cashew un productive

ಗೇರು ಮರದ ಚಿಗುರು ಹೀಗೆ ಆಗುವುದಕ್ಕೆ ಕಾರಣ.

ಗೇರು ಮರಗಳ ಎಲ್ಲಾ  ಎಳೆ ಚಿಗುರು ಒಣಗುವ ಈ ಸಮಸ್ಯೆ ಯಾಕೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇತ್ತೀಚೆಗಿನ ಗೇರು ತೋಟಗಳಲ್ಲಿ ಇಂತಹ ಸಸ್ಯಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಸಸ್ಯಾಭಿವೃದ್ದಿ ಮಾಡುವಾಗ ಸೂಕ್ತ ಸಸ್ಯ ಮೂಲದಿಂದ ಕಸಿ ಕಡ್ಡಿಗಳನ್ನು ಆಯ್ಕೆ ಮಾಡದೆ ಇರುವುದು. ಸಸಿಗಳಿಗೆ ಬೇಡಿಕೆ ಇದೆ ಎಂದು ಬೆಳೆಗಾರರ ಶ್ರಮದ ಮೇಲೆ ಆಟ ಆಡುವ ಮನೋಸ್ಥಿತಿ ಇದು ಎಂದರೂ ತಪ್ಪಾಗಲಾರದು. ಗೇರು ಮರದ ವಿಶೇಷ ಎಂದರೆ ಅದು ಚಿಗುರಿದಾಗ ಹೂವಾಗುತ್ತದೆ. ಚಿಗುರು ಬಂದು…

Read more
Good yield in Arecanut

ನಿರೀಕ್ಷಿಸಿದಂತೆ ಇಳುವರಿ ಪಡೆಯಬೇಕೇ? ರಸಾವರಿ ಮಾಡಿ.

ನೀರಾವರಿಯೊಂದಿಗೆ ಪೊಷಕಗಳನ್ನು ಕೊಡುವ ಕ್ರಮಕ್ಕೆ ರಸಾವರಿ ಎನ್ನುತ್ತಾರೆ. ಕರಾರುವಕ್ಕಾಗಿ ಇಷ್ಟು ಇಳುವರಿ ಪಡೆಯುತ್ತೇನೆ ಎಂಬವರಿಗೆ ಇದು ಕೈಹಿಡಿಯುತ್ತದೆ. ಸಸ್ಯಗಳು ಯಾವುದೇ ಇರಲಿ. ಅವು ಪೊಷಕಗಳನ್ನು ಬಳಸಿಕೊಳ್ಳಬೇಕಾದರೆ ಜೊತೆಗೆ ನೀರು ಬೇಕು. ನೀರು ಮಣ್ಣನ್ನು ತೇವ ಮಾಡುತ್ತದೆ.  ತೇವ ಇರುವ ಇರುವಲ್ಲಿ  ಪೊಷಕಗಳು ಲಭ್ಯವಿದ್ದರೆ ಅದನ್ನು ಸಸ್ಯಗಳು ತಮ್ಮ  ಬೇರಿನ ಮೂಲಕ ಬಳಸಿಕೊಳ್ಳುತ್ತವೆ. ತೇವಾಂಶ ಇಲ್ಲದಲ್ಲಿ ನಾವು ಎಷ್ಟೇ ಪೋಷಕಾಂಶ ಸುರಿದರೂ ಅದು ಪ್ರಯೋಜನಕ್ಕೆ ಬರಲಾರದು. ಇದರಿಂದಾಗಿ ನಾವು ಪೋಷಕಗಳನ್ನು ಹೆಚ್ಚು ಹೆಚ್ಚು ಬಳಸಿದರೂ  ಅದರ ಫಲ ಚೆನ್ನಾಗಿ…

Read more
banana bunch

ಬಾಳೆ ನೆಡುವಾಗ ಥಿಮೆಟ್ ಬದಲು ಇದನ್ನು ಹಾಕಿ.

