ಬಾಟಲಿ, ಕ್ಯಾನುಗಳ ಜೈವಿಕ ಗೊಬ್ಬರಗಳು ಮತ್ತು ಅದರ ಉಪಯುಕ್ತತೆ.

ಬಾಟಲಿ, ಕ್ಯಾನುಗಳಲ್ಲಿ ಜೈವಿಕ ಗೊಬ್ಬರ

ಇತ್ತೀಚೆಗೆ ಸುಮಾರು 10 ವರ್ಷಗಳಾಗಿರಬಹುದು. ಬೇರೆ ಬೇರೆ ತಯಾರಕರು ಲೀಟರು ಬಾಟಲಿಗಳಲ್ಲಿ, 5 ಲೀ. ಕ್ಯಾನುಗಳಲ್ಲಿ ಜೈವಿಕ ಗೊಬ್ಬರ ತುಂಬಿಸಿ ಬೆಳೆ ಪೋಷಕ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾರಭಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಈ ವ್ಯವಹಾರ ಭಾರೀ ಚುರುಕಾಗಿದೆ.  ಜನ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಗೊಬ್ಬರ ಹಾಕಿ ಬೆಳೆ ಬರುವುದೇ ಆದರೆ ಯಾಕೆ ಬಳಸಿ ನೊಡಬಾರದು ಎಂದು ಎಲ್ಲರೂ ಒಂದೊಂದು ಪ್ರಯತ್ನ ಮಾಡುತ್ತಲೇ ಇದ್ದಾರೆ.  ಹಳೆ ಗಿರಾಕಿ ಹೋದಂತೆ ಹೊಸ ಹೊಸ ಗಿರಾಕಿಗಳು ಸಿಗುತ್ತಾ ಇದ್ದಾರೆ. ಬಾಟಲಿ ಗೊಬ್ಬರಗಳ ವ್ಯವಹಾರ ಬಹಳ ಚುರುಕಾಗುತ್ತಿದೆ.

ಒಂದು ಯಾವುದೇ ವಿಚಾರದ ಲೇಖನ ಹಾಕಿ ತಕ್ಷಣ ನಮ್ಮ ಉತ್ಪನ್ನ ಬಳಸಿ 100%  ಫಲಿತಾಂಶ. ಹೆಚ್ಚಿನ ವಿವರಗಳಿಗೆ ಕಾಲ್ ಮಾಡಿ ಎಂದು ನಂಬ್ರ ಕೊಡುತ್ತಾರೆ. ಅತ್ಯಧಿಕ ಇಳುವರಿ ಹೊಂದಿದ ಅಡಿಕೆ ಮರದ ಚಿತ್ರ ಹಾಕುತ್ತಾರೆ. ಇಂತಹ ಫಲಿತಾಂಶಕ್ಕಾಗಿ ಈ ಉತ್ಪನ್ನ ಬಳಸಿ ಎಂದು ಸಲಹೆ ಕೊಡುತ್ತಾರೆ. ಯಾವುದೇ ರೋಗ ಇರಲಿ, ಯಾವುದೇ ಕೀಟ ಇರಲಿ, ಎಲ್ಲದಕ್ಕೂ ತಮ್ಮ ಉತ್ಪನ್ನಗಳಲ್ಲಿ ಪರಿಹಾರ ಇದೆ ಎಂದು ಹೇಳುತ್ತಾರೆ.

