ಕರಿಮೆಣಸಿನ ಈ ವಿಶೇಷ ಗೊತ್ತೇ..?!

by | Jan 23, 2020 | Spice Crop (ಸಾಂಬಾರ ಬೆಳೆ) | 0 comments

ಜನ ಸ್ಲಿಂ ಆಗಬೇಕು ಎಂದು ಜಿಮ್ ಗೆ ಹೋಗುತ್ತಾರೆ. ಓಡುತ್ತಾರೆ. ವ್ಯಾಯಾಮ ಮಾಡುತ್ತಾರೆ. ದುಬಾರಿ ಬೆಲೆ ತೆತ್ತು ಯಾವ್ಯಾವುದೋ ಔಷಧಿ ಬಳಕೆ ಮಾಡುತ್ತಾರೆ. ಆದರೆ ಅದಕ್ಕಿಂತೆಲ್ಲಾ ಸುಲಭವಾಗಿ ತ್ವರಿತವಾಗಿ ದೇಹ ಸ್ಲಿಂ ಆಗಬೇಕಿದ್ದರೆ  ದಿನಾ 5-10  ಕಾಳು ಕರಿಮೆಣಸು  ತಿನ್ನಿ. ಸ್ಲಿಂ ಗಾಗಿ- ಜಿಮ್ ಮಾಡಿ  ದೇಹಾರೋಗ್ಯ ಕೆಡಿಸಿಕೊಳ್ಳಬೇಕಾಗಿಲ್ಲ.

  • ಏನಪ್ಪಾ ಕರಿಮೆಣಸು , ಇದರಲ್ಲೇನಿದೆ ಎನ್ನುತ್ತೀರಾ?
  • ಖಂಡಿತಾ ನೀವು ತಿಳಿದುಕೊಂಡದ್ದು ತುಂಬಾ ಕಡಿಮೆ.
  • ನಮ್ಮ ಪೂರ್ವಜರಿಂದ ಲಗಾಯ್ತು ಇದನ್ನು ಬಹು ಔಷಧಿಯಾಗಿ ಬಳಕೆ ಮಾಡುತ್ತಾ ಬಂದಿದ್ದಾರೆ.
  • ಬೆಳಗ್ಗೆದ್ದು ಕರಿಮೆಣಸಿನ ಕಷಾಯ, ಬಾಯಾರಿದಾಗ ಬೆಲ್ಲ ಸೇರಿಸಿದ ಕರಿಮೆಣಸಿನ  ಪಾನಕ, ಅಡುಗೆಗಳಲ್ಲಿ ಮೆಣಸಿನ  ಬಳಕೆ  ಮಾಡಿ ಅವರು ದೇಹಾರೋಗ್ಯವನ್ನು ಉಳಿಸಿಕೊಂಡಿದ್ದರು.

ಮೆಣಸಿನಲ್ಲಿ ಏನಿದೆ:

  • ಕರಿಮೆಣಸಿನಲ್ಲಿ ಪೈಪರಿನ್ piperine  ಎಂಬ ಸಾರ ಇರುತ್ತದೆ.ಈ ಸಾರವು ಹಲವಾರು ಆರೋಗ್ಯ ಗುಣಗಳನ್ನು ಒಳಗೊಂಡಿರುತ್ತದೆ.
  • ಇದರಲ್ಲಿ ಖಾರ ಅಂಶ ಇದ್ದು, ಈ ಖಾರವು ದೇಹವನ್ನು ಚುರುಕಾಗಿಡುತ್ತದೆ ಮತ್ತು ದೇಹಕ್ಕೆ ತಂಪು.
  • ನಮ್ಮ ಹಿರಿಯರು ಜ್ವರ- ಶೀತ , ಕೆಮ್ಮು  ಮುಂತಾದ ಖಾಯಿಲೆಗಳಿಗೆ   ಬಳಸುತ್ತಿದ್ದುದು ಕರಿಮೆಣಸನ್ನು.
  • ಇದು ಒಂದು ಸಂಪೂರ್ಣ   ದೇಹಾರೋಗ್ಯ ರಕ್ಷಕ ಸಾರಗಳನ್ನು  ಒಳಗೊಂಡ ಸಾಂಬಾರ ವಸ್ತು.
  • ಸಸ್ಯ ಮೂಲದಲ್ಲಿ ಇಷ್ಟು ಸಾರಾಂಶಗಳು ಸೇರಿರುವ ವಸ್ತು ಬೇರೊಂದಿಲ್ಲ.
  • ಖನಿಜಗಳಾದ ಪೊಟ್ಯಾಶಿಯಂ, ಕ್ಯಾಲ್ಸಿಯಂ , ಸತು, ಮೆಗ್ನೀಶಿಯಂ, ಕಬ್ಬಿಣಾಂಶ ಮತ್ತು ಮ್ಯಾಂಗನೀಸ್ ಒಳಗೊಂಡಿದೆ.
  • ರಕ್ತದ ಒತ್ತಡ ಮತ್ತು  ಹೃದಯದ ಸಮರ್ಪಕ ಕಾರ್ಯ ನಿರ್ವಹಣೆಗೆ ಪೊಟ್ಯಾಶಿಯಂ ಸತ್ವ ಅವಶ್ಯಕ. ಇದು ಕರಿಮೆಣಸಿನಲ್ಲಿ ಹೇರಳವಾಗಿದೆ.
  • ಇದರಲ್ಲಿ ಇರುವ ಮ್ಯಾಂಗನೀಸ್ ಅಂಶ  ದೇಹದಲ್ಲಿ ಆಂಟೀ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.
  • ಕಬ್ಬಿಣಾಂಶವು ಕೋಶಗಳ ಉಸಿರಾಟ ಮತ್ತು  ಜೀವ  ಕೋಶಗಳ ಉತ್ಪತ್ತಿಗೆ  ಸಹಾಯಕ.
  • ವಿಟಮಿನ್ ಗಳಾದ A, B ಮತ್ತು C ಗಳು ಇದರಲ್ಲಿ ಹೇರಳವಾಗಿದೆ.
  • ಕ್ಯಾರೋಟಿನ್ ಗಳು, ಲೈಕೋಪಿನ್ , ಪ್ಲೇವನಾಯ್ಡ್ ಗಳು  ಇದರಲ್ಲಿ ಹೇರಳವಾಗಿರುತ್ತದೆ.
  • ಈ ಸಂಯುಕ್ತಗಳು  ದೇಹದಲ್ಲಿರುವ ಕೆಲವು ಹಾನಿಕಾರಕ ಅಂಶಗಳನ್ನು ಹೊರಹಾಕುವಲ್ಲಿ ಸಹಕಾರಿ.

