ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಇರುವ ಬಂಬು ಕೀಟ

ಈ ವಾಸನೆ ಕೀಟಗಳ ಹಾವಳಿಯಿಂದ ಪಾರಾಗುವುದು ಹೇಗೆ?

ಬಹುತೇಕ ಎಲ್ಲಾ ಬೆಳೆಗಳಿಗೂ ರಸ ಹೀರಲು ಒಂದು ತಿಗಣೆ ಪ್ರಭೇದದ ಕೀಟ ಬರುತ್ತದೆ. ಇದು ತರಕಾರಿಗಳು, ಭತ್ತ, ಮೆಣಸು ಮುಂತಾದವುಗಳಲ್ಲಿ ಕುಳಿತು ರಸ ಹೀರಿ ಗಣನೀಯ   ಬೆಳೆ ಹಾನಿ ಮಾಡುತ್ತವೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಬಂಬು ಕೀಟ ಎನ್ನುತ್ತಾರೆ. ಇವು ತಿಗಣೆಗಳು. ವಾಸನೆಯಿಂದ ಕುಡಿವೆ. ಹಾಸಿಗೆಯ ಎಡೆಗಳಲ್ಲಿ ವಾಸ ಮಾಡುವ ತಿಗಣೆಯಂತೆ ಇದು. ಇದು ರಸ ಹೀರಿದ ತರಕಾರಿ, ಹಣ್ಣು ಹಂಪಲುಗಳು ವಾಸನೆಯಿಂದ ಕೂಡಿರುತ್ತದೆ. ಕೈಯಲ್ಲಿ ಮುಟ್ಟಿದರೆ ಸಾಕು ಅಸಹ್ಯ ವಾಸನೆ ಕೊಡಬಲ್ಲ ಸಾವಿರಾರು ಬಗೆಯ…

Read more
ಸೊಪ್ಪಿಗಾಗಿ ನುಗ್ಗೆ ಬೆಳೆ

ನುಗ್ಗೆ- ಸೊಪ್ಪು – ಕಾಯಿ ಎರಡರಲ್ಲೂ ಲಾಭ ಇರುವ ಬೆಳೆ.

        ನುಗ್ಗೆ ಮೂಲತಃ ಉಷ್ಣವಲಯಗಳಲ್ಲಿ ಬೆಳೆಯಲ್ಪಡುವ ತರಕಾರಿ. ಮಳೆ ಕಡಿಮೆ ಇರುವಲ್ಲಿ ವರ್ಷದುದ್ದಕ್ಕೂ ಫಲಕೊಡುವ ಬೆಳೆ. ಹಿಂದಿನಿಂದಲೂ ಇದರ ಸೊಪ್ಪು, ಹೂವು ಕೋಡುಗಳನ್ನು ಜನ ಉಪಯೋಗ ಮಾಡುತ್ತಿದ್ದರು. ಈಗ ಸೊಪ್ಪಿಗೂ ವಾಣಿಜ್ಯ ಮಹತ್ವ ಬಂದಿದೆ. ಕೋಡಿಗೂ ಬೇಡಿಕೆ ಚೆನ್ನಾಗಿದೆ. ಆದ ಕಾರಣ ಬೆಳೆಗಾರರಿಗೆ ಅಯ್ಕೆಗಳು  ಹೆಚ್ಚಾಗಿವೆ. ಕೇವಲ ಸೊಪ್ಪುಮಾತ್ರವಲ್ಲ ಇದರ ಕಾಯಿ , ಚಿಗುರು ಬೇರು ತೊಗಟೆ ಎಲ್ಲವು ಆರೋಗ್ಯಕಾರಿ. ಈಗ ನುಗ್ಗೆ ಸೊಪ್ಪು  ಸೂಪರ್ ಫುಡ್ ಸ್ಥಾನವನ್ನು ಪಡೆದಿದೆ.       ಪೋಷಕಾಂಶ ಗುಣಗಳು: ನುಗ್ಗೆಯಲ್ಲಿ  ಬಾಳೆ…

Read more

ಈ ಆಪ್ ಗಳು ನಿಮಗೆ ತುಂಬಾ ಜ್ಞಾನ ಕೊಡುತ್ತವೆ.

