ಅಡಿಕೆಗೆ ಬಳಸುತ್ತಿರುವ ಕೀಟ- ಶಿಲೀಂದ್ರ ನಾಶಕ ಕೆಲಸ ಮಾಡುವುದಿಲ್ಲವಂತೆ.
ಭಾರತ ಸರಕಾರದ ಕೃಷಿ ಮಂತ್ರಾಲಯವು ಕೆಲವು ಕೀಟನಾಶಕಗಳನ್ನು ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪ ಎತ್ತಿದೆ. ಕಾರಣ ಅವು ಕೆಲಸ ಮಾಡುವುದಿಲ್ಲವಂತೆ. ಸುಮಾರು 27 ಬೆಳೆಸಂರಕ್ಷಗಳನ್ನು ಬ್ಯಾನ್ ಮಾಡಲು ಮುಂದಾಗಿದೆ. ಹೌದು ನಾವು ಅಡಿಕೆ ಮಿಳ್ಳೆ ಉದುರದಂತೆ ತಡೆಯಲು ಬಳಸುವ ಕೆಲವು ಕೀಟನಾಶಕ, ಶಿಲೀಂದ್ರ ನಾಶಕಗಳೂ ಸೇರಿದಂತೆ ಬಹಳಷ್ಟು ಕೃಷಿ ಒಳಸುರಿಗಳು ಬಳಸಿಯೂ ಕೆಲಸ ಮಾಡದೆ ನಮ್ಮ ಜೇಬು ಖಾಲಿ ಮಾಡಿದ್ದಷ್ಟೇ. ಅದೆಷ್ಟೋ ರೈತರು ಬೆಳೆಗಳಿಗೆ ಬರುವ ರೋಗಕ್ಕೆ, ಕೀಟಕ್ಕೆ ಔಷಧಿ ಸಿಂಪಡಿಸುತ್ತಾರೆ. ಒಂದನ್ನು ಸಿಂಪಡಿಸಿ ಫಲಿತಾಂಶ ಸಿಗದಿದ್ದರೆ…