Turmeric High medicinal value spice
ಇಂತದ್ದು ಇತರ ಉತ್ಪನ್ನಗಳಲ್ಲಿ  ನೈಸರ್ಗಿಕವಾಗಿ  ಇರುವುದಿಲ್ಲ.  ದೇಹದ ಎಲ್ಲಾ ಅಂಗಾಂಗಗಳೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುವ  ಅಂಶಗಳು ಹೇರಳವಾಗಿರುವ ಕಾರಣ ದೇಹದಲ್ಲಿ ಯಾವುದೇ ಕೊಬ್ಬಿನ ಅಂಶ ಶೇಖರಣೆಗೆ ಅವಕಾಶ ಕೊಡುವುದಿಲ್ಲ.

  • ಕೊಬ್ಬನ್ನು ಕರಗಿಸುವ  ಅತೀ ದೊಡ್ಡ ಶಕ್ತಿ ಕರಿಮೆಣಸಿಗೆ ಇದೆ. ಆದ ಕಾರಣ ಬೊಜ್ಜುತನ ನಿವಾರಣೆಯಾಗುತ್ತದೆ.
  • ಕ್ಯಾನ್ಸರ್  ಜೀವ ಕೋಶಗಳ ನಿಯಂತ್ರಣ ರಹಿತ ಬೆಳೆವಣಿಗೆಯನ್ನು ಕರಿಮೆಣಸು ನಿಲ್ಲಿಸುತ್ತದೆ.

ಔಷಧಿಯ  ಬಳಕೆ:

  • ಕರಿಮೆಣಸಿಗೆ ಆಂಟ್ ಸೆಪ್ಟಿಕ್ ಗುಣ ಇದೆ. ಅದೇ ರೀತಿಯಲ್ಲಿ ನೋವು ನಿವಾರಣಾ ಗುಣವೂ ಇದೆ.
  • ಇದು ನಂಜು ನಿರೋಧಕ.  ಹಲ್ಲಿನ ಕೊಳೆತಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳ ನಿಯಂತ್ರಣಕ್ಕೆ ಸಹಾಯಕ.
  • ಹಿಂದೆ ದಂತ ಸಂಬಂಧಿತ ಸಮಸ್ಯೆಗೆ ಇದನ್ನೇ ಬಳಸುತ್ತಿದ್ದರು.
  • ಕುರು ಎಂಬ ಬ್ಯಾಕ್ಟೀರಿಯಾ ಸಂಬಂಧಿತ ಹುಣ್ಣು ತಕ್ಷಣ ಹಣ್ಣಾಗಿ ಕೀವು ಹೊರ ಹೋಗಿ ಗುಣವಾಗಲು ಕರಿಮೆಣಸನ್ನು  ಅರೆದು ಮಾಡಿದ ಪೇಸ್ಟ್ ರಾಮ ಬಾಣ.

ವಾಯು ದೋಷ ಈಗಿನ ತಲೆಮಾರಿಗೆ ಅತೀ ದೊಡ್ಡ ಸಮಸ್ಯೆ. ಇದರಿಂದಾಗಿಯೇ ಬೊಜ್ಜು ಹೆಚ್ಚುತ್ತದೆ. ಕೀಲು ನೋವುಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಕರಿಮೆಣಸಿನ ಸೇವನೆಯಿಂದ ಶಾಶ್ವತವಾಗಿ ಗುಣಪಡಿಸಬಹುದು.