ಮಾಹಿತಿಯ ಕೊರತೆಯಿಂದ ನಮ್ಮ ದೇಶದ ರೈತರು ಮಾರುಕಟ್ಟೆ, ಹವಾಮಾನ, ಸರಕಾರದ ಸವಲತ್ತು ಮತ್ತು  ತಾಂತ್ರಿಕ ನೆರವುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಭಾರತ ಸರಕಾರದಿಂದ ಬಿಡುಗಡೆಯಾದ ಆಪ್ಲಿಕೇಶನ್ ಗಳು ಇವು.  ಕೃಷಿಗೆ ಬೇಕಾದ ಮಾಹಿತಿ ಎಂದರೆ ಕೇವಲ ಮಾರುಕಟ್ಟೆಗೆ ಸಂಬಂಧಿಸಿದ್ದು ಎಂದಲ್ಲ, ರೈತರಿಗೆ ಬಿತ್ತನೆಗೆ ಭೂಮಿ ಸಿದ್ದಪಡಿಸಿ, ಅದನ್ನು ಮಾರಾಟ ಮಾಡಿ, ನಂತರ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ಒಳಗೊಂಡ ಮಾಹಿತಿ ಅತ್ಯವಶ್ಯಕ. ಕೃಷಿ ಚಟುವಟಿಕೆ ಎಂದರೆ ಅದು ನಿರಂತರ ಚಟುವಟಿಕೆ. ರೈತರು ತಮಗೆ…

Read more
ಆರೋಗ್ಯವಂತ ಅಡಿಕೆ ಮರ

ಅಡಿಕೆ ಮರದ ಆರೋಗ್ಯ –ಅದರ ಬೇರು ವ್ಯವಸ್ಥೆ.

ಯಾವುದೇ ಸಸ್ಯವಿರಲಿ, ಬೇರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಸಸ್ಯಕ್ಕೆ ಬೇರು ಮುಖ್ಯ ಆಧಾರ ಸ್ಥಂಭ.  ಇದು ಮಣ್ಣು, ನೀರು, ಕೀಟಗಳು ಮತ್ತು ಪೋಷಕಗಳ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ. ಇದನ್ನು ಪ್ರತೀಯೊಬ್ಬ ರೈತರೂ ಗಮನಿಸಿ ಅದನ್ನು ಸರಿಪಡಿಸಿದರೆ ಮರ ಆರೋಗ್ಯವಾಗಿರುತ್ತದೆ. ಅಡಿಕೆ ಮರ, ತೆಂಗಿನ ಮರ ಮುಂತಾದ ಎಲ್ಲಾ ಏಕದಳ ಸಸ್ಯಗಳ ಬೇರುಗಳು ತಳಕ್ಕೆ ಇಳಿಯದೇ ಮೇಲ್ಭಾಗದಲ್ಲೇ ಪೋಷಕಗಳನ್ನು ಹುಡುಕುತ್ತಾ ಪಸರಿಸುತ್ತಿರುತ್ತವೆ. ಇವು ಸಸ್ಯದ ಕಾಂಡದಿಂದ ಹುಟ್ಟಿಕೊಂಡು ಬೆಳವಣಿಗೆಯಾಗುತ್ತದೆ. ಸಸ್ಯದ ಸುತ್ತಲೂ ಇದು ಪಸರಿಸಿರುತ್ತದೆ.  Monocot roots are…

Read more

ಬೀಜ ಜನ್ಯ ರೋಗಗಳು ಬಾರದಂತೆ ತಡೆಯುವ ವಿಧಾನ.

ಎಲ್ಲದಕ್ಕೂ ಮೂಲ ಬೀಜ. ಉತ್ತಮ ಗುಣದ ಬೀಜಗಳನ್ನು ಆಯ್ಕೆ ಮಾಡಿ, ಅದನ್ನು ಬೆಳೆಸಿದರೆ ಅದರ ಪೀಳಿಗೆಯೂ ಆರೋಗ್ಯವಾಗಿರುತ್ತದೆ. ಬಹಳಷ್ಟು ರೋಗಗಳಿಗೆ ನಾವು ಬಳಸುವ ಬೀಜಗಳೇ ಕಾರಣ. ಬೀಜದಲ್ಲಿ ರೋಗದ ಗುಣ ಸೇರಿಕೊಂಡಿದ್ದು, ಅದು ಸಸಿಯಾದಾಗ ಯಾವಾಗಲಾದರೂ ತೋರಿಕೆಗೆ ಬರಬಹುದು. ಇಂಥಹ ವೈಪರೀತ್ಯಗಳು ಈಗೀಗ ಹೆಚ್ಚಲಾರಂಭಿಸಿದೆ. ರೈತರು ಇದಕ್ಕೆ  ಔಷಧಿ ಹೊಡೆಯುವುದು ಅಷ್ಟು ಫಲಕಾರಿ ಅಲ್ಲ. ನೀವು ಯಾವುದೋ ಬೀಜ ಕಂಪೆನಿಯಿಂದ ಉತ್ತಮ ಸೌತೇ ಕಾಯಿ ಬೀಜ ತಂದು ಬಿತ್ತಿ, ಬೆಳೆಸಿ. ಸಸಿ ಚೆನ್ನಾಗಿ ಬೆಳೆಯುತ್ತದೆ. ಇನ್ನೇನು ಹೂ…

Read more
ಹತ್ತಿ ಹಿಂಡಿಯಲ್ಲಿ ಶಿಲೀಂದ್ರ ಬೆಳೆದಿರುವುದು

ಮಾನವ ಮತ್ತು ಪಶುಗಳ ಅಸ್ವಾಸ್ತ್ಯಕ್ಕೆ ಕಾರಣವಾಗುವ ಆಹಾರ ವಸ್ತುಗಳು..

