ಮೊಟ್ಟೆಯನ್ನು ಎಲ್ಲರೂ ತಿನ್ನುವುದಿಲ್ಲ. ಆದರೆ ಈ ಮೊಟ್ಟೆ ಹಣ್ಣು ತಿಂದರೆ ಮೊಟ್ಟೆಯಲ್ಲಿರುವುದಕ್ಕಿಂತ ಹೆಚ್ಚು ಸತ್ವಗಳು ದೊರೆಯುತ್ತದೆ. ಇದು ಮಾಂಸಾಹಾರ ಅಲ್ಲ. ಸಸ್ಯಾಹಾರ.
ಎಗ್ ಪ್ರುಟ್ ಎಂದು ಕರೆಯಲಾಗುವ ಈ ಹಣ್ಣು ಅತ್ಯುತ್ತಮ ಪೌಷ್ಟಿಕಾಂಶ (8 ಮೀ. ತನಕ) ಈ ಸಸ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಯಿಗಳಾಗುತ್ತದೆ. ಹಣ್ಣಾದಾಗ ಕಡು ಹಳದಿ ಬಣ್ಣ ಬರುತ್ತದೆ. ಹಣ್ಣಿನ ಒಳ ತಿರುಳು ಭಾಗ ಮೊಟ್ಟೆಯಲ್ಲಿ ಹಳದಿ ಭಾಗ ಇದ್ದಂತೆ ಕಾಣುತ್ತದೆ. ಅದಕ್ಕಾಗಿ ಮೊಟ್ಟೆ ಹಣ್ಣು ಎಂದು ಕರೆದಿರಬೇಕು. ಉಷ್ಣ ವಲಯದ ಈ ಹಣ್ಣಿನ ಮರ ಪ್ರತೀಯೊಬ್ಬನ ಮನೆಯಲ್ಲೂ ಒಂದೆರಡು ಇದ್ದರೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳಾದ ಪ್ರೋಟೀನುಗಳು, ಖನಿಜಗಳು ಮತ್ತು ವಿಟಮಿನುಗಳನ್ನು ಸುಲಭವಾಗಿ ಪಡೆಯಬಹುದು. ಈ ಹಣ್ಣಿನ ಮರ ಎಂತಹ ಪ್ರತಿಕೂಲ ಹವಾಮಾನದಲ್ಲೂ ಬೆಳೆಯುವ ಶತಿ ಹೊಂದಿದೆ.
ಎಲ್ಲಿಯ ಹಣ್ಣು:
- ಭಾರತ ದೇಶವೂ ಸೇರಿದಂತೆ ಏಶ್ಯಾ ಖಂಡದ ಉಷ್ಣ ವಲಯದ ಎಲ್ಲಾ ಪ್ರದೇಶಗಳಲ್ಲೂ ಈ ಹಣ್ಣು ಬೆಳೆಯುತ್ತದೆ.
- ದಕ್ಷಿಣ ಮೆಕ್ಸಿಕೋ, ಎಲ್ ಸಾಲ್ವೆಡೊರ್ ಗ್ವಾಟೆಮಾಲಾ ಮೂಲದ ಹಣ್ಣು ಎಂದು ಹೇಳಲಾಗುತ್ತದೆ.
- ಭಾರತ , ಬ್ರೆಝಿಲ್, ಕೋಸ್ಟಾರಿಕಾ, ಅಮೆರಿಕಾ,ಆಸ್ತ್ರೇಲಿಯಾ, ಕಾಂಬೋಡೀಯಾ, ವಿಯೆಟ್ನಾಂ, ಮುಂತಾದ ದೇಶಗಳಲ್ಲೂ ಬೆಳೆಯಲ್ಪಡುತ್ತದೆ.
- ಇದರ ವೈಜ್ಞಾನಿಕ ಹೆಸರು Pouteria campechiana ಸಾಮಾನ್ಯ ಹೆಸರು canistel.
- ನಿತ್ಯ ಹರಿದ್ವರ್ಣದ ಮರ.
ರುಚಿ ಹೇಗಿರುತ್ತದೆ:
- ಕೆಲವು ವಿಧದ ಮರಗಳು ಸ್ವಲ್ಪ ಉದ್ದ ಆಕಾರದ ಹಣ್ಣು ಬಿಡುತ್ತದೆ. ಕೆಲವು ದುಂಡಗೆ ಹಣ್ಣು ಕೊಡುತ್ತದೆ.
- ಒಳಗಿನ ತಿರುಳು ಎಲ್ಲದರದ್ದೂ ಒಂದೇ ಪ್ರಕಾರ.
- ಇದನ್ನು ಹಳದಿ ಸಪೋಟಾ ಎಂಬುದಾಗಿಯೂ ಕರೆಯುತ್ತಾರೆ.
- ಕಾಯಿ ಇರುವಾಗ ಮೇಣ ಇರುತ್ತದೆ.
- ಹಣ್ಣಾದಾಗ ಒಳ ಭಾಗ (texture) ಬೇಯಿಸಿದ ಮೊಟ್ಟೆಯ ಒಳಗೆ ಹೇಗೆ ಇರುತ್ತದೆಯೋ ಅದೇ ರೀತಿ ಇರುತ್ತದೆ.
- ಮರದಲ್ಲಿ ಹಣ್ಣಾದಾಗ ಕೆಳಗೆ ಉದುರುತ್ತದೆ.