  • ಅವರು ಕೊಡುವ ಕ್ಯಾನು, ಬಾಟಲಿಯಲ್ಲಿ  ಬರೆದಿರುವುದು ನೊಡಿದರೆ  ಅದರಲ್ಲಿ ಜೀವಾಣುಗಳ ಇರುವಿಕೆಯನ್ನು ತಿಳಿಸಲಾಗುತ್ತಿದೆ.
  • ಜೀವಾಣುಗಳಲ್ಲಿ ಸಾರಜನಕ ಸ್ಥಿರೀಕರಿಸುವ, ರಂಜಕ ಕರಗಿಸುವ, ಹಾಗೆಯೇ ಪೊಟ್ಯಾಶ್  ಚಲನೆ (Mobilising) ಉಂಟಾಗುವ ಜೀವಾಣುಗಳು ‘ಬಯೋ ಎನ್ ಪಿ ಕೆ’ ಇವೆ ಎಂಬ ಉಲ್ಲೇಖ ಇರುತ್ತದೆ.
  • ಕೆಲವರರ ಉತ್ಪನಗಳಲ್ಲಿ PGPR (plant growth promoters) ಸಹ ಇರುವ ಬಗ್ಗೆ ಹೇಳುತ್ತಾರೆ.
  • ಕೆಲವರ ಉತ್ಪನ್ನ ಸ್ವಲ್ಪ ಕಪ್ಪು ಬಣ್ಣದಿಂದ ಕೂಡಿರುತ್ತದೆ.
  • ಮತ್ತೆ ಕೆಲವರರದ್ದು, ಸ್ವಲ್ಪ ಮಾಸಲು ಬಣ್ಣದ ಹಳಸಲು ವಾಸನೆಯನ್ನು ಒಳಗೊಂಡಿರುತ್ತದೆ. 
  • ಎಲ್ಲರೂ ಹೇಳುತ್ತಾರೆ, ಇದನ್ನು ಬಳಸಿದರೆ ಬೇರೆ ಗೊಬ್ಬರ ಬೇಕಾಗಿಲ್ಲ.
  • ವರ್ಷಕ್ಕೆ ಇಂತಿಷ್ಟು ಸಾರಿ ಬಳಸಿ. ಉತ್ತಮ ಇಳುವರಿ ಕೊಡುತ್ತದೆ ಎಂದು.

ಬಹಳಷ್ಟು ಜನ ಈ ಪೊಷಕಗಳನ್ನು ಬಳಸಿ ಉತ್ತಮ ಫಲಿತಾಂಶ ಪಡೆದಿದ್ದೇವೆ ಎನ್ನುವವರೂ ಇದ್ದಾರೆ. ಕೆಲವರಿಗೆ ಇದು ನಿರಾಶಾದಾಯಕ ಫಲಿತಾಂಶ ಕೊಟ್ಟಿದೆ. ಹೀಗೆ ಬಿನ್ನ ಭಿನ್ನ ಅಭಿಪ್ರಾಯಗಳಿವೆ. ವ್ಯವಹಾರ ಮಾತ್ರ ದಿನದಿಂದ ದಿನಕ್ಕೆ ಚಿಗುರುತ್ತಿದೆ. ಈ ವ್ಯವಹಾರ ಮಾಡಿದವರು ಐಷಾರಾಮಿ ವಾಹನದಲ್ಲಿ ಸುತ್ತಾಡುವ ಸ್ಥಿತಿಗೆ ತಲುಪಿದ್ದಾರೆ.ಬಳಸಿದ ಕೃಷಿಕರು ಅದೇ ಮಟ್ಟಕ್ಕೆ ಏರಿದ್ದಾರೆಯೋ ಗೊತ್ತಿಲ್ಲ.

ಬಾಟಲಿ, ಕ್ಯಾನುಗಳ  ಜೈವಿಕ ಗೊಬ್ಬರಗಳು  ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಯೋ NPK ಎಂದರೆ ಏನು?

  • ಜೈವಿಕ ಉತ್ಪನ್ನಗಳು ಎಂದರೆ ಅದರಲ್ಲಿ ಕೆಲವು ಅಥವಾ ಒಂದು ನಿರ್ದಿಶ್ಟ  ಸೂಕ್ಷ್ಮಾಣು ಜೀವಿಗಳು ಇರುತ್ತದೆ.
  • ಹೆಚ್ಚು ಸೂಕ್ಷ್ಮಾಣು ಜೀವಿಗಳು ಇದ್ದರೆ ಅದನ್ನು ಸೂಕ್ಷ್ಮಾಣಿ ಜೀವಿಗಳ ಸಮೂಹ ( microbial consortia)  ಎನ್ನುತ್ತಾರೆ.
  • ಒಂದು ಇದ್ದಾಗ ಅದರ ಹೆಸರೇ ಇರುತ್ತದೆ.
  • ಹೆಚ್ಚಾಗಿ ಬಯೋ NPK ಎಂಬ ತಯಾರಿಕೆಯಲ್ಲಿ ಕೆಲವರು ಮೂರನ್ನೂ ಒಂದೇ ಕಡೆ ಸೇರಿಸಿರುತ್ತಾರೆ.
  • ಕೆಲವರು ಪ್ರತ್ಯೇಕ ಪ್ರತ್ಯೇಕವಾಗಿ ಪೂರೈಕೆ ಮಾಡುತ್ತಾರೆ.
  • ಆದರೆ ಅವೆಲ್ಲವನ್ನೂ ಪ್ರತ್ಯೇಕ ಪ್ರತ್ಯೇಕವಾಗಿಯೇ ತಯಾರು ಮಾಡಲಾಗುತ್ತದೆ.
  • ಇವುಗಳು ಮಿಶ್ರಣಕ್ಕೆ  ಹೊಂದಿಕೆಯಾಗುವ ಕಾರಣ  ಕನ್ಸೋರ್ಶಿಯಾ ಎಂಬ ಹೆಸರಿನಲ್ಲಿ ಪೂರೈಕೆ ಮಾಡಲಾಗುತ್ತಿದೆ.