ನಾವು ಮತ್ತು ಪಶುಗಳಿಗೆ ತಿನ್ನಿಸುವ ಆಹಾರದಲ್ಲಿ ಕೆಲವೊಮ್ಮೆ ಶಿಲೀಂದ್ರ ಬೆಳೆದಿರುತ್ತದೆ. ಇದು ಒಂದು ವಿಷ.ಇದನ್ನು ಅಪ್ಲೋಟಾಕ್ಸಿನ್ ಎನ್ನುತ್ತಾರೆ. ಅಫ್ಲಾಟಾಕ್ಸಿನ್  ಎಂಬುದು ಒಂದು ವಿಧದ ಶಿಲೀಂದ್ರ ಉತ್ಪತ್ತಿ ಮಾಡುವ ವಿಷಕಾರಿ ಅಂಶ.  ನಾವು ಬಳಕೆ ಮಾಡುವ ಬೇರೆ ಬೇರೆ ವಸ್ತುಗಳ ಮೂಲಕ  ಅದು ನಮ್ಮ ಶರೀರವನ್ನು ಪ್ರವೇಶಿಸಿ ನಮ್ಮಲ್ಲಿ  ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.  ಈ ಶಿಲೀಂದ್ರದ  ಹೆಸರು : Aspergillus flavus.ಮತ್ತು  Aspergillus Parasiticus ಇದು ಬೀಜಾಣು ರೂಪದಲ್ಲಿ ಮನುಷ್ಯ  ಹಾಗೂ ಪ್ರಾಣಿಗಳ ಶರೀರಕ್ಕೆ ಸೇರಿದಾಗ, ಅದರ ವಿಷ ಜೀವ ಕೋಶಗಳ…

Read more
ಏಲಕ್ಕಿ ಬೆಳೆ

ಏಲಕ್ಕಿ ಬೆಳೆಯುತ್ತೀರಾ – ಇಲ್ಲಿದೆ ತಳಿಗಳ ಬಗ್ಗೆ ಮಾಹಿತಿ.

ಮಲೆನಾಡು, ಅರೆಮಲೆನಾಡಿನ ರೈತರು ಅಡಿಕೆ ತೋಟದಲ್ಲಿ ಲಾಭದಾಯಕ ಮಿಶ್ರ ಬೆಳೆಯ ಹುಡುಕಾಟದಲ್ಲಿದ್ದಾರೆ. ಇವರಿಗೆ ಯಾವ ತಳಿಯನ್ನು ಬೆಳೆದರ ಉತ್ತಮ , ಯಾವ ಯಾವ ಉತ್ತಮ ತಳಿಗಳಿವೆ ಎಂಬ ಬಗ್ಗೆ ಮಡಿಕೇರಿಯ ಅಪ್ಪಂಗಳದ ಸಾಂಬಾರ  ಬೆಳೆಗಳ ಪ್ರಾದೇಶಿಕ ಸಂಶೋಧನಾ ಸಂಸ್ಥೆಯ  ಮೂಲಕ ಈ ಮಾಹಿತಿ ಲಭ್ಯವಿದೆ. ಬೆಳೆಯುವ ಪ್ರದೇಶ, ಪುಷ್ಪಗೊಚ್ಚಲುಗಳ ಸ್ವಭಾವ, ಗಿಡಗಳ ಗಾತ್ರ ಮತ್ತು ಇತರ ಗುಣಗಳನ್ನು ನೋಡಿ ಏಲಕ್ಕಿಯ ಪ್ರಭೇಧಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಮಲಬಾರ್ ಪ್ರಭೇದದ ಗಿಡಗಳ ಕೊತ್ತುಗಳು ನೆಲದ ಮೇಲೆ ಹರಡಿರುತ್ತವೆ. ಈ…

Read more
ಅನನಾಸು ತೋಟ

ಅನನಾಸು – ಹಣ್ಣಿನ ಬೆಳೆಗಳಲ್ಲಿ ಇದು ಸುಲಭದ್ದು.

