ಹ್ಯೂಮಸ್ ಹೆಚ್ಚಿಸಿ ಅಧಿಕ ಫಸಲು ಪಡೆಯಿರಿ.

by | Sep 10, 2020 | Soil Science (ಮಣ್ಣು ವಿಜ್ಞಾನ), Top Soil (ಮೇಲು ಮಣ್ಣು) | 0 comments

ಎಲ್ಲರೂ ಹ್ಯೂಮಸ್ ಎಂಬ ಶಬ್ಧವನ್ನು ಕೇಳಿರುತ್ತಾರೆ.ಆದರೆ ಇದು ಏನು, ಹೇಗೆ ಉತ್ಪಾದನೆಯಾಗುತ್ತದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಹ್ಯೂಮಸ್ ಎಂದರೆ ಮಣ್ಣಿನಲ್ಲಿ ಜೀವ ರಾಸಾಯನಿಕ ಕ್ರಿಯೆಯಿಂದ ಉತ್ಪಾದನೆಯಾಗುವ ಆಕಾರ ರಹಿತ, ಒಂದು ವಸ್ತು. ಇದು ಮಣ್ಣಿನ ಸ್ಥಿತಿಯನ್ನು ಫಲವತ್ತಾಗಿ ಇಡಲು ನೆರವಾಗುವ ಅಂಶ. ನಾವು ಮಣ್ಣಿಗೆ ಸೇರಿಸುವ ಕೃಷಿ ತ್ಯಾಜ್ಯಗಳು, ಮಣ್ಣಿನಲ್ಲೇ ಇರುವ ಕೆಲವು ಜೀವಿಗಳು ತಮ್ಮ ಆಯುಸ್ಸನ್ನು ಮುಗಿಸಿ ಮತ್ತೆ ಮಣ್ಣಿಗೇ ಸೇರುತ್ತವೆ. dead plant and animals and ferns etc.  ಅದು ಮಣ್ಣಿನಲ್ಲಿ ವಿಘಟನೆಯಾಗುವಾಗ ಉತ್ಪಾದನೆಯಾಗುವ ವಸ್ತುವೇ ಹ್ಯೂಮಸ್.
Humus formation process in soil

ಹ್ಯೂಮಸ್ ಹೇಗೆ ಉತ್ಪಾದನೆಯಾಗುತ್ತದೆ?.

  • ಮಣ್ಣಿನಲ್ಲಿ ಎಲ್ಲಾ ಸಾವಯವ ವಸ್ತುಗಳೂ ಹ್ಯೂಮಸ್ಸಿಕರಣ ಆದ ನಂತರವೇ ಅದು ಸಸ್ಯಗಳಿಂದ ಸ್ವೀಕಾರಗೊಳ್ಳುವುದು.
  • ಇದನ್ನು ವಿಜ್ಞಾನ ಭಾಷೆಯಲ್ಲಿ ಜೀವ ರಾಸಾಯನಿಕ ಕ್ರಿಯೆ ಎಂದು ಕರೆಯಲಾಗುತ್ತದೆ.
  • ಸಾವಯವ ವಸ್ತು ಮಣ್ಣಿಗೆ ಸಿಕ್ಕ ತಕ್ಷಣ ಅದನ್ನು  ಬ್ಯಾಕ್ಟೀರಿಯಾಗಳು, ಶಿಲೀಂದ್ರಗಳು, ಆಕ್ಟಿನೋಮೈಸಿಟ್ ಗಳು ಅದರ ಮೇಲೆ ಧಾಳಿ ಮಾಡುತ್ತವೆ.
  • ಒಂದು ಮರದ ಗೆಲ್ಲು ಒಣಗಿ ನೆಲಕ್ಕೆ ಬಿದ್ದರೆ ಸಾಕು ಅದರ ಮೇಲೆ ಕೆಲವೇ ಸಮಯದಲ್ಲಿ ಅಣಬೆ ಬೆಳೆಯುತ್ತದೆ.
  • ಇದನ್ನೇ ಶಿಲೀಂದ್ರದ ಧಾಳಿ ಎಂದು ಹೇಳುವುದು.
  • ಹೀಗೆ ಜೀವಾಣುಗಳಿಂದ ಅದು ವಿಭಜನೆಯಾಗುವಾಗ ಸಕ್ಕರೆ, ಪಿಷ್ಟ, ಪ್ರೊಟೀನುಗಳು ನಶಿಸುತ್ತವೆ.
  • ಇಂಗಾಲದ ಡೈ ಆಕ್ಸೈಡ್, ಕ್ಯಾಲ್ಸಿಯಂ  ನೈಟ್ರೇಟ್, ಸಲ್ಫೇಟ್ ಫೋಸ್ಫೇಟ್  ಮುಂತಾದವು ಸುಲಭ ರೂಪದಲ್ಲಿ ಕಳೆದು ಹೋಗುತ್ತದೆ.
  • ಕ್ಯಾಲ್ಸಿಯಂ ಸಂಯುಕ್ತ, ನಿರೋಧ ಸಾಮರ್ಥ್ಯವುಳ್ಳ ಸೆಲ್ಯುಲೋಸ್, ಲಿಗ್ನಿನ್, ಕೊಬ್ಬು, ಅಂಟು, ಪ್ರೊಟೀನು, ಮೇಣ ಮುಂತಾದವು ರೂಪಾಂತರ ಹೊಂದಿ, ಅಥವಾ  ಲಿಗ್ನಿನ್ ಸಂಯುಕ್ತವಾಗಿ ರೂಪಾಂತರ ಹೊಂದಿ ಉಳಿಯುತ್ತದೆ.
  • ಈ ಕ್ರಿಯೆಯ ಫಲದಿಂದಾಗಿ ಲಭಿಸುವ  ಮೊತ್ತ ಏನಿದೆಯೋ  ಅದೇ ಹ್ಯೂಮಸ್.
  • ಇದಕ್ಕೆ ಕಂದು ಅಥವಾ ಕಪ್ಪು ಬಣ್ಣ (dark organic matter)ಇರುತ್ತದೆ. ಅಂಟು ಗುಣ  ಇರುತ್ತದೆ.
  • ಇದರಲ್ಲಿ ಸಾರಜನಕ, ರಂಜಕ ಮತ್ತು ಗಂಧಕಗಳು ಸೇರಿ ಇರುತ್ತವೆ.
  • ಯಾವ ಆಕಾರವೂ ಇಲ್ಲದ ಇದನ್ನು ಜೈವಿಕ ಕ್ರಿಯೆಗಳಿಂದ ಉತ್ಪತ್ತಿಯಾದ ಸಂಕೀರ್ಣ ಎಂದು ಹೇಳಬಹುದು.