ಬಯೋ ಎನ್ ಪಿ ಕೆ ಎಂದರೆ ಸಾರಜನಕ  ಮತ್ತು ರಂಜಕ  ಹಾಗೂ ಪೊಟ್ಯಾಶ್ ಪೊಷಕಗಳನ್ನು ಸಸ್ಯಗಳಿಗೆ ಲಭ್ಯವಾಗುವಂತೆ  ಮಾಡುವ ಸೂಕ್ಷ್ಮಾಣು ಜೀವಿಗಳು. ಇವು  ವಾತಾವರಣದ ಸಾರಜನಕವನ್ನು  ಸಸ್ಯಗಳಿಗೆ ದೊರೆಯುವಂತೆ, ಹಾಗೂ ಮಣ್ಣಿನಲ್ಲಿ ಇರುವ ರಂಜಕಾಂಶವನ್ನು ಕರಗಿಸಿ ಲಭ್ಯವಾಗುವಂತೆಯೂ, ಪೊಟ್ಯಾಶಿಯಂ ಸತ್ವವನ್ನು  ಒಟ್ಟುಗೂಡಿಸಿ ಲಭ್ಯವಾಗುವಂತೆ ಮಾಡುವ ಜೀವಾಣುಗಳು.

ಬಯೋ N:

  • ಸಾರಜನ ಅಥವಾ Nitrogen  ಗಾಗಿ ರೈಜೋಬಿಯಂ Rhizobium (formerly Agrobacterium),  ಎಂಬ ಜೀವಾಣುವನ್ನು ಇದಕ್ಕೆ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
  • ಈ ಕೆಲಸ ಮಾಡುವ ಬೇರೆ ಬ್ಯಾಕ್ಟೀರಿಯಾಗಳೂ ಇವೆ. Frankia, Azospirillum, Azoarcus, Herbaspirillum, Cyanobacteria, Rhodobacter, Klebsiella.
  • ಇವು ಬೇರು ವಲಯದಲ್ಲಿ ಸಾರಜನಕವನ್ನು ವಾತಾವರಣದಿಂದ ಸಂಗ್ರಹಿಸಿ  ಸಸ್ಯಗಳಿಗೆ ಲಬ್ಯವಾಗುವಂತೆ ಮಾಡುವ ಕೆಲಸ ಮಾಡುವ ಮಧ್ಯವರ್ತಿಗಳು.
  • ಹೆಚ್ಚಿನವರ ತಯಾರಿಕೆಗಳಲ್ಲಿ ರೈಜೋಬಿಯಂ ಜೀವಾಣುಗಳನ್ನು ಸೇರಿಸಿರುತ್ತಾರೆ.