ಬಾಳೆ ಬೆಳೆಯಲ್ಲಿ  ಪ್ರಮುಖ ಸಮಸ್ಯೆಯಾದ ಕಾಂಡ – ಗಡ್ಡೆ  ಕೊರಕ ಹುಳದ ನಿಯಂತ್ರಣಕ್ಕೆ ಫೋರೇಟ್ ಮುಂತಾದ ವಿಷದ ಬದಲು ಜೈವಿಕ ಪರಿಹಾರ ಸುರಕ್ಷಿತ.  ಬಾಳೆ ಗೊನೆ ಹಾಕುವ ಸಮಯದಲ್ಲಿ ಅದಕ್ಕೆ ದಿಂಡು ಹುಟ್ಟಿಕೊಳ್ಳುತ್ತದೆ.  ದಿಂಡು ಬರುವ ತನಕ ಬಾಳೆಗೆ ಅಂತಹ ಕೀಟ ಸಮಸ್ಯೆ ಇಲ್ಲ. ಯಾವಾಗ ಗೊನೆ ಹಾಕುತ್ತದೆಯೋ ಆಗ ಮುನ್ಸೂಚನೆ ಇಲ್ಲದೆ ಕಾಂಡ ಕೊರಕ ಹುಳದ ತೊಂದರೆ ಉಂಟಾಗುತ್ತದೆ. ಈ ಕಾಂಡ ಕೊರಕ ಹುಳ ಬಾಧೆ ಇಲ್ಲದ ಬಾಳೆ ತಳಿಗಳೇ ಇಲ್ಲ. ಇದಕ್ಕೆ ಎಲ್ಲರೂ ವಿಷ…

Read more
ಡ್ರಿಪ್ ವ್ಯವಸ್ಥೆಯಲ್ಲಿ ಅಡಿಕೆ ಬೆಳೆ

ಡ್ರಿಪ್ ಸಮಸ್ಯೆ ಕೊಡುತ್ತಿದೆಯೇ ? ಕಾರಣ ಇಲ್ಲಿದೆ.

ಸರಕಾರ ಡ್ರಿಪ್ ನೀರಾವರಿಗೆ  ಸಹಾಯಧನ ಕೊಡುತ್ತದೆ ಎಂದು ಹನಿ ನೀರಾವರಿ ಮಾಡಿಸಿಕೊಳ್ಳಬೇಡಿ. ನಿಮಗೆ ಅದರ ಮೇಲ್ವಿಚಾರಣೆ ಮಾಡಲು ಜ್ಞಾನ  ಇದ್ದರೆ ಮಾತ್ರ ಮಾಡಿಕೊಳ್ಳಿ. ಗರಿಷ್ಟ ಪ್ರಮಾಣದಲ್ಲಿ ನೀರು ಉಳಿಸುವ ನೀರಾವರಿ ವ್ಯವಸ್ಥೆ ಎಂದರೆ ಹನಿ ನೀರಾವರಿ. ಇದು ಸಸ್ಯಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಒದಗಿಸಿಕೊಡುವ ವ್ಯವಸ್ಥೆ. ಗಂಟೆಗೆ ಕೆಲವೇ ಲೀಟರುಗಳಷ್ಟು  ನೀರನ್ನು ಸಸ್ಯದ ಬೇರು ವಲಯದ ಒಂದು ಅಥವಾ ಎರಡು ಕಡೆಗೆ ತೊಟ್ಟಿಕ್ಕುವ ಈ ವ್ಯವಸ್ಥೆ ಉತ್ತಮ ಹೌದು ಆದರೆ ಮಣ್ಣು, ನೀರು  ಮುಂತಾದವುಗಳನ್ನು …

Read more
egg fruit

ಇದು ಎಲ್ಲಾ ವರ್ಗದವರೂ ತಿನ್ನಬಹುದಾದ ಮೊಟ್ಟೆ ಹಣ್ಣು.