ಹ್ಯೂಮಸ್ ನ ಗುಣ ಏನು:

slightly this soil becoming humus status

ಬದಲಾದ ಮಣ್ಣಿನ ಬಣ್ಣ ಅದರ ಹ್ಯೂಮಸ್ ರಚನೆಯನ್ನು ತಿಳಿಸುತ್ತದೆ.

  • ಹ್ಯೂಮಸ್ ಮಣ್ಣಿಗೆ ಕಪ್ಪು ಬಣ್ಣವನ್ನು ಕೊಡುತ್ತದೆ.
  • ಯಾವುದೇ ಮರಮಟ್ಟುಗಳಿಲ್ಲದ  ಬರೇ ಮಣ್ಣಾಗಿದ್ದರೆ ಅದರ ಬಣ್ಣ ಕೆಂಪು ಅಥವಾ ಕಂದು ಇರುತ್ತದೆ.
  • ಜೇಡಿ ಆಗಿದ್ದರೆ ಬಿಳಿ ಮಿಶ್ರ ಕಂದು ಮಣ್ಣು ಆಗಿರುತ್ತದೆ.
  • ಹ್ಯೂಮಸ್ ಸೇರಿದ್ದರೆ ಅದರ ಬಣ್ಣ ಕಪ್ಪಿನತ್ತ ಬದಲಾವಣೆಯಾಗುತ್ತದೆ.
  • ಈ ಬಣ್ಣದ ಸಾಂದ್ರತೆ ಕ್ಯಾಲ್ಸಿಯಂ ಆಂಶವನ್ನು ಅವಲಂಬಿಸಿರುತ್ತದೆ.

ಹ್ಯೂಮಸ್ ಜೇಡಿಯಂತೆ ಅಂಟು ಅಂಟಾಗಿರುತ್ತದೆ.  ಕೆಲವು ನದೀ ಮುಖಜ ಭೂಮಿ, ಹಳೆಯ ಕೆರೆ ಮುಂತಾದೆಡೆ ಹಲವಾರು ವರ್ಷಗಳಿಂದ ಕೊಚ್ಚಿಕೊಂಡು ಹೋಗಿ ತಂಗಿದ ಮೇಲ್ಮಣ್ಣು, ಸಾವಯವ ವಸ್ತುಗಳು ಅಲ್ಲೇ ಬಹಳ ವರ್ಷಗಳ ತನಕ  ಕಳಿತು ಅಗೆಯುವ ಸಮಯದಲ್ಲಿ ದೊರೆಯುವ ಕಪ್ಪು ವರ್ಣದ ಮಣ್ಣಿನಲ್ಲಿ ಹ್ಯೂಮಸ್ ಅಂಶ ಸಂಮೃದ್ಧವಾಗಿರುತ್ತದೆ.

wood piece becoming decay last stage is humas

ಶಿಲೀಂದ್ರ ಬೆಳೆದು ಇದು ವಿಘಟನೆಯಾಗಿ ಕೊನೆಗೆ ಹ್ಯೂಮಸ್ ರೂಪ ತಳೆಯುತ್ತದೆ.

