ಕೊಬ್ಬರಿ ಧಾರಣೆ

ದಿನಾಂಕ 29-10-2021 ಶುಕ್ರವಾರ- ಅಡಿಕೆ-ಕರಿಮೆಣಸು- ಶುಂಠಿ-ಕೊಬ್ಬರಿ- ರಬ್ಬರ್- ಧಾರಣೆ.

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ  ಅಡಿಕೆ, ಕರಿಮೆಣಸು, ಹಸಿ ಶುಂಠಿ, ಕೊಪ್ಬ್ಬರಿ ರಬ್ಬರ್ ಕಾಫೀ, ಮುಂತಾದ ತೋಟಗಾರಿಕಾ ಬೆಳೆಗಳ  ಮಾರುಕಟ್ಟೆ ಧಾರಣೆ ಹೀಗಿತ್ತು. ಚಾಲಿ ದರ ಸ್ಥಿರವಾಗಿತ್ತು. ಕೆಂಪು ಯಲ್ಲಾಪುರ ಮತ್ತು ಶಿರಸಿಗಳಲ್ಲಿ ಸ್ವಲ್ಪ ತೇಜಿ. ಉಳಿದೆಡೆ ಯಥಾಪ್ರಕಾರ ಸ್ಥಿರ.  ದರ ಇಳಿಕೆ ಆಗುವ ಸಾಧ್ಯತೆ ಇಲ್ಲ. ಭಾರೀ ಏರುವ ಸಾಧ್ಯತೆಯೂ ಇಲ್ಲ. ಕರಿಮೆಣಸು ದರ ಇಂದೂ ಸ್ವಲ್ಪ ಏರಿಕೆ. 500 ರ ಗಡಿ ದಾಟಿ 51000 ಕ್ಕೆ ಕಾಲಿಟ್ಟಿದೆ. ಕೆಲವು ವರ್ತಕರು ದರ ಮೇಲೇರುವ…

Read more
ಅಡಿಕೆ ಮಂಡಿ ಟೆಂಡರ್

ರಾಜ್ಯದಲ್ಲಿ ಇಂದು ಅಡಿಕೆ- ಕರಿಮೆಣಸು ಧಾರಣೆ. 28-10-2021 –ಗುರುವಾರ.

ಎಲ್ಲರ ಚಿತ್ತ ಅಡಿಕೆ ಧಾರಣೆಯ ಮೇಲೆ. ಈಗ ಕೆಲವು ದಿನಗಳಿಂದ ಕರಿಮೆಣಸು ಮೇಲೆಯೇ. ಅಡಿಕೆ ಧಾರಣೆ ಸಹ ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಕುತೂಹಲ. ಏರಿಕೆ ಆಗುತ್ತದೆ. ಹಾಗೆಯೇ ಇಳಿಕೆಯೂ ಆಗುತ್ತದೆ. ಅಕ್ಟೋಬರ್ ತಿಂಗಳ ಕೊನೆ ಎರಡು ವಾರಗಳಲ್ಲಿ ದರ ಸ್ಥಿರತೆ ಕಂಡುಬಂದಿದೆ. ಸಪ್ಟೆಂಬರ್ ನಲ್ಲಿ  ನಿರಾಸೆ ಮೂಡಿಸಿದ್ದ ಧಾರಣೆ ಅಕ್ಟೋಬರ್ ನಲ್ಲಿ ಸ್ವಲ್ಪ ಧೈರ್ಯ ಕೊಟ್ಟಿದೆ. ಸಧ್ಯಕ್ಕೆ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಮುಂದುವರಿಯಲಿದೆ. ಏನಾದರೂ  ವ್ಯತ್ಯಾಸಗಳಾಗುತ್ತಿದ್ದರೆ, ನಿನ್ನೆ ಪಶ್ಚಿಮ ಬಂಗಾಲ ಸರಕಾರ  ಪಾನ್…

Read more
ಹೆಸರು

ಅಪೌಷ್ಟಿಕತೆಯತ್ತ ಜನತೆ- ಬೇಳೆ ಕಾಳು ಬೆಳೆಗಾರರ ಕಡೆಗಣನೆ.

