲ್ಲಾಪುರ, ಕುಮಟಾ, ಹೊನ್ನಾವರ, ಅಂಕೋಲ, ಮುಂತಾದ ಕಡೆ ಹಿಂದಿನಿಂದಲೂ ದ್ರವ ಬೆಲ್ಲವನ್ನು ( (ಜೋನಿ) Syrup jagary ತಯಾರಿಸುವ  ಪದ್ದತಿ.
  • ಇದು ಪರಿಶುದ್ಧ ಯಾವುದೇ ರಾಸಾಯನಿಕ ಬಳಸದೆ ಸಿದ್ದವಾಗುವ ಬೆಲ್ಲ.
  • ಉಳಿದೆಡೆ ಬೆಲ್ಲವನ್ನು  ಗಟ್ಟಿ ಮಾಡಲಾಗುತ್ತದೆ.

ಬೆಲ್ಲದ ಸ್ಥಿತಿ:

 ರಾಸಾಯನಿಕ ಬಣ್ಣ ಬಳಸಿದ ಬೆಲ್ಲ ಹೀಗೆ ಇರುತ್ತದೆ.
ರಾಸಾಯನಿಕ ಬಣ್ಣ ಬಳಸಿದ ಬೆಲ್ಲ ಹೀಗೆ ಇರುತ್ತದೆ.
  • ಬೆಲ್ಲದ ನೈಜ ಸ್ಥಿತಿ ದ್ರವ. ಇದರ ನೀರಿನ ಅಂಶ ಆವಿಯಾದ ತರುವಾಯ ಉಳಿಯುವ ವಸ್ತು ಬೆಲ್ಲ.
  • ಇದನ್ನು ಇನ್ನೂ ಹೆಚ್ಚು ಕಾಯಿಸಿದರೆ ಅದು ಗಾಜಿನ ತುಂಡಿನ ತರಹ ಆಗುತ್ತದೆ.
  • ಬಾಣಲೆಯಲ್ಲಿ ಬೆಲ್ಲವನ್ನು ಬಿಸಿ ಮಾಡುವಾಗ ಕಲಕುವ ಸೌಟಿನಲ್ಲಿ ಅದರ ಸ್ಥಿತಿಯನ್ನು ಅಂದಾಜು ಮಾಡುತ್ತಾರೆ.
  • ನೂಲು ಪಾಕಕ್ಕೆ ಬಂದರೆ  ತಣ್ಣಗಾಗುವಾಗ ಬೆಲ್ಲ ಬಹಳ ಗಟ್ಟಿಯಾಗುತ್ತದೆ.
  • ಅದಕ್ಕೂ ಮುಂಚೆ ಅದನ್ನು ಇಳಿಸಿ, ಅಗಲದ ಪಾತ್ರೆಗೆ  ಎರೆದು ತಣ್ಣಗಾಗಲು ಬಿಡಲಾಗುತ್ತದೆ.


ಬೆಲ್ಲ ಹೆಚ್ಚು ಕಾದರೆ ಗಟ್ಟಿಯಾಗುವುದಲ್ಲ. ಅದನ್ನು ಗಟ್ಟಿ ಮಾಡಲು ಕೆಲವು ವಸ್ತುಗಳನ್ನು  ಸೇರಿಸಲಾಗುತ್ತದೆ.
ಕಳೆದ ಕೆಲವು ಸಮಯದ ಹಿಂದೆ ಸಕ್ಕರೆಯ ಬೆಲೆ ಕಡಿಮೆ ಇತ್ತು. ಆಗ ಸಕ್ಕರೆಯನ್ನೇ ಬಣ್ಣ ಹಾಕಿ ಬೆಲ್ಲ ತಯಾರಿಸಲಾಗುತ್ತಿತ್ತು.

