ದೇಶದ ಪ್ರಧಾನಿಗಳು

ಪ್ರಧಾನಿಗಳು ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದು ಯಾಕೆ?

ದೇಶದ ಪ್ರಧಾನಿಯೊಬ್ಬರು ದೇಶವಾಸಿಗಳ ಕ್ಷಮೆ ಯಾಚಿಸುವುದೆಂದರೆ ಅಂಥಃ ತಪ್ಪನ್ನೇನು ಮಾಡಿರಬಹುದು? “मैं आज देशवासियों से क्षमा मांगते हुए ” ತಪ್ಪಿಗಾಗಿ ಕ್ಷಮೆ ಕೇಳಿದ್ದೋ, ಏನು ಬೇಕಾದರೂ ಮಾಡಿಕೊಳ್ಳಿ. ನಿಮ್ಮ ತಂಟೆಗೆ  ನಾವಿಲ್ಲ ಎಂದು ವಿಷಯಕ್ಕೆ ಅಂತ್ಯ ಹಾಡಿದ್ದೋ ತಿಳಿಯದು. ಪ್ರಧಾನಿಗಳಾದವರು ಸಾಮಾನ್ಯ ಜನರಂತೆ ಮನ ಬಂದಂತೆ ಮಾತಾಡುವಂತಿಲ್ಲ. ಮನಬಂದಂತೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಇದಂತೂ ಸತ್ಯ. ಸಂಯುಕ್ತ ಕಿಸಾನ್ ಮೋರ್ಚಾ ಎಂಬುದು 2020 ರಲ್ಲಿ ಹುಟ್ಟಿಕೊಂಡ ರಾಷ್ಟ ಸಂಘಟನೆ. ಕೇಂದ್ರ ಸರಕಾರ “ಕೃಷಿ ಕಾಯಿದೆ 2020” ಎಂಬ…

Read more

ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆ ದಿನಾಂಕ :19/11/2021

ರಾಜ್ಯದಾದ್ಯಂತ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದಿನ 19/11/2021 ದಿನಬಳಕೆ ಆಹಾರ ವಸ್ತುಗಳ ಬೆಲೆ ಹೀಗಿತ್ತು. ತರಕಾರೀ ಬೆಲೆ ಹೆಚ್ಚಳವಾಗಿದೆ. ಆದರೆ  ರೈತರಲ್ಲಿ ಬೆಳೆ ಭಾರೀ ಕಡಿಮೆ ಇದ್ದು, ಲಾಭ ಇಲ್ಲ. ಧವಸ ಧಾನ್ಯಗಳು ಗೋಧಿ: Mexican / ಮೆಕ್ಸಿಕನ್ (*), 2150, 2150 Sona / ಸೋನ (*), 1700, 2000 Red / ಕೆಂಪು (*), 1545, 2800 White / ಬಿಳಿ (*), 1257, 3500 Local / ಸ್ಥಳೀಯ (*),…

Read more
ಉತ್ತಮ ರಾಶಿ ಅಡಿಕೆ

ಅಡಿಕೆ- ಕರಿಮೆಣಸು- ಕಾಫಿ-ಶುಂಠಿ ಧಾರಣೆ: 19-11-2021 ಶುಕ್ರವಾರ.

