ಅಡಿಕೆಯಲ್ಲಿ ಅರೋಗ್ಯಕ್ಕೆ ಹಾನಿಕರ ಅಂಶಗಳಿವೆಯಂತೆ!

by | Sep 22, 2021 | Government & Daily News (ಸರ್ಕಾರ ಮತ್ತು ದೈನಂದಿನ ಸುದ್ದಿ) | 0 comments

ಅಡಿಕೆಯ ಮೇಲೆ ಯಾವಾಗಲೂ ಏನಾದರೊಂದು ಅಪವಾದಗಳು ಇದ್ದೇ ಇರುತ್ತವೆ. ಬೆಲೆ ಏರಿಕೆ ಆಗುವಾಗ ಇವೆಲ್ಲಾ ಸದರಿಗೆ ಬರುತ್ತವೆ. ನಮ್ಮ ದೇಶದ ಬಹುತೇಕ ವೈಜ್ಞಾನಿಕ ಸಂಶೋಧನೆಗಳೂ ಅಡಿಕೆಯನ್ನು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಿಲ್ಲ. ಜೊತೆಗೆ ಅಂತರ ರಾಷ್ಟ್ರಿಯ ಅರೋಗ್ಯ ಸಂಸ್ಥೆಯೂ ಸಹ. ಈಗ ಚೀನಾ ದೇಶ ಅಡಿಕೆಯ ಮೇಲೆ ಒಂದು ಕಣ್ಣಿಟ್ಟಿದೆ. ಅದು ಜಾಗತಿಕ ಆಹಾರ ಸಂಸ್ಥೆಯ ಒತ್ತಡಕ್ಕೆ ಮಣಿದು.

ಚೀನಾ ದೇಶದಲ್ಲಿ ಅಡಿಕೆಯ ಕುರಿತಾಗಿ ಯಾವ ಸಮೂಹ ಮಾದ್ಯಮಗಳಲ್ಲೂ ಜಾಹೀರಾತು ನೀಡದಂತೆ ನಿರ್ಭಂಧ ಹೇರಲಾಗಿದೆಯಂತೆ. ಅಡಿಕೆ ಸೇರಿದಂತೆ ಬೇರೆ ಬೇರೆ ಕಾರ್ಸಿನೋಜೆನಿಕ್ ಅಂಶ ಉಳ್ಳ ( ಕ್ಯಾನ್ಸರ್ ಕಾರಕ)  ವಸ್ತುಗಳನ್ನು  ಪತ್ರಿಕೆಗಳು, ಟಿವಿ ಮುಂತಾದ ಮಾಧ್ಯಮಗಳ ಮೂಲಕ ಜಾಹೀರಾತು ಮಾಡಿ ಮಾರಾಟ ಮಾಡಬಾರದಂತೆ. ಇವು ಬಾಯಿಯ ಕ್ಯಾನ್ಸರಿಗೆ ಕಾರಣವಾಗುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆಯಂತೆ.

 • ಚೀನಾದಲ್ಲಿ ಅಡಿಕೆ (Betal nut) ಯನ್ನು ಅತ್ಯಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆಯಂತೆ.
 • ಹಾಗೆಯೇ ಬೆಳೆಯುವುದರಲ್ಲೂ ಚೀನ ಮುಂದೆ ಇದೆ. ಅವರಿಗೆ ಅಡಿಕೆ ತಿನ್ನುವುದರಿಂದ ಒಂದು ರೀತಿಯ ಮಜಾ ಸಿಗುತ್ತದೆಯಂತೆ.
 • ಚೀನಾದ ಹುನಾಮ್(HUNAM) ಪ್ರಾಂತ್ಯ ಒಂದರಲ್ಲೇ ಗರಿಷ್ಟ ಪ್ರಮಾಣದಲ್ಲಿ ಅಡಿಕೆ ಸೇವನೆ ನಡೆಯುತ್ತಿದ್ದು,
 • ಇಲ್ಲಿನ ಜನರ ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರ ತಂಡ ಇಲ್ಲಿ ಸುಮಾರು 30% ಜನರಿಗೆ ಕ್ಯಾನ್ಸರ್ ಇದರಿಂದಾಗಿ ಬರುತ್ತದೆ ಎಂಬುದಾಗಿ ವರದಿ ಮಾಡಿದ್ದಾರೆ.  
 • ಚೀನಾದಲ್ಲಿ ಸುಮಾರು 2,60,000 ದಷ್ಟು ಅಡಿಕೆ ಸಂಸ್ಕರಣಾ ಕಂಪೆನಿಗಳಿದ್ದು,  ಇವುಗಳನ್ನು ಮಟ್ಟಹಾಕಲು ಈ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದೆ ಎಂಬ ವಾದವೂ ಇದೆ.
 • ಇಲ್ಲಿ 2019 ರಲ್ಲೇ ಅಡಿಕೆ ಉತ್ಪನ್ನದ ಜಾಹೀರಾತನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ನಿಷೇಧ ಹೇರಲಾಗಿದ್ದರೂ ಅದನ್ನು ಮೀರಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿತ್ತು. 
 • ಅಡಿಕೆಯನ್ನು ಉತ್ತೇಜಕ,ಮತ್ತು ಆಯಾಸ ಪರಿಹಾರಕ ಎಂದು ಬಿಂಬಿಸಲಾಗುತ್ತಿತ್ತು.
 • ಇತೀಚೆಗೆ ಈ ಜಾಹೀರಾತುಗಳು ಹೆಚ್ಚಾಗಲಾರಂಭಿಸಿದೆಯಂತೆ.