ಮನುಷ್ಯರಿಗೆ ಮೆದುಳು ಶಕ್ತಿ ಚುರುಕು ಆಗಲು, ದೇಹದಲ್ಲಿ ಅಂಥಃಶಕ್ತಿ ಹೆಚ್ಚಲು ಬೇಕಾಗುವುದು ಪೌಷ್ಟಿಕ ಆಹಾರ. ವಿಟಮಿನ್ ಗಳು, ಪ್ರೋಟೀನುಗಳು ಹೇರಳವಾಗಿರುವ ಬೇಳೆ ಕಾಳುಗಳ ಬಳಕೆಯಿಂದ ಮಾತ್ರ ಇದು ಸಾಧ್ಯ. ಇವುಗಳ ಬೆಳೆ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರಲಿದೆ. ಇದಕ್ಕೆಲ್ಲಾ ಕಾರಣ ದೇಶದಲ್ಲಿ ಈ ಬೆಳೆಗಳನ್ನು ಬೆಳೆಸುವವರ ಕಡೆಗಣನೆ. ಬೇಳೆ ಕಾಳುಗಳು ಮಾನವನಿಗೆ ಶಾರೀರಿಕ ಸಧೃಢತೆಯನ್ನು ಕೊಡುತ್ತವೆ. ಇದು ಪೌಷ್ಟಿಕ ಆಹಾರವಾಗಿದ್ದು, ಇದರ ಬಳಕೆ ಕಡಿಮೆ ಮಾಡಿದರೆ ನಮ್ಮ ಶಾರೀರಿಕ ಅಂಥಃ ಶಕ್ತಿ…

Read more
ಪೊಟ್ಯಾಶಿಯಂ ಕ್ಲೋರೈಡ್

ಶ್ರೀಲಂಕಾಕ್ಕೆ ಭಾರತದಿಂದ ಪೊಟ್ಯಾಶ್ ! ನಮ್ಮಲ್ಲಿ ಪೊಟ್ಯಾಶ್ ಭಾರೀ ಕೊರತೆ.

ಶ್ರೀಲಂಕಾ ದೇಶ ಸಾವಯವ ಕೃಷಿಯಲ್ಲಿ  ಪ್ರಾಪಂಚಿಕ ಮನ್ನಣೆ ಪಡೆದು, ಸಾವಯವ ಕೃಷಿ ಉತ್ಪನ್ನಗಳನ್ನೇ ಉತ್ಪಾದಿಸುವ ರಾಷ್ಟ್ರವಾಗಬೇಕು ಎಂದು ರಸಗೊಬ್ಬರ ಬ್ಯಾನ್ ಮಾಡಿ ಸಾವಯವ ಕೃಷಿಗೆ ಇಳಿಯಿತು. ಆದರೆ ಲೆಕ್ಕಾಚಾರ ತಲೆಕೆಳಗಾಯಿತು. ಈಗ ತಕ್ಷಣದ ಪರಿಹಾರಕ್ಕಾಗಿ ಭಾರತದಿಂದ ಪೊಟ್ಯಾಶ್ ಖರೀದಿಗೆ ಮುಂದಾಗಿದೆ ಎಂಬುದಾಗಿ ವರದಿಗಳಿವೆ. ಶ್ರೀಲಂಕಾ ಸರಕಾರದ ಸಾವಯವ ಕೃಷಿ ನೀತಿಗೆ ಜನ ಸಮುದಾಯದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲಯಲ್ಲಿ ಈ ಹೇರಿಕೆಯನ್ನು ಸ್ವಲ್ಪ ಸಡಿಲಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಸಾವಯವ ಕೃಷಿ ಒಮ್ಮಿಂದೊಮ್ಮೆಗೆ ಬದಲಾಗುವ ವಿಚಾರವಲ್ಲ. ನಿಧಾನವಾಗಿ…

Read more
ಕೆಂಪು ಅಡಿಕೆ

ಅಡಿಕೆ ಧಾರಣೆ ದಿನಾಂಕ 25-10-2021 ಸೋಮವಾರ.