  • ಹ್ಯೂಮಸ್   ನಲ್ಲಿ ಸಾರಜನಕ ರಂಜಕ ಮತ್ತು ಕ್ಯಾಲ್ಸಿಯಂ, ಮೆಗ್ನೀಶಿಯಂ ಪೋಷಕಗಳಲ್ಲದೆ ಕೆಲವು ಹಾರ್ಮೋನುಗಳೂ Humus has some nutrients, hormones etc  that improve the soil health. ಸೇರಿರುತ್ತವೆ.
  • ಕೃಷಿ ಮಾಡುವ ಭೂಮಿಯಲ್ಲಿ ನಿರಂತರ ಸಾವಯವ ವಸ್ತುಗಳನ್ನು ಪೂರೈಕೆ ಮಾಡುತ್ತಲೇ ಇದ್ದು, ಇದು ಯಾವ ಕಾರಣಕ್ಕೂ ಕೊಚ್ಚಣೆಗೊಳಗಾಗದಂತೆ ರಕ್ಷಿಸಿದರೆ ಅದು ಹಲವು ವರ್ಷಗಳ ರಾಸಾಯನಿಕ  ಕ್ರಿಯೆಗೊಳಪಟ್ಟು ಹ್ಯೂಮಸ್ ಆಗಿ ಪರಿವರ್ತನೆಯಾಗುತ್ತದೆ.
soil rich in humus

ಹ್ಯೂಮಸ್ ಉಳ್ಳ ಅಂಟಾದ ಫಲವತ್ತಾದ ಮಣ್ಣು

  • ಇದು ಶ್ರೀಮಂತ  ಮಣ್ಣಿನ ಜೈವಿಕ ರಚನೆಯ ದ್ಯೋತಕವಾಗಿರುತ್ತದೆ.
  • ಕೃಷಿ ಮಾಡುವ ಭೂಮಿಯಲ್ಲಿ ಮೇಲ್ಪ್ಮಣ್ಣಿನಲ್ಲಿ  ಮಾತ್ರ ಅಧಿಕ ಹ್ಯೂಮಸ್ ಇರುತ್ತದೆ.
  • ಕೆಳಕ್ಕೆ ಹೋದಂತೆ ಹ್ಯೂಮಸ್ ಕಡಿಮೆಯಾಗುತ್ತಾ ಬರುತ್ತದೆ.

ಕೃಷಿಕರು ಬೆಳೆ ಬೆಳೆಯುವಾಗ ಬೇರೆ ಪೋಷಕಗಳನ್ನು ಬಳಸುತ್ತಾರೆ. ಯಾವುದೇ ಪೋಷಕ ಬಳಸಿ, ಮಣ್ಣಿನಲ್ಲಿ ಹ್ಯೂಮಸ್ ಅಂಶ ಇದ್ದಷ್ಟು ಅದರ ಲಭ್ಯತೆ ಹೆಚ್ಚಾಗುತ್ತದೆ. ತಿಳಿದವರು ಹೇಳುತ್ತಾರೆ, ರಾಸಾಯನಿಕ ಗೊಬ್ಬರ ಇಲ್ಲದೆ ಕೃಷಿ ಮಾಡಬಹುದು, ಆದರೆ ಸಾವಯವ ಅಂಶ ಇಲ್ಲದೆ ಕೃಷಿ ಅಸಾಧ್ಯ. ಸಾವಯವ ಅಂಶಗಳ ನಿರಂತರ ಪೂರೈಕೆ ಮಾಡುತ್ತಿದ್ದರೆ ಮಣ್ಣು ಹ್ಯೂಮಸ್ ಸಂಮೃದ್ಧವಾಗಿ ಬೆಳೆ ಬೆಳೆಸುವ ಖರ್ಚು ಕಡಿಮೆಯಾಗುತ್ತದೆ. ಗುಣಮಟ್ಟದ ಆಹಾರ ಉತ್ಪಾದೆನೆ superior Quality food production ಅಗುವುದೂ  ಹ್ಯೂಮಸ್ ಯುಕ್ತ ಮಣ್ಣಿನಲ್ಲಿ. ಬೀಜವನ್ನು ಬಿಸಾಡಿದರೂ ಹುಟ್ಟುವ ಸ್ಥಿತಿ ಉಂಟಾಗಬೇಕಾದರೆ ಮಣ್ಣು ಹ್ಯುಮಸ್ ಸಂಮೃದ್ಧವಾಗಿರಬೇಕು.
End of the article:—————————
Search words: Humus# soil# soil health# Organic farming# agriculture waste and farming# soil fertility# soil health#humus formation in soil#
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!