ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು.
ಪ್ರಕೃತಿ ಅನುಕೂಲಕರವಾಗಿದ್ದರೆ ಮಾತ್ರ ಮನುಕುಲ ಕ್ಷೇಮದಿಂದ ಇರಲು ಸಾಧ್ಯ. ಈಗ ಪ್ರಕೃತಿ ಮುನಿಸಿಕೊಂಡಂತಿದೆ. ಹವಾಮಾನ ಬದಲಾಗುತ್ತಿದೆ. ನಾವು ಹೊಟ್ಟೆ ಹೊರೆಯಲು ಬೆಳೆಸುವ ಬೆಳೆಗಳ ಮೇಲೆ ಹಾಗೂ ನಮ್ಮೆಲ್ಲರ ಆರೋಗ್ಯದ ಮೇಲೆ ಇದರ ದುಶ್ಪರಿಣಾಮ ಉಂಟಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಲಿದೆ ಎಂಬುದಾಗಿ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ. ಜನ ಆನಾರೋಗ್ಯ ಸಮಸ್ಯೆಯಿಂದ ಬಳಲು ಸ್ಥಿತಿ ಉಂಟಾಗಿದೆ. ಹವಾಮಾನ ಬದಲಾವಣೆಯ ಬಿಸಿ ಈ ವರ್ಷ ಕೃಷಿ ಕ್ಷೇತ್ರಕ್ಕೆ ವಿಪರೀತವಾಗಿ ಬಾಧಿಸುವ ಸಾಧ್ಯತೆ ಇದೆ. ಶಿವರಾತ್ರೆ ಕಳೆದ ಮೇಲೆ…