ಬೆಲ್ಲ ಗಟ್ಟಿ ಮಾಡುವುದು:

ಕಡಿಮೆ ರಾಸಾಯನಿಕ  ಬಳಸಿದ ಬೆಲ್ಲ
ಕಡಿಮೆ ರಾಸಾಯನಿಕ ಬಳಸಿದ ಬೆಲ್ಲ

ಬೆಲ್ಲ ಗಟ್ಟಿ ಆಗಬೇಕಿದ್ದರೆ ಕೆಲವು ವಸ್ತುಗಳನ್ನು ಅದು ಕುದಿಯುತ್ತಿರುವಾಗ ಹಾಕಬೇಕಾಗುತ್ತದೆ. ಅದರಲ್ಲಿ ಸಸ್ಯ ಜನ್ಯವೂ ಇದೆ. ರಾಸಾಯನಿಕವೂ ಇದೆ.

  • 100 ಕಿಲೋ ಕಬ್ಬಿನ ರಸಕ್ಕೆ 75-80  ಗ್ರಾಂ ಲೆಕ್ಕದಲ್ಲಿ  ಹರಳಿನ ಬೀಜದ ಪುಡಿಯನ್ನು ಹಾಕುತ್ತಾರೆ.
  • 100  ಕಿಲೋ ಗ್ರಾಂ ರಸಕ್ಕೆ  30-40 ಗ್ರಾಂ ನೆಲಕಡ್ಲೆ ಬೀಜದ ಹಿಟ್ಟು ಹಾಕುತ್ತಾರೆ.
  • 100  ಕಿಲೋ ಗ್ರಾಂ ರಸಕ್ಕೆ  30-40 ಗ್ರಾಂ ಸೋಯಾ ಬೀನ್ ಹಿಟ್ಟು ಹಾಕುತ್ತಾರೆ.
  • ಪ್ರತೀ 1000 ಲೀ. ರಸಕ್ಕೆ ಚಿಮೋಪ್ಲೋಕಾ ಅಥವಾ ಪಾಲಿಮರ್ 3 ppm, ಮತ್ತು  3 ಕಿಲೊ ಬೆಂಡ್ಕಿ ಅಥವಾ 2 ಕಿಲೋ ಬೆಂಡೆ ಗಿಡದ ಪುಡಿಯನ್ನು  ಹಾಕಲಾಗುತ್ತದೆ.
  • ಪ್ರತೀ 100 ಕಿಲೋ ರಸಕ್ಕೆ 60-70 ಮಿಲೀ ಸುಣ್ಣದ ತಿಳಿ ನೀರು ಹಾಕಲಾಗುತ್ತದೆ.
  • ಪ್ರತೀ 1000 ಲೀ.ರಸಕ್ಕೆ 0.5 ಕಿಲೋ ಹೈಡ್ರೋಸ್ ಪುಡಿ, ಮತ್ತು ಬೆಂಡಿ ಗಿಡದ ಪುಡಿ ಮತ್ತು ಬೆಂಡೆಯ ಗೋಂದು( ಅಂಟು) (Hibiscus fieuinens) ಹಾಕಲಾಗುತ್ತದೆ.

ಇದು ಬೆಲ್ಲವನ್ನು ಸಾಂಪ್ರದಾಯಿಕವಾಗಿ ತಯಾರಿಸುವಾಗ ಬಳಸುವ ಮೂಲವಸ್ತುಗಳು. ಈಗ ಇವುಗಳ ಬದಲು ಬೇರೆ ರಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ.

ಯಾವ ರಾಸಾಯನಿಕ:

ಸ್ವಲ್ಪ ಬಣ್ಣ ಬಳಸಿದ ಬೆಲ್ಲ
ಸ್ವಲ್ಪ ಬಣ್ಣ ಬಳಸಿದ ಬೆಲ್ಲ
  • ಬೆಲ್ಲ ತಯಾರಿಸುವಾಗ ಬಳಕೆ ಮಾಡುವ ರಾಸಾಯನಿಕಗಳ ಬಗ್ಗೆ ತಯಾರಕರು ಯಾವುದೇ  ಕುರುಹು ನೀಡುವುದಿಲ್ಲ.
  •  ಬೆಲ್ಲ ಕುದಿಯುವಾಗ ಬಕೆಟ್ ನಲ್ಲಿ ತಯಾರಿಸಿದ ಹಳದಿ ಬಣ್ಣದ ದ್ರಾವಣವನ್ನು ಅದರ ಮೇಲೆ ಚೆಲ್ಲುತ್ತಾರೆ.
  • ಇದು ಮಡಿ ಬಣ್ಣಕ್ಕಾಗಿ ಹಾಕುವ ವಸ್ತು ಎಂಬುದಾಗಿ ಹೇಳುತ್ತಾರೆ.
  • ಬೆಲ್ಲ ತಯಾರಿಕಾ ಘಟಕಗಳಲ್ಲಿ  ಮೆಗ್ನೀಶಿಯಂ ಸಲ್ಫೇಟ್ ಚೀಲಗಳು ಇರುತ್ತವೆ.
  • ಕೆಲವು ಪರವಾನಿಗೆ ರಹಿತ ಬಣ್ಣದ ಬಾಟಲಿಗಳೂ ಕಂಡು ಬರುತ್ತವೆ.

ಹಿಂದೆ  ಕುದಿ ಬಂದು ಉಕ್ಕುವಾಗ ಅದನ್ನು ತಡೆಯಲು ಬೂರಲ ಅರಳಿ ಮರದ ರಸ, (Bombax malabaricum) ಅಥವಾ ಜಾಣ ಮರದ ರಸವನ್ನು    (Grewia asiatica)  ಚೆಲ್ಲುತ್ತಿದ್ದರು.ಈಗ ಉಕ್ಕುವ ಪ್ರಮೇಯ ಇಲ್ಲ. ಆ ಮರಗಳ ಲಭ್ಯತೆ ಇಲ್ಲದ ಕಾರಣ ಬೇರೆ ರಾಸಾಯನಿಕ ಬಳಕೆ  ಮಾಡಲಾಗುತ್ತಿದೆ.

ಗ್ರಾಹಕರ ಆಯ್ಕೆ ಮುಖ್ಯ:

  • ಯಾವುದೇ ಬೆಲ್ಲ  ತಯಾರಕರೂ ಉದ್ದೇಶ ಪೂರ್ವಕವಾಗಿ ಸಾಮಾಜಿಕ ಆರೋಗ್ಯಕ್ಕೆ ತೊಂದರೆ ಆಗುವ ಕೆಲಸವನ್ನು  ಮಾಡಲಾರರು.
  • ಗ್ರಾಹಕರ ಕೊಳ್ಳುವ ಅಭಿರುಚಿಗೆ  ತಕ್ಕಂತೆ ತಮ್ಮ ಉತ್ಪನವನ್ನು ತಯಾರಿಸುವುದು ಅಗತ್ಯವಾದ ಕಾರಣ , ಅವರಿಗೆ ಯಾವುದು ಅಗ್ಗವೋ ಆ ಸಮಾಗ್ರಿಯನ್ನು ಬಳಕೆ  ಮಾಡುತ್ತಾರೆ.
  • ಬೆಲ್ಲ ತಯಾರಕರು ತಮ್ಮ ಸ್ವಂತ ಬಳಕೆಗೆ  ಪ್ರತ್ಯೇಕ ಬೆಲ್ಲವನ್ನು ಉತ್ಪಾದಿಸುತ್ತಾರೆ.
  • ಅದು ಮೆದು ವಾಗಿರುತ್ತದೆ. ಇಂಥಹ ಬೆಲ್ಲವನ್ನು ಪ್ರಾಯಶಹ ಯಾವ ಗ್ರಾಹಕನೂ ಇಚ್ಚೆ ಪಡಲಾರ.

ಗ್ರಾಹಕರು ಬೆಲ್ಲದ ನಿಜ ಬಣ್ಣ ಯಾವುದು ಮತ್ತು ಅದರ ಸ್ಥಿತಿ ಹೇಗಿರುತ್ತದೆ  ಎಂಬುದನ್ನು ಅರ್ಥ ಮಾಡಿಕೊಂಡರೆ ಇಂತಹ ಯಾವುದೇ ಅವ್ಯವಸ್ಥೆಗೆ  ಆಸ್ಪದ ಇರಲಾರದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!