ಪರಂಗಿ ಹಣ್ಣು ಎಂಬ ಹೆಸರಿನ ಅನನಾಸು ಕರಾವಳಿ ಒಳನಾಡು ಪ್ರದೇಶದ ಬೌಗೋಳಿಕತೆಗೆ ಹೊಂದಿಕೆಯಾಗುವ ಹಣ್ಣಿನ ಬೆಳೆ. ಜನ ಪರಂಗಿ ಹಣ್ಣು ಬೆಳೆಯಲು ರೈತರು ಅದುಹಾಕುತ್ತಾರೆ , ಇದು ಹಾಕುತ್ತಾರೆ, ರಾಸಾಯನಿಕ ಎಂಬಿತ್ಯಾದಿ ಹೇಳುತ್ತಾರೆ. ಇದೆಲ್ಲಾ ಸುಳ್ಳು. ಈ ಗಿಡದ ಎಲ್ಲಾ ಶರೀರ ಪ್ರಕೃತಿ ಬರ ಸಹಿಷ್ಣು. ಇದಕ್ಕೆ ಬೇರೆ ಬೆಳೆಗೆ ಗೊಬ್ಬರ ಕೊಟ್ಟಂತೆ ಕೊಡಲಿಕ್ಕೆ ಕಷ್ಟ.ಅಷ್ಟು ಪ್ರಮಾಣದಲ್ಲಿ ಗೊಬ್ಬರವೂ ಬೇಡ. ಅದಕ್ಕಾಗಿ ಬೆಳೆಯುವವರು ಸದಾ ಪೋಶಕಾಂಶಗಳನ್ನು ಕಡಿಮೆ ತೀರಾ ಕಡಿಮೆ ಸಾಂದ್ರತೆಯಲ್ಲಿ ಎಲೆಗಳಿಗೆ ಸಿಂಪಡಿಸುತ್ತಾರೆ. ಇದನ್ನೇ ದೂರದಿಂದ…

Read more
ಕೊಕ್ಕೋ ಕೋಡು

ಕೊಕ್ಕೋ ಬೆಳೆದರೆ ಹಸುರು ಸೊಪ್ಪಿಗೆ ಬರವಿಲ್ಲ.

ಇತ್ತೀಚಿನ ದಿನಗಳಲ್ಲಿ ನಮಗೆ ಹಿಂದಿನಂತೆ ತೋಟಕ್ಕೆ ಹಸಿ ಸೊಪ್ಪು ಸದೆ ಹಾಕಲು ಸಂಪನ್ಮೂಲಗಳಿಲ್ಲ. ಕಾಡು ಇಲ್ಲ. ತರುವ ಮಜೂರಿಯೂ ಅಧಿಕ. ಕೊಕ್ಕೋ ಬೆಳೆ ತೋಟದಲ್ಲಿದ್ದರೆ ವರ್ಷಕ್ಕೆ ಸಾಕಷ್ಟು ಹಸುರು ಸೊಪ್ಪು ದೊರೆಯುತ್ತದೆ. ಈ ಸೊಪ್ಪಿನಲ್ಲಿ ಪೋಷಕಾಂಶಗಳು ಹೆಚ್ಚು ಇರುತ್ತವೆ.  ರಾಸಾಯನಿಕ ಮೂಲದ ಸೂಕ್ಷ್ಮ ಪೋಷಕ, ಸುಣ್ಣ, ಮೆಗ್ನೀಶಿಯಂ ಬಳಸುವ ಖರ್ಚನ್ನು ಇದು ಉಳಿಸುತ್ತದೆ. ಹಸಿ ಸೊಪ್ಪು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಒಳ್ಳೆಯ ಆಹಾರ. ಅಡಿಕೆ ಮರಗಳ ಮಧ್ಯಂತರದಲ್ಲಿ ಕೊಕ್ಕೋ ಬೆಳೆದಾಗ  ಕೊಕ್ಕೋ ಸಸ್ಯವು ತನ್ನ ಪಾಲಿನ ಪೋಷಕಾಂಶವನ್ನು …

Read more
ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆ ಅಪ್ಪಂಗಳ ಮಡಿಕೇರಿ

ನೀವು ಸಾಂಬಾರ ಬೆಳೆಗಾರರೇ? ಇಲ್ಲಿಗೆ ಒಮ್ಮೆ ಭೇಟಿ ಕೊಡಬಹುದು.

ಸಾಂಬಾರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಅರಶಿನ, ಶುಂಠಿ ಮುಂತಾದ ಬೆಳೆ ಬೆಳೆಯುವ ರೈತರು ವೈಜ್ಞಾನಿಕ ಬೆಳೆ ಮಾಹಿತಿ, ತಳಿ ಮಾಹಿತಿ ಬಯಸುವುದೇ ಆದರೆ ಕರ್ನಾಟಕದ ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ಒಮ್ಮೆ ಭೇಟಿ ಕೊಡಿ. ಇಲ್ಲಿ ನಿಮಗೆ  ಬೇಕಾದ ಮಾಹಿತಿಗಳು ಲಭ್ಯವಿದೆ. ಮಡಿಕೇರಿಯ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವನ್ನು 1961 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು 1976 ರಲ್ಲಿ ಕಾಸರಗೋಡ್‍ನ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು….

Read more
error: Content is protected !!