krushiabhivruddi

ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ

ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ?   

ಕೃಷಿಕರಾದವರೆಲ್ಲರೂ ಒಂದಿಲ್ಲೊಂದು ಉದ್ದೇಶಕ್ಕೆ ಕೀಟನಾಶಕ- ರೋಗನಾಶಕ ಸಿಂಪಡಿಸಿರಬಹುದು. ಇವುಗಳನ್ನು ಸಿಂಪಡಿಸುವಾಗ ನಾವು ಅನುಸರಿಸಿದ ಕ್ರಮ ಎಷ್ಟು ಸರಿ- ಎಷ್ಟು ತಪ್ಪು  ಎಂಬುದನ್ನು ಒಮ್ಮೆ ಯೋಚನೆ ಮಾಡಲೇಬೇಕು.  ಪ್ರತೀಯೊಂದು ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆಗೆ ನಿರ್ದಿಷ್ಟ ಪ್ರಮಾಣ ಎಂಬುದಿದೆ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದಾಗ ಆಗುವ ಅನಾಹುತಗಳೇನು? ಈಗಾಗಲೇ ಆದದ್ದು ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ವೈಧ್ಯರು ರೋಗಿಗೆ ಒಂದು ಔಷಧಿ ಕೊಡುತ್ತಾರೆ, ಯಾವ ವೈಧ್ಯರೂ ಕೊಡುವಾಗ ಇದನ್ನು ಇಂತಹ (ಬೆಳಿಗ್ಗೆ+ ಮಧ್ಯಾನ್ಹ+ ರಾತ್ರೆ) ಹೊತ್ತಿನಲ್ಲಿ, ಇಂತಹ ಸಮಯದಲ್ಲಿ…

Read more
ವೃತ್ತಿ ಪ್ರೌಢತೆ ಪಡೆದುಕೊಂಡ ಓರ್ವ ಕಾಫೀ, ಮೆಣಸು ಭತ್ತದ ಕೃಷಿಕ ವೈ ಎಸ್ ರುದ್ರಪ್ಪ, ಸಕಲೇಶಪುರ, ಬಾಗೆಯ ಕೃಷಿಕರು.

ಕೃಷಿಕರು ತಮ್ಮ ವೃತ್ತಿಕ್ಷೇತ್ರದಲ್ಲಿ ಪ್ರೌಢತೆ ಬೆಳೆಸಿಕೊಳ್ಳದಿದ್ದರೆ ಉಳಿಗಾಲ ಇಲ್ಲ.

ಒಬ್ಬ ಮೆಕ್ಯಾನಿಕ್ ಶಿಕ್ಷಣ ಕಡಿಮೆಯಾದರೂ ಸಹ ತನ್ನ ವೃತ್ತಿ ಕ್ಷೇತ್ರದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳುತ್ತಾ ಮುಂದುವರಿಯುತ್ತಿರುತ್ತಾನೆ. ಇಂತಹ ಪಾರ್ಟ್ ಹಾಳಾದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂಬುದಾಗಿ ನಿಖರವಾಗಿ ಹೇಳುತ್ತಾನೆ. ಆದರೆ ನಮ್ಮ ಕೃಷಿಕರು ಈ ವಿಷಯದಲ್ಲಿ ಇನ್ನೂ ಪ್ರೌಢರಾಗಿಲ್ಲ. ಪ್ರತೀಯೊಂದು ವಿಚಾರಕ್ಕೂ ಇನ್ನೊಬ್ಬನಲ್ಲಿ ಕೇಳುವ, ಅವನ ಸಂಭಾವನೆ ರಹಿತ ಉಚಿತ ಸಲಹೆ ಕೇಳುವ ಬಹಳಶ್ಟು ಸಂದೇಹಗಳಲ್ಲೇ  ಮುಂದುವರಿಯುವ ಮನೋಸ್ಥಿತಿ ನಮ್ಮ ಕೃಷಿಕ ವರ್ಗದಲ್ಲಿ ಕಾಣಿಸುತ್ತಿದೆ. ಹತ್ತು ಜನರ ಅಭಿಪ್ರಾಯ ಕೇಳಿ ತನಗೆ ತೋಚಿದಂತೆ ಅದನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ…

Read more
ಭತ್ತದ ಗರಿ ಹುಳ – ಹೇಗೆ ಬರುತ್ತದೆ? ನಿವಾರಣೋಪಾಯ ಏನು?

ಭತ್ತದ ಗರಿ ಹುಳ – ಹೇಗೆ ಬರುತ್ತದೆ? ನಿವಾರಣೋಪಾಯ ಏನು?   