ಮೊಟ್ಟೆಯನ್ನು ಎಲ್ಲರೂ ತಿನ್ನುವುದಿಲ್ಲ. ಆದರೆ ಈ ಮೊಟ್ಟೆ ಹಣ್ಣು ತಿಂದರೆ ಮೊಟ್ಟೆಯಲ್ಲಿರುವುದಕ್ಕಿಂತ ಹೆಚ್ಚು  ಸತ್ವಗಳು ದೊರೆಯುತ್ತದೆ. ಇದು ಮಾಂಸಾಹಾರ ಅಲ್ಲ. ಸಸ್ಯಾಹಾರ. ಎಗ್ ಪ್ರುಟ್ ಎಂದು ಕರೆಯಲಾಗುವ ಈ ಹಣ್ಣು ಅತ್ಯುತ್ತಮ ಪೌಷ್ಟಿಕಾಂಶ (8 ಮೀ. ತನಕ) ಈ ಸಸ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಯಿಗಳಾಗುತ್ತದೆ. ಹಣ್ಣಾದಾಗ ಕಡು ಹಳದಿ ಬಣ್ಣ ಬರುತ್ತದೆ. ಹಣ್ಣಿನ ಒಳ ತಿರುಳು ಭಾಗ ಮೊಟ್ಟೆಯಲ್ಲಿ ಹಳದಿ ಭಾಗ ಇದ್ದಂತೆ ಕಾಣುತ್ತದೆ. ಅದಕ್ಕಾಗಿ ಮೊಟ್ಟೆ ಹಣ್ಣು ಎಂದು ಕರೆದಿರಬೇಕು. ಉಷ್ಣ ವಲಯದ ಈ ಹಣ್ಣಿನ…

Read more
PVC pipe

ನೀವು ಕೊಳ್ಳುವ ಪಿ ವಿ ಸಿ ಪೈಪು ಗುಣಮಟ್ಟ ಪರೀಕ್ಷಿಸುವುದು ಹೇಗೆ?

ಮಾರುಕಟ್ಟೆಯಲ್ಲಿ  ನಾನಾ ನಮೂನೆಯ   ಪಿ ವಿ ಸಿ ಪೈಪುಗಳು ಲಭ್ಯವಿದೆ. ಖರೀದಿ ಮಾಡುವ ಜನರಿಗೆ ಯಾವುದು ಉತ್ತಮ ಯಾವುದು ಕಳಫೆ ಎಂಬುದನ್ನು ತಿಳಿಯುವ ವಿಧಾನ ಗೊತ್ತಿದ್ಡರೆ ಉತ್ತಮ ಸಾಮಾಗ್ರಿಯನ್ಣೇ ಅಯ್ಕೆ ಮಾಡಭಹುದು. PVC  ಪೈಪಿನಲ್ಲಿ  ಉತ್ತಮ ಗುಣಮಟ್ಟದ್ದು  ಯಾವುದು  ಎಂದು ತಿಳಿಯುವ ವಿಧಾನ ಹೀಗೆ. ನೀರಾವರಿಗೆ ಪ್ರತೀಯೊಬ್ಬ ಕೃಷಿಕರೂ ಬಳಸುವ ಪೈಪು ಪಿ ವಿ ಸಿ  (ಪಾಲಿ ವಿನೈಲ್ ಕ್ಲೋರೈಡ್ ) ಇದು ಒಂದು ಪೆಟ್ರೋಲಿಯಂ ಉತ್ಪನ್ನವಾಗಿರುತ್ತದೆ, ಈ ಪೈಪುಗಳು ಕೃಷಿ ನೀರಾವರಿಗೆ ಪ್ರವೇಶವಾದ ತರುವಾಯ  ಕೃಷಿ…