ಔಷಧಿ ತಯಾರಿ ಹೇಗೆ:

  • ಜೇನು ಮತ್ತು ಕರಿಮೆಣಸಿನ ಪುಡಿ ಮಿಶ್ರಣ ವನ್ನು ಕೆಮ್ಮು ಮತ್ತು ಶೀತ, ಜ್ವರಕ್ಕೆ ನಾಲಗೆಗೆ ನೆಕ್ಕಿಸಲಾಗುತ್ತದೆ.
  • ಕರಿಮೆಣಸನ್ನು ಹುರಿದು ಕುಟ್ಟಿ ಪುಡಿಮಾಡಿ, ಬೆಣ್ಣೆಯೊಂದಿಗೆ ಮಿಶ್ರಣ ಮಾಡಿ ಕುರುವಿನ ಸುತ್ತ ಹಚ್ಚಿದರೆ ಎರಡೇ ದಿನದಲ್ಲಿ ಕುರು ಸೋರಿಕೊಳ್ಳುತ್ತದೆ. ಮತ್ತೆರಡು ದಿನದಲ್ಲಿ ಗಾಯ ಕೂಡುತ್ತದೆ. ನೋವು ಕಡಿಮೆಯಾಗುತ್ತದೆ.
  • ಕರಿಮೆಣಸನ್ನು ಪುಡಿ ಮಾಡಿ ಬೆಲ್ಲದೊಂದಿಗೆ ಸೇರಿಸಿ ಬಿಸಿ ನೀರಿನಲ್ಲಿ ಪಾನಕ ಮಾಡಿ ಸೇವಿಸಿದರೆ ಗಂಟಲು ನೋವು ಗುಣವಾಗುತ್ತದೆ.
  • ಶೀತ ಆಗದಂತೆ ಮೆಣಸನ್ನು ಪುಡಿ ಮಾಡಿ ಎಣ್ಣೆ ಯೊಂದಿಗೆ ತಲೆಗೆ ಹಾಕುವುದೂ ರೂಢಿಯಲ್ಲಿದೆ.
  • ಕೇರಳದಲ್ಲಿ , ಮತ್ತು ವಿದೇಶಗಳಲ್ಲಿ ಹಸಿ ಕರಿಮೆಣಸನ್ನು ಉಪ್ಪಿನಲ್ಲಿ  ಹಾಕಿ  ದಾಸ್ತಾನು ಇಟ್ಟು ಉಪ್ಪಿನ ಕಾಯಿಯಂತೆ ಬಳಕೆ ಮಾಡುತ್ತಾರೆ.
  • ಗಂಟು ನೋವು ಶಮನಕ್ಕೆ ಕರಿಮೆಣಸು ಪುಡಿ ಮಾಡಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಚ್ಚಿದರೆ ನೋವು ಶಮನ ಅಗುತ್ತದೆ.

ಅರಶಿನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಹತ್ತಿಕ್ಕುತ್ತದೆ. ಅದರ ಜೊತೆಗೆ ಕರಿಮೆಣಸು ಸೂಕ್ತ ಹೊಂದಾಣಿಕೆ. ಅರಶಿನದ ಗುಣವು ದ್ವಿಗುಣಗೊಳ್ಳಲು  ಕರಿಮೆಣಸು ಸಹಾಯಕ. 

ನಿತ್ಯ ಬಳಕೆ ಹೇಗೆ:

  • ಜೀರಿಗೆ- ಕೊತ್ತಂಬರಿ- ಮೆಂತೆ ಮತ್ತು ಕರಿಮೆಣಸು ಸೇರಿಸಿದ ಹುಡಿಯ  ಕಷಾಯ ದಿನಾ ಸೇವಿಸಿ.
  • ಬಾಯಾರಿಕೆಗೆ ಮೆಣಸು ಮತ್ತು ಬೆಲ್ಲದ  ಪಾನಕ ಸೇವಿಸಿ. ಅತಿಥಿಗಳಿಗೆ ಇದನ್ನೇ ಕೊಡಿ.
  • ಅಡುಗೆಯಲ್ಲಿ ನಾಲ್ಕಾರು ಕಾಳು ಮೆಣಸನ್ನು ತಪ್ಪದೆ ಹಾಕಿ.

 ಕರಿಮೆಣಸಿನ ಈ ಆರೋಗ್ಯಗುಣವನ್ನು ಸ್ವತಹ ಮೆಣಸು ಬೆಳೆಗಾರರೇ ಅರಿತಿಲ್ಲ. ಇದರ ಔಷಧೀಯ ಗುಣ ಯಾವುದೇ ಅಡ್ಡ ಪರಿಣಾಮ ರಹಿತ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!