ಭತ್ತದ ಬೆಳೆಯಲ್ಲಿ ಗರಿಯ ತುದಿಯ ಪತ್ರಹರಿತ್ತನ್ನು ತಿಂದು ಪೈರನ್ನೇ ಹಾಳುಗೆಡಹುವ ಒಂದು ಹುಳ ಇದೆ. ಅದನ್ನು ಭತ್ತದ ಗರಿ ತಿನ್ನುವ ಕೀಟ Paddy Leaf folder, leaf roller Cnaphalocrocis medinalis / marasmia patnalis ಎನ್ನುತ್ತಾರೆ. ಇದು ಎಳೆಯ ಸಸಿ ಹಂತದಿಂದ ಪೈರು ತೆನೆ ಕೂಡುವ ತನಕವೂ ಹಾನಿ ಮಾಡುತ್ತಿರುತ್ತದೆ. ಇದರಿಂದ ಬೆಳೆಯಲ್ಲಿ ಬಹಳಷ್ಟು  ಹಾನಿ ಉಂಟಾಗುತ್ತದೆ. ಕೆಲವೊಮ್ಮೆ ಭತ್ತದ ಹೊಲದಲ್ಲಿ ಪೈರೇ ಇಲ್ಲದ ಸ್ಥಿತಿ ಉಂಟಾಗುವುದೂ ಇದೆ. ಇಲ್ಲಿ ಒಂದು ಗದ್ದೆಯನ್ನು ಗಮನಿಸಿ. ಇದರಲ್ಲಿ…

Read more
ಸಸ್ಯಗಳ ಬೇರಿನಲ್ಲಿ ಈ ಗಂಟುಗಳು ಯಾಕೆ ಬೆಳೆಯುತ್ತವೆ? ಇದರ ಪ್ರಯೋಜನಗಳೇನು

ಸಸ್ಯಗಳ ಬೇರಿನಲ್ಲಿ ಹೀಗೆ ಗಂಟುಗಳು ಯಾಕೆ ಬೆಳೆಯುತ್ತವೆ? ಇದರ  ಪ್ರಯೋಜನಗಳೇನು?  

ಕೆಲವು ಸಸ್ಯಗಳ ಬೇರಿನ ಮೇಲೆ ಗಂಟು ಗಂಟು ರಚನೆ ಕಾಣಿಸುತ್ತದೆ. ಇದು  ಏನು? ಯಾಕೆ ಆಗುತ್ತದೆ?ಇದರಿಂದ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ. ಕೆಲವು ನಿರ್ದಿಷ್ಟ ಸಸ್ಯಗಳಲ್ಲಿ  ಮಾತ್ರ  ಬೇರಿನ ಸನಿಹದಲ್ಲಿ  ಗಂಟುಗಳನ್ನು ಕಾಣಬಹುದು. ಇವು ಪ್ರಕೃತಿಯ ಕೊಡುಗೆ. ದ್ವಿದಳ ಸಸ್ಯಗಳಲ್ಲಿ ಮಾತ್ರ ಇಂತಹ ಗಂಟು Root Nodules ರಚನೆಗಳನ್ನು ಕಾಣಬಹುದು. ಬೇರಿನಲ್ಲಿ ಬರುವ ಎಲ್ಲಾ ಗಂಟುಗಳೂ  ಒಂದೇ ಅಲ್ಲ. ಕೆಲವು ಜಂತುಹುಳುಗಳ (root-knot nematode) ಕಾಟದಿಂದಲೂ ಆಗುತ್ತದೆ. ಜಂತು ಹುಳುಗಳಾಗಿದ್ದರೆ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ. ಸಸ್ಯದ ಬೆಳವಣಿಗೆ…

Read more
ನ್ಯಾನೋ ಯೂರಿಯಾ ಮತ್ತು DAP ಬಳಕೆ ಕ್ರಮ ಮತ್ತು ಪ್ರತಿಫಲ.

ನ್ಯಾನೋ ಯೂರಿಯಾ ಮತ್ತು DAP ಬಳಕೆ ಕ್ರಮ ಮತ್ತು ಪ್ರತಿಫಲ.