Read more
Y C Rudrappa Organic farmer

ನೀವು ಕೃಷಿಕರಾಗಿದ್ದರೆ ಇದನ್ನು ಒಮ್ಮೆ ಓದಿ. ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಒಬ್ಬ ಸರಕಾರಿ ನೌಕರನಿಗೆ ಸಾಯುವ ತನಕ ಸರಕಾರ ಜೀವನ ಬಧ್ರತೆ ಕೊಡುತ್ತದೆ. ಕೃಷಿಕ ತನ್ನ ಜೀವನಕ್ಕೆ ಬಧ್ರ ಅಡಿಪಾಯವನ್ನು ತಾನೇ ಹಾಕಿಕೊಳ್ಳಬೇಕಾಗುತ್ತದೆ. ಪ್ರತೀಯೊಬ್ಬ ಕೃಷಿಕನೂ ತನ್ನ ದುಡಿಯುವ  ವಯಸ್ಸು ಮೀರಿದ ನಂತರ ಏನು ಎಂದು ಎಂಬುದನ್ನು ದುಡಿಯುವ ವಯಸ್ಸು ಇರುವಾಗ ಯೋಚಿಸಬೇಕು. ಮತ್ತು ಅದಕ್ಕೆ ಬೇಕಾದ ಅಡಿಪಾಯವನ್ನು ಹಾಕಬೇಕು. ಸಾಮಾನ್ಯವಾಗಿ ಸಾಧಿಸುವುದೇನಾದರೂ ಇದ್ದರೆ ಅದನ್ನು 50 ವರ್ಷಗಳ ಒಳಗೇ  ಸಾಧಿಸಿ ಮುಗಿಸಬೇಕು. ಆ ನಂತರ ಮಾಡಬಾರದೆಂದೇನೂ ಇಲ್ಲ.  ಅದೆಲ್ಲವೂ ಪ್ಲಸ್. ಆದರೆ ಅದಕ್ಕಿಂತ ಮುಂಚೆ ಮಾಡಿದರೆ ಒಳ್ಳೆಯದು…

Read more
ginger in sprinkler irrigation

ಶುಂಠಿ ಬೆಳೆದ ಭೂಮಿ ಹಾಳಾಗುವುದು ನಿಜವೇ?

ಕೆಲವರು ಹೇಳುತ್ತಾರೆ ಶುಂಠಿ ಬೆಳೆದರೆ ಆ ಮಣ್ಣು ಹಾಳಾಗುತ್ತದೆ. ಮತ್ತೆ ಅಲ್ಲಿ ಬೆಳೆ ಬೆಳೆಯಲಿಕ್ಕಾಗುವುದಿಲ್ಲ ಎಂದು. ಇದು ನಿಜವೇ? ಶುಂಠಿ ಬೆಳೆಗೆ ಬೇರೆ ಬೇರೆ ಪೊಷಕಾಂಶಗಳನ್ನು ಹಾಕುತ್ತಾರೆ. ಆದ ಕಾರಣ ಮಣ್ಣು ಜೀವ ಕಳೆದುಕೊಳ್ಳುತ್ತದೆ ಎಂಬ ಮಾತನ್ನು ಬಹಳ ಜನ ಇನ್ನೂ ನಂಬಿದ್ದಾರೆ. ಇದನ್ನು ಕೆಲವು ಜನ ರಂಗು ರಂಗಾಗಿ ವಿವರಿಸುತ್ತಾ  ಈ ವಿಷಯದಲ್ಲಿ ತಜ್ಞರಾಗುತ್ತಾರೆ. ಆದರೆ ವಾಸ್ತವವೇ ಬೇರೆ. ಶುಂಠಿ ಬೆಳೆ ಇರಲಿ ಇನ್ಯಾವುದೇ ಬೆಳೆ ಇರಲಿ ಅದು ಮಣ್ಣಿನಲ್ಲಿ ಪೊಷಕ ಇದ್ದರೆ ಅದನ್ನು ಬಳಸಿಕೊಳ್ಳುತ್ತದೆ….