- ತೆಳುವಾದ ಸಿಪ್ಪೆ.ಹಣ್ಣಿಗೆ ಸಿಹಿ,ಹುಳಿ. ಕಹಿ ಮುಂತಾದ ಯಾವ ರುಚಿಯೂ ಇಲ್ಲ.
- ಸಪ್ಪೆಯಾಗಿ ಹೆರೆ ಹೆರೆಯಾಗಿರುತ್ತದೆ.
- ಹಾಗೆಯೇ ತಿನ್ನಬಹುದು. ಮೆದು ಬೆಣ್ಣೆಯ ತರಹ ತಿರುಳು ಇರುತ್ತದೆ.
- ಡಯಾಬಿಟಿಸ್ ಇದ್ದವರಿಗೂ ತಿನ್ನಬಹುದಾಗಿದೆ.
- ಒಳ ಬಾಗದಲ್ಲಿ ಒಂದು ಅಥವಾ ಎರಡು ಕಪ್ಪಾದ ದೊಡ್ಡ ಬೀಜಗಳಿರುತ್ತದೆ,ಈ ಬೀಜವನ್ನು ಬಿತ್ತಿ ಸಸಿ ಮಾಡಿಕೊಳ್ಳಬಹುದು.
ಬಳಕೆ :
- ಇದನ್ನು ತಾಜಾ ಹಣ್ಣಾಗಿ ತಿನ್ನಲು ಖುಷಿ ಆಗದವರು ತಿರುಳನ್ನು ಬೇರ್ಪಡಿಸಿ ಮಿಲ್ಕ್ ಶೇಖ್ ಮಾಡಬಹುದು.
- ಐಸ್ ಕ್ರೀಮ್ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.
- ಇದನ್ನು ಜ್ಯಾಂ ಮಾಡುತ್ತಾರಂತೆ. ಹಾಗೆಯೇ ಬೇರೆ ಬೇರೆ ತರಹ ಬಳಕೆ ಮಾಡುವುದು ಇದೆ.
ಹಣ್ಣಿನಲ್ಲಿರುವ ಸತ್ವಾಂಶಗಳು:
- 100 ಗ್ರಾಂ ಹಣ್ಣಿನಲ್ಲಿ 138 ಕ್ಯಾಲೊರಿಯಷ್ಟು ಶಕ್ತಿ ಇದೆ. ಕಾರ್ಬೋ ಹೈಡ್ರೇಟ್ 36.69 ಗ್ರಾಂ ಇದೆ.
- ನಾರಿನ ಅಂಶ 10 ಗ್ರಾಂ ನಷ್ಟು ಇದೆ.ಪ್ರೊಟೀನು 2.5 ಗ್ರಾಂ, ವಿಟಮಿನ್ B1, B2 B3 ಮತ್ತು ಅಧಿಕ ಪ್ರಮಾಣದಲ್ಲಿ ವಿಟಮಿನ್ C (43ಮಿಲಿ ಗ್ರಾಂ) ನಷ್ಟು ಇದೆ.
- ಖನಿಜಗಳಾದ ಕ್ಯಾಲ್ಸಿಯಂ . ಕಬ್ಬಿಣ ಮತ್ತು ಫೋಸ್ಪರಸ್ ಅಂಶ ಹೇರಳವಾಗಿದೆ.
- ಇದು ದೇಹದ ಇಮ್ಯೂನ್ ಸಿಸ್ಟಂ ಅನ್ನು ಹೆಚ್ಚಿಸುತ್ತದೆ.
- ದೃಷ್ಟಿ ಉತ್ತಮವಾಗುತ್ತದೆ.
- ಇದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣಾಂಶ, ಮತ್ತು ರಂಜಕಾಂಶಗಳು ಎಲುಬು , ಹಲ್ಲು, ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಳಕ್ಕೆ, ಆಮ್ಲಜನಕ ವರ್ಗಾವಣೆಗೆ ಸಹಕಾರಿಯಾಗುತ್ತದೆ.
- ಇದರಲ್ಲಿರುವಷ್ಟು ಖನಿಜಾಂಶಗಳು ಬೇರೆ ಹಣ್ಣಿನಲ್ಲಿ ಇಲ್ಲ.
ಸಾಧ್ಯವಾದಷ್ಟು ಅವರವರ ಮನೆ ಹಿತ್ತಲಲ್ಲಿ ಬೆಳೆದ ಹಣ್ಣು ಹಂಪಲುಗಳನ್ನು ಬಳಕೆ ಮಾಡುವುದರಿಂದ ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಬಹುದು. ಕಸಿ ಮಾಡಿದ ಗಿಡಗಳೂ ಲಭ್ಯ. ಬೀಜದ ಸಸಿಯೂ ಲಭ್ಯವಿರುತ್ತದೆ. ಇಂದಿನ ದಿನಗಳಲ್ಲಿ ಪ್ರತೀಯೊಬ್ಬರಿಗೂ ಪೌಷ್ಟಿಕಾಂಶ ಭರಿತ ಆಹಾರದ ಅವಶ್ಯಕತೆ ಇದ್ದು, ಅಧಿಕ ಪೋಷಕಾಂಶಗಳುಳ್ಳ ಇಂತಹ ಹಣ್ಣುಗಳ್ಳನ್ನು ಬೆಳೆಸಿ ಬಳಸುವುದು ಸೂಕ್ತ.