ಇತ್ತೀಚೆಗೆ ಮಾರುಕಟ್ಟೆಗೆ ಬಂದ ನ್ಯಾನೋ ಯೂರಿಯಾ ಮತ್ತು DAP ದ್ರವ ಗೊಬ್ಬರಗಳನ್ನು ಹೇಗೆ ಬಳಕೆ ಮಾಡುವುದು, ಇದರಿಂದ ಏನು ಪ್ರತಿಫಲ ಇದೆ ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಗೊಬ್ಬರಗಳು ಎಂದರೆ ನಮ್ಮ ಸಾಂಪ್ರದಾಯಿಕ ಗೊಬ್ಬರಗಳಿಗಿಂತ ಗಾತ್ರದಲ್ಲಿ (size) ಮತ್ತು ಆಕಾರದಲ್ಲಿ (Shape)  ಸಂಸ್ಲೇಶಣೆ (synthesize) ನಡೆಸಿ ತಯಾರಿಸಲಾದ ಗೊಬ್ಬರಗಳು. ಇದರ ಸಾರಾಂಶಗಳು ನೇರವಾಗಿ (Shortcut way ) ತಲುಪಬೇಕಾದ ಸಸ್ಯಾಂಗಕ್ಕೆ ಲಭ್ಯವಾಗಿ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು SMART FERTILIZER ಎಂಬುದಾಗಿಯೂ ಕರೆಯಲಾಗುತ್ತದೆ. ಇದನ್ನು ವಿಶೇಷ…

Read more
ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಈಗ ಇಂತಹ ಕಾಯಿಗಳು ಉದುರಿ ಬೀಳುತ್ತಿವೆ. ಸರಿಯಾಗಿ ಬಲಿತು ಹಣ್ಣಾಗಿರದ, ಮೇಲ್ಮೈಯಲ್ಲಿ ಸುಟ್ಟಂತಹ ಕಲೆ ಇರುವ ಈ ಅಡಿಕೆಗೆ  ಗುಣಮಟ್ಟ ಇರುವುದಿಲ್ಲ. ಸಿಪ್ಪೆ ಅಂಟಿರುವ ಉಳ್ಳಿ ಅಡಿಕೆ ಆಗಬಹುದು.  ಒಡೆದ ಪಟೋರಾವೂ ಆಗಬಹುದು. ಇಲ್ಲವೇ ಕೆಂಪು ಬಣ್ಣದ ಕರಿಗೋಟು ಆಗಬಹುದು. ಹೀಗಾಗುವುದಕ್ಕೆ ಕಾರಣ ಏನು ಎಂಬುದು ಬಹಳಷ್ಟು ಕೃಷಿಕರಿಗೆ ಗೊತ್ತಿಲ್ಲ. ಇದು ಹೊಸ ಸಮಸ್ಯೆ ಅಲ್ಲವಾದರೂ ಈಗೀಗ ಇದರ ತೊಂದರೆ ಹೆಚ್ಚಾಗುತ್ತಿದೆ. ಅಡಿಕೆ ಬೆಳೆಗೆ ಈಗೀಗ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಇದಕ್ಕೆ ಕಾರಣ…

Read more
ಜೀವ ವೈವಿಧ್ಯಗಳ ನಾಶ – ಭಾರತದ ಕೃಷಿಗೆ ಅತೀ ದೊಡ್ಡ ಆತಂಕ

ಜೀವ ವೈವಿಧ್ಯಗಳ ನಾಶ – ಭಾರತದ ಕೃಷಿಗೆ ಅತೀ ದೊಡ್ಡ ಆತಂಕ.

ನೈಸರ್ಗಿಕ ವಿಕೋಪಗಳು, ಮಾನವನ ಕೃತ್ಯಗಳಿಂದ  ಸ್ಥಳೀಯ ಜೀವ ವೈವಿಧ್ಯಗಳ ನಾಶ ಅವ್ಯಾಹತವಾಗುತ್ತಿದೆ. ಇದು ನಮ್ಮ ದೇಶದ ಕೃಷಿ, ಮಳೆ, ಇತ್ಯಾದಿಗಳಿಗೆ ಭಾರೀ ತೊಂದರೆಯನ್ನು ಉಂಟುಮಾಡಲಿದೆ. ಸೂಕ್ಷ್ಮವಾಗಿ ಗಮನಿಸಿದವರಿಗೆ ಇದರ ಅರಿವು ಆಗಿರಬಹುದು. ಅರಿವು ಆಗದವರಿಗೆ ಕೆಲವೇ ವರ್ಷಗಳಲ್ಲಿ ಅರಿವಿಗೆ ಬರಲಿದೆ.  ಕಾಸರಕನ ಮರ ಗೊತ್ತಾ ? ಈ ಪ್ರಶ್ನೆಯನ್ನು ಯಾರಲ್ಲಿಯಾದರೂ ಕೇಳಿದರೆ ಹಿಂದೆ ಹೇರಳವಾಗಿತ್ತು. ಈಗ ಹುಡುಕಿದರೆ ಮಾತ್ರ ಸಿಗುತ್ತದೆ ಎನ್ನುತ್ತಾರೆ. ಹಾಗೆಯೇ ಇನ್ನೊಂದು ಮರ ಇತ್ತು. “ಕನಪ್ಪಡೆ” ಎಂಬ ಹೆಸರಿನ ಈ ಮರ ಗುಡ್ಡ, ಕಾಡುಗಳಂಚಿನಲ್ಲಿ…

Read more
ಹವಾಮಾನ ಬದಲಾವಣೆಯಿಂದ ಅಂತರ್ಜಲ 3 ಪಟ್ಟು ಕುಸಿತವಾಗಲಿದೆ!