Read more
ಉಪ್ಪು ಹಾಕುವ ಭಾಗ

ತೆಂಗಿನ ಮರಗಳಿಗೆ ಉಪ್ಪು ಹಾಕಿದರೆ ಏನು ಪ್ರಯೋಜನ.

ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಬಗ್ಗೆ ತಿಳಿದುಕೊಳ್ಳಲು ಕೂತೂಹಲವೇ? ಇಲ್ಲಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ. ನಮ್ಮ ಹಿರಿಯರು ಅದರಲ್ಲೂ ಕರಾವಳಿ ಭಾಗದ ತೆಂಗು ಬೆಳೆಗಾರರು ತೆಂಗಿನ ಮರದ ಬುಡಕ್ಕೆ ವರ್ಷಕ್ಕೊಮ್ಮೆ 2 ಸೇರು ಉಪ್ಪು ಹಾಕುತ್ತಿದ್ದರು. ಇದಕ್ಕೆ ಇವರು ಕೊಡುತ್ತಿದ್ದ ಕಾರಣ ಉಪ್ಪು ಹಾಕಿದರೆ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ ಎಂದು. ಹಿಂದೆ ಈಗಿನಂತೆ ತೆಂಗಿಗೆ ನೀರು ಉಣಿಸುವ ಪದ್ದತಿ ಕಡಿಮೆ ಇತ್ತು. ಆಗ ಬೇಸಿಗೆಯಲ್ಲಿ ತೇವಾಂಶವನ್ನು ಇದು ಉಳಿಸಿ ತೆಂಗನ್ನು ರಕ್ಷಿಸುತ್ತದೆ ಎನ್ನುತ್ತಿದ್ದರು. ಇದಲ್ಲದೆ …

Read more
ಬೀಜದ ಕಾಯಿ ಆಯ್ಕೆಗೆ ಸೂಕ್ತವಾದ ಲಕ್ಷಣವುಳ್ಳ ತಾಯಿ ಮರ

ಬೀಜದ ತೆಂಗಿನ ಕಾಯಿ- ನಿಮ್ಮದೇ ಮರದಿಂದ ಆಯ್ಕೆ ಹೇಗೆ?

ತೆಂಗು ಬೆಳೆಯಯಲ್ಲಿ ಬೀಜದ ಆಯ್ಕೆ ಪ್ರಾಮುಖ್ಯ ಹಂತ. ಬೀಜದ ತೆಂಗಿನ ಕಾಯಿ ಅವರವರ  ತೋಟದ ಮರಗಳಿಂದ ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ. ತೆಂಗಿನ ಕುರಿತಾಗಿ ಯಾವುದೇ ಲೇಖನಗಳು ಹಾಕಿದಾಗಲೂ ಇದರ ಬೀಜ ಎಲ್ಲಿ ಸಿಗುತ್ತದೆ ಎಂಬುದಾಗಿ ಕೇಳುತ್ತಾರೆ. ಇವರಿಗೆಲ್ಲಾ ನಾವು ಹೇಳುವುದು ನಿಮ್ಮ ಮನೆಯಲ್ಲಿರುವ ಅಥವಾ ನಿಮ್ಮ ಪರಿಚಯಸ್ಥರ ಮನೆಯಿಂದ ಬೀಜ ತಂದು ನೀವೇ ಸಸಿ ಮಾಡಿ ಎಂದು. ಇದು ಧೀರ್ಘಾವಧಿಯ ಬೆಳೆ ಆದ ಕಾರಣ ನೀವು ಆಯ್ಕೆ ಮಾಡಿದ ಬೀಜವೇ ಆಗಬೇಕು.ನಿಮ್ಮ ಕಣ್ಣೆದುರೇ ಇದ್ದ  ಮರದ…

Read more
error: Content is protected !!