ಬಯೋ P:

  • ರಂಜಕ ಎಂಬ ಪೋಷಕವು ಮಣ್ಣಿನಲ್ಲಿ ಇದ್ದರೂ ಅವುಗಳನ್ನು ಸಸ್ಯಗಳು ಬಳಸಿಕೊಳ್ಳಲು ಕೆಲವು ಅಡೆ ತಡೆಗಳಿರುತ್ತವೆ.
  • ರಂಜಕ ಕರಗಿಸುವ ಬ್ಯಾಕ್ಟೀರಿಯಾಗಳು (PSB) ಮತ್ತು ಕೆಲವು ಶಿಲೀಂದ್ರಗಳು ಇದನ್ನು ಕರಗಿಸಿ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತದೆ.
  • ರಂಜಕ ಸಸ್ಯಗಳಿಗೆ ಅಗತ್ಯ ಪೋಷಕವಾಗಿದ್ದು, ಅದು ಕರಗದೆ ವಿನಹ ಸಸ್ಯಗಳಿಗೆ ಲಭ್ಯವಾಗುವುದಿಲ್ಲ.
  • ರಂಜಕ ಕರಗಿಸುವ ಬ್ಯಾಕ್ಟೀರಿಯಾ ಜೀವಿಗಳಾದ ಸುಡೋಮೋನಸ್,Pseudomonas putida  Microbacteriu laevaniformans, Pantoea agglomerans ಹಾಗೂ ಬೇಸಿಲಸ್ ಗೋತ್ರದ ಕೆಲವು ಬ್ಯಾಕ್ಟೀರಿಯಾಗಳು ರಂಜಕವನ್ನು ಕರಗಿಸಿ ಕೊಡುವ ಸೂಕ್ಷ್ಮಾಣು ಜೀವಿಗಳು.
  • ಹಾಗೆಯೇ ಶಿಲೀಂದ್ರಗಳಲ್ಲಿ ಅಸ್ಪರ್ಜಿಲಸ್ ಗೋತ್ರದವು ಸಹ ಕರಗಿಸಿಕೊಡುವ ಕಾರ್ಯವನ್ನು ಮಾಡುತ್ತವೆ.
  • ಬಾಟಲಿ ಕ್ಯಾನಿನ ಗೊಬ್ಬರದಲ್ಲಿ ಹೆಚ್ಚಾಗಿ ಅಸ್ಪರ್ಜಿಲ್ಲಸ್ ಗೋತ್ರದ ಜೀವಾಣುಗಳನ್ನು ಸೇರಿಸಿರುತ್ತಾರೆ.

ಬಯೋ K:

  • ಬಯೋ ಪೊಟ್ಯಾಶ್ ಎಂದರೆ ಅದು ಮಣ್ಣಿನಲ್ಲಿ ಖನಿಜ ರೂಪದಲ್ಲಿ ಇರುವ ಪೊಟ್ಯಾಶ್ ಹಾಗೂ ನಾವು ಬೇರೆ ಬೇರೆ ಮೂಲಗಳ ಮೂಲಕ ಕೊಡುವ ಪೊಟ್ಯಾಶಿಯಂ ಸತ್ವವನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುವ ಸೂಕ್ಷ್ಮಾಣು ಜೀವಿಗಳು.
  • ಮಣ್ಣಿನಲ್ಲಿ ಪೊಟ್ಯಾಶ್ ಅಂಶ ಸಾಕಶ್ಟು ಇರುತ್ತದೆ.
  • ಅದೆಲ್ಲಾ ಸಸ್ಯಗಳಿಗೆ ಲಭ್ಯವಾಗುವುದಿಲ್ಲ.
  • ಅದನ್ನು ಲಭ್ಯವಾಗುವಂತೆ ಮಾಡುವ ಕೆಲಸವನ್ನು ಬಯೋ K  ಮಾಡುತ್ತದೆ.
  • ಬಯೋ ಪೊಟ್ಯಾಶ್ ನಲ್ಲಿ ಇರುವ ಬ್ಯಾಕ್ಟೀರಿಯಾಗಳು Acidothiobacillus ferrooxidans, Paenibacillus spp., Bacillus mucilaginosus, B. edaphicus, and B. circulans  ಇವು.
ಬುಡಕ್ಕೆ ಎರೆಯಲು ಸಾಗಾಟ

ಬಯೋ ಮೈಕ್ರೋ ನ್ಯೂಟ್ರಿಯೆಂಟ್ ಹಾಗೂ ಸಸ್ಯ ಬೆಳವಣಿಗೆ ಪ್ರಚೋದಕ:

  • ಕೇವಲ NPK ಅಲ್ಲದೆ ಸೂಕ್ಷ್ಮಾಣು ಜೀವಿಗಳು ಸೂಕ್ಷ್ಮ ಪೊಷಕಾಂಶಗಳನ್ನೂ  ಹಾಗೆಯೇ ಕೆಲವು ಬೆಳವಣಿಗೆ ಪ್ರಚೋದಕಗಳನ್ನೂ plant growth promoting bacteria (PGPRs ಒದಗಿಸಿಕೊಡುತ್ತವೆ.
  • PGPRs ಇದು ನೇರವಾಗಿ ಕೆಲವು ಕೆಲಸಗಳನ್ನು ಮಾಡುತ್ತವೆ.
  • ಅಂದರೆ ಈ ಕೆಲವು providing plants with resources/nutrients (e.g., N, P, Fe and other essential minerals) or regulating plant hormone levels (cytokinins, gibberellins, indole-3-acetic acid, and ethylene) ಪೋಷಕ, ಸೂಕ್ಷ್ಮ ಪೋಷಕ ಮತ್ತು ಪ್ರಚೋದಕಗಳನ್ನು ಒದಗಿಸುತ್ತವೆ. 
  • ಕೆಲವು ಪರೋಕ್ಷ ಕೆಲಸಗಳನ್ನೂ ಮಾಡುತ್ತದೆ.
  • ಅಂದರೆ ಪೋಷಕಗಳ ಜೊತೆಗೆ  ಜೈವಿಕ ನಿಯಂತ್ರಕಗಳಾಗಿ ಸಸ್ಯ ರೋಗ, ಕೀಟಗಳ ವಿರುದ್ಧ ಹೋರಾಡುವ ಶಕ್ತಿ indirect action mechanisms by decreasing the deleterious effects of various pathogens on the growth and yield of plants as bio-control agents ಕೊಡುತ್ತದೆ. 
  • ಇದನ್ನು ತಯಾರಕರು ಬೇರೆ ಬೇರೆ ಹೆಸರಿನಲ್ಲಿ  ಮಾರಾಟ ಮಾಡುತ್ತಾರೆ.
  • ಎಲ್ಲದರ ಮೂಲವೂ ಮಣ್ಣೇ ಆಗಿರುತ್ತದೆ.
  • ಮಣ್ಣಿನಲ್ಲಿ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳಿದ್ದು, ಮಣ್ಣಿನ ಗುಣ, ವಾತಾವರಣದ ಮೇಲೆ ಅವುಗಳ ವಾಸ್ತವ್ಯ ಇರುತ್ತದೆ.
  • ಇವುಗಳ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಅದನ್ನು ಪ್ರತ್ಯೇಕಿಸಿ, ಬೆಳೆಸಿ ಬಾಟಲಿ ಕ್ಯಾನುಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತದೆ.
  • There is an estimated 60,000 different type of bacteria that reside in the soil, most of which have yet to be even named, and each has its own particular roles and capabilities. The number and diversity of bacteria are influenced by the soil conditions such as organic carbon, temperature, moisture, electrical conductivity and other chemicals as well as by the number and types of plants found in those soils.
  • ಇವಿಷ್ಟೇ ಅಲ್ಲದೆ ಕೆಲವು ರೋಗ ನಾಶಕ ಜೀವಾಣುಗಳೂ , ಕೀಟ ನಿಯಂತ್ರಕ ಜೀವಾಣುಗಳೂ ಇವೆ.

ಎಲ್ಲವೂ ಮಣಿನಲ್ಲಿ ಇದೆ:

ಇವೆಲ್ಲಾ ಮಣ್ಣಿನಲ್ಲಿ ಇರುವಂತದ್ದೇ. ಆದರೆ ನಾವು ಬೇಸಾಯ ಮಾಡುವಾಗ ಆಗುವ ಅಸಮತೋಲನದಿಂದ ಅವುಗಳ ಕಾರ್ಯ ಚಟುವಟಿಕೆ ಕುಂಠಿತವಾಗಿರಬಹುದು, ನಶಿಸಿ ಹೋಗಿರಬಹುದು. ಅವುಗಳನ್ನು ಮರಳಿ ಮಣ್ಣಿಗೆ ಸೇರಿಸಿದಾಗ ಮಣ್ಣಿನ ಅನುಕೂಲ ಸ್ಥಿತಿಯಲ್ಲಿ ಅದು ಕೆಲಸ ಮಾಡಿ ಉತ್ತಮ ಫಲಿತಾಂಶ ನೀಡಬಹುದು. ಮಣ್ಣಿನ ಅನನುಕೂಲ ಸ್ಥಿತಿಯಲ್ಲಿ ಅದು ಕೆಲಸ ಮಾಡದೆ ನಿಶ್ಪ್ರಯೋಜಕ ಆಗಲೂ ಬಹುದು. ಹಾಗೆಂದು ಯಾರು ಏನೇ ಹೇಳಿದರೂ ಇದು ಒಂದು ಪರಿಪೂರ್ಣ ಗೊಬ್ಬರ ಅಲ್ಲ. ಧೀರ್ಘಾವಧಿಯಲ್ಲಿ ಇದು ಕೈಕೊಡುತ್ತದೆ. ಆಹಾರ ಇದ್ದಾಗ ಮಾತ್ರ ಈ ಜೀವಾಣುಗಳು ಬದುಕಿರುತ್ತದೆ. ಸಾವಯವ ಸಮೃದ್ಧ ಮಣ್ಣಿನಲ್ಲಿ ಇವು ಹೆಚ್ಚು ಫಲ ಕೊಡುತ್ತವೆ. ಕಡಿಮೆ ಅದಂತೆ ಇದು ಕೆಲಸ ಮಾಡುವುದು ಕಡಿಮೆ.

ಒಳ್ಳೆಯ ತಯಾರಿಕೆ:

  • ರೈತರು ಪ್ರತೀ ಸಾರಿ ಸಾವಯವ ಅಥವಾ ರಾಸಾಯನಿಕ ಮೂಲಗಳಲ್ಲಿ NPK ಹಾಗೂ ಇತರ ಪೋಷಕಾಂಶಗಳನ್ನು ಕೊಡುತ್ತಿದ್ದರೆ, ಮಣ್ಣಿನಲ್ಲಿ ಅವು ಕಾಲಕ್ರಮೇಣ ಬಾಂಡಿಂಗ್ ಆಗುವ ಸಾಧ್ಯತೆ ಇದೆ.
  • ಇಂತಹ ಬಂಧನವನ್ನು ಈ ಜೀವಾಣುಗಳು ಮುಕ್ತಮಾಡಿಕೊಡುತ್ತವೆ.
  • ಈ ಎಲ್ಲಾ ಜೀವಾಣುಗಳ ಉತ್ಪಾದನೆಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒಂದು ನೀತಿ ನಿಯಮಾವಳಿ ಇದೆ.
  • ಅವರ ಅನುಮತಿ ಮತ್ತು ಅವರ ಮುಖಾಂತರವೇ ಇದನ್ನು ಸರಕಾರದ ಸಂಶೊಧನಾ ಸಂಸ್ಥೆಗಳು, ಉದ್ದಿಮೆಗಳು ಬಳಸಬೇಕು.
  • ಇದರ ಮೂಲ  ಬಾರತ ದೇಶದಲ್ಲಿ  Microbial Culture Collection in National Centre for Cell Science Pune, India, ಮತ್ತು Microbial Type Culture Collection and Gene Bank at Institute of Microbial Technology Chandigarh, India. ಇಲ್ಲಿ ಇರುತ್ತದೆ. 
  • ಭಾರತ ಸರಕಾರದ ಕೃಷಿ ಮಂತ್ರಾಲಯದ ಅಧೀನದ ಕೃಷಿ ವಿಜ್ಞಾನ ಕೇಂದ್ರಗಳು, ಸಂಶೊಧನಾ ಸಂಸ್ಥೆಗಳು, ವಿಶ್ವ ವಿಧ್ಯಾನಿಲಯಗಳೂ ಸಹ ಇದನ್ನು  ಉತ್ಪಾದಿಸುತ್ತವೆ.
  • ಅದರೆ ದುರದೃಷ್ಟವೆಂದರೆ ಇವರಿಂದ ಮುಂದೆ ಖಾಸಗಿ ತಯಾರಕರು ರೈತರನ್ನು ತಲುಪಿದ್ದಾರೆ.
  • ರೈತರಿಗೆ ಯಾವುದು ಅಪ್ಪಟ ಮತ್ತು ಯಾವುದು ಕಳಪೆ ಎಂಬ ಗೊಂದಲ ಉಂಟಾಗಿದೆ.
  • ಸರಕಾರದ ಸಂಸ್ಥೆಗಳಿಂದ ಪಡೆಯುವ ಉತ್ಪನ್ನಗಳಿಗಿಂತ ಖಾಸಗಿಯವರ ಉತ್ಪನ್ನಗಳು ಉತ್ತಮ ಫಲಿತಾಂಶ ಕೊಡುತ್ತಿವೆ ಎಂಬ ಅಭಿಪ್ರಾಯವೂ ಇದೆ.
  • ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯವರು ಈ ಉತ್ಪನ್ನಗಳನ್ನು ಕೊಡುತ್ತಾರೆಯಾದರೂ “ಸರಕಾರ”ದ ವಸ್ತು ಆದ ಕಾರಣ ಯಾರಿಗೂ ನಂಬಿಕೆ ಇಲ್ಲದಾಗಿದೆ.
  • ಬಹಳಷ್ಟು ಸಾರಿ ಅದರ ವಾಯಿದೆಯೂ ಕಳೆದಿರುತ್ತದೆ.