ಹವಾಮಾನ ಬದಲಾವಣೆಯಿಂದ ಅಂತರ್ಜಲ 3 ಪಟ್ಟು ಕುಸಿತವಾಗಲಿದೆ!

ಹವಾಮಾನ ಬದಲಾವಣೆ ಎಂದರೆ ಏನು ಎಂಬುದರ ಸಾಧಾರಣ ಚಿತ್ರಣ ನಮ್ಮ ಗಮನಕ್ಕೆ ಈಗಾಗಲೇ ಬಂದಾಗಿದೆ. ಇನ್ನು ಇದರ ಪರಿಣಾಮವನ್ನು ಒಂದೊಂದಾಗಿ ನಮ್ಮ ಅನುಭವಕ್ಕೆ ಬರಲಿದೆ. ಈ ಸನ್ನಿವೇಶದಿಂದಾಗಿ  ಎಲ್ಲದಕ್ಕಿಂತ ಮುಂಚೆ ಅಂತರ್ಜಲದ ಮೇಲಿನ ಒತ್ತಡ ಹೆಚ್ಚಾಗಿ ಅದು ಭಾರೀ ಕುಸಿತವಾಗುವ ಸಂಭವ ಇದೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವುದು ಅಥವಾ ಮಳೆಯ ಹಂಚಿಕೆ ವ್ಯತ್ಯಾಸವಾಗುವುದು ಮಾಮೂಲಿಯಾಗುತ್ತದೆ. ಇದೆಲ್ಲದ ಪರಿಣಾಮ  ಕುಡಿಯಲು ಮತ್ತು ಕೃಷಿಗೆ ನೀರಿನ ಕೊರೆತೆ. ನೀರಿಗಾಗಿ ಅಂತರ್ಜಲಕ್ಕೆ ಕೈಹಾಕಿ ಅದನ್ನು ಇನ್ನೂ ಇನ್ನೂ ಬರಿದು ಮಾಡಬೇಕಾಗುತ್ತದೆ….

Read more
ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ

ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ.

ಅಡಿಕೆ ಬೆಳೆ ಮುಂದಿನ ದಿನಗಳಲ್ಲಿ ಏನಾಬಗಬಹುದು, ಭವಿಷ್ಯದಲ್ಲಿ ಹೀಗೇ ಬೆಲೆ ಉಳಿಯಬಹುದೇ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಎಚ್ಚರ! ಅಡಿಕೆ ಭವಿಷ್ಯ ಭಾರೀ ಅತಂತ್ರವಾಗಿದೆ.ಪ್ರತೀಯೊಬ್ಬ ಕೃಷಿಕನ ಮನಸ್ಸಿನಲ್ಲೂ ಈ ಒಂದು ವಿಚಾರ ಕೊರೆಯುತ್ತಿದೆಯಾದರೂ  ಹೆಚ್ಚಿನವರು ಇನ್ನೂ ಪ್ರದೇಶ ವಿಸ್ತರಣೆ ಮಾಡುತ್ತಲೇ ಇದ್ದಾರೆ. ಆದರೆ ಅಡಿಕೆ ಈಗಾಗಲೇ ಸಂತೃಪ್ತ ಸ್ಥಿತಿಗೆ ಮುಟ್ಟಿದಂತಿದೆ. ಈ ಹಿಂದೆಯೂ ಮುಂದೆ ಅಡಿಕೆಗೆ ಭವಿಷ್ಯವಿಲ್ಲ. ನೆಡಬೇಡಿ ಎಂದು ಹೇಳುತ್ತಿದ್ದರು. ಆದರೆ  ಒಮ್ಮೆ ಬೆಲೆ ಕುಸಿದದ್ದೂ ಮತ್ತೆ ಮೇಲೇರಿತು. ಶ್ರೀಯುತ ಅಶೋಕ್ ಕುಮಾರ್ ಕರಿಕಳ ಅವರ…

Read more
error: Content is protected !!