ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …

Read more
ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಈಗ ಇಂತಹ ಕಾಯಿಗಳು ಉದುರಿ ಬೀಳುತ್ತಿವೆ. ಸರಿಯಾಗಿ ಬಲಿತು ಹಣ್ಣಾಗಿರದ, ಮೇಲ್ಮೈಯಲ್ಲಿ ಸುಟ್ಟಂತಹ ಕಲೆ ಇರುವ ಈ ಅಡಿಕೆಗೆ  ಗುಣಮಟ್ಟ ಇರುವುದಿಲ್ಲ. ಸಿಪ್ಪೆ ಅಂಟಿರುವ ಉಳ್ಳಿ ಅಡಿಕೆ ಆಗಬಹುದು.  ಒಡೆದ ಪಟೋರಾವೂ ಆಗಬಹುದು. ಇಲ್ಲವೇ ಕೆಂಪು ಬಣ್ಣದ ಕರಿಗೋಟು ಆಗಬಹುದು. ಹೀಗಾಗುವುದಕ್ಕೆ ಕಾರಣ ಏನು ಎಂಬುದು ಬಹಳಷ್ಟು ಕೃಷಿಕರಿಗೆ ಗೊತ್ತಿಲ್ಲ. ಇದು ಹೊಸ ಸಮಸ್ಯೆ ಅಲ್ಲವಾದರೂ ಈಗೀಗ ಇದರ ತೊಂದರೆ ಹೆಚ್ಚಾಗುತ್ತಿದೆ. ಅಡಿಕೆ ಬೆಳೆಗೆ ಈಗೀಗ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಇದಕ್ಕೆ ಕಾರಣ…

Read more
ಕುರಿ – ಕೋಳಿ ಗೊಬ್ಬರ ಸದ್ಯಕ್ಕೆ ಬಳಸಬೇಡಿ

ಕುರಿ – ಕೋಳಿ ಗೊಬ್ಬರ ಸದ್ಯಕ್ಕೆ ಬಳಸಬೇಡಿ. ಎಲೆ ಚುಕ್ಕೆಗೆ ಇದೂ ಕಾರಣವಾಗಬಹುದು

ಕರಾವಳಿ ಮಲೆನಾಡಿನಲ್ಲಿ ಈಗ ಕೊಟ್ಟಿಗೆ ಗೊಬ್ಬರದ ಬದಲಿಗೆ ಕುರಿ ಗೊಬ್ಬರ, ಕೋಳಿ ಗೊಬ್ಬರ ಬಳಕೆ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಗೊಬ್ಬರವನ್ನು ಬಳಕೆ ಮಾಡದೆ ಇರುವುದು ಒಳ್ಳೆಯದು. ಎಲೆ ಚುಕ್ಕೆ ರೋಗ ಬರೇ ಅಡಿಕೆಗೆ ಮಾತ್ರವಲ್ಲ, ಬೇರೆ ಬೇರೆ ಬೆಳೆಗೂ ಬರುತ್ತದೆ. ಅದು ಸಸ್ಯ ಶೇಷಗಳ ಮೂಲಕ ಪ್ರದೇಶದಿಂದ ಪ್ರದೇಶಕ್ಕೆ ಹರಡುವ ಸಾಧ್ಯತೆ ಇದೆ. ರೋಗಗಳು , ಕೀಟಗಳು ಪ್ರದೇಶದಿಂದ ಪ್ರದೇಶಕ್ಕೆ ಹರಡುದಕ್ಕೆ ಹಲವಾರು ಕಾರಣಗಳಿವೆ. ಸಸ್ಯ ಸಾಮಾಗ್ರಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಅದರ…

Read more
ಎಲೆ ಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ

ಎಲೆ ಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ – ಮಾಡಬೇಕಾದದ್ದು ಬೇರೆ ಇದೆ.

ಎಲೆಚುಕ್ಕೆ ರೋಗ ಇಲ್ಲದ ಸ್ಥಳವೇ ಇಲ್ಲ. ಇದಕ್ಕೆ ಬೆಳೆಗಾರರು ಏನು ಸಿಂಪಡಿಸಬೇಕು ಎಂದು ಕೇಳುತ್ತಾರೆ. ಆದರೆ ಮೊದಲು ಮಾಡಬೇಕಾದಾದ ಈ ಕೆಲಸ ಮಾಡದೆ ಸಿಂಪರಣೆ  ಮಾಡಿದರೆ ವಾಸಿಯಾಗುವುದಿಲ್ಲ. ಕೆಲವು ಕಡೆ ಕಡಿಮೆ ಇರಬಹುದು. ಕೆಲವು ಕಡೆ ಉಲ್ಪಣ ಸ್ಥಿತಿಗೆ ತಲುಪಿರಲೂ ಬಹುದು. ನೂರು ಮರಗಳಲ್ಲಿ ಕೆಲವು ಮರಗಳು ಸೋಂಕು  ತಗಲಿಸಿಕೊಳ್ಳದೆಯೂ ಇರಬಹುದು. ಇದೆಲ್ಲಾ ಸಸ್ಯದ ಅಂತರ್ಗತ ಶಕ್ತಿಯ ಮೇಲೆ ಅವಲಂಭಿಸಿದೆ. ಕೆಲವು ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡಿದರೂ ಎಲ್ಲರನ್ನೂ ಬಾಧಿಸದೆ ಕೆಲವರನ್ನು ಬಿಟ್ಟಿರಬಹುದು. ಅದು ರೋಗಾಣು ಕೊಟ್ಟ…