ರಾಜ್ಯದಾದ್ಯಂತ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಖಾಸಗಿ ವರ್ತಕರಲ್ಲಿ  ಇಂದು 19-11-2021 ಶುಕ್ರವಾರ ಅಡಿಕೆ, ಕರಿಮೆಣಸು, ರಬ್ಬರ್, ಕಾಫಿ , ಶುಂಠಿ ಧಾರಣೆ ಹೀಗಿತ್ತು. ‘ ಕರಾವಳಿಯಲ್ಲಿ ಖಾಸಗಿ ವರ್ತಕರ ಸ್ಪರ್ಧೆ ಅಡಿಕೆ ಮಾರುಕಟ್ಟೆಯನ್ನು ತುಸು ಮೇಲೆಕ್ಕೆತ್ತಿದೆ. ಹೊಸ ಚಾಲಿಗೆ ನಿನ್ನೆಯಿಂದ ಖಾಸಗಿ ವರ್ತಕರಲ್ಲಿ ಕಿಲೋಗೆ ರೂ.5 ಹೆಚ್ಚಳವಾಗಿದೆ. ಹಳೆ ಚಾಲಿಗೆ ಕ್ಯಾಂಪ್ಕೋ ಸಹ ರೂ. 5 ಹೆಚ್ಚಿಸಿದೆ. ಆದರೆ ಗುಣಮಟ್ಟದ ಹೊಸ ಅಡಿಕೆ ಬರುವುದು ತುಂಬಾ ಕಡಿಮೆಯಾದ ಕಾರಣ ಇದು ದೊಡ್ದ ವಿಷಯವಲ್ಲ….

Read more
ಹೃದಯ ಶ್ರೀಮಂತಿಕೆಯ ಕೃಷಿಕರು.

ಕೃಷಿಕರು ಹಣದಲ್ಲಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರು.

ನಾವು ಕೃಷಿಕರು ಬಡವರು. ನಮಗೆ ಏನೂ ಇಲ್ಲ ಎಂದು ಯಾವತ್ತೂ ಹೇಳಬೇಡಿ. ಕೃಷಿರಾದವರೇ ಸಮಾಜದಲ್ಲಿ ತೃಪಿಯ ಜೀವನ ನಡೆಸು ಹೃದಯ ಶ್ರೀಮಂತರು. ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಬಡವನಾದವನೇ ಮುಂದೆ ಶ್ರೀಮಂತನಾಗುವುದು. ಸಿರಿವಂತನಾದವನೇ ನಂತರ ಬಡವನಾಗುವುದು. ಇದೊಂದು ಚಕ್ರ. ಕೃಷಿಕರ ಜೀವನ ಕ್ರಮ ಎಂಬುದು ಸಮಾಜದಲ್ಲಿ ಯಾರೂ ಗಳಿಸದ ಸುಖೀ ಬದುಕನ್ನು ಅನುಭವಸಲಿಕ್ಕಾಗಿಯೇ ಇರುವುದು. ಸ್ವಾವಲಂಭಿ ಬದುಕು ಎಂಬುದು ಇದ್ದರೆ ಅದು ಕೃಷಿ ವೃತ್ತಿಯಲ್ಲಿ ಮಾತ್ರ. ಇಲ್ಲಿ ನಮಗೆ ನಾವೇ ಮಾಲಕರು. ಹೊಟ್ಟೆಗೆ ತಿನ್ನುವುದಕ್ಕೇನೂ ಕಡಿಮೆ ಇಲ್ಲ. ತಿಂದು…

Read more
ಮಳೆ ಬಂತು ಮಳೆ

ದಿನಾಂಕ 17/11/21 ರಿಂದ 24/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ.

ಏನು ಮಳೆಯ ಆವಾಂತರವೋ ತಿಳಿಯದು. ಚಳಿಗಾಲ ಬರಬೇಕಾದ ಸಮಯವಾದರೂ ಮಳೆಗಾಲಕ್ಕೆ ನಮ್ಮನ್ನಗಲಲು  ಮನಸ್ಸಿಲ್ಲ. ಒಂದಿಲ್ಲೊಂದು ವಾಯುಭಾರ ಕುಸಿತ. ಈ ಭಾರಿ ಅರಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ವಾಯು ಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಇದೆ. ಕರ್ನಾಟಕದಲ್ಲಿ ದಿನಾಂಕ 17/11/21 ರಿಂದ 23/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇರುತ್ತದೆ. ಇನ್ನೊಂದು ವಾರದಲ್ಲಿ ಜನ  ತರಕಾರಿ ತಿನ್ನುವುದಕ್ಕೂ ಕಷ್ಟ ಪಡಬೇಕಾಗಬಹುದು.ಗ್ರಾಹಕರು ತರಕಾರೀ ಬೆಳೆಗಾರರಿಗೆ ಬಂಪರ್ ಲಾಭ…

Read more
ಫಸ್ಟ್ ಕ್ವಾಲಿಟಿ ಚಾಲಿ

ರಾಶಿ ಅಡಿಕೆ, ಚಾಲಿ, ಕರಿಮೆಣಸು ದರ ಏರಿಕೆ- ದಿನಾಂಕ: 16-11-2021 ಮಂಗಳವಾರ.

ಇಂದು ದಿನಾಂಕ 16-11-2021 ರ ಮಂಗಳವಾರ  ಉತ್ತರ ಕನ್ನಡದ ಪ್ರಮುಖ ಮಾರುಕಟ್ಟೆ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ  ರಾಶಿ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೆಚ್ಚಾಗಿ ಚಾಲಿಯೇ ಮಾಡಲಾಗುವ ಕರಾವಳಿಯ ಭಾಗಗಳಲ್ಲಿ ಹೊಸ ಚಾಲಿಗೂ ಕ್ವಿಂಟಾಲಿಗೆ ರೂ. 500 ಹೆಚ್ಚಾಗಿದೆ. ಹಳೆ ಚಾಲಿಗೆ ಕೆಲವು ಕಡೆ 500  ಇನ್ನು ಕೆಲವು ಕಡೆ 700 ರೂ. ಹೆಚ್ಚಳವಾಗಿದೆ. ಕೆಂಪು ಚಾಲಿ ಎರಡೂ ಅನಿಶ್ಚಿತವಾಗಿದೆ. ಕರಿಮೆಣಸಿಗೆ ಸಕಲೇಶಪುರದಲ್ಲಿ ಗರಿಷ್ಟ 54,000 ಆಗಿದೆ. ಏರಿಕೆ ಇರುವಾಗ ತೃಪ್ತಿಯಲ್ಲಿ ಮಾರಾಟ ಮಾಡುವುದೇ ಜಾಣತನ ಎಂದೇ…

Read more
ಸುಪ್ರೀಮ್ ಕೋರ್ಟ್

ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…

Read more
ಬೇಯಿಸಿದ ಬೆಟ್ಟೆ ಅಡಿಕೆ

ಅಡಿಕೆ ಧಾರಣೆ ದಿನಾಂಕ: 15-11-2021 ಸೋಮವಾರ. ಚಾಲಿ ಏರಿಕೆ- ಕೆಂಪು ಸ್ಥಿರ.

ದಿನಾಂಕ 15-11-2021 ಸೋಮವಾರ ಅಡಿಕೆ, ಕೊಬ್ಬರಿ, ಹಸಿ ಶುಂಠಿ ರಬ್ಬರ್, ಕಾಫೀ. ಏಲಕ್ಕಿ ಧಾರಣೆಗಳು ಹೆಚ್ಚೂ ಆಗದೆ ಕಡಿಮೆಯೂ ಆಗದೆ ಹಿಂದಿನ ಶುಕ್ರವಾರದ ಧಾರಣೆಯಂತೆ ಮುಂದುವರಿದಿದೆ. ಚಾಲಿ ಖಾಸಗಿಯವರಲ್ಲಿ  ದರ 50,500 ತನಕ ಏರಿಕೆಯಾಗಿದೆ. ಕ್ಯಾಂಪ್ಕೋ ಮಾತ್ರ 500  ಗರಿಷ್ಟ ದರವನ್ನು ಸೂಚಿಸಿದೆ.ಡಬ್ಬಲ್ ಚೋಳ್ 51,500 ತನಕ ಖರೀದಿ ದರ ಇದೆ. ಆದರೆ ಅಡಿಕೆ ಇಲ್ಲ. ಕರಿಮೆಣಸು ಮಾತ್ರ ಮೇಲೆಕ್ಕೆ ಏರಿದೆ. ಒಮ್ಮೆ ಇಳಿಕೆಯಾದರೂ ಸಹ ಶುಕ್ರವಾರ ಏರಿಕೆ ಪ್ರಾರಂಭವಾಗಿ ಇಂದು ಮತ್ತೆ ಪುನಃ ಏರಿದೆ. ಸಲಕೇಶಪುರದಲ್ಲಿ…

Read more
ಪೊಟ್ಯಾಶ್

ಪೊಟ್ಯಾಶ್ ಗೊಬ್ಬರ ಯಾಕೆ ಸಿಗುತ್ತಿಲ್ಲ. ಕಾರಣ ಏನು ಗೊತ್ತೇ?

ಎಲ್ಲಾ ಬೆಳೆಗಳಿಗೂ ಈ ಸಮಯದಲ್ಲಿ ಅಗತ್ಯವಾಗಿ ಬೇಕಾಗುವ ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರ ಈಗ ಮಾರುಕಟ್ಟೆಯಲ್ಲಿ ಯಾಕೆ ಸಿಗುತ್ತಿಲ್ಲ ? ಕಾರಣ ಮತ್ತೇನೂ ಅಲ್ಲ. ವಿದೇಶದಿಂದ ತರಿಸಲು ಅವರು ಹಣ ಹೆಚ್ಚು ಕೇಳುತ್ತಿದ್ದಾರೆ.  ಅವರ ದರವನ್ನು ಕೊಟ್ಟು ಖರೀದಿಸಿದರೆ ಇಲ್ಲಿ ಈಗಿನ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಬೇಕಾಗುತ್ತದೆಯಂತೆ. ಹಾಗಾಗಿ ಪೊಟ್ಯಾಶ್ ಮುಂದಿನ ವಾರ ಬರುತ್ತದೆ ಎನ್ನುತ್ತಾ ಈಗಾಲೇ ಒಂದು ತಿಂಗಳು ಮುಂದೂಡಿ ಆಗಿದೆ. ಇನ್ನೆಷ್ಟು ಕಾಯಬೇಕೊ ತಿಳಿಯದು. ಮ್ಯುರೇಟ್ ಅಫ್ ಪೊಟ್ಯಾಶ್ ಗೊಬ್ಬರ ಕೆನಡಾ, ರಶಿಯಾ,…

Read more
ಚಾಲೀ ಆಡಿಕೆ ಲಾಟ್

ಏರುಗತಿಯತ್ತ ಅಡಿಕೆ ಧಾರಣೆ- ದಿನಾಂಕ:12-11-2021 ಶುಕ್ರವಾರ.

ಇಂದು ದಿನಾಂಕ 12-11-2021 ಶುಕ್ರವಾರ ರಾಜ್ಯದಾದ್ಯಂತ ಅಡಿಕೆ ಧಾರಣೆಯನ್ನು ಗಮನಿಸಿದಾಗ ಚಾಲಿಯೂ ಸೇರಿದಂತೆ , ಕೆಂಪಡಿಕೆಗೂ ತುಸು ದರ ಏರಿಕೆ ಸೂಚನೆಗಳು ಕಂಡು ಬರುತ್ತಿದೆ. ಶಿರಸಿಯಲ್ಲಿ ಇಂದು ಚಾಲಿ ಮತ್ತು ಕೆಂಪು ರಾಶಿ ನಿನ್ನೆಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಖರೀದಿ ಆಗಿದೆ.  ಹೊಸನಗರ ಮಾರುಕಟ್ಟೆಯಲ್ಲಿಯೂ ತುಸು ಹೆಚ್ಚು ದರಕ್ಕೆ ಖರೀದಿ ಆಗಿದೆ. ನಾಳೆ ಎರಡನೇ ಶನಿವಾರ ಇದ್ದಾಗ್ಯೂ ದರ ಸ್ವಲ್ಪ ಏರಿಕೆ ಆಗಿದೆ ಎಂದರೆ  ಸೋಮವಾರವೂ ಕ್ವಿಂಟಾಲಿಗೆ 200-500 ಏರಿಕೆ ಆಗಬಹುದು. ಸರಾಸರಿ ದರ ಕನಿಶ್ಟ ದರಗಳ…

Read more
error: Content is protected !!