ಅಡಿಕೆಯನ್ನು ನಿರಂತರವಾಗಿ ತಿನ್ನುವುದರಿಂದ  ಸಿಗರೇಟು, ಅಲ್ಕೋಹಾಲ್ ಗಿಂತಲೂ ಹೆಚ್ಚಾಗಿ ತಿನ್ನುವನ ಆರೋಗ್ಯ ಹಾಳಾಗುತ್ತದೆ. ನಮ್ಮಲ್ಲಿ ಹೆಚ್ಚು ಹೆಚ್ಚು ಜನ ಅಡಿಕೆ ತಿಂದ ಕಾರಣದಿಂದ ಅನರೋಗ್ಯಕ್ಕೆ ತುತ್ತಾದ ರೋಗಿಗಳು ಪತ್ತೆಯಾಗುತ್ತಿದ್ದಾರೆ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈಧ್ಯಾಧಿಕರಿಗಳು (District People’s hospital, a public hospital in central Huber province) ತಿಳಿಸುತ್ತಾರೆ. ಇದರಲ್ಲೀ ಯುವ ತಲೆಮಾರೇ ಈ ರೀತಿ ತೊಂದರೆಗೆ ಒಳಗಾಗುವ ಕಾರಣ ಇದು ಸರಳ ವಿಷಯ ಅಲ್ಲ ಎನ್ನುತ್ತಾರೆ.

 • ಚೀನಾ ದೇಶಕ್ಕೆ ಈ ಕುರಿತಾಗಿ ಜಾಗತಿಕ ಆರೋಗ್ಯ ಸಂಸ್ಥೆಯ ಒತ್ತಡವೂ ಇರಬಹುದೇನೋ ಅನ್ನಿಸುತ್ತದೆ.
 • ಜಾಗತಿಕ ಆರೋಗ್ಯ ಸಂಸ್ಥೆಯ ಒತ್ತಡವೇ ಆಗಿದ್ದರೆ ಅದು ಕ್ರಮೇಣ ನಮ್ಮ ದೇಶದ ಮೇಲೂ ಬರಬಹುದು.
 • ಇಷ್ಟಕ್ಕೂ ನಮ್ಮ ದೇಶದಲ್ಲಿ ತಂಬಾಕು ಸೇರಿಸಲ್ಪಟ್ಟ ಉತ್ಪನ್ನಗಳ ಸಾರ್ವಜನಿಕ ಜಾಹೀರಾತು ಬಹಳ ಸಮಯದಿಂದ ನಿಷೇಧಿಸಲ್ಪಟ್ಟಿದೆ.
 • ಹಾಗಾದ ಕಾರಣ ಸ್ವಲ್ಪ ನಾವು ಸುರಕ್ಷಿತರು ಎಂದುಕೊಳ್ಳಬಹುದು.

ನಮ್ಮ ಸುದ್ದಿಗೆ ಬಾರದಿರಲಿ:

ಈಗಾಗಲೇ ಅಡಿಕೆಯ ಬಗ್ಗೆ ಜಿಎಸ್ ಟಿ ಸಭೆಯಲ್ಲಿ ಅಡಿಕೆಯ ಪ್ರಸ್ತಾಪ ಆಗಿದೆ. ಇನ್ನೊಂದೆಡೆ ಅಡಿಕೆಯನ್ನು ಏನೂ ಮಾಡುವುದಿಲ್ಲ ಎಂಬುದಾಗಿ ಸರಕಾರದ ಮುಖಂಡರು ಹೇಳುತ್ತಿದ್ದಾರೆ. ರಾಜಕೀಯದವರು ಹೇಳುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸ ಇರುವ ಕಾರಣ ಬೆಲೆ ಏರುತ್ತಿರುವ ಈ ಸಮಯದಲ್ಲಿ ಅಡಿಕೆಯ ಮೇಲೆ ಯಾವುದೇ ಕ್ರಮಕೈಗೊಂಡರೂ ಬೆಳೆಗಾರರಿಗೆ ತೊಂದರೆಯೇ ಸರಿ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!