ಶ್ರೀಲಂಕಾಕ್ಕೆ ಮತ್ತೆ ಭಾರತದಿಂದ ಸಾರಜನಕ ಗೊಬ್ಬರ.

by | Nov 8, 2021 | Government & Daily News (ಸರ್ಕಾರ ಮತ್ತು ದೈನಂದಿನ ಸುದ್ದಿ) | 0 comments

ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಇರಾದೆಯಲ್ಲಿ ಭಾರತ ಸರಕಾರವು ಮತ್ತೆ ಶ್ರೀಲಂಕಾದ ಕೃಷಿಯನ್ನು ಮೇಲೆ ಎತ್ತಲು ನ್ಯಾನೋ ಸಾರಜನಕ ಗೊಬ್ಬರವನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿದೆ.  ಭಾರತದ ಔದಾರ್ಯವೋ ಚೀನಾಕ್ಕೆ ಸೆಡ್ದೋ ಒಟ್ಟಿನಲ್ಲಿ ಭಾರತ ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ.

ನ್ಯಾನೋ ಯೂರಿಯಾ ಭಾರತದಲ್ಲಿ ಇಫ್ಕೋ ಸಂಸ್ಥೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು, ಭಾರತದ   ರೈತರು ಇದನ್ನು ಎಷ್ಟು ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಶ್ರೀಲಂಕಾಕ್ಕೆ ಅದೇ ನ್ಯಾನೋ ಸಾರಜನಕವನ್ನು ಕಳುಹಿಸಲಾಗಿದೆಯೋ ಬೇರೆ ಕಳುಹಿಸಲಾಗಿದೆಯೋ ಮಾಹಿತಿ ಇಲ್ಲ. ಶ್ರೀಲಂಕಾದ ಸಾವಯವ ಕೃಷಿಗೆ ಸಹಾಯ ಎನ್ನುತ್ತಿರುವ ಕಾರಣ ಇದು ಬಹುಷಃ ಸಾವಯವ ರೂಪದ ನ್ಯಾನೋ ಸಾರಜನಕ ಇರಬಹುದು. ಏಕೆಂದರೆ ಶ್ರೀಲಂಕಾ ಸಾವಯವ ಕೃಷಿಗೆ ಪರಿವರ್ತನೆ ಆಗುತ್ತಿರುವ ದೇಶ. ಭಾರತಲ್ಲಿ ಸಾವಯವ ನ್ಯಾನೋ ಸಾರಜನಕ ಗೊಬ್ಬರವನ್ನುಯಾರು ಉತ್ಪಾದಿಸುತ್ತಾರೆಯೋ ಎಂಬುದು ಬಹುಷಃ ಭಾರತದ ಕೃಷಿಕರಿಗೆ ಗೊತ್ತಿರಲಿಕ್ಕಿಲ್ಲ. ಕಾರಣ ಇದು ನಮ್ಮ ದೇಶದಲ್ಲಿ ಮಾರುಕಟೆಯಲ್ಲಿ ಲಭ್ಯವಿಲ್ಲ. ನ್ಯಾನೋ ಸಾರಜನಕ ಎಂದರೆ  ಅಧಿಕ ಸಾಂದ್ರತೆಯಲ್ಲಿ ಸಾರಜನಕ ಅಂಶವನ್ನು ಒಳಗೊಂಡ, ಕಡಿಮೆ ಪ್ರಮಾಣದಲ್ಲಿ ಬಳಸಿ ಫಲಿತಾಂಶ ಕೊಡುವ ಗೊಬ್ಬರವಾಗಿರುತ್ತದೆ. ಇದನ್ನು ಸಗಾಟ ಮಾಡುವುದು ಸುಲಭ. ಮತ್ತು ಬಳಕೆ ಪ್ರಮಾಣ ಕಡಿಮೆ ಸಾಕು ಎನ್ನಲಾಗುತ್ತಿದೆ.

ಸಾರಜನಕ ಯುರಿಯಾ (ಸಾಂದರ್ಭಿಕ ಚಿತ್ರ೦
ಸಾಂದರ್ಭಿಕ ಚಿತ್ರ

ನಮ್ಮ ದೇಶದ ರೈತರು ಮತ್ತು ಕೃಷಿ:

  • ಭಾರತದ ಕೃಷಿಕರು  ರಸ ಗೊಬ್ಬರದ ಕೊರತೆಯನ್ನು ಅನುಭವಿಸುತ್ತಿದ್ದಾರೆ, ಬಹುಷಃ ಸಾರಜನಕದ  ಕೊರತೆ ಇದ್ದಂತಿಲ್ಲ.
  • ಆದಾಗ್ಯೂ ನಮಗೆ ನ್ಯಾನೋ ಸಾರಜನಕ ಯಾಕೆ ಎಲ್ಲಾ ಕಡೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂಬುದು ತಿಳಿಯುತ್ತಿಲ್ಲ.
  • ನಮ್ಮ ದೇಶದ ರೈತರು ವ್ಯಾಪಕವಾಗಿ ಬಳಕೆ ಮಾಡುವುದು ಯೂರಿಯಾ ರೂಪದ ಸಾರಜನಕ.
  • ಈ ಸಾರಜನಕ ಗೊಬ್ಬರ ಸಾಮಾನ್ಯ ಗೋಣಿ ಚೀಲದಲ್ಲಿ ತುಂಬಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
  • ಸಾರಜನಕ ಗೊಬ್ಬರ ಎಂಬುದು ಆವಿಯಾಗಿ ಹೋಗುವ ಗೊಬ್ಬರವಾಗಿದ್ದು, ನಾವು ಖರೀದಿಸುವ ಗೊಬ್ಬರದ ಚೀಲದ ಸ್ಥಿತಿಯಲ್ಲಿ ಅದರಲ್ಲಿ ಎಷ್ಟು ಸಾರಜನಕ ಅಂಶ ಉಳಿದುಕೊಂಡೀರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲದ ಸಂಗತಿ.
  • ಜೊತೆಗೆ ಯೂರಿಯಾ ರೂಪದ ಸಾರಜನಕ  ಕೆಲವು ದುಷ್ಪರಿಣಾಮವನ್ನೂ ಹೊಂದಿದ್ದು,  ನಮ್ಮ ರೈತರಿಗೂ ಉತ್ತಮ ಗುಣಮಟ್ಟದ ಗೊಬ್ಬರದ ಆಗತ್ಯ ಇರುತ್ತದೆ.

ಭಾರತದಿಂದ 10,000 ಕಿಲೋ ನ್ಯಾನೋ ಸಾರಜನಕ ಗೊಬ್ಬರವು  ಶ್ರೀಲಂಕಾಕ್ಕೆ ಎರಡು IAF C-17 ವಿಮಾನಗಳ ಮೂಲಕ ಶ್ರೀಲಂಕಾಕ್ಕೆ ತಲುಪಿದೆ. ಈ ಹಿಂದೆ ನಾವೇ ಇವರಿಗೆ 30,000 ಟನ್ ಮ್ಯುರೆಟ್ ಆಫ್ ಪೊಟ್ಯಾಶ್ ಗೊಬ್ಬರವನ್ನು  ಕೊಟ್ಟಿದ್ದೇವೆ. ಭಾರತಕ್ಕೆ ಶ್ರೀಲಂಕ ನೆರೆ ರಾಷ್ಟ್ರವಾಗಿದ್ದು, ಈ ದೇಶಕ್ಕೆ ಚೀನಾವು ಹಾನಿಕಾರಕ ಸೂಕ್ಷ್ಮಾಣು ಜೀವಿಗಳುಳ್ಳ ಸಾವಯವ ಗೊಬ್ಬರವನ್ನು ಕೊಟ್ಟು ಮೋಸ ಮಾಡಿದೆ. ನಾನು ನೆರೆಹೊರೆಯವರ ಜೊತೆಗೆ ಉತ್ತಮ ಬಾಂದವ್ಯ ಬೆಳೆಸುವ  ಮನೋಭಾವದವರು. ನೆರೆಕರೆಯವರಿಗೆ ಮೊದಲ ಆದ್ಯತೆ Neighbourhood First ನಮ್ಮದು.ಈ ಹಿಂದೆಯೂ ನಾವು ಶ್ರೀಲಂಕಾ ಕಷ್ಟದಲ್ಲಿದ್ದಾಗ ಸಹಕಾರ ಮಾಡಿದವರು. ಈಗಲೂ ಶ್ರೀಲಂಕಾದ ಕಷ್ಟ ಪರಿಸ್ಥಿತಿಗೆ ಮೊದಲಾಗಿ ಸ್ಪಂದಿಸಿದ ಹೆಗ್ಗಳಿಕೆ ನಮ್ಮದು.

ನೆರೆ ದೇಶಗಳಿಗೆ ಸಹಕಾರ ನೀಡಬೇಕಾದದ್ದು ಸರಿಯಾದ ಕ್ರಮವೇ ಆಗಿರುತ್ತದೆ. ನಮಗೆ ಇಂತಹ ಸಮಸ್ಯೆ ಉಂಟಾದಾಗ ಅವರೂ ಸಹಕಾರ ಮಾಡಬಹುದು. ಇದರ  ಜೊತೆಗೆ ಉಭಯ ದೇಶಗಳು ಕೃಷಿ ಉತ್ಪನ್ನ ವ್ಯವಹಾರ ವಿಷಯದಲ್ಲೂ ಸಹ ಪರಸ್ಪರ ಸಹಕಾರ ಹೊಂದಿರಬೇಕು. ಭಾರತದ ರೈತರು ಬೆಳೆಯುವ ಕೃಷಿ ಉತ್ಪನ್ನಕ್ಕೆ ಸ್ಪರ್ಧೆ ನೀಡಿ, ಇಲ್ಲಿ ಬೆಲೆ ಕುಸಿತವಾಗುವಂತೆ ಮಾಡುವುದು, ಇಂತದೆಲ್ಲಾ ನಡೆಯದಂತೆ ಈ ಸಮಯದಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡರೆ ಎಲ್ಲರಿಗೂ ಅನುಕೂಲ.   

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!