Read more
ಅಡಿಕೆ ತೋಟ ಮಾಡಬೇಡಿ – ಸದ್ಯಕ್ಕೆ ಮುಂದೂಡಿ

ಅಡಿಕೆ ತೋಟ ಮಾಡಬೇಡಿ – ಸದ್ಯಕ್ಕೆ ಮುಂದೂಡಿ – ಪರಿಸ್ಥಿತಿ ಅನುಕೂಲಕರವಾಗಿ ಇಲ್ಲ.

ಅಡಿಕೆ ಎಂದರೆ ಚಿನ್ನದ ಬೆಳೆ ಎಂದು ತೋಟ ಮಾಡುವವರು ಅಪರಿಮಿತ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಾರೆ. ಆದರೆ ಕಳವಳದ ಸಂಗತಿ ಎಂದರೆ ಪ್ರಕೃತಿ ಅಡಿಕೆ ಬೆಳೆಗೆ ಸ್ವಲ್ಪ ಮಟ್ಟಿಗೆ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಆದ ಕಾರಣ ಸ್ವಲ್ಪ ಸಮಯದ ವರೆಗೆ ಅಡಿಕೆ ಬೆಳೆ ವಿಸ್ತರಣೆ, ಹೊಸ ತೋಟ ಮಾಡುವುದನ್ನು ನಿಲ್ಲಿಸಿ. ಇರುವ ತೋಟದ ಆರೈಕೆಯನ್ನು ಉತ್ತಮಪಡಿಸಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಗಮನಹರಿಸಿ. ಅಡಿಕೆ ಬೆಳೆಗೆ ಅದರಲ್ಲೂ ಸಸಿಗಳಿಗೆ ವಿಪರೀತವಾಗಿ ಎಲೆ ಚುಕ್ಕೆ ರೋಗ  ಬಾಧಿಸುತ್ತಿದ್ದು, ಏನೇ ಸಾಹಸ ಮಾಡಿದರೂ ಇದರನ್ನು…

Read more
ಅಡಿಕೆ -ಹಳದಿ ಎಲೆ ರೋಗ ಪರಿಹಾರದ ನಿರೀಕ್ಷೆ ಬೇಡ

ಅಡಿಕೆ -ಹಳದಿ ಎಲೆ ರೋಗ ಪರಿಹಾರದ ನಿರೀಕ್ಷೆ ಬೇಡ.

ಅಡಿಕೆ ಬೆಳೆಗೆ ಬಾಧಿಸಲ್ಪಟ್ಟ ಹಳದಿ ಎಲೆ ರೋಗ ಈಗಿನ ಪರಿಸ್ಥಿತಿಯಲ್ಲಿ ಇನ್ನು ನೂರು ವರ್ಷ ಕಳೆದರೂ ನಿವಾರಣೆ ಅಗುವುದಿಲ್ಲ, ಯಾಕೆ ಕೇಳಿ. ಅಡಿಕೆ ಬೆಳೆಯಲಾಗುವ ಕರ್ನಾಟಕದ ಮಲೆನಾಡಿನ ಭಾಗಗಳಾದ ಶ್ರಿಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ ಮುಂತಾದ ಕಡೆ ಎಲೆ ಹಳದಿಯಾಗುವ ಸಮಸ್ಯೆ ಪ್ರಾರಂಭವಾಗಿ ಸುಮಾರು 40 ವರ್ಷಗಳಾಗಿರಬಹುದು.  ಎಲೆ ಹಳದಿಯಾಗುವುದಕ್ಕೆ ಒಂದು ರೋಗ ಎಂದು ನಾಮಕರಣ ಮಾಡಲಾಗಿದೆ. ಪೈಟೋ ಪ್ಲಾಸ್ಮಾ ತರಹದ ಜೀವಾಣು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಜಗತ್ತಿನಲ್ಲಿ ಈ ಜೀವಾಣುವನ್ನು ನಿಯಂತ್ರಿಸಬಲ್ಲ…

Read more
error: Content is protected !!