ನಾವು ಕೃಷಿ ಮಾಡುವ ಮಣ್ಣು ಎಂಬುದು ಖನಿಜ, ನೀರು, ಸಾವಯವ ವಸ್ತುಗಳು, ಗಾಳಿ, ಮಿಲಿಯಾಂತರ ಸೂಕ್ಷ್ಮಾಣು ಜೀವಿಗಳನ್ನ್ನು ಒಳಗೊಂಡ ಸಂಯುಕ್ತ ವಸ್ತು. ಇವುಗಳಲ್ಲಿ ಕೆಲವು ಜೈವಿಕ ಬದಲಾವಣೆಗಳು ನಿರಂತರವಾಗಿ ಆಗುತ್ತಲೇ ಇರುತ್ತವೆ. ಮಣ್ಣಿನ ಫಲವತ್ತತೆ ಎಂದರೆ ಅದರಲ್ಲಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಹಾಗೂ ಸೂಕ್ಷ್ಮ ಪೊಷಕಾಂಶಗಳು ಸಸ್ಯಗಳಿಗೆ ಬೇಕಾದಂತೆ ಲಭ್ಯವಾಗುವ ಸ್ಥಿತಿ. ಬೇರಿನ ಬುಡದಲ್ಲಿ ವಾಸವಾಗಿರುವ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ಇವುಗಳನ್ನು ಸಸ್ಯಗಳ ಹಸಿವಿಗೆ ಅನುಗುಣವಾಗಿ ದೊರೆಯುವಂತೆ ಮಾಡುತ್ತವೆ. ಈ ಜೀವಾಣುಗಳು ಕಡಿಮೆ ಆದದ್ದಕ್ಕೆ  ಬಯೋ ಎನ್ ಪಿ ಕೆ ಮುಂತಾದ ಜೀವಾಣುಗಳ ಮೂಲಕ ಅದನ್ನು ಪೂರೈಸಲಾಗುತ್ತದೆ.

ಬಾಟಲಿ ಗೊಬ್ಬರಗಳ ಉತ್ಪಾದನೆ ಮತ್ತು ಮಾರಾಟದಿಂದಾಗಿ ಅಸಂಖ್ಯಾತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆತಂತಾಗಿದೆ. ರೈತಾಪಿ ವರ್ಗ ಎಂದರೆ ಅವರು ತಮ್ಮ ಆದಾಯದಲ್ಲಿ ಸ್ವಲ್ಪ ಹಂಚಿಕೊಂಡು ಬದುಕುವವರು ಆದ ಕಾರಣ ಬಳಸಿದರೆ ತೊಂದರೆ ಇಲ್ಲ. ಆದರೆ ಬರೇ ಅದಕ್ಕೇ ಅವಲಂಭಿತರಾದರೆ ಕೃಷಿ ಹಾಳು ಮಾಡಿಕೊಳ್ಳುವಿರಿ.

Leave a Reply

Your email address will not be published. Required fields are marked *

error: Content is protected !!