ರಾಜ್ಯದ ವಿವಿಧ ಅಡಿಕೆ ಮಾರಾಟ ಕೇಂದ್ರಗಳಲ್ಲಿ ಇಂದು ಅಕ್ಟೋಬರ್ ತಿಂಗಳ ಕೊನೆಯ ಸೋಮವಾರ  ಅಡಿಕೆ ಧಾರಣೆ ಕರಿಮೆಣಸು, ಕಾಫೀ, ಕೊಬ್ಬರಿ, ಹಾಗೂ ರಬ್ಬರ್ ಧಾರಣೆ ಹೀಗಿತ್ತು. ರಬ್ಬರ್ ಧಾರಣೆ ಇಳಿಮುಖ. ಕರಿಮೆಣಸು ಕಳೆದ ನಾಲ್ಕು ವರ್ಷಗಳಿಂದ ಏರದ್ದು ಇಂದು  500 ಕ್ಕೆ ಏರಿಕೆ, ಅಡಿಕೆ ಸಿಹಿ. ಅಡಿಕೆ ಬೆಳೆಗಾರರಿಗೆ  ಮಳೆಯ ಕಾಟ. ಮಳೆ ನಿಲ್ಲುತ್ತಲೇ ಇಲ್ಲ. ಎಲ್ಲಾ ಕಡೆ ಮಳೆ. ಅಡಿಕೆ ಕೊಯಿಲು ಮಾಡಿದರೆ ಒಣಗಿಸುವುದೇ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.  ಹೀಗಿರುವಾಗ ಅಡಿಕೆಯ ಅವಕವೂ ಕಡಿಮೆಯಾಗಿದೆ….

Read more
ಕರಿಮೆಣಸು

ಕರಿಮೆಣಸು ಬೆಲೆ ಏಲ್ಲಿ ತನಕ ಏರಿಕೆ ಆಗಬಹುದು? ರೂ. 500-600?

ಕಳೆದ ಒಂದು ವಾರದಿಂದ ಕರಿಮೆಣಸು ಬೆಲೆ ಎರಿಕೆಯಾಗಲು ಪ್ರಾರಂಭವಾಗಿದೆ. ಕೇರಳದ ಮಳೆ, ಶ್ರೀಲಂಕಾದ ಉತ್ಪಾದನೆ ಕುಸಿತ, ವಿಯೆಟ್ನಾಂ ನ ಬೆಳೆ ಬದಲಾವಣೆ ಮೆಣಸಿನ ಬೇಡಿಕೆಯನ್ನು ಹೆಚ್ಚಿಸಿದ್ದು, ಬಹುಷಃ ಕರಿಮೆಣಸಿನ ಬೆಲೆ ಭಾರೀ ನೆಗೆತ ಕಾಣಲಿದ್ದು,500 ದಾಟಬಹುದು, 600 ಆದರೂ ಅಚ್ಚರಿ ಇಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಮೆಣಸು ದಾಸ್ತಾನು ಉಳ್ಳವರು ಮಾರಾಟ ಮಾಡದಿರುವುದೇ ಉತ್ತಮ. ಕರಾವಳಿಯಲ್ಲಿ ಚಾಲಿ ಬೆಲೆ ಯಾಕೆ ಬಾರೀ ಕುಸಿತ ಆಗುವುದಿಲ್ಲ ಎಂಬುದಕ್ಕೆ ಮೂಲ ಕಾರಣ ಬೆಳೆಗಾರರ ದೃಢ ನಿರ್ಧಾರ. ಅಡಿಕೆ ಬೆಳೆಗಾರರು ತುರ್ತು ಅಗತ್ಯ…

Read more
ಅರೆಮಲೆನಾಡಿನಲ್ಲಿ ಎಲಕ್ಕಿ

ಅರೆಮಲೆನಾಡು ಪ್ರದೇಶದಲ್ಲೂ ಏಲಕ್ಕಿ ಬೆಳೆಯಬಹುದು- ಇವರು ಬೆಳೆದು ತೋರಿಸಿದ್ದಾರೆ.

ಅರೆಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆಯ ಅರಕಲಗೂಡುವಿನ ಲಕ್ಷ್ಮೀ  ಫಾರಂ ನ ಮಾಲಿಕ ರಂಗಸ್ವಾಮಿ ಎಂಬ ಪ್ರಗತಿಪರ ಕೃಷಿಕ ತಮ್ಮ ಪ್ರದೇಶದ ಹವಾಮಾನ ಸ್ಥಿತಿಯನ್ನು ಜಾಣ್ಮೆಯಿಂದ ಕೆಲವು  ಮಾರ್ಪಾಡುಗಳನ್ನು ಮಾಡುವ ಮೂಲಕ ಮಲೆನಾಡಿನ ಪ್ರದೇಶದಲ್ಲಿ   ಏಲಕ್ಕಿ  ಬೆಳೆದಿದ್ದಾರೆ. ಅಧಿಕ ಅದಾಯದ ಮಿಶ್ರ ಬೆಳೆ  ಬಯಸುವವರಿಗೆ ಇದು ಒಂದು ಮಾದರಿ ಬೆಳೆ ಪ್ರಾತ್ಯಕ್ಷಿಕೆ ತೋಟ. ಮಿಶ್ರ ಬೆಳೆಯಾಗಿ ಏಲಕ್ಕಿ: ಏಲಕ್ಕಿ ಎಲ್ಲಿ ಬೆಳೆಯುತ್ತದೆ. ತಕ್ಷಣ ಎಲ್ಲರ ಉತ್ತರ ಅದು ಮಲೆನಾಡಿನ ತಂಪು ಹವಾಗುಣದಲ್ಲಿ. ಅದಕ್ಕೆ ಎತ್ತರ ತಗ್ಗಿನ ಕಣಿವೆ  ಪ್ರದೇಶದಲ್ಲಿ…

Read more
ಕೆಂಪು ರಾಶಿ ಆಡಿಕೆ

ಅಡಿಕೆ ಧಾರಣೆ:ದಿನಾಂಕ-22-10-2021. ಚಾಲಿ, ಕೆಂಪು ಎರಡೂ ಮೇಲೆ.

ದಿನಾಂಕ 22-10-2021 ನೇ ಶುಕ್ರವಾರ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹಾಗೂ ಕೆಂಪಡಿಕೆ ಮಾರುಕಟ್ಟೆ ಧಾರಣೆ ಹೀಗಿತ್ತು. ಕೆಂಪಡಿಕೆ ಜೊತೆಗೆ ಚಾಲಿಯೂ ಸ್ವಲ್ಪ ಏರಿಕೆ ಆಗುವ ಸೂಚನೆ ಕಂಡು ಬರುತ್ತಿದೆ. ಖಾಸಗಿ ವ್ಯಾಪಾರಿಗಳು ಸ್ವಲ್ಪ ದರ ಏರಿಸಲು ಪ್ರಾರಂಭಿಸಿದರೆ ಮಾರುಕಟ್ಟೆ ಚೇತರಿಕೆಗೆ ಬರುತ್ತದೆ. ಖಾಸಗಿಯವರು ಸಪ್ಪೆಯಾದರೆ ಸಾಂಸ್ಥಿಕ ಖರೀದಿದಾರರು  ಗುಣಮಟ್ಟ ಮುಂತಾದ ಕಾರಣದಿಂದ  ಕಡಿಮೆ ದರಕ್ಕೆ ಖರೀದಿಸುತ್ತಾರೆ. ಖಾಸಗಿ ವ್ಯಾಪಾರಿಗಳ ಸ್ಪರ್ಧೆಯಿಂದ ಮಾತ್ರ ಅಡಿಕೆ ಧಾರಣೆಯಲ್ಲಿ ಸಂಚಲನ ಉಂಟಾಗುತ್ತದೆ ಎಂಬುದು ಹಿಂದಿನಿಂದಲೂ ನಡೆದು ಬಂದ ಪ್ರತೀತಿ. ನಿನ್ನೆ…

Read more
Dairy cows

How to make dairy farming profitable venture?

Many people enter into dairy farming with full swing and exit without any notice. Because it is not an easy profession, without knowing its pulses, says Mr Prabhakara Hegde, a successful dairy man runs it from last 30 years. Dairy provides daily income source to farming community. He says dairy farming is profitable. 73 years…

Read more
5th year yield

ARECA NUT- sustainable yield in 5th year .

Many farmers say we are planted areca nut but it is not yet started yield still it reached to  5-6 years. Here one farmer, Mr Deepak says without much care, it is possible to get Sustainable yield in 5th year. If you nourished well, even local varieties also start flowering in 4th year, and  give…

Read more